ವ್ಯಕ್ತಿಯ ಜಾತಕದಲ್ಲಿ ಶನಿಗ್ರಹದ ಸ್ಥಾನಮಾನ ಲೆಕ್ಕಿಸಿ ವ್ಯಕ್ತಿಯ ಜೀವಮಾನದ ಮಹತ್ತರ ಘಟನೆಗಳನ್ನು ಹೇಳುವುದು ಅತಿ ಮುಖ್ಯ. ಏಕೆಂದರೆ ಶನಿಯು ಜೀವನದ ಪ್ರಮುಖ ಘಟನೆಗಳ ಮೇಲೆ ತನ್ನ ಹತೋಟಿ ಹೊಂದಿರುತ್ತಾನೆ. ಈತ ನಿರಾಸೆ, ಜುಗುಪ್ಸೆ, ಅಸಮಾಧಾನ ನೀಡುವ ಗ್ರಹ. ಹೀಗಾಗಿ ಶನಿಯು ಜಾತಕದಲ್ಲಿ ಬಲವಾಗಿದ್ದರೆ ವ್ಯಕ್ತಿ ಜೀವನದಲ್ಲಿ ಸುಖ-ಸಂತೃಪ್ತಿ ಹೊಂದುತ್ತಾನೆ. ಒಂದು ವೇಳೆ ಶನಿ ಜಾತಕದಲ್ಲಿ ನೀಚಸ್ಥಾನ, ಶತ್ರುಕ್ಷೇತ್ರ, ಶತ್ರು ನವಾಂಶದಲ್ಲಿ ಇದ್ದಲ್ಲಿ ಅಂತಹ ವ್ಯಕ್ತಿಗೆ ಜೀವಮಾನದಲ್ಲಿ ಯಾವುದೇ ಸುಖ, ಸಂತೃಪ್ತಿ ದೊರೆಯದೆ ವಿವಾಹವು ನಿಧಾನವಾಗಿ ಅಥವಾ ಉದ್ಯೋಗದಲ್ಲಿ ತೊಂದರೆ ಉಂಟಾಗಿ ಮಾನಸಿಕ ನೆಮ್ಮದಿ ಹಾಳಾಗುತ್ತದೆ.

ಶನಿ ದುಃಖ, ದುಮ್ಮಾನ, ಕಷ್ಟ- ಸಹಿಷ್ಣುತೆ ನೀಡುವ ಪರಮ ನ್ಯಾಯಾಧೀಶ. ಜೀವನದಲ್ಲಿ ಏರು- ಪೇರು ತಂದೊಡ್ಡುವ ಗ್ರಹವಾಗಿದ್ದರೂ, ಜಾತಕದಲ್ಲಿ ಉತ್ತಮ ಸ್ಥಾನದಲ್ಲಿದ್ದರೆ ಅಂತಹ ವ್ಯಕ್ತಿಗಳಿಗೆ ವಿದ್ಯಾ -ಯಶಸ್ಸು ಲಭಿಸಿ ಪ್ರಾಪ್ತ ವಯಸ್ಸಿನಲ್ಲಿ ಉದ್ಯೋಗ ವಿವಾಹವಾಗಿ ಅಷ್ಟೈಶ್ವರ್ಯ ಲಭಿಸುತ್ತದೆ. ಹೀಗೆ ಈ ಬಾರಿಯ ಮಹಾಸಂಯೋಗದಲ್ಲಿ ಆಗುತ್ತಿರುವ ಬದಲಾವಣೆಯಿಂದಾಗಿ ಈ ರಾಶಿಗಳಿಗೆ ಮುಂದಿನ 21 ವರ್ಷಗಳವರೆಗೆ ಶನೇಶ್ವರನ ದಿವ್ಯ ಕ್ರಪೆ ಆಗಲಿದೆ.

