ಸ್ನೇಹಿತರೆ ಮೊನ್ನೆ ತಾನೇ ಸಂಕ್ರಾಂತಿ ಹಬ್ಬ ಮುಗಿದಿದೆ ಮತ್ತು ಸೂರ್ಯನು ತನ್ನ ದಿಕ್ಕನ್ನ ಬದಲಾಯಿಸಿದ್ದು ನಭೋಮಂಡಲದಲ್ಲಿ ಭಾರಿ ಬದಲಾವಣೆ ಆಗಿದೆ ಎಂದು ಹೇಳುತ್ತಿದ್ದೆ ಜ್ಯೋತಿಷ್ಯ ಶಾಸ್ತ್ರ. ಹೌದು ಸ್ನೇಹಿತರೆ ಸೂರ್ಯ ಉತ್ತರಾಯಣಕ್ಕೆ ತನ್ನ ದಿಕ್ಕನ್ನ ಬದಲಾಯಿಸಿದ್ದು ರಾಶಿಮಂಡಲದಲ್ಲಿ ಕೆಲವು ಬದಲಾವಣೆಗಳು ಆಗಿದೆ, ಈ ರಾಶಿ ಮಂಡಲದಲ್ಲಿ ಆದ ಬದಲಾವಣೆಯಿಂದ ಕೆಲವು ರಾಶಿಯವರ ಜಾತಕದಲ್ಲಿ ಇರುವ ಎಲ್ಲಾ ಸಮಸ್ಯೆಗಳು ನಿವಾರಣೆ ಆಗಿ ಅವರು ಸುಖಕರವಾದ ಜೀವನವನ್ನ ನಡೆಸಲಿದ್ದಾರೆ. ಹೌದು ಇಂದು ಸೂರ್ಯಾಸ್ತದ ಬಳಿಕ ಗಣೇಶನ ಆಶೀರ್ವಾದ ಈ ರಾಶಿಯವರಿಗೆ ಸಿಗಲಿದ್ದು ಇವರು ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭವನ್ನ ಗಳಿಸಿದ್ದಾರೆ ಮತ್ತು ಜೀವನವನ್ನ ಸಂತೋಷದಿಂದ ಕಳೆಯಲಿದ್ದಾರೆ. ಹಾಗಾದರೆ ಗಣೇಶನ ಕೃಪೆಗೆ ಪಾತ್ರರಾಗುವ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಗಣೇಶನ ಕೃಪೆಗೆ ಪಾತ್ರರಾಗುವ ಮೊದಲ ರಾಶಿ ಕನ್ಯಾ ರಾಶಿ, ಈ ರಾಶಿಯವರಿಗೆ ಗಣಪತಿಯ ಆಶೀರ್ವಾದ ಒಲಿದು ಬಂದಿದ್ದು ವೃತ್ತಿರಂಗದಲ್ಲಿ ಒಳ್ಳೆಯ ಲಾಭ ಸಿಗಲಿದೆ. ಹೆಣ್ಣು ಮಕ್ಕಳಿಗೆ ಮದುವೆಯ ಬಾಗ್ಯ ಕೂಡಿ ಬಂದಿದ್ದು ನಿಮ್ಮ ಹುಡುಕಿಕೊಂಡು ಒಳ್ಳೆಯ ವರ ಬರಲಿದ್ದಾನೆ, ಯಾವುದೇ ಹೊಸ ವ್ಯವಹಾರವನ್ನ ಆರಂಭ ಮಾಡಲು ಇದು ಬಹಳ ಒಳ್ಳೆಯ ಸಮಯವಾಗಿದೆ. ಸೂರ್ಯನು ತನ್ನ ದಿಕ್ಕನ್ನ ಬದಲಾವಣೆ ಮಾಡಿರುವ ಕಾರಣ ಈ ರಾಶಿಯವರ ಜೀವನವು ಕೂಡ ಬದಲಾಗಲಿದ್ದು ಇರುವ ಸಮಸ್ಯೆಗಳು ಆದಷ್ಟು ಬೇಗ ನಿವಾರಣೆ ಆಗಲಿದೆ, ಒಮ್ಮೆ ಕೈ ಹಾಕಿದ ಕೆಲಸವನ್ನ ಯಾವುದೇ ಕಾರಣಕ್ಕೂ ಅರ್ಧಕ್ಕೆ ಬಿಡಬೇಡಿ. ಇನ್ನು ಎರಡನೆಯದಾಗಿ ಧನು ರಾಶಿ, ಗಣೇಶನ ಕೃಪೆಯಿಂದ ಮುಂದಿನ 5 ವರ್ಷಗಳ ಕಾಲ ಇವರ ಕೈಯಲ್ಲಿ ಹಣ ಓಡಾಡಲಿದ್ದು ಆ ಹವನ್ನ ಒಳ್ಳೆಯ ಕಾರ್ಯಕ್ಕೆ ಬಳಕೆ ಮಾಡಿ, ಮೂರನೇ ವ್ಯಕ್ತಿಯೂ ನೀವು ಮಾಡುವ ವ್ಯಾಪಾರ ಅಥವಾ ವ್ಯವಹಾರದಲ್ಲಿ ಬರಲಿದ್ದು ಅವರಿಂದ ನಿಮಗೆ ಒಳ್ಳೆಯ ಲಾಭ ಬರಲಿದೆ.

