ನಿರ್ಜನ ಪ್ರದೇಶ ಹಾಗು ಕೆಲವೊಮ್ಮೆ ನಮ್ಮ ಹತ್ತಿರವೇ ಇರುವ ಪರಿಸರದಲ್ಲಿ ಹಿಂದಿನ ಕಾಲದ ಅದೆಷ್ಟೋ ರಹಸ್ಯ ತಾಣಗಳು ಹಾಗು ಯಾರು ಹೋಗಬಾರದೆಂದು ತಿಳಿಸಿದ ಅದೆಷ್ಟೋ ತಾಣಗಳು ಕೂಡ ಇರುತ್ತವೆ. ಒಮ್ಮೊಮ್ಮೆ ಭೂಮಿ ಅಗೆಯುವಾಗ ಹಾಗು ಉತ್ಕನನದ ಸಂದರ್ಭದಲ್ಲಿ ಈ ರೀತಿಯ ನಿವೇಶನಗಳು ದೊರೆಯುವುದುಂಟು. ಈಗ ಅದೇ ರೀತಿಯ ಘಟನೆಯೊಂದು ಇಂಗ್ಲೆಂಡ್ ನಲ್ಲಿ ನಡೆದಿದೆ. ಊರಿನ ಜನ ಈ ಸ್ಥಳವನ್ನು ಬರೋಬ್ಬರಿ 52 ವರ್ಷಗಳಿಂದ ದೊಡ್ಡ ಸುರಂಗ ಮಾರ್ಗವೆಂದು ನಂಬಿಕೊಂಡಿದ್ದರೂ ಆದರೆ ಆ ಜಾಗವನ್ನು ಖರೀದಿಸಿದ ಮಾಲೀಕ ಒಳ ಹೊಕ್ಕಿ ನೋಡಿದಾಗ ಆಶ್ಚರ್ಯ ಪಟ್ಟಿದ್ದ. ಇಷ್ಟಕ್ಕೂ ಏನಿದು ಆ ಜಾಗದಲ್ಲಿ ಏನಿತ್ತು ಮತ್ತು ಜನ ಯಾಕೆ ಆ ಸ್ಥಳವನ್ನು ಬಿಟ್ಟಿದ್ದರು ಎನ್ನುವ ಬಗ್ಗೆ ವಿವರವಾಗಿ ತಿಳಿಯೋಣ.

ಬಹಳ ಆಶ್ಚರ್ಯಕರ ಮತ್ತು ಆಘಾತಕಾರಿ ಪ್ರಕರಣವೊಂದು ಅಂದು ಇಂಗ್ಲೆಂಡ್‌ನಿಂದ ಹೊರಬಂದಿತ್ತು, ಈ ವಿಷಯವನ್ನು ಕೇಳಿದ ನಂತರ ಆ ಊರಿನ ಜನರೆಲ್ಲಾ ಹೌಹಾರಿ ಬಿಟ್ಟಿದ್ದರು ಏಕೆಂದರೆ ಜನರು ಆ ಜಾಗವನ್ನು ಸುಮಾರು 52 ವರ್ಷಗಳಿಂದ ಸುರಂಗವೆಂದು ಅಂದುಕೊಂಡಿದ್ದರು, ಅಷ್ಟೇ ಅಲ್ಲದೆ ಅನೇಕ ಜನರು ಈ ಸ್ಥಳವನ್ನು ಭೂತ ಪ್ರೇತದ ಪ್ರದೇಶವೆಂದು ಪರಿಗಣಿಸುತ್ತಿದ್ದರು ಮತ್ತು ಹತ್ತಿರದಲ್ಲಿ ಸಂಚರಿಸಲೂ ಕೂಡ ಹೆದರುತ್ತಿದ್ದರು. ಆದರೆ ಈಗ ಅದರ ವಿಚಿತ್ರ ಸತ್ಯ ಬಹಿರಂಗವಾಗಿದೆ. ಈ ಜಾಗವನ್ನು ಖರೀದಿ ಮಾಡಿದ ನೀಲ್ ವೋರೆಲ್ ಎಂಬ ವ್ಯಕ್ತಿ ಇದೀಗ ಆ ಜಗದ ಇಂಚಿಂಚು ಸ್ಥಳವನ್ನು ತನಿಖೆ ಮಾಡಿ ಬಹಳ ವರ್ಷಗಳ ಹಿಂದೆ ಈ ಸ್ಥಳ ಏನಾಗಿತ್ತು ಎಂದು ಜನರ ಮುಂದೆ ಇಟ್ಟಿದ್ದಾನೆ. ಹಾಗಿದ್ದರೆ ಈ ಸ್ಥಳ ಬಹಳ ವರ್ಷಗಳ ಹಿಂದೆ ಏನಾಗಿತ್ತು ಮತ್ತು ಜಾಗದ ಮಾಲೀಕ ಆ ಸುರಂಗವನ್ನು ಪ್ರವೇಶ ಮಾಡಿದಾಗ ಆತನಿಗೆ ಸಿಕ್ಕಿದ್ದೇನು ಎಂದು ನೋಡೋಣ.

