Education For driving license

ದೇಶದಲ್ಲಿ ಇದೆ ಮೊದಲ ಭಾರಿಗೆ ದೊಡ್ಡ ನಿರ್ಧಾರವನ್ನ ತೆಗೆದುಕೊಳ್ಳುವುದರ ಮೂಲಕ ಬರಿ ಯುವಕರಿಗೆ ಮಾತ್ರವಲ್ಲದೆ ದೇಶದ ಲಕ್ಷಾಂತರ ಜನರಿಗೆ ಉದ್ಯೋಗ ಒದಗಿಸಿಕೊಡುವ ದೊಡ್ಡ ಯೋಜನೆಗೆ ಕೈ ಹಾಕಿದೆ ನಮ್ಮ ಮೋದಿ ಸರ್ಕಾರ.

ವಿದ್ಯಾರ್ಹತೆಯ ಜೊತೆಗೆ ವೈಜ್ಞಾನಿಕ ಚಿಂತನೆಯನ್ನ ನಡೆಸಿರುವ ಮೋದಿ ಸರಕಾರ ಕೈಗೊಂಡಿರುವ ಆ ದೊಡ್ಡ ನಿರ್ಧಾರ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ದೇಶದ ಅತೀ ದೊಡ್ಡ ಕ್ಷೇತ್ರದಲ್ಲಿ ಒಂದಾಗಿರುವ ಸಾರಿಗೆ ಸೇವೆಯಲ್ಲಿ ಕೋಟ್ಯಾಂತರ ಜನರು ಚಾಲಕರಾಗಿ ತಮ್ಮ ಕರ್ತವ್ಯವನ್ನ ನಿರ್ವಹಿಸುತ್ತಿದ್ದಾರೆ, ಇನ್ನು ಅದೆಷ್ಟೋ ಜನರು ಡ್ರೈವಿಂಗ್ ಕಲಿತಿದ್ದರು ಕೂಡ ಆತ 8 ನೇ ತರಗತಿ ಪಾಸ್ ಆಗಿಲ್ಲ ಅಂದರೆ ಆತನಿಗೆ ಡ್ರೈವಿಂಗ್ ಲೈಸೆನ್ಸ್ ಕೊಡಲಾಗುತ್ತಿರಲಿಲ್ಲ.

Education For driving license

ರಸ್ತೆ ಸೂಚನಾ ಫಲಕ ಓದಲು ಬರಲ್ಲ ಅನ್ನುವುದರ ಕಾರಣಕ್ಕೆ 8 ನೇ ತರಗತಿ ಪಾಸ್ ಆಗದೆ ಇರುವವರಿಗೆ ಡ್ರೈವಿಂಗ್ ಲೈಸೆನ್ಸ್ ಕೊಡಲಾಗುತ್ತಿರಲಿಲ್ಲ, ಇನ್ನು ಈಗ ಕೇಂದ್ರ ಸರ್ಕಾರ ನಡೆಸಿರುವ ಸಮೀಕ್ಷೆಯ ಪ್ರಕಾರ ಓದಿರುವವರಿಂದಲೇ ಹೆಚ್ಚಿನ ಅಪಘಾತಗಳು ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಇನ್ನು ಅಪಘಾತಗಳಿಗೆ ಮತ್ತು ಇದಕ್ಕೆ ಯಾವುದೇ ಸಂಬಂಧ ಇಲ್ಲ, ಆದರೆ ಕಡ್ಡಾಯವಾಗಿ ಚಾಲಕರು ತರಬೇತಿ ಹಾಗು ಕೌಶಲ್ಯ ಪರೀಕ್ಷೆಗಳಿಗೆ ಒಳಪಡಬೇಕು, ಇನ್ನು ಅಷ್ಟೇ ಅಲ್ಲದೆ ರಸ್ತೆ ಸೂಚನಾ ಫಲಕ ಓದಲು ಬರುವ ಹಾಗು ಸರಿಯಾಗಿ ಡ್ರೈವಿಂಗ್ ಮಾಡಲು ಬರುವ ಯಾವುದೇ ವ್ಯಕ್ತಿ ಆದರೂ ಇನ್ನುಮುಂದೆ 8 ನೇ ತರಗತಿಯ ಅಡ್ಡಿ ಇಲ್ಲದೆ ಡ್ರೈವಿಂಗ್ ಲೈಸೆನ್ಸ್ ನ್ನ ಮಾಡಿಸಬಹುದಾಗಿದೆ.

Education For driving license

ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಮೋಟಾರು ವಾಹನ ಕಾಯಿದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಈಗಾಗಲೇ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದು ಮುಂದಿನ ಅಧಿವೇಶನದಲ್ಲಿ ಅಧಿಕೃತವಾದ ಸೂಚನೆ ಹೊರಬೀಳಲಿದೆ.

ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳಲು ಬೇಕಿರುವ 8 ನೇ ತರಗತಿಯ ವಿದ್ಯಾರ್ಹತೆಯನ್ನ ತೆಗೆದು ಹಾಕುವುದರಿಂದ ದೇಶದ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿ ಆಗಲಿದೆ. ಸರ್ಕಾರ ಈ ನಿರ್ಧಾರ ಸರಿನಾ ಅಥವಾ ತಪ್ಪಾ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ದೇಶದ ಪ್ರತಿಯೊಬ್ಬ ನಾಗರಿಕನಿಗೂ ತಲುಪಿಸಿ.

Education For driving license

Please follow and like us:
error0
http://karnatakatoday.in/wp-content/uploads/2019/06/Education-for-Driving-License-1024x576.jpghttp://karnatakatoday.in/wp-content/uploads/2019/06/Education-for-Driving-License-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲದೇಶದಲ್ಲಿ ಇದೆ ಮೊದಲ ಭಾರಿಗೆ ದೊಡ್ಡ ನಿರ್ಧಾರವನ್ನ ತೆಗೆದುಕೊಳ್ಳುವುದರ ಮೂಲಕ ಬರಿ ಯುವಕರಿಗೆ ಮಾತ್ರವಲ್ಲದೆ ದೇಶದ ಲಕ್ಷಾಂತರ ಜನರಿಗೆ ಉದ್ಯೋಗ ಒದಗಿಸಿಕೊಡುವ ದೊಡ್ಡ ಯೋಜನೆಗೆ ಕೈ ಹಾಕಿದೆ ನಮ್ಮ ಮೋದಿ ಸರ್ಕಾರ. ವಿದ್ಯಾರ್ಹತೆಯ ಜೊತೆಗೆ ವೈಜ್ಞಾನಿಕ ಚಿಂತನೆಯನ್ನ ನಡೆಸಿರುವ ಮೋದಿ ಸರಕಾರ ಕೈಗೊಂಡಿರುವ ಆ ದೊಡ್ಡ ನಿರ್ಧಾರ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ...Film | Devotional | Cricket | Health | India