ಮಾಘ ಶುಕ್ಲ ಪಂಚಮಿಯನ್ನು ವಸಂತ ಪಂಚಮಿ ಎಂದು ಕರೆಯುತ್ತಾರೆ. ಈ ದಿನದಿಂದ ಪ್ರಾರಂಭವಾಗುವ ವಸಂತೋತ್ಸವ, ನಿಸರ್ಗದ ಉತ್ಸವವೇ ಆಗಿದೆ. ಯಾವಾಗಲೂ ಸುಂದರವಾಗಿ ಕಾಣಿಸುವ ನಿಸರ್ಗವು ವಸಂತ ಋತುವಿನಲ್ಲಿ ಬಣ್ಣಬಣ್ಣದ ಹೂವುಗಳಿಂದ ಇನ್ನಷ್ಟು ರಮಣೀಯವಾಗಿ ಕಾಣಿಸುತ್ತದೆ. ವಸಂತನನ್ನು ಋತುಗಳ ರಾಜನೆನ್ನುತ್ತಾರೆ. ಸುಖಸಮೃದ್ಧಿಯಿರುವನನ್ನು ರಾಜನೆಂದೇ ಕರೆಯುತ್ತಾರೆ. ವಸಂತವೂ ಹಾಗೆಯೇ ಸುಖಸಂಪತ್ತಿಯಿಂದ ತುಂಬಿರುತ್ತದೆ. ಚಳಿಗಾಲದಲ್ಲಿ ಬರಿದಾದ ಮರಗಳು ಈಗ ಚಿಗುರುತ್ತವೆ. ಕೆಲವು ಮರಗಳಂತೂ ಹೂಗಳಿಂದಲೇ ಮೈದುಂಬಿ ಮರೆಯಾಗುತ್ತವೆ

ಸರಸ್ವತೀದೇವಿಯು ವಿದ್ಯೆ, ಬುದ್ಧಿ, ಜ್ಞಾನ ಮತ್ತು ವಿವೇಕದ ಅಧಿದೇವತೆಯಾಗಿದ್ದಾಳೆ. ಬುದ್ಧಿ ಮತ್ತು ವಿವೇಕವೂ ಪ್ರಖರವಾಗಲು, ವಾಣಿಯು ಮಧುರ ಮತ್ತು ನಿರರ್ಗಳವಾಗಲು, ಜ್ಞಾನ ಸಾಧನೆಯಲ್ಲಿ ಉನ್ನತಿಯನ್ನು ಸಾಧಿಸಲು ನಾವು ಸರಸ್ವತೀದೇವಿಯ ಉಪಾಸನೆಯನ್ನು ಮಾಡುತ್ತೇವೆ. ವಸಂತ ಪಂಚಮಿಯ ದಿನ ಬ್ರಹ್ಮದೇವರ ಮುಖದಿಂದ ಸರಸ್ವತೀದೇವಿಯು ಅವತರಿಸಿದಳು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಕೆಲವು ಗ್ರಂಥಗಳಲ್ಲಿ ಮಾಘ ಶುಕ್ಲ ಪಂಚಮಿಯಂದು ಹೊಸ ಚಿಗುರುಗಳಿಂದಲೂ ಗಂಧದ ಅನುಲೇಪನದಿಂದಲೂ ವಿಶೇಷವಾಗಿ ಮಹಾಪೂಜೆಯನ್ನು ಮಾಡಬೇಕು. ಭಕ್ತಿಯಿಂದ ವೈಷ್ಣವರನ್ನು ಗೌರವಿಸಿ ವಸಂತರಾಗದೊಂದಿಗೆ ಗೀತನೃತ್ಯಗಳನ್ನು ಮಾಡಬೇಕೆಂದು ಹೇಳಲಾಗಿದೆ.

