ಗಂಗಾಕಲ್ಯಾಣ ಯೋಜನೆ ಯಲ್ಲಿ ರೈತರಿಗೆ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ರೈತರಿಗೆ ಉಚಿತವಾಗಿ ತಮ್ಮ ಹೊಲಗಳಲ್ಲಿ ಬೋರವೆಲ್ ಕೂಳವೆ ಭಾವಿಗಳನ್ನು ಹಾಕಿಸಿಕೂಳ್ಳಲು ಅವಕಾಶವಿದೆ. ಈ ಗಂಗಾ ಕಲ್ಯಾಣ ಯೋಜನೆಯಡಿ ಇತರೆ ಹಿಂದುಳಿದ ವರ್ಗಗಳ ರೈತರಿಗೆ ಸರ್ಕಾರದಿಂದ ಉಚಿತವಾಗಿ ಕೂಳವೆ ಬಾವಿ ಹಾಕಿಸಿ ಕೂಳ್ಳಲು  5 ಎಕರೆ ಒಣ ಭುಮಿ ಹೊಂದಿದ ರೈತರಿಗೆ ಸರ್ಕಾರದಿಂದ ಸಣ್ಣ ಹಾಗು ಅತೀ ಸಣ್ಣ ರೈತರಿಗೆ ಉಚಿತವಾಗಿ ತಮ್ಮ ಜಮಿನಿನಲ್ಲಿ ಬೋರ್ ವೆಲ್ ಗಳನ್ನು ಹಾಕಿಕೊಡಲು ಮುಂದಾಗಿದ್ದು, ಈಗ ಸಣ್ಣ ರೈತರಿಗು ಹಾಗು ಅತೀ ಸಣ್ಣ ರೈತರಿಗೆ ಅರ್ಜಿಗಳನ್ನು ಕರೆಯಲಾಗಿದೆ.

ರೈತರು ಈ ಗಂಗಾಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ಬಾವಿ ಪಡೆಯಬಹುದು. ಅರ್ಜಿ ಆಹ್ವಾನಕ್ಕೆ ಈಗಾಗಲೇ ಕರೆಯಲಾಗಿದ್ದು ನಿಮ್ಮ ಜಿಲ್ಲೆ ಅಥವಾ ತಾಲೂಕಿನ ಬಿಸಿಎಂ ಆಫೀಸಿನಲ್ಲಿ ಪಡೆದುಕೊಂಡು ಅಲ್ಲಿಗೆ ವಾಪಸು ನೀಡಬೇಕಾಗುತ್ತದೆ. ವೈಯುಕ್ತಿಕ ನೀರಾವರಿ ಕೊಳವೆಬಾವಿ ಯೋಜನೆಯ ವಿವರ ಈ ಯೋಜನೆಯಲ್ಲಿ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು.

ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದು.  ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಸೇರಿದವರಾಗಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು. (ವಿಶ್ವಕರ್ಮ ಅದರ ಉಪ ಸಮುದಾಯಗಳು, ಉಪ್ಪಾರ ಅದರ ಉಪ ಸಮುದಾಯಗಳು, ಅಂಬಿಗ ಅದರ ಉಪ ಸಮುದಾಯಗಳು ಮತ್ತು ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ).

ಉಳಿಕೆ ಜಿಲ್ಲೆಗಳಲ್ಲಿ ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಇರುವ ಕನಿಷ್ಠ 2 ಎಕರೆ ಜಮೀನು ಇರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ 40000/-ಗಳ ಒಳಗಿರಬೇಕು. ಈ ಅರ್ಜಿಯ ಜೊತೆಗೆ ಆದಾಯ ಪ್ರಮಾಣ ಪಾತ್ರ ನೀಡಲೇಬೇಕು , ಹಾಗು ಭೂಮಿ ಪತ್ರಗಳು, ಹಾಗು ನಿಮ್ಮ ಸಜಮೀನಿನಲ್ಲಿ ನೀರಾವರಿ ಸೌಲಭ್ಯ ಇಲ್ಲದ ಪ್ರಮಾಣ ಪತ್ರ ಬೇಕು. ಈ ಮಾಹಿತಿಯನ್ನು ಆದಷ್ಟು ರೈತರಿಗೆ ತಲುಪಿಸಿ.

Please follow and like us:
0
http://karnatakatoday.in/wp-content/uploads/2018/08/borewell-free-1024x576.pnghttp://karnatakatoday.in/wp-content/uploads/2018/08/borewell-free-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುಗಂಗಾಕಲ್ಯಾಣ ಯೋಜನೆ ಯಲ್ಲಿ ರೈತರಿಗೆ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ರೈತರಿಗೆ ಉಚಿತವಾಗಿ ತಮ್ಮ ಹೊಲಗಳಲ್ಲಿ ಬೋರವೆಲ್ ಕೂಳವೆ ಭಾವಿಗಳನ್ನು ಹಾಕಿಸಿಕೂಳ್ಳಲು ಅವಕಾಶವಿದೆ. ಈ ಗಂಗಾ ಕಲ್ಯಾಣ ಯೋಜನೆಯಡಿ ಇತರೆ ಹಿಂದುಳಿದ ವರ್ಗಗಳ ರೈತರಿಗೆ ಸರ್ಕಾರದಿಂದ ಉಚಿತವಾಗಿ ಕೂಳವೆ ಬಾವಿ ಹಾಕಿಸಿ ಕೂಳ್ಳಲು  5 ಎಕರೆ ಒಣ ಭುಮಿ ಹೊಂದಿದ ರೈತರಿಗೆ ಸರ್ಕಾರದಿಂದ ಸಣ್ಣ ಹಾಗು ಅತೀ ಸಣ್ಣ ರೈತರಿಗೆ ಉಚಿತವಾಗಿ ತಮ್ಮ ಜಮಿನಿನಲ್ಲಿ...Kannada News