2014 ರಲ್ಲಿ ಈ ಭೂಮಿಯನ್ನು ಖರೀದಿಸಿದ ನೀಲ್ ವೊರೆಲ್, ತಾನು ಕೂಡ ಇದನ್ನು ಆರಂಭದಲ್ಲಿ ಸುರಂಗವೆಂದು ಪರಿಗಣಿಸಿದ್ದೇನೆ ಎಂದು ಹೇಳಿಕೊಂಡಿದ್ದರು . ಆದರೆ ಅವನು ಮೊದಲ ಬಾರಿಗೆ ಅದರೊಳಗೆ ಹೋಗಿ ಪರೀಕ್ಷೆ ಮಾಡುವಾಗ ತಾನು ಕೂಡ ಆ ದ್ರಶ್ಯ ನೋಡಿ ಹೆದರಿದ್ದ ಎನ್ನುವ ಸತ್ಯ ಹೊರಹಾಕಿದ್ದ. ಏಕೆಂದರೆ ಆ ಪ್ರದೇಶ ಕೇವಲ ಸುರಂಗ ಆಗಿರಲಿಲ್ಲ ಬದಲಿಗೆ ಅದೊಂದು ಬಂಕರ್ ಆಗಿತ್ತು. ಭೂಮಿಯಿಂದ 100 ಅಡಿ ಅಡಿಯಲ್ಲಿ ಈ ರೀತಿಯ ಬ್ರಹತ್ ಯಂತ್ರೋಪಕರಣಗಳನ್ನು ಇತ್ತು ಬಂಕರ್ ನಿರ್ಮಾಣ ಮಾಡಲಾಗಿತ್ತು. ಈ ಬಂಕರ್ ಗಳು ನೀರನ್ನು ಫಿಲ್ಟರ್ ಮಾಡುವ ಕೆಲಸ ಮಾಡುತ್ತಿದ್ದವು ಎನ್ನಲಾಗಿದೆ. ಈ ನೀರು ಫಿಲ್ಟರ್ ಆದ ಬಳಿಕ ಸುತ್ತಮುತ್ತಲಿನ ಹಳ್ಳಿಗಳಿಗೆ ಸರಬರಾಜು ಮಾಡಲಾಗುತ್ತಿದ್ದವು ಎಂದು ವರದಿಯಲ್ಲಿ ನೀಲ್ ತಿಳಿಸಿದ್ದಾನೆ. ಆಶ್ಚರ್ಯಕರ ಸಂಗತಿಯೆಂದರೆ ಈ ಬಗ್ಗೆ ಯಾರಿಗೂ ತಿಳಿದಿರಲಿಲ್ಲ.