fest india

ಈ ವಸಂತ ಪಂಚಮಿ ಇನ್ನೇನು ಕೆಲ ದಿನಗಳಲ್ಲಿ ಆರಂಭವಾಗಲಿದೆ. ಈ ವಸಂತ ಪಂಚಮಿಯ ನಂತರ ಕೆಲ ರಾಶಿಯವರಿಗೆ ವಿದ್ಯಾದೇವತೆ ಸರಸ್ವತಿಯ ಆಶೀರ್ವಾದ ಸಿಗಲಿದ್ದು, ವ್ಯಾಪಾರ ಹಾಗು ವ್ಯವಹಾರದಲ್ಲಿ ಇರುವವರಿಗೆ ಲಾಭ ದಾಯಕ ಕೂಡ ಇರಲಿದೆ. ಮೇಷ ಮಕರ ಕುಂಭ ರಾಶಿಗೆ ಈ ವಾರದ ಆರಂಭವು ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಭಾಗವು ಬಲವಾಗಿರುವ ಪ್ರಬಲ ಸಾಧ್ಯತೆ ಇದೆ. ವಾರದ ಆರಂಭದಲ್ಲಿ ಚಂದ್ರ ನಿಮ್ಮ ಹನ್ನೊಂದನೇ ಮನೆಯಲ್ಲಿ ಇರುತ್ತಾನೆ ಮತ್ತು ಅದರ ನಂತರ ಹನ್ನೆರಡನೇ ಮತ್ತು ಮೊದಲನೇ ಮನೆಗೆ ಸಾಗಾಣಿಸುತ್ತಾನೆ.

ಇದರೊಂದಿಗೆ ಈ ವಾರ ಬುಧನ ಸಾಗಣೆಯು ನಿಮ್ಮ ಹನ್ನೊಂದನೇ ಮನೆಯಲ್ಲಿರುತ್ತದೆ. ನಾವು ತಿಳಿಸಿದಂತೆ ಈ ವಾರದ ಆರಂಭವು ನಿಮಗೆ ಅನುಕೂಲಕರವಾಗಿರುತ್ತದೆ. ನೀವು ವೃತ್ತಿಪರಕ್ಕೆ ಸಂಬಂಧಿಸಿದ್ದರೆ ಈ ಸಮಯದಲ್ಲಿ ನಿಮ್ಮ ಆದಾಯವು ಹೆಚ್ಚಾಗಬಹುದು. ಆದಾಗ್ಯೂ ನೀವು ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ಜಾಗರೂಕರಾಗಿರುವ ಅಗತ್ಯವಿದೆ. ಈ ರಾಶಿಚಕ್ರದ ವಿದ್ಯಾರ್ಥಿಗಳು ಶಿಕ್ಷಣದ ಕ್ಷೇತ್ರದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಾರದ ಮಧ್ಯದಲ್ಲಿ ಚಂದ್ರ ನಿಮ್ಮ ಹನ್ನೆರಡನೇ ಮನೆಯಲ್ಲಿ ಸಾಗುತ್ತಾನೆ. ಈ ಸಾಗಣೆಯ ಪರಿಣಾಮದಿಂದಾಗಿ ನೀವು ಯಾವುದೇ ನೀರಿನ ಸ್ಥಳಕ್ಕೆ ಪ್ರಯಾಣಿಸಬಹುದು.

