ದೇಶದಲ್ಲಿ ನಾವು ಇಂದು ಎಲ್ಲಾ ಕಡೆ ಸಂಚರಿಸುತ್ತೇವೆ ಮತ್ತು ಎಲ್ಲರೊಂದಿಗೂ ಕೂಡ ವ್ಯವಹರಿಸುತ್ತೇವೆ. ಆದರೆ ಕೆಲವೊಂದು ಸಾರ್ವಜನಿಕ ಸ್ಥಳಗಳಲ್ಲಿ ನಮಗಿರುವ ಹಕ್ಕು ಮತ್ತು ಅಧಿಕಾರಗಳ ಬಗ್ಗೆ ನಿಮಗೆಷ್ಟು ಗೊತ್ತು ಇದರ ಬಗ್ಗೆ ಇಂದು ನಾವು ನಿಮಗೆ ಕುತೂಹಲವಾದ ವಿಷಯ ಹೇಳಲು ಇಚ್ಛಿಸಿದ್ದೇವೆ. ಸಾಮಾನ್ಯವಾಗಿ ಪೆಟ್ರೋಲ್ ಬಂಕ್ ಗಳಿಗೆ ನೀವು ಹೋಗಿದ್ದಿರಿ ಅಲ್ಲಿನ ವ್ಯವಸ್ಥೆ ನೋಡಿದ್ದೀರಿ. ಒಂದು ಪೆಟ್ರೋಲ್ ಬಂಕ್ ನಲ್ಲಿ ಒಬ್ಬ ಸಾಮಾನ್ಯ ಪ್ರಜೆಗಿರುವ ಹಕ್ಕು ಮತ್ತು ಅಧಿಕಾರದ ಬಗ್ಗೆ ನಿಮಗೆ ಗೊತ್ತಾ, ಅದನ್ನೇ ಹೇಳುತ್ತೇವೆ ಕೇಳಿ.

ಪೆಟ್ರೋಲ್ ಕೇಂದ್ರಗಳಲ್ಲಿ ನಿಮಗಿರು 6 ಮೂಲಭೂತ ಹಕ್ಕುಗಳು ಯಾವುವು ಗೊತ್ತಾ ಈ ಕೆಳಗಿದೆ. ಮೊದಲ ಹಕ್ಕು ಏನೆಂದರೆ ಯಾವುದೇ ಬಂಕ್ ಗಳಲ್ಲಿ ಪೆಟ್ರೋಲ್ ಹಾಗು ಡೀಸೆಲ್ ನ ಕ್ವಾಲಿಟಿ ಹಾಗು ಕ್ವಾಂಟಿಟಿ ಬಗ್ಗೆ ನಿಮಗೆ ಅನುಮಾನ ಇದ್ದರೆ ಕೂಡಲೇ ಅಲ್ಲೇ ಫಿಲ್ಟರ್ ಪೇಪರ್ ಟೆಸ್ಟ್ ಮಾಡಿಸಿ ನೋಡಬಹುದು ಅದು ಕೂಡ ಯಾವುದೇ ವೆಚ್ಚ ಇಲ್ಲದೆ. ಅಷ್ಟೇ ಅಲ್ಲದೆ ನೀವು ಕೊಟ್ಟ ಹಣಕ್ಕೆ ಕಡಿಮೆ ಪೆಟ್ರೋಲ್ ಬೀಳುತ್ತಿದೆ ಎನ್ನುವ ಅನುಮಾನ ಇದ್ದರೂ ಕೂಡ ಬಗೆಹರಿಸಿಕೊಳ್ಳಬಹದು.

ಇನ್ನು ಎರಡನೆಯದಾಗಿ ಬಂಕ್ ಗಳಲ್ಲಿ ಕಡ್ಡಾಯವಾಗಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಅಥವಾ ಬಾಕ್ಸ್ ಇರಲೇಬೇಕು. ಅಪಘಾತದ ಸಂದರ್ಭದಲ್ಲಿ ನೀವು ಇಲ್ಲಿಗೆ ಹೋಗಿ ಇದನ್ನು ಪಡೆದುಕೊಳ್ಳಬಹುದು. ಇನ್ನು ಎಲ್ಲಾದರೂ ನಿಮ್ಮ ಫೋನ್ ಕೈಕೊಟ್ಟು ಅಥವಾ ದೂರದ ಜಾಗಕ್ಕೆ ಹೋದಾಗ ದಾರಿ ತಪ್ಪಿದಾಗ ಅಥವಾ ಯಾವುದೇ ಅಹಿತಕರ ಘಟನೆ ಸಮವಿಸಿದಾಗ ನಿಮ್ಮವರನ್ನು ಕರೆಸಲು ತುರ್ತು ಕರೆ ಮಾಡಲು ನೀವು ಬಂಕ್ ಗಳಲ್ಲಿ ಕೇಳಬಹುದು. ಪ್ರತಿಯೊಂದು ಬಂಕ್ ಕಡ್ಡಾಯವಾಗಿ ಶೌಚಾಲಯ ಹಾಗು ವಾಶ್ ರೂಮ್ ಹೊಂದಿರಲೇಬೇಕು.