God Vinayaka

ಇನ್ನು ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗ ಸಿಗುವ ಸಾಧ್ಯತೆ ಇರುವುದರಿಂದ ಸ್ವಲ್ಪ ಪ್ರಯತ್ನವನ್ನ ಜಾಸ್ತಿ ಮಾಡುವುದು ಒಳ್ಳೆಯದು. ಮಕ್ಕಳು ನಿಮಗೆ ಒಳ್ಳೆಯ ಹೆಸರನ್ನ ತಂದುಕೊಡಲಿದ್ದಾರೆ, ಹಣವನ್ನ ಯಾವುದಾದರೂ ಷೇರಿನಲ್ಲಿ ಹೂಡಿಕೆ ಮಾಡಿದರೆ ನಿಮಗೆ ಒಳ್ಳೆಯ ಲಾಭ ಸಿಗಲಿದೆ, ಕಣ್ಣಿಗೆ ಕಾಣುವುದೆಲ್ಲ ನಿಜ ಎಂದು ನಂಬಬೇಡಿ. ಇನ್ನು ಕಟಕ ರಾಶಿಯವರಿಗೂ ಕೂಡ ವಿಗ್ನ ವಿನಾಶಕನ ಆಶೀರ್ವಾದ ಒಲಿದು ಬಂದಿದ್ದು ಇವರ ಜೀವನವೇ ಬದಲಾಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸಂಸಾರದಲ್ಲಿ ಇರುವ ಎಲ್ಲಾ ಸಮಸ್ಯೆಗಳು ದೂರ ಆಗಲಿದ್ದು ಸುಖಕರ ಸಂಸಾರ ನಿಮ್ಮದಾಗಲಿದೆ, ಮನೆಯಲ್ಲಿ ಶುಭಕಾರ್ಯಗಳು ನಡೆಯಲಿದ್ದು ನಿಮಗೆ ಸಂತಸ ತಂದುಕೊಡಲಿದೆ, ಮದುವೆಯ ಯೋಗ ನಿಮಗೆ ಕೂಡಿ ಬಂದಿದ್ದು ಮದುವೆಯನ್ನ ಮಾಡಿಕೊಳ್ಳಲು ಇದು ಸೂಕ್ತವಾದ ಸಮಯವಾಗಿದೆ.

