ನಮ್ಮ ಪ್ರಪಂಚದಲ್ಲಿ ಮೂರೂ ರೀತಿಯ ಸಾರಿಗೆ ವ್ಯವಸ್ಥೆ ಇದೆ, ಹೌದು ರಸ್ತೆ ಸಾರಿಗೆ, ವಾಯು ಸಾರಿಗೆ ಮತ್ತು ಜಲಸಾರಿಗೆ. ಇನ್ನು ಈ ಸರಿಗೆಗಳು ರಸ್ತೆ ಸಾರಿಗೆ ಮತ್ತು ಜಲಸಾರಿಗೆ ಸ್ವಲ್ಪ ಕಡಿಮೆ ವೆಚ್ಚದ್ದು ಆದರೆ ವಾಯು ಸಾರಿಗೆ ಮಾತ್ರ ತುಂಬಾ ದುಭಾರಿ ಆಗಿದೆ. ಇನ್ನು ಜೀವನದಲ್ಲಿ ಒಮ್ಮೆಯಾದರೂ ವಿಮಾನದಲ್ಲಿ ಪ್ರಯಾಣ ಮಾಡಬೇಕು ಅನ್ನುವ ಆಸೆ ಎಲ್ಲರಿಗೂ ಇದ್ದೆ ಇರುತ್ತದೆ, ಆದರೆ ವಿಮಾನದಲ್ಲಿ ಪ್ರಯಾಣ ಮಾಡಬೇಕು ಅಂದರೆ ನಮ್ಮ ಬಳಿ ಕೊಂಚ ಜಾಸ್ತಿ ಹಣ ಇರಬೇಕು ಎಂದು ಹೇಳಿದರೆ ತಪ್ಪಾಗಲ್ಲ ಮತ್ತು ವಿದೇಶಗಳಿಗೆ ವಿಮಾನದ ಮೂಲಕ ಹೋಗಲು ಪಾಸ್ಪೋರ್ಟ್ ಜೊತೆಗೆ ವೀಸಾ ಕಡ್ಡಾಯವಾಗಿದೆ. ಇನ್ನು ಸಾಮಾನ್ಯವಾಗಿ ಭೂಮಿಯ ಮೇಲೆ ಮತ್ತು ನೀರಿನ ಮೇಲೆ ಚಲಿಸುವ ಸಾರಿಗೆ ಬಗ್ಗೆ ನಿಮಗೆ ಗೊತ್ತಿರುತ್ತದೆ ಆದರೆ ಗಾಳಿಯಲ್ಲಿ ಅಂದರೆ ಆಕಾಶದಲ್ಲಿ ಚಲಿಸುವ ವಿಮಾನ ಸಾರಿಗೆಯ ಬಗ್ಗೆ ಸಾಮಾನ್ಯವಾಗಿ ಯಾರಿಗೂ ಹೆಚ್ಚಾಗಿ ತಿಳಿದಿರುವುದಿಲ್ಲ.

ಹೌದು ಅಷ್ಟೊಂದು ಭಾರ ಇರುವ ವಿಮಾನ ಹೇಗೆ ಆಕಾಶದಲ್ಲಿ ಹಾರಾಟ ಮಾಡುತ್ತದೆ ಮತ್ತು ಅಷ್ಟು ಭಾರ ಇದ್ದರೂ ಕೂಡ ಯಾಕೆ ಭೂಮಿಗೆ ಅಪ್ಪಳಿಸುವುದಿಲ್ಲ ಅನ್ನುವುದರ ಬಗ್ಗೆ ಪ್ರಶ್ನೆ ಬಹಳ ಜನರ ತಲೆಯಲ್ಲಿ ಇದೆ, ಹಾಗಾದರೆ ಅಷ್ಟು ಭಾರ ಇರುವ ವಿಮಾನ ಹೇಗೆ ಆಕಾಶದಲ್ಲಿ ಹಾರಾಟ ಮಾಡುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ವಿಮಾನದಲ್ಲಿ ಸಾಮಾನ್ಯವಾಗಿ ಮೂರೂ ಚಕ್ರಗಳು ಇರುತ್ತದೆ ಮತ್ತು ರನ್ ವೆ ನಲ್ಲಿ ಓಡುವಾಗ ಒಂದು ಸಾಮಾನ್ಯ ವಾಹನ ಹೇಗೆ ಓಡುತ್ತದೆ ಇದೂ ಕೂಡ ಹಾಗೆ ಓಡುತ್ತದೆ ಅನ್ನುವ ಭಾವನೆ ನಮಗೆ ಭಾಸವಾಗುತ್ತದೆ.