ಪೆಟ್ರೋಲ್ ಹಾಕಿಸಿದವರು ಅಥವಾ ಆ ಶಾಖೆಯ ಗಿರಾಕಿಗಳು ಮಾತ್ರ ಇದನ್ನು ಬಳಸಬೇಕೆಂಬ ಯಾವುದೇ ನಿಯಮ ಇಲ್ಲ. ಇನ್ನು ಇಲ್ಲಿ ಶುದ್ಧ ಕೆಡಿಯುವ ನೀರಿನ ವ್ಯವಸ್ಥೆ ಇರಲೇಬೇಕು. ಕೊನೆಯದಾಗಿ ಎಲ್ಲಾ ವಾಹನಗಳಿಗೆ ಉಚಿತವಾಗಿ ಗಾಳಿ ತುಂಬಿಸುವ ವ್ಯವಸ್ಥೆ ನೀಡಬೇಕು ಮತ್ತು ಇದು ಅವಶ್ಯವಾಗಿ ಇದ್ದೆ ಇರಬೇಕು. ಇದಕ್ಕಾಗಿ ಯಾವುದೇ ಶುಲ್ಕ ತಗೆದುಕೊಳ್ಳುವಂತಿಲ್ಲ. ಗಲಿ ತುಂಬಿಸುವ ಮಷಿನ್ ಇಲ್ಲದಿದ್ದರೂ ಕೂಡ ಅದರ ಬಗ್ಗೆ ವಿಚಾರಿಸುವ ಅಧಿಕಾರ ಕೂಡ ನಿಮಗಿದೆ.

ನಾವು ಮೇಲೆ ತಿಳಿಸಿದ ಈ ಎಲ್ಲಾ ನಿಯಮಗಳು ಕೂಡ ದೇಶದ ಎಲ್ಲಾ ಪೆಟ್ರೋಲ್ ಬಂಕ್ ಗಳಿಗೆ ಅನ್ವಯವಾಗುತ್ತದೆ. ಇಂತಹ ವ್ಯವಸ್ಥೆ ಇರದ ಹಾಗು ವ್ಯವಸ್ಥೆ ಇದ್ದರು ಬಳಸಲು ನೀಡದ ಪೆಟ್ರೋಲ್ ಪಂಪ್ ಮಾಲೀಕರ ವಿರುದ್ಧ ನೀವು ನ್ಯಾಯಾಲಯದಲ್ಲಿ ನಿಸ್ಸಂಕೋಚವಾಗಿ ಕೇಸ್ ಮಾಡಬಹುದಾಗಿದೆ. ಇದಕ್ಕೆ ಯಾವುದೇ ಅಡ್ಡಿಯಲ್ಲ ಇದು ನಿಮ್ಮ ಹಕ್ಕು. ಈ ಮಾಹಿತಿ ಇಷ್ಟವಾಗಿದ್ದರೆ ಪ್ರತಿಯೊಬ್ಬರಿಗೂ ತಿಳಿಸಿ.

Please follow and like us:
error0
http://karnatakatoday.in/wp-content/uploads/2019/06/your-rights-in-petrol-pumps-1024x576.jpghttp://karnatakatoday.in/wp-content/uploads/2019/06/your-rights-in-petrol-pumps-150x104.jpgKarnataka Trendingಅಂಕಣಎಲ್ಲಾ ಸುದ್ದಿಗಳುನಗರಮಂಗಳೂರುದೇಶದಲ್ಲಿ ನಾವು ಇಂದು ಎಲ್ಲಾ ಕಡೆ ಸಂಚರಿಸುತ್ತೇವೆ ಮತ್ತು ಎಲ್ಲರೊಂದಿಗೂ ಕೂಡ ವ್ಯವಹರಿಸುತ್ತೇವೆ. ಆದರೆ ಕೆಲವೊಂದು ಸಾರ್ವಜನಿಕ ಸ್ಥಳಗಳಲ್ಲಿ ನಮಗಿರುವ ಹಕ್ಕು ಮತ್ತು ಅಧಿಕಾರಗಳ ಬಗ್ಗೆ ನಿಮಗೆಷ್ಟು ಗೊತ್ತು ಇದರ ಬಗ್ಗೆ ಇಂದು ನಾವು ನಿಮಗೆ ಕುತೂಹಲವಾದ ವಿಷಯ ಹೇಳಲು ಇಚ್ಛಿಸಿದ್ದೇವೆ. ಸಾಮಾನ್ಯವಾಗಿ ಪೆಟ್ರೋಲ್ ಬಂಕ್ ಗಳಿಗೆ ನೀವು ಹೋಗಿದ್ದಿರಿ ಅಲ್ಲಿನ ವ್ಯವಸ್ಥೆ ನೋಡಿದ್ದೀರಿ. ಒಂದು ಪೆಟ್ರೋಲ್ ಬಂಕ್ ನಲ್ಲಿ ಒಬ್ಬ ಸಾಮಾನ್ಯ ಪ್ರಜೆಗಿರುವ ಹಕ್ಕು ಮತ್ತು ಅಧಿಕಾರದ...Film | Devotional | Cricket | Health | India