ಮೊದಲೆನೆಯದಾಗಿ ಮೇಷ ರಾಶಿಗೆ ಈ ಬಾರಿ ಹಣದಿಂದ ತುಂಬಾನೇ ಕೆಲಸಗಳು ನಡೆಯಲಿವೆ, ಇವರ ನಿಂತಿದ್ದ ಕೆಲಸಗಳು ಮತ್ತೆ ಆರಂಭವಾಗಿ ಜೀವನದಲ್ಲಿ ದುಡಿಮೆಯ ಮಹತ್ವ ಇವರಿಗೆ ತಿಳಿಯಲಿದೆ. ವೃಷಭ ರಾಶಿಗೆ ತಮ್ಮ ಗುರಿ ಸಾಧಿಸಲು ಇದು ಸೂಕ್ತ ಸಮಯ, ಉದ್ಯೋಗದ ಹುಡುಕಾಟದಲ್ಲಿರುವವರು ಹೊಸ ಅವಕಾಶಗಳನ್ನು ಕೇಳುತ್ತಾರೆ. ಮಿಥುನ ರಾಶಿಯವರಿಗೆ ಸಂಬಂಧಿಕರ ಪ್ರೀತಿ, ಸಹಾಯದಿಂದ ಜೀವನದಲ್ಲಿ ಯಶಸ್ಸು ಸಿಗಲಿದೆ ಹಾಗೆ ಧಿಡೀರ್ ಹಣ ಲಾಭವಾಗಲಿದೆ.

ತುಲಾ ರಾಶಿಯ ವ್ಯಾಪಾರಿಗಳಿಗೆ ಇದು ಸುಗ್ಗಿ ಕಾಲ ಉತ್ತಮ ವ್ಯವಹಾರದ ನಿರೀಕ್ಷೆ ಕಾಣಬಹದು. ಶನೇಶ್ವರನ ದಿವ್ಯ ಕ್ರಪೆ ಸದಾ ನಿಮ್ಮ ಮೇಲಿದೆ. ಒಂದು ವೇಳೆ ಸ್ತ್ರೀ ಜಾತಕದಲ್ಲಿ ಶನಿ ರಾಹು 8ನೇ ಮನೆಯಲ್ಲಿದ್ದರೆ ಮಾಂಗಲ್ಯ ಭಾಗ್ಯಕ್ಕೆ ಮಾರಕನಾಗುತ್ತಾನೆ. ರಾಹು ಒಬ್ಬನೇ ಅಷ್ಟಮದಲ್ಲಿದ್ದರೆ ಸರ್ಪದೋಷ ಬರುವುದರಿಂದ ನಿವಾರಣೆಗಾಗಿ ಸರ್ಪಶಾಂತಿ ನಡೆಸಬೇಕು.

Please follow and like us:
0
http://karnatakatoday.in/wp-content/uploads/2018/10/21-yrars-shani-1024x576.pnghttp://karnatakatoday.in/wp-content/uploads/2018/10/21-yrars-shani-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುಜ್ಯೋತಿಷ್ಯವ್ಯಕ್ತಿಯ ಜಾತಕದಲ್ಲಿ ಶನಿಗ್ರಹದ ಸ್ಥಾನಮಾನ ಲೆಕ್ಕಿಸಿ ವ್ಯಕ್ತಿಯ ಜೀವಮಾನದ ಮಹತ್ತರ ಘಟನೆಗಳನ್ನು ಹೇಳುವುದು ಅತಿ ಮುಖ್ಯ. ಏಕೆಂದರೆ ಶನಿಯು ಜೀವನದ ಪ್ರಮುಖ ಘಟನೆಗಳ ಮೇಲೆ ತನ್ನ ಹತೋಟಿ ಹೊಂದಿರುತ್ತಾನೆ. ಈತ ನಿರಾಸೆ, ಜುಗುಪ್ಸೆ, ಅಸಮಾಧಾನ ನೀಡುವ ಗ್ರಹ. ಹೀಗಾಗಿ ಶನಿಯು ಜಾತಕದಲ್ಲಿ ಬಲವಾಗಿದ್ದರೆ ವ್ಯಕ್ತಿ ಜೀವನದಲ್ಲಿ ಸುಖ-ಸಂತೃಪ್ತಿ ಹೊಂದುತ್ತಾನೆ. ಒಂದು ವೇಳೆ ಶನಿ ಜಾತಕದಲ್ಲಿ ನೀಚಸ್ಥಾನ, ಶತ್ರುಕ್ಷೇತ್ರ, ಶತ್ರು ನವಾಂಶದಲ್ಲಿ ಇದ್ದಲ್ಲಿ ಅಂತಹ ವ್ಯಕ್ತಿಗೆ ಜೀವಮಾನದಲ್ಲಿ ಯಾವುದೇ ಸುಖ,...Kannada News