ರಾಜ್ಯದ ರೈತರಿಗೆ ಕೇಂದ್ರ ಸರ್ಕಾರವು ಒಂದು ಸಿಹಿ ಸುದ್ದಿಯನ್ನ ನೀಡಿದೆ, ಹೌದು ಇಲ್ಲಿಯತನಕ ರೈತರಿಗೆ ಬೆಳೆಹಾನಿ ಪರಿಹಾರದ ಹಣ ಬಂದಿರಲಿಲ್ಲ, ಬಹಳಷ್ಟು ದಿನಗಳಿಂದ ರಾಜ್ಯದ ರೈತರು ಬರ ಪರಿಹಾರ ಹಾಗು ಬೆಳೆಹಾನಿ, ನೆರೆ ಪರಿಹಾರ ಹೀಗೆ ಅನೇಕ ರೀತಿಯ ಪರಿಹಾರಕ್ಕಾಗಿ ನಮ್ಮ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿಯನ್ನ ಮಾಡಿತ್ತು. ಇನ್ನು ಈಗ ಕೇಂದ್ರ ಸರ್ಕಾರವು ದಸರಾ ಹಬ್ಬದ ಪ್ರಯುಕ್ತ ರಾಜ್ಯದ ರೈತರಿಗೆ ಬಂಪರ್ ಕೊಡುಗೆಯನ್ನ ನೀಡಿದೆ, ಹಾಗಾದರೆ ಆ ಬಂಪರ್ ಕೊಡುಗೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಕೇಂದ್ರದ ಈ ಉಡುಗೊರೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ರಾಜ್ಯದ ರೈತರ ಬೆಲೆ ಹಾನಿ ಮತ್ತು ಬರಪರಿಹಾರಕ್ಕಾಗಿ ಕೇಂದ್ರ ಸರ್ಕಾರದಿಂದ ಸಹಾಯದ ಹಣಕ್ಕಾಗಿ ರಾಜ್ಯ ಸರ್ಕಾರ ಮನವಿಯನ್ನ ಮಾಡಿತ್ತು, ಇನ್ನು ಈ ಮನವಿಯನ್ನ ಸ್ವೀಕಾರ ಮಾಡಿರುವ ಕೇಂದ್ರ ಸರ್ಕಾರ ಈಗ ಬೆಳೆಹಾನಿ ಮತ್ತು ಬರಪರಿಹಾರಕ್ಕಾಗಿ 1700 ಕೋಟಿ ರೂಪಾಯಿಯನ್ನ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ರೈತರು ತಮ್ಮ ಬೆಲೆ ಹಾನಿಯಾಗಿರುವ ಕಾರಣ ಅದರ ಪರಿಹಾರಕ್ಕಾಗಿ ಆಯಾ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಗಳಲ್ಲಿ ಅರ್ಜಿಯನ್ನ ಸಲ್ಲಿಸಿದ್ದರು, ಆದರೆ ಇಲ್ಲಿಯ ತನಕ ರಾಜ್ಯದ ರೈತರಿಗೆ ಒಂದು ರೂಪಾಯಿ ಕೂಡ ಪರಿಹಾರದ ಹಣವನ್ನ ನೀಡಲಾಗಿಲ್ಲ.

Farmars Found

ಇನ್ನು ಈಗ ಸದ್ಯಕ್ಕೆ ರಾಜ್ಯದ ರೈತರಿಗೆ ಮೊದಲ ಕಂತಿನ ಬರ ಪರಿಹಾರದ ಹಣವಾಗಿ 1700 ಕೋಟಿ ರೂಪಾಯಿಯನ್ನ ಬಿಡುಗಡೆ ಮಾಡಲಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಆ ಹಣ ರಾಜ್ಯದ ರೈತರ ಕೈ ಸೇರಿಯಲಿದೆ ಎಂದು ತಿಳಿದು ಬಂದಿದೆ. ಇನ್ನು ಇದು ಕೇವಲ ಮೊದಲ ಕಂತಿನ ಹಣವಾಗಿದ್ದು ಎರಡನೆಯ ಕಂತಿನ ಹಣವಾಗಿ ಇನ್ನು ಹೆಚ್ಚಿನ ಪರಿಹಾರ ಹಣವನ್ನ ನೀಡುವುದಾಗಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಮತ್ತು ರಾಜ್ಯದ ರೈತರಿಗೆ ಭರವಸೆಯನ್ನ ಕೊಟ್ಟಿದೆ. ಇನ್ನು ಈಗ ನಮ್ಮ ರಾಜ್ಯ ಸರ್ಕಾರಕ್ಕೆ 1700 ಕೋಟಿ ರೂಪಾಯಿ ಬಂದು ತಲುಪಿದ್ದು ರೈತರಿಗೆ ಎಷ್ಟು ಬೆಲೆ ಹಾನಿಗೆ ಎಷ್ಟು ಹಣವನ್ನ ನೀಡಬೇಕು ಹಾಗು ಪ್ರತಿ ಎಕರೆ ಜಮೀನಿಗೆ ಎಷ್ಟು ಪರಿಹಾರದ ಹಣ ನೀಡಬೇಕು ಅನ್ನುವುದರ ಕುರಿತು ಸ್ಪಷ್ಟವಾಗಿ ನಿರ್ಧಾರವನ್ನ ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯ ಸರ್ಕಾರ ತೆಗೆದುಕೊಳ್ಳಲಿದೆ.