ನೀಲ್ ತಿಳಿಸಿದ ವರದಿಗಳ ಪ್ರಕಾರ ಇದೊಂದು ಭೂಮಿಯ ಕೆಳಗಿನ ನೀರು ಸಂಗ್ರಹಿಸುವ ದೊಡ್ಡ ಬಂಕರ್ ಆಗಿತ್ತು. ಸುತ್ತಮುತ್ತಲಿನ ಪರ್ವತ ಶ್ರೇಣಿಗಳ ನೀರನ್ನು ಇಲ್ಲಿ ಸಂಗ್ರಹಿಸಿ ಶುದ್ಧ ಮಾಡುವ ಕೆಲಸವನ್ನು ಇಲ್ಲಿ ಮಾಡಲಾಗುತ್ತಿತ್ತು. ನಂತರ ಈ ನೀರು ಊರಿನವರಿಗೆ ಸಾಗಿಸಲಾಗುತ್ತಿತ್ತು. ಆದರೆ 1960 ರಲ್ಲಿ ಇದನ್ನು ಕೆಲವು ಕಾರಣಗಳಿಂದ ಮುಚ್ಚಲಾಯಿತು ಮತ್ತು ಅಂದಿನಿಂದ ಅದು ನಿರ್ಜನವಾಯಿತು. ಮೂಲಗಳ ಪ್ರಕಾರ ಈ ಜಾಗ ಖರೀದಿ ಮಾಡಿದ್ದ ನೀಲ್ ಇದನ್ನು ಒಂದು ಭೂಮಿಯ ಒಳಗೆ ಭೂಗತ ಹೋಟೆಲ್ ಮಾಡಲು ಯೋಚಿಸಿದ್ದ ಆದರೆ ಅವನ ಹೆಂಡತಿ ಸ್ವಲ್ಪ ಸಮಯದ ಹಿಂದೆ ಇದ್ದಕ್ಕಿದ್ದಂತೆ ನಿಧನರಾದರು ಮತ್ತು ಅದರ ನಂತರ ಅವನು ತನ್ನ ನಿರ್ಧಾರವನ್ನು ಬದಲಾಯಿಸಿದನು ಎಂದು ತಿಳಿಸಲಾಗಿದೆ. ಸದ್ಯಕ್ಕೆ ಈ ರಹಸ್ಯ ಜಾಗವನ್ನು ನೀಲ್ ಬರೋಬ್ಬರಿ 25 ಲಕ್ಷ ರುಪಾಯಿಗೆ ಮಾರಲು ಮುಂದಾಗಿದ್ದಾನೆ.

Please follow and like us:
error0
http://karnatakatoday.in/wp-content/uploads/2020/01/ENGLAND-1024x576.jpghttp://karnatakatoday.in/wp-content/uploads/2020/01/ENGLAND-150x104.jpgKarnataka Trendingಅಂಕಣಎಲ್ಲಾ ಸುದ್ದಿಗಳುಸುದ್ದಿಜಾಲನಿರ್ಜನ ಪ್ರದೇಶ ಹಾಗು ಕೆಲವೊಮ್ಮೆ ನಮ್ಮ ಹತ್ತಿರವೇ ಇರುವ ಪರಿಸರದಲ್ಲಿ ಹಿಂದಿನ ಕಾಲದ ಅದೆಷ್ಟೋ ರಹಸ್ಯ ತಾಣಗಳು ಹಾಗು ಯಾರು ಹೋಗಬಾರದೆಂದು ತಿಳಿಸಿದ ಅದೆಷ್ಟೋ ತಾಣಗಳು ಕೂಡ ಇರುತ್ತವೆ. ಒಮ್ಮೊಮ್ಮೆ ಭೂಮಿ ಅಗೆಯುವಾಗ ಹಾಗು ಉತ್ಕನನದ ಸಂದರ್ಭದಲ್ಲಿ ಈ ರೀತಿಯ ನಿವೇಶನಗಳು ದೊರೆಯುವುದುಂಟು. ಈಗ ಅದೇ ರೀತಿಯ ಘಟನೆಯೊಂದು ಇಂಗ್ಲೆಂಡ್ ನಲ್ಲಿ ನಡೆದಿದೆ. ಊರಿನ ಜನ ಈ ಸ್ಥಳವನ್ನು ಬರೋಬ್ಬರಿ 52 ವರ್ಷಗಳಿಂದ ದೊಡ್ಡ ಸುರಂಗ ಮಾರ್ಗವೆಂದು ನಂಬಿಕೊಂಡಿದ್ದರೂ...Film | Devotional | Cricket | Health | India