ನಿಮಗೆಲ್ಲ ಗೊತ್ತಿರುವ ಹಾಗೆ ನಮ್ಮ ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಲ್ಲಿ ಅತೀ ಆತಂಕವನ್ನ ಸೃಷ್ಟಿ ಮಾಡಿರುವ ವಿಷಯ ಏನು ಅಂದರೆ ಅದೂ ಕರೋನ ವೈರಸ್ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಚೀನಾ ದೇಶದಲ್ಲಿ ಹುಟ್ಟಿ ಅದೆಷ್ಟೋ ಜನರ ಪ್ರಾಣವನ್ನ ಬಲಿ ತೆಗೆದುಕೊಂಡ ಈ ವೈರಸ್ ಈಗ ನಮ್ಮ ದೇಶಕ್ಕೂ ಕಾಲಿಟ್ಟಿದ್ದು ಇಬ್ಬರ ಬಲಿ ತೆಗೆದುಕೊಂಡಿದೆ, ಇನ್ನು ದೇಶದಲ್ಲಿ ಈ ವೈರಸ್ ತಡೆಗಟ್ಟಲು ಅಗತ್ಯ ಕ್ರಮಗಳನ್ನ ಕೈಗೊಳ್ಳಲಾಗಿದೆ ಮತ್ತು ನಮ್ಮ ಕರ್ನಾಟಕದಲ್ಲಿ ಒಂದು ವಾರದ ಮಟ್ಟಿಗೆ ಎಲ್ಲಾ ಸಾರ್ವಜನಿಕ ಪ್ರದೇಶಗಳನ್ನ ಬಂದ್ ಮಾಡಲಾಗಿದೆ. ಇನ್ನು ಜನರ ಮನಸ್ಸಿನಲ್ಲಿ ತುಂಬಾ ದಿನದಿಂದ ಕಾಡುತ್ತಿರುವ ಪ್ರಶ್ನೆ ಏನು ಅಂದರೆ ಇಡೀ ಪ್ರಪಂಚವವೇ ಬೆಚ್ಚಿ ಬೀಳಿಸುತ್ತಿರುವ ಈ ವೈರಾಣು ನಮ್ಮ ದೇಹದ ಮೇಲೆ ದಾಳಿ ಮಾಡುತ್ತದೆ, ಇದು ದಾಳಿ ಮಾಡಿದರೆ ಮರಣ ಖಚಿತವಾಗಿ ಬರುತ್ತಾ ಮತ್ತು ಇದಕ್ಕೆ ಯಾವುದಾದರೂ ಚಿಕಿತ್ಸೆ ಇದೆಯಾ ಅನ್ನುವ ತುಂಬಾ ಪ್ರಶ್ನೆ ಜನರ ಮನಸ್ಸಲ್ಲಿ ಇದ್ದೆ ಇರುತ್ತದೆ.

ಈ ಕರೋನ ವೈರಸ್ ಬಗ್ಗೆ ನಮಗೆ ಸರಿಯಾಗಿ ಮಾಹಿತಿ ಇಲ್ಲದೆ ಇರುವುದರಿಂದ ನಾವು ಈ ವೈರಾಣುವಿಗೆ ಹೆಚ್ಚು ಭಯಬೀಳುವ ಪರಿಸ್ಥಿತಿ ಈಗ ಬಂದಿದೆ. ಸ್ನೇಹಿತರೆ ಈ ವೈರಾಣು ಉಸಿರಾಟದಿಂದ ನಮ್ಮ ದೇಹಕ್ಕೆ ಸೇರುತ್ತಿದೆ ಅನ್ನುವುದು ನಿಮಗೆಲ್ಲ ಗೊತ್ತೇ ಇದೆ ಮತ್ತು ವೈದ್ಯರು ಕೂಡ ಇದನ್ನೇ ಹೇಳುತ್ತಾರೆ, ಇನ್ನು ಈ ವೈರಾಣು ಸೋಕಿದವರು ನಮ್ಮ ಪಕ್ಕದಲ್ಲಿ ಇದ್ದು ಅವರು ಕೆಮ್ಮಿದರೆ, ಈ ವೈರಾಣುವಿನಿಂದ ಕಲುಷಿತವಾದ ಪ್ರದೇಶವನ್ನ ನಾವು ಕೈಗಳಿಂದ ಮುಟ್ಟಿ ಆ ಕೈಗಳಿಂದ ನಾವು ನಮ್ಮ ಮುಖವನ್ನ ಮುಟ್ಟಿದಾಗ ಆ ವೈರಾಣು ನಮ್ಮ ದೇಹದ ಒಳಗೆ ಸೇರುತ್ತದೆ.