Flight in runway

ಸ್ನೇಹಿತರೆ ನಮ್ಮ ಕಣ್ಣಿಗೆ ಕಾಣುದು ಮಾತ್ರ ಹೀಗೆ ಆದರೆ ನಿಜಕ್ಕೂ ಒಳಹೊಕ್ಕಿ ನೋಡಿದಾಗ ನಿಮಗೆ ಕೆಲವು ಆಶ್ಚರ್ಯಕರ ವಿಷಯಗಳು ತಿಳಿಯುತ್ತದೆ, ಹೌದು ಸ್ನೇಹಿತರೆ ಇಡೀ ವಿಮಾನವೇ ಒಂದು ಅಚ್ಚರಿಯ ಅದ್ಬುತ ಆಗಿದೆ. ಇಂಜಿನ್ ಸ್ಟಾರ್ಟ್ ಮಾಡಿ ವಿಮಾನವನ್ನ ಮೂವ್ ಮಾಡಿದ ಕೊಡಲೇ ವಿಮಾನ ರನ್ ವೆ ನಲ್ಲಿ ತುಂಬಾ ಫಾಸ್ಟ್ ಓಡಲು ಆರಂಭ ಮಾಡುತ್ತದೆ ಮತ್ತು ಇಲ್ಲಿ ಇಂಜಿನ್ ವಿಮಾನವನ್ನ ಮುಂದಕ್ಕೆ ಓಡಿಸಲು ಮಾತ್ರ ಸಹಾಯ ಮಾಡುತ್ತದೆ, ಆದರೆ ಈ ಇಂಜಿನ್ ವಿಮಾನ ಮೇಲಕ್ಕೆ ಹಾರಲು ಸಹಾಯ ಮಾಡುವುದಿಲ್ಲ. ಹೌದು ಪೈಲೆಟ್ ತನ್ನ ಕೈಯಲ್ಲಿ ಇರುವ ಕಂಟ್ರೋಲರ್ ಮೂಲಕ ವಿಮಾನಗಳ ರೆಕ್ಕೆಗಳಿಗೆ ಜೋಡಿಸಿರುವ ಏರ್ ಫಾಯಿಲ್ ಗಳನ್ನ ಸ್ವಲ್ಪ ಕೆಳಗೆ ಮಾಡುತ್ತಾರೆ ಮತ್ತು ಹೀಗೆ ಮಾಡುವಾಗ ಮುಂದಿನಿಂದ ನುಗ್ಗುತ್ತಿದ್ದ ಗಾಳಿ ಸ್ವಲ್ಪ ಕೆಳಮುಖವಾಗಿ ಚಲಸುತ್ತದೆ ಮತ್ತು ಇದನ್ನ ಡೌನ್ ವಾಶ್ ಎಂದು ಕರೆಯುತ್ತಾರೆ.