ಇನ್ನು ಮೀನಾ ರಾಶಿಯವರು ಯಾವುದೇ ಕೆಲಸಕ್ಕೆ ಕೈ ಹಾಕಿದರು ಕೂಡ ಅದರಲ್ಲಿ ಜಯ ಇವರದ್ದಾಗಿದೆ ಮತ್ತು ಮುಂದಿನ ಮೂರೂ ವರ್ಷಗಳ ಕಾಲ ನಿಮ್ಮನ್ನ ಹಿಡಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ದೂರ ಪ್ರಯಾಣವನ್ನ ಸ್ವಲ್ಪ ಕಡಿಮೆ ಮಾಡುವುದು ಒಳ್ಳೆಯದು ಮತ್ತು ಆದಷ್ಟು ದೇವರ ಆರಾಧನೆಯನ್ನ ಮಾಡಿ, ಸಮಯವಿದ್ದರೆ ಒಮ್ಮೆ ಗಣೇಶನ ದೇವಾಲಯಕ್ಕೆ ಭೇಟಿನೀಡಿ ಗಣೇಶನ ದರ್ಶನವನ್ನ ಮಾಡಿ. ಶತ್ರುಗಳನ್ನ ಆದಷ್ಟು ದೂರವಿಡಿ ಮತ್ತು ಯಾರೊಂದಿಗೂ ಗಲಾಟೆಯನ್ನ ಮಾಡಿಕೊಳ್ಳಬೇಡಿ. ವಿವಿಧ ಮೂಲಗಳಿಂದ ನಿಮಗೆ ಆದಾಯ ಹರಿದು ಬರಲಿದ್ದು ಅದನ್ನ ಸದುಪಯೋಗ ಪಡಿಸಿಕೊಳ್ಳಿ ಮತ್ತು ಖರ್ಚಿನ ದಾರಿ ಇದಾಗಿದ್ದು ಆದಷ್ಟು ಖರ್ಚನ್ನು ಕಡಿಮೆ ಮಾಡಿ.

God Vinayaka

Please follow and like us:
error0
http://karnatakatoday.in/wp-content/uploads/2020/01/God-Vinayaka-1024x576.jpghttp://karnatakatoday.in/wp-content/uploads/2020/01/God-Vinayaka-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಜ್ಯೋತಿಷ್ಯಬೆಂಗಳೂರುಸುದ್ದಿಜಾಲಸ್ನೇಹಿತರೆ ಮೊನ್ನೆ ತಾನೇ ಸಂಕ್ರಾಂತಿ ಹಬ್ಬ ಮುಗಿದಿದೆ ಮತ್ತು ಸೂರ್ಯನು ತನ್ನ ದಿಕ್ಕನ್ನ ಬದಲಾಯಿಸಿದ್ದು ನಭೋಮಂಡಲದಲ್ಲಿ ಭಾರಿ ಬದಲಾವಣೆ ಆಗಿದೆ ಎಂದು ಹೇಳುತ್ತಿದ್ದೆ ಜ್ಯೋತಿಷ್ಯ ಶಾಸ್ತ್ರ. ಹೌದು ಸ್ನೇಹಿತರೆ ಸೂರ್ಯ ಉತ್ತರಾಯಣಕ್ಕೆ ತನ್ನ ದಿಕ್ಕನ್ನ ಬದಲಾಯಿಸಿದ್ದು ರಾಶಿಮಂಡಲದಲ್ಲಿ ಕೆಲವು ಬದಲಾವಣೆಗಳು ಆಗಿದೆ, ಈ ರಾಶಿ ಮಂಡಲದಲ್ಲಿ ಆದ ಬದಲಾವಣೆಯಿಂದ ಕೆಲವು ರಾಶಿಯವರ ಜಾತಕದಲ್ಲಿ ಇರುವ ಎಲ್ಲಾ ಸಮಸ್ಯೆಗಳು ನಿವಾರಣೆ ಆಗಿ ಅವರು ಸುಖಕರವಾದ ಜೀವನವನ್ನ ನಡೆಸಲಿದ್ದಾರೆ. ಹೌದು ಇಂದು...Film | Devotional | Cricket | Health | India