Effects of Corona

ಇನ್ನು ನಮ್ಮ ದೇಹವನ್ನ ಸೇರಿದ ಈ ವೈರಾಣು ಗಂಟಲು, ಶ್ವಾಸಕೋಶ ಮತ್ತು ಶ್ವಾಸಕೋಶದಲ್ಲಿ ಇರುವ ಕಣಗಳಿಗೆ ವ್ಯಾಪಿಸುತ್ತದೆ ಮತ್ತು ನಂತರ ಈ ವೈರಸ್ ಅತೀ ವೇಗವಾಗಿ ಅಭಿವೃದ್ಧಿಯಾಗಿ ಆ ಭಾಗಗಳನ್ನ ವೈರಾಣು ಕಾರ್ಖಾನೆಗಳಾಗಿ ಬದಲಾಯಿಸುತ್ತದೆ, ಆದರೆ ಇಷ್ಟು ದಾಳಿ ಮಾಡಿದರು ಕೂಡ ಅದರ ನಮಗೆ ಅದರ ಲಕ್ಷಣಗಳು ಗೋಚರ ಆಗುವುದಿಲ್ಲ. ಇನ್ನು ಈ ವೈರಾಣು ನಮ್ಮ ದೇಹವನ್ನ ಸೇರಿದಾಗಿನಿಂದ ಅದರ ಲಕ್ಷಣ ನಮಗೆ ಗೋಚಕರ ಆಗುವುದರ ಮದ್ಯೆ ಇರುವ ಸಮಯವನ್ನ ಇಂಕುಬೇಷನ್ ಸಮಯ ಏನು ಕರೆಯಲಾಗುತ್ತದೆ ಮತ್ತು ಇದು ಅವರ ವಯಸ್ಸಿನ ಮತ್ತು ರೋಗಾ ನಿರೋಧಕ ಶಕ್ತಿಯ ಮೇಲೆ ಅವಲಂಬಿತವಾಗಿದೆ, ಹಾಗೆ ಸಾಮಾನ್ಯವಾಗಿ ಈ ಸಮಯ ಐದು ದಿನಗಳ ವರೆಗೆ ಇರುತ್ತದೆ ಅನ್ನುವುದು ವೈದ್ಯರ ಅಭಿಪ್ರಾಯವಾಗಿದೆ.

ಈ ಸಮಯದ ನಂತರ ಈ ವೈರಾಣು ದೇಹದ ಎಲ್ಲಾ ಭಾಗಗಳಿಗೆ ಪ್ರವೇಶ ಮಾಡುತ್ತದೆ. ಜ್ವರ, ಕೆಮ್ಮು, ನೆಗಡಿ, ದೇಹದ ನೋವುಗಳು, ಗಂಟಲು ನೋವು, ತಲೆ ನೋವು ಇದರ ಲಕ್ಷಣಗಳು ಆಗಿವೆ, ಇನ್ನು ಲಕ್ಷಣಗಳು ಕಾಣಿಸಿಕೊಂಡ ಕೆಲವು ದಿನಗಳ ನಂತರ ನಮ್ಮ ಶ್ವಾಸಕೋಶದ ನಾಳಗಳು ನೀರಿನಿಂದ ತುಂಬುವುದರಿಂದ ನಮಗೆ ಉಸಿರಾಡಲು ತೊಂದರೆ ಆಗುತ್ತದೆ. ಇನ್ನು ಯಾವ ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿ ಬಹಳ ಕಮ್ಮಿಯಾಗಿ ಇರುತ್ತದೆಯೇ ಅವರ ಮೇಲೆ ಈ ವೈರಾಣು ಬಹಳ ಜಾಸ್ತಿ ದಾಳಿ ಮಾಡುತ್ತದೆ ಮತ್ತು ಇದರಿಂದ ದೇಹದ ಅವವ್ಯಯಗಳು ಕೆಲಸ ಮಾಡುವುದನ್ನ ನಿಲ್ಲಿಸುತ್ತದೆ.

