ಕೇಂದ್ರ ಸರಕಾರ ಈಗ ಗ್ಯಾಸ್ ಕನೆಕ್ಷನ್ ಹೊಂದಿರುವವರಿಗೆ ಒಂದು ಸುಹಿ ಸುದ್ದಿ ಮತ್ತೊಂದು ಕಹಿಸುದ್ದಿ ನೀಡಿದೆ. ದೇಶದಲ್ಲಿ ಮೊದಲೇ ಪೆಟ್ರೋಲ್ ಬೆಲೆ ಏರಿಕೆಯಾದ ದಿನದಿಂದ ಸರಕಾರದ ವಿರುದ್ಧ ಟೀಕೆಗಳು ಆರಂಭವಾಗಿದ್ದವು ಆದರೆ ಈಗ ಮತ್ತೆ ಪೆಟ್ರೋಲ್ ಬೆಲೆ ಇಳಿದಿದೆ. ಇನ್ನು ಗ್ಯಾಸ್ ವಿಷಯಕ್ಕೆ ಬಂದರೆ ಮೊದಲ ಸಿಹಿ ಸುದ್ದಿ ಏನಪ್ಪಾ ಎಂದರೆ ಈ ಮೊದಲು ಗ್ಯಾಸ್ ಬುಕ್ ಮಾಡುವುದು ಮೊಬೈಲ್ ನಲ್ಲಿ ಆಗಿದ್ದರೂ ಅದರ ಸಂಪೂರ್ಣ ವಿವರ ಮತ್ತು ಟ್ರ್ಯಾಕ್ ಮಾಡುವುದು ಕಷ್ಟವಾಗಿತ್ತು ಸಬ್ಸಿಡಿ ಎಷ್ಟು ಬರುತ್ತಿದೆ ಹಣ ಯಾವ ಖಾತೆಗೆ ಜಮೆ ಆಗುತ್ತಿದೆ ಇದನ್ನೆಲ್ಲಾ ಈಗ ಆನ್ಲೈನ್ ಮುಖಂತರವೇ ತಿಳಿದುಕೊಳ್ಳಲು ಸರ್ಕಾರ ಹೊಸ ವೆಬ್ಸೈಟ್ ಒಂದನ್ನು ಆರಂಭಿಸಿದ್ದು ಜನಸಾಮಾನ್ಯರಿಗೆ ಇದು ಸಾಕಷ್ಟು ಉಪಯೋಗಿ ಆಗಲಿದೆ.

ಸರಕಾರ ಆರಂಭಿಸಿರುವ ಈ ಹೊಸ ವೆಬ್ಸೈಟ್ ನ ಹೆಸರು MYLPG.IN ಇಲ್ಲಿ ನೀವು ನಿಮ್ಮ ಕೆವೈಸಿ, ಬುಕ್ಕಿಂಗ್ ಸ್ಟೇಟಸ್, ಮತ್ತು ಹೊಸ ಗ್ಯಾಸ್ ಕೂಡ ಬುಕ್ ಮಾಡಬಹುದಾಗಿದೆ. ಇಷ್ಟೇ ಅಲ್ಲದೆ ನಿಮ್ಮ ಗ್ಯಾಸ್ ಗೆ ಸಂಬಂಧಪಟ್ಟ ಪ್ರತಿ ವಿವರ ಕೂಡ ಇಲ್ಲಿ ಲಭ್ಯ. ಹೊಸ ವೆಬ್ಸೈಟ್ ನ ಹೋಂ ಪೇಜ್ ನಲ್ಲೆ ನೀವು ಬಳಸುವ ಗ್ಯಾಸ್ ಕಂಪನಿಗಳ ವಿವರ ನಮೂದಿಸಿ ಉದಾಹರಣೆಗೆ HP , INDANE , ಭಾರತ್ ಗ್ಯಾಸ್ ಯಾವುದೇ ಇರಲಿ ನಿಮ್ಮ ಎಲ್ ಪಿ ಜಿ ಐಡಿ ನಮೂದಿಸಿದ ನಂತರ ನೀವು ಆಯ್ಕೆ ಮಾಡಿದ ಕಂಪನಿಯ ಪೇಜ್ ತೆರೆದುಕೊಳ್ಳುತ್ತದೆ ಮತ್ತು ಇಲ್ಲಿ ನಿಮಗೆ ಪ್ರತಿ ಮಾಹಿತಿ ಸಿಗುತ್ತದೆ.

