gautham gambhir decision

ಹೌದು ಗಂಭೀರ್ ಅಂದರೆ ನೆನಪಿಗೆ ಬರೋದು ಬಿರುಸಿನ ಆಟ 2011ರ ವಿಶ್ವಕಪ್‌ ಫೈನಲ್‌ನಲ್ಲಿ ಗಂಭೀರ್ 91 ರನ್ ಗಳಿಸಿ ಟ್ರೋಫಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದನ್ನು ಕ್ರಿಕೆಟ್ ಪ್ರಿಯರು ಮರೆತಿಲ್ಲ.

ದೀರ್ಘಕಾಲದ ಬಳಿಕ ಒಮ್ಮೆ ತಂಡಕ್ಕೆ ಮರಳಿದ್ದರೂ, ಗಮನಾರ್ಹ ಪ್ರದರ್ಶನ ನೀಡುವಲ್ಲಿ ಅವರು ಸಫಲರಾಗಿರಲಿಲ್ಲ. ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಕಳಪೆ ಪ್ರದರ್ಶನಕ್ಕೆ ಹೊಣೆ ಹೊತ್ತು ಟೂರ್ನಿಯ ಅರ್ಧದಲ್ಲಿಯೇ ನಾಯಕತ್ವ ತ್ಯಜಿಸಿರುವ ಗೌತಮ್ ಗಂಭೀರ್, ಮತ್ತೊಂದು ಅಚ್ಚರಿಯ ತೀರ್ಮಾನ ತೆಗೆದುಕೊಂಡಿದ್ದಾರೆ.

gautham gambhir decision

ಐಪಿಎಲ್ ಟೂರ್ನಿಯಲ್ಲಿ ತಮಗೆ ಬರಬೇಕಾದ ಅಷ್ಟೂ ಸಂಭಾವನೆಯನ್ನು ತೆಗೆದುಕೊಳ್ಳದೆ ಇರಲು ನಿರ್ಧರಿಸಿದ್ದಾರೆ. ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಒಟ್ಟಾರೆ ಸಾಧನೆಯಷ್ಟೇ ಅಲ್ಲ, ಆಟಗಾರನಾಗಿಯೂ ಗಂಭೀರ್ ವಿಫಲರಾಗಿದ್ದಾರೆ, ಅವರ ನೀರಸ ಪ್ರದರ್ಶನ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಕಳೆದ ಐಪಿಎಲ್‌ನಲ್ಲಿ ಉತ್ತಮ ಆಟವಾಡಿದ್ದ ಗಂಭೀರ್, ಈಗ ಫಾರ್ಮ್ ಕಳೆದುಕೊಂಡಿದ್ದಾರೆ, ಹೀಗಾಗಿ ನಾಯಕತ್ವ ತ್ಯಜಿಸಿದ ಬೆನ್ನಲ್ಲೇ ಸಂಭಾವನೆಯನ್ನೂ ನಿರಾಕರಿಸುವ ನಿರ್ಧಾರ ಕೈಗೊಂಡಿದ್ದಾರೆ.

gautham gambhir decision

ಗಂಭೀರ್ ಅವರನ್ನು ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಫ್ರಾಂಚೈಸಿ ಖರೀದಿಸಿದ್ದು 2.8 ಕೋಟಿ ಮೊತ್ತಕ್ಕೆ, ಆದರೆ ಈ ವೇತನವನ್ನು ಸ್ವೀಕರಿಸದೆ ಇರಲು ಗಂಭೀರ್ ತೀರ್ಮಾನಿಸಿದ್ದಾರೆ.

ಕಳಪೆ ಆಟದ ಕಾರಣಕ್ಕಾಗಿ ಐಪಿಎಲ್ ಆಟಗಾರನೊಬ್ಬ ವೇತನವನ್ನೂ ತ್ಯಜಿಸಲು ಮುಂದಾಗಿರುವುದ ಇದೇ ಮೊದಲು. ಇನ್ನುಳಿದ ಪಂದ್ಯಗಳು ಗಂಭೀರ್ ಉಚಿತವಾಗಿ ಆಡಲಿದ್ದಾರೆ.

gautham gambhir decision

ಅದೇನೇ ಆಗಲಿ ಒಂದು ಕಾಲದಲ್ಲಿ ಒಳ್ಳೆಯಾ ಆಟಗಾರ ಇಂತಹ ನಿರ್ಧಾರ ಅದರಲ್ಲೂ ನಮ್ಮ ದೇಶದ ಆಟಗಾರ ಕೇವಲ ದುಡ್ಡಿಗೆ ಆಸೆ ಪಡದೆ ಇಂಥಹ ನಿರ್ಧಾರ ತೆಗೆದು ಗೊಂಡಿದ್ದು ಅವರ ಮೇಲೆ ಇನ್ನು ಗೌರವ ಹೆಚ್ಚಿಸಿದೆ.

Please follow and like us:
0
http://karnatakatoday.in/wp-content/uploads/2018/04/gambhir-1024x576.pnghttp://karnatakatoday.in/wp-content/uploads/2018/04/gambhir-150x150.pngeditorಆಟೋಎಲ್ಲಾ ಸುದ್ದಿಗಳುಸುದ್ದಿಜಾಲಹಣಹೌದು ಗಂಭೀರ್ ಅಂದರೆ ನೆನಪಿಗೆ ಬರೋದು ಬಿರುಸಿನ ಆಟ 2011ರ ವಿಶ್ವಕಪ್‌ ಫೈನಲ್‌ನಲ್ಲಿ ಗಂಭೀರ್ 91 ರನ್ ಗಳಿಸಿ ಟ್ರೋಫಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದನ್ನು ಕ್ರಿಕೆಟ್ ಪ್ರಿಯರು ಮರೆತಿಲ್ಲ. ದೀರ್ಘಕಾಲದ ಬಳಿಕ ಒಮ್ಮೆ ತಂಡಕ್ಕೆ ಮರಳಿದ್ದರೂ, ಗಮನಾರ್ಹ ಪ್ರದರ್ಶನ ನೀಡುವಲ್ಲಿ ಅವರು ಸಫಲರಾಗಿರಲಿಲ್ಲ. ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಕಳಪೆ ಪ್ರದರ್ಶನಕ್ಕೆ ಹೊಣೆ ಹೊತ್ತು ಟೂರ್ನಿಯ ಅರ್ಧದಲ್ಲಿಯೇ ನಾಯಕತ್ವ ತ್ಯಜಿಸಿರುವ ಗೌತಮ್ ಗಂಭೀರ್, ಮತ್ತೊಂದು ಅಚ್ಚರಿಯ ತೀರ್ಮಾನ ತೆಗೆದುಕೊಂಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ...Karnataka news