Effects of Corona

ಇನ್ನು ಉಸಿರಾಟದ ಸಮಸ್ಯೆಯಿಂದ ನಮ್ಮ ದೇಹಕ್ಕೆ ಬೇಕಾದಷ್ಟು ಆಮ್ಲಜನಕ ಸಿಗದೇ ಇರುವುದರಿಂದ ನಮ್ಮ ಕಿಡ್ನಿ ಸರಿಯಾಗಿ ಕೆಲಸ ಮಾಡುವುದಿಲ್ಲ ಮತ್ತು ಅದೂ ನಮ್ಮ ರಕ್ತವನ್ನ ಕೂಡ ಶುದ್ದಿ ಮಾಡುವುದಿಲ್ಲ ಮತ್ತು ಇದರ ಜೊತೆಗೆ ನಮ್ಮ ಕರುಳುಗಳು ಕೂಡ ಸರಿಯಾಗಿ ಕೆಲಸ ಮಾಡುವುದಿಲ್ಲ.ಈ ಹಂತದಲ್ಲಿ ಕೃತಕ ಯಂತ್ರದ ಮೂಲಕ ನಮ್ಮ ರಕ್ತವನ್ನ ಶುದ್ಧ ಮಾಡಲಾಗುತ್ತದೆ ಮತ್ತು ಕೃತಕ ಉಸಿರಾಟವನ್ನ ಅಳವಡಿಕೆ ಮಾಡುತ್ತದೆ, ಇಷ್ಟೆಲ್ಲ ಆದ ನಂತರವೂ ನಮ್ಮ ದೇಹ ವೈರಸ್ ದಾಳಿಯಿಂದ ತಪ್ಪಿಸಿಕೊಳ್ಳಲಿಲ್ಲ ಅಂದರೆ ಸಾವು ನಿಶ್ಚಿತವಾಗಿ ಬರುತ್ತದೆ. ಇನ್ನು ಇಲ್ಲಿಯ ತನಕ ಈ ವೈರಸ್ ಗೆ ಸರಿಯಾದ ಔಷದಿಯನ್ನ ಕಂಡುಹಿಡಿಯಲಾಗಿಲ್ಲ, ಈ ಎಲ್ಲಾ ಕಾರಣಗಳಿಂದ ನಾವು ಆದಷ್ಟು ಜಾಗ್ರತೆಯಿಂದ ಇರಬೇಕು, ಸ್ನೇಹಿತರೆ ಕರೋನ ವೈರಸ್ ಬಗೆಗಿನ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Please follow and like us:
error0
http://karnatakatoday.in/wp-content/uploads/2020/03/Effects-of-Corona-1-1024x576.jpghttp://karnatakatoday.in/wp-content/uploads/2020/03/Effects-of-Corona-1-150x104.jpgeditorಆರೋಗ್ಯಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲನಿಮಗೆಲ್ಲ ಗೊತ್ತಿರುವ ಹಾಗೆ ನಮ್ಮ ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಲ್ಲಿ ಅತೀ ಆತಂಕವನ್ನ ಸೃಷ್ಟಿ ಮಾಡಿರುವ ವಿಷಯ ಏನು ಅಂದರೆ ಅದೂ ಕರೋನ ವೈರಸ್ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಚೀನಾ ದೇಶದಲ್ಲಿ ಹುಟ್ಟಿ ಅದೆಷ್ಟೋ ಜನರ ಪ್ರಾಣವನ್ನ ಬಲಿ ತೆಗೆದುಕೊಂಡ ಈ ವೈರಸ್ ಈಗ ನಮ್ಮ ದೇಶಕ್ಕೂ ಕಾಲಿಟ್ಟಿದ್ದು ಇಬ್ಬರ ಬಲಿ ತೆಗೆದುಕೊಂಡಿದೆ, ಇನ್ನು ದೇಶದಲ್ಲಿ ಈ ವೈರಸ್ ತಡೆಗಟ್ಟಲು ಅಗತ್ಯ ಕ್ರಮಗಳನ್ನ ಕೈಗೊಳ್ಳಲಾಗಿದೆ ಮತ್ತು ನಮ್ಮ ಕರ್ನಾಟಕದಲ್ಲಿ...Film | Devotional | Cricket | Health | India