ಇನ್ನು ಕಹಿಸುದ್ದಿ ಅಥವಾ ಶಾಕಿಂಗ್ ಸುದ್ದಿ ಏನೆಂದರೆ ಮತ್ತೆ ಈಗ ಗ್ಯಾಸ್ ದರ ಏರಿಕೆ ಆಗಿದ್ದು ಜನಸಾಮಾನ್ಯರ ಮೇಲೆ ಬೆಲೆ ಏರಿಕೆ ಹೊರೆ ಬೀಳಲಿದೆ. ಸಬ್ಸಿಡಿ ಇರುವ ಗ್ಯಾಸ್ ಬೆಲೆ  2  ರೂ 94 ಪೈಸೆ  ಏರಿಕೆಯಾಗಿದ್ದರೆ ಇನ್ನು ಸಬ್ಸಿಡಿ ಇಲ್ಲದ ಕನೆಕ್ಷನ್ ಬೆಲೆ 60 ರೂ ಹೆಚ್ಚಿಸಲಾಗಿದೆ. ಮೂಲಗಳ ಪ್ರಕಾರ ಜಿಎಸ್ಟಿ ಹಾಗು ಸರಕಾರ ವಿನೂತನವಾಗಿ ಆರಂಭಿಸಿರುವ ಉಜ್ವಲ ಯೋಜನೆಯಲ್ಲಿ ಉಚಿತವಾಗಿ ಬಡವರಿಗೆ ಗ್ಯಾಸ್ ನೀಡಲಾಗುತ್ತಿತ್ತು.

 

ಈ ಕಾರಣದಿಂದಾಗಿಯೂ ಬೆಲೆಯಲ್ಲಿ ವ್ಯತ್ಯಯ ಕಂಡಿದೆ ಎನ್ನಲಾಗಿದೆ. ಒಂದು ಕಡೆ ಸಬ್ಸಿಡಿ ಹಾಗು ದೇಶದ ಎಲ್ಲಜನತೆಗೆ ಗ್ಯಾಸ್ ಬಳಸುವಂತೆ ಮಾಡಿ ಉಜ್ವಲ ಯೋಜನೆಯಡಿ ಬಡವರಿಗೆ ಎಲ್ ಪಿ ಜಿ ನೀಡಿದ ಕೇಂದ್ರ ಸರ್ಕಾರ ಇದೀಗ ಸ್ವಲ್ಪ ಬೆಲೆ ಏರಿಸಿದೆ. ಜನಸಾಮಾನ್ಯರ ಪ್ರತಿಕ್ರಿಯೆ ಇದಕ್ಕೆ ಹೇಗಿರಲಿದೆ ಎಂದು ಕಾದು ನೋಡಬೇಕಾಗಿದೆ.

 

Please follow and like us:
0
http://karnatakatoday.in/wp-content/uploads/2018/11/home-gas-1024x576.jpghttp://karnatakatoday.in/wp-content/uploads/2018/11/home-gas-150x104.jpgKarnataka Today's Newsಅಂಕಣಆಟೋಎಲ್ಲಾ ಸುದ್ದಿಗಳುಕೇಂದ್ರ ಸರಕಾರ ಈಗ ಗ್ಯಾಸ್ ಕನೆಕ್ಷನ್ ಹೊಂದಿರುವವರಿಗೆ ಒಂದು ಸುಹಿ ಸುದ್ದಿ ಮತ್ತೊಂದು ಕಹಿಸುದ್ದಿ ನೀಡಿದೆ. ದೇಶದಲ್ಲಿ ಮೊದಲೇ ಪೆಟ್ರೋಲ್ ಬೆಲೆ ಏರಿಕೆಯಾದ ದಿನದಿಂದ ಸರಕಾರದ ವಿರುದ್ಧ ಟೀಕೆಗಳು ಆರಂಭವಾಗಿದ್ದವು ಆದರೆ ಈಗ ಮತ್ತೆ ಪೆಟ್ರೋಲ್ ಬೆಲೆ ಇಳಿದಿದೆ. ಇನ್ನು ಗ್ಯಾಸ್ ವಿಷಯಕ್ಕೆ ಬಂದರೆ ಮೊದಲ ಸಿಹಿ ಸುದ್ದಿ ಏನಪ್ಪಾ ಎಂದರೆ ಈ ಮೊದಲು ಗ್ಯಾಸ್ ಬುಕ್ ಮಾಡುವುದು ಮೊಬೈಲ್ ನಲ್ಲಿ ಆಗಿದ್ದರೂ ಅದರ ಸಂಪೂರ್ಣ ವಿವರ ಮತ್ತು...Kannada News