ಇನ್ನು ಈ ರೀತಿಯಾಗಿ ಗಾಳಿ ಚಲಿಸಿದಾಗ ವಿಮಾನ ಟೇಕ್ ಆಫ್ ಆಗುತ್ತದೆ ಮತ್ತು ವಿಮಾನ ಹಾರಲು ಶುರು ಮಾಡಿದಾಗ 15 ಡಿಗ್ರಿ ಆಂಗಲ್ ನ್ನ ಮೇಂಟೇನ್ ಮಾಡಲಾಗುತ್ತದೆ. ಇನ್ನು ವಿಮಾನದಲ್ಲಿ ಬಳಸುವ ಇಂಜಿನ್ ಗಳನ್ನ ಟರ್ಬೊ ಫ್ಯಾನ್ ಇಂಜಿನ್ ಎಂದು ಕರೆಯಲಾಗುತ್ತದೆ ಮತ್ತು ಈ ಟರ್ಬೊ ಫ್ಯಾನ್ ಇಂಜಿನ್ ಎಷ್ಟು ಜಾಸ್ತಿ ವೇಗಬಾಗಿ ತಿರುಗುತ್ತದೆಯೋ ಅಷ್ಟು ವೇಗವಾಗಿ ವಿಮಾನ ಮುಂದಕ್ಕೆ ಹೋಗುತ್ತದೆ. ಇನ್ನು ವಿಮಾನ ತನ್ನ ನಿರ್ದಿಷ್ಟ ಎತ್ತರಕ್ಕೆ ಹೋದಮೇಲೆ ನೇರವಾಗಿ ಚಲಿಸುತ್ತದೆ ಮತ್ತು ಅದರ ಮುನ್ನುಗ್ಗುವ ವೇಗ ಅದರ ಡ್ರ್ಯಾಗ್ ಗೆ ಸಮನಾಗಿ ಇರುತ್ತದೆ ಮತ್ತು ಈ ಸಮಯದಲ್ಲಿ ವಿಮಾನವನ್ನ ಮೇಲೆತ್ತುವ ವೇಗ ವಿಮಾನದ ಭಾರಕ್ಕೆ ಸಮವಾಗುತ್ತದೆ ಹಾಗೆ ಈ ಸಮಯದಲ್ಲಿ ವಿಮಾನ ಯಾವುದೇ ತೊಂದರೆ ಇಲ್ಲದೆ ಆಕಾಶದಲ್ಲಿ ಚಲಿಸುತ್ತದೆ. ಸ್ನೇಹಿತರೆ ವಿಮಾನದ ಹಾರಾಟದ ಬಗೆಗಿನ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

Flight in runway

Please follow and like us:
error0
http://karnatakatoday.in/wp-content/uploads/2020/02/Flight-in-runway-1-1024x576.jpghttp://karnatakatoday.in/wp-content/uploads/2020/02/Flight-in-runway-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲನಮ್ಮ ಪ್ರಪಂಚದಲ್ಲಿ ಮೂರೂ ರೀತಿಯ ಸಾರಿಗೆ ವ್ಯವಸ್ಥೆ ಇದೆ, ಹೌದು ರಸ್ತೆ ಸಾರಿಗೆ, ವಾಯು ಸಾರಿಗೆ ಮತ್ತು ಜಲಸಾರಿಗೆ. ಇನ್ನು ಈ ಸರಿಗೆಗಳು ರಸ್ತೆ ಸಾರಿಗೆ ಮತ್ತು ಜಲಸಾರಿಗೆ ಸ್ವಲ್ಪ ಕಡಿಮೆ ವೆಚ್ಚದ್ದು ಆದರೆ ವಾಯು ಸಾರಿಗೆ ಮಾತ್ರ ತುಂಬಾ ದುಭಾರಿ ಆಗಿದೆ. ಇನ್ನು ಜೀವನದಲ್ಲಿ ಒಮ್ಮೆಯಾದರೂ ವಿಮಾನದಲ್ಲಿ ಪ್ರಯಾಣ ಮಾಡಬೇಕು ಅನ್ನುವ ಆಸೆ ಎಲ್ಲರಿಗೂ ಇದ್ದೆ ಇರುತ್ತದೆ, ಆದರೆ ವಿಮಾನದಲ್ಲಿ ಪ್ರಯಾಣ ಮಾಡಬೇಕು ಅಂದರೆ ನಮ್ಮ ಬಳಿ...Film | Devotional | Cricket | Health | India