ಬಡವರು ಕೂಡ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಬೇಕು ಮತ್ತು ಇಡೀ ದೇಶದಲ್ಲಿ ಎಲ್ಲಾ ವರ್ಗದ ಜನರು ಕೂಡ ಈ ಸೇವೆ ಬಳಸಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಆರಂಭವಾದ ಯೋಜನೆ ಅದುವೇ ಉಜ್ವಲ ಗ್ಯಾಸ್ ಸಿಲಿಂಡರ್ ಯೋಜನೆ ಇಲ್ಲಿ ನಿಮಗೆ ಸರ್ಕಾರ ಕಡೆಯಿಂದ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಮೂಲಕ ಬಡವರಿಗೆ ಉಚಿತ LPG ಗ್ಯಾಸ ನೀಡಲಾಗುತ್ತಿದೆ.

ಈ ಯೋಜನೆಯ ಮೂಲಕ ಮೊದಲ ಗ್ಯಾಸ್ ಸಿಲೆಂಡರ ಕೂಡಾ ಉಚಿತ ವಾಗಿ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಈ ಮಹತ್ವದ ಯೋಜನೆಯ ಮೂಲಕ ಬಡ ಮಹಿಳೆಯರಿಗಾಗಿ ಮನೆಬಳಕೆಗೆ ಅನಿಲ ಸೇವೆ ಒದಗಿಸಲಾಗುತ್ತಿದೆ. ಈಗಾಗಲೇ ದೇಶದಲ್ಲಿ ಎಲ್ಲಾ ಅರ್ಹ ಕುಟುಂಬಗಳು ಕೂಡ ಮನೆಯಲ್ಲಿ ಸಿಲಿಂಡರ್ ಪಡೆದುಕೊಂಡಿದ್ದಾರೆ.

ಆದರೆ ಈಗ ಬಂದಿರುವ ಹೊಸ ಅಪ್ಡೇಟ್ ಏನೆಂದರೆ ಈವರೆಗೆ ಯಾರಿಗೆ ಈ ಉಚಿತ ಸೇವೆ ದೊರಕಿಲ್ಲವೋ ಅವರು ಕೂಡ ಈಗ ಬಂದಿರುವ ಈ ಸೂಚನೆ ಪ್ರಕಾರ ಮತ್ತೊಮ್ಮೆ ಅವಕಾಶ ನೀಡಲಾಗಿದ್ದು ತಮ್ಮ ಕುಟುಂಬಗಳಿಗೆ ಗ್ಯಾಸ್ ಪಡೆದುಕೊಳ್ಳಬಹುದಾಗಿದೆ.

ಈ ಹಿಂದೆ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಮಾತ್ರ ಫ್ರೀ ಆಗಿ ಈ ಯೋಜನೆ ಅನುಷ್ಠಾನಕ್ಕೆ ಬಂದಿತ್ತು, ಆದರೆ ಈಗ ಅಂತ್ಯೋದಯ ಕಾರ್ಡ್ ಮತ್ತು ಎಸ್ಸಿ ಎಸ್ಟಿ ಕುಟುಂಬಗಳಿಗೆ ಮಾತ್ರ ನೀಡಲಾಗುತ್ತಿದೆ.

ಈ ಯೋಜನೆಯಲ್ಲಿ ನಿಮಗೆ ಒಂದು ಗ್ಯಾಸ್ ಸ್ಟವ್, ಸಿಲಿಂಡರ್, ಮತ್ತು ರೆಗ್ಯುಲೇಟರ್ ನೀಡಲಾಗುತ್ತದೆ. ಈಗಾಗಲೇ ಎರಡನೇ ಹಂತದ ಪ್ರಕ್ರಿಯೆ ಪ್ರಾರಂಭವಾಗಿದ್ದು, ನಿಮಗೂ ಅಥವಾ ನಿಮ್ಮ ಗೆಳೆಯರಿಗೂ ಅವಶ್ಯಕತೆ ಇದ್ದರೆ ಹತ್ತಿರದ ಗ್ಯಾಸ್ ಕಂಪನಿಗಳ ಆಫೀಸಿಗೆ ಭೇಟಿ ನೀಡಿ ಮತ್ತು ನಿಮ್ಮ ವಿವರಗಳನ್ನು ಹಾಗು ಸೂಕ್ತ ದಾಖಲೆ ನೀಡಿ ರಿಜಿಸ್ಟರ್ ಮಾಡಿಸಿಕೊಳ್ಳಿ.

ಕೇವಲ 45 ದಿನಗಳಲ್ಲಿ ನಿಮಗೆ ಈ ಸೇವೆ ದೊರೆಯುತ್ತದೆ, ಅರ್ಜಿ ಸಲ್ಲಿಕೆಗೆ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಹಾಗು ಬ್ಯಾಂಕ್ ಪಾಸ್ ಪುಸ್ತಕ ಬೇಕೇ ಬೇಕು.

ಇವುಗಳೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪಾತ್ರ ಹಾಗು ಇತ್ತೀಚಿಗೆ ತೆಗೆಸಿದ ಎರಡು ಭಾವಚಿತ್ರ, ಮತ್ತು ಜನಧನ್ ಖಾತೆ ಇದ್ದರೆ ಅದನ್ನು ಕೂಡ ನೀಡಬಹುದು. ಮತ್ತು ಕಡ್ಡಾಯವಾಗಿ ನಿಮ್ಮ ಮೊಬೈಲ್ ಸಂಖ್ಯೆ ಹಾಗು ಬ್ಯಾಂಕ್ ವಿವರ ನೀಡಿ. ಈ ಮಾಹಿತಿಯನ್ನು ಬಡಕುಟುಂಬಗಳಿಗೆ ತಲುಪಿಸಿ.

Please follow and like us:
0
http://karnatakatoday.in/wp-content/uploads/2018/11/gas-free-1024x576.pnghttp://karnatakatoday.in/wp-content/uploads/2018/11/gas-free-150x104.pngKarnataka Today's Newsಅಂಕಣಆರೋಗ್ಯಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಬಡವರು ಕೂಡ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಬೇಕು ಮತ್ತು ಇಡೀ ದೇಶದಲ್ಲಿ ಎಲ್ಲಾ ವರ್ಗದ ಜನರು ಕೂಡ ಈ ಸೇವೆ ಬಳಸಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಆರಂಭವಾದ ಯೋಜನೆ ಅದುವೇ ಉಜ್ವಲ ಗ್ಯಾಸ್ ಸಿಲಿಂಡರ್ ಯೋಜನೆ ಇಲ್ಲಿ ನಿಮಗೆ ಸರ್ಕಾರ ಕಡೆಯಿಂದ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಮೂಲಕ ಬಡವರಿಗೆ ಉಚಿತ LPG ಗ್ಯಾಸ ನೀಡಲಾಗುತ್ತಿದೆ. ಈ ಯೋಜನೆಯ ಮೂಲಕ ಮೊದಲ ಗ್ಯಾಸ್ ಸಿಲೆಂಡರ ಕೂಡಾ ಉಚಿತ ವಾಗಿ ನೀಡಲಾಗುತ್ತಿದೆ....Kannada News