ಇನ್ನು ಕೆಲವೇ ದಿನಗಳಲ್ಲಿ ರೈತರ ಖಾತೆಗೆ ನೇರ ನಗದು ವರ್ಗಾವಣೆಯ ಮೂಲಕ ರೈತರ ಖಾತೆಗೆ ನೇರವಾಗಿ ಹಣವನ್ನ ವರ್ಗಾವಣೆ ಮಾಡಲಾಗುತ್ತದೆ, ಇನ್ನು ರೈತನ ಆಧಾರ್ ಕಾರ್ಡ್ ಯಾವ ಬ್ಯಾಂಕಿಗೆ ಲಿಂಕ್ ಆಗಿರುತ್ತದೆಯೋ ಅದೇ ಬ್ಯಾಂಕಿನ ಖಾತೆಗೆ ಈ ಹಣವನ್ನ ಜಮಾವಣೆ ಮಾಡಲಾಗುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿಯಾದ ಬಿ ಎಸ್ ಯಡಿಯೂರಪ್ಪನವರು ತಿಳಿಸಿದ್ದಾರೆ. ಇನ್ನು ಕೇಂದ್ರದಿಂದ ಬಿಡುಗಡೆಯಾದ ಬರಪರಿಹಾರದ ಹಣ ಬೇರೆಯವರ ಪಾಲಾಗದೆ ನೇರವಾಗಿ ರೈತರ ಖಾತೆಗಳಿಗೆ ಜಮವಾಗಲಿ ಅನ್ನುವುದು ನಮ್ಮ ಆಶಯ.

Farmars Found

Please follow and like us:
error0
http://karnatakatoday.in/wp-content/uploads/2019/10/Farmars-Found-1-1024x576.jpghttp://karnatakatoday.in/wp-content/uploads/2019/10/Farmars-Found-1-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಮಂಗಳೂರುಸುದ್ದಿಜಾಲರಾಜ್ಯದ ರೈತರಿಗೆ ಕೇಂದ್ರ ಸರ್ಕಾರವು ಒಂದು ಸಿಹಿ ಸುದ್ದಿಯನ್ನ ನೀಡಿದೆ, ಹೌದು ಇಲ್ಲಿಯತನಕ ರೈತರಿಗೆ ಬೆಳೆಹಾನಿ ಪರಿಹಾರದ ಹಣ ಬಂದಿರಲಿಲ್ಲ, ಬಹಳಷ್ಟು ದಿನಗಳಿಂದ ರಾಜ್ಯದ ರೈತರು ಬರ ಪರಿಹಾರ ಹಾಗು ಬೆಳೆಹಾನಿ, ನೆರೆ ಪರಿಹಾರ ಹೀಗೆ ಅನೇಕ ರೀತಿಯ ಪರಿಹಾರಕ್ಕಾಗಿ ನಮ್ಮ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿಯನ್ನ ಮಾಡಿತ್ತು. ಇನ್ನು ಈಗ ಕೇಂದ್ರ ಸರ್ಕಾರವು ದಸರಾ ಹಬ್ಬದ ಪ್ರಯುಕ್ತ ರಾಜ್ಯದ ರೈತರಿಗೆ ಬಂಪರ್ ಕೊಡುಗೆಯನ್ನ ನೀಡಿದೆ, ಹಾಗಾದರೆ...Film | Devotional | Cricket | Health | India