fest india

ಅದೇ ಸಮಯದಲ್ಲಿ ಆರೋಗ್ಯದ ದೃಷ್ಟಿಯಿಂದ ನೋಡಿದರೆ, ಈ ಸಮಯದಲ್ಲಿ ನಿಮಗೆ ಚಳಿ ಶೀತದ ಸಮಸ್ಯೆಗಳಿರಬಹುದು. ನಿಮ್ಮ ಆರ್ಥಿಕ ಭಾಗವು ಬಲವಾಗಿರುತ್ತದೆ ಆದರೆ ದೇಶೀಯ ವಸ್ತುಗಳ ಮೇಲೆ ನಿಮ್ಮ ಹಣ ಖರ್ಚಾಗಬಹುದು. ವಾರದ ಅಂತ್ಯದಲ್ಲಿ ಮೊದಲನೇ ಮನೆಯಲ್ಲಿ ಚಂದ್ರ ಸಂಗನಿಸುವುದರಿಂದ ಬೌದ್ಧಿಕವಾಗಿ ನೀವು ಸಾಕಷ್ಟು ಬಲವಾಗಿರುತ್ತೀರಿ ಮತ್ತು ಶಿಕ್ಷಣ ಇತ್ಯಾದಿ ಕ್ಷೇತ್ರಗಳಲ್ಲಿ ನೀವು ಯಶಸ್ಸು ಪಡೆಯುತ್ತೀರಿ. ಚಂದ್ರ ಗ್ರಹದೊಂದಿಗೆ ಈ ವಾರ ಬುಧಗ್ರಹದ ಸಾಗಣೆಯು ನಿಮ್ಮ ಹನ್ನೊಂದನೇ ಮನೆಯಲ್ಲಿರುತ್ತದೆ. ಬುಧನ ಸಾಗಣೆಯಿಂದಾಗಿ ನಿಮ್ಮ ಆರ್ಥಿಕ ಭಾಗವು ಉತ್ತ್ತಮವಾಗಿರುತ್ತದೆ ಮತ್ತು ಹಣವನ್ನು ಪಡೆಯುವ ಅನೇಕ ಅವಕಾಶಗಳು ನಿಮಗೆ ಸಿಗುತ್ತವೆ.

Please follow and like us:
error0
http://karnatakatoday.in/wp-content/uploads/2020/01/GODESS-LAKSHMI-1024x576.jpghttp://karnatakatoday.in/wp-content/uploads/2020/01/GODESS-LAKSHMI-150x104.jpgKarnataka Trendingಅಂಕಣಜ್ಯೋತಿಷ್ಯಸುದ್ದಿಜಾಲಮಾಘ ಶುಕ್ಲ ಪಂಚಮಿಯನ್ನು ವಸಂತ ಪಂಚಮಿ ಎಂದು ಕರೆಯುತ್ತಾರೆ. ಈ ದಿನದಿಂದ ಪ್ರಾರಂಭವಾಗುವ ವಸಂತೋತ್ಸವ, ನಿಸರ್ಗದ ಉತ್ಸವವೇ ಆಗಿದೆ. ಯಾವಾಗಲೂ ಸುಂದರವಾಗಿ ಕಾಣಿಸುವ ನಿಸರ್ಗವು ವಸಂತ ಋತುವಿನಲ್ಲಿ ಬಣ್ಣಬಣ್ಣದ ಹೂವುಗಳಿಂದ ಇನ್ನಷ್ಟು ರಮಣೀಯವಾಗಿ ಕಾಣಿಸುತ್ತದೆ. ವಸಂತನನ್ನು ಋತುಗಳ ರಾಜನೆನ್ನುತ್ತಾರೆ. ಸುಖಸಮೃದ್ಧಿಯಿರುವನನ್ನು ರಾಜನೆಂದೇ ಕರೆಯುತ್ತಾರೆ. ವಸಂತವೂ ಹಾಗೆಯೇ ಸುಖಸಂಪತ್ತಿಯಿಂದ ತುಂಬಿರುತ್ತದೆ. ಚಳಿಗಾಲದಲ್ಲಿ ಬರಿದಾದ ಮರಗಳು ಈಗ ಚಿಗುರುತ್ತವೆ. ಕೆಲವು ಮರಗಳಂತೂ ಹೂಗಳಿಂದಲೇ ಮೈದುಂಬಿ ಮರೆಯಾಗುತ್ತವೆ ಸರಸ್ವತೀದೇವಿಯು ವಿದ್ಯೆ, ಬುದ್ಧಿ, ಜ್ಞಾನ ಮತ್ತು...Film | Devotional | Cricket | Health | India