News of Vishnuvardhan

ವಿಷ್ಣುವರ್ಧನ್ ಎಂಬ ಹೆಸರಿನಲ್ಲಿ ಎಂಥಹ ಗತ್ತಿದೆ ಅನ್ನೋದು ನಿಮಗೆ ಗೊತ್ತೇ ಇದೆ, ಹಾಗೆ ವಿಷ್ಣುವರ್ಧನ್ ಇಂತಹ ಅದ್ಬುತ ಮನಸ್ಸಿನವರು ಅನ್ನುವುದು ಕೂಡ ನಿಮಗೆ ಗೊತ್ತೇ ಇದೆ. ಒಂದು ಸಂದರ್ಶನದಲ್ಲಿ ಸುದೀಪ್ ಅವರ ಮುಂದೆ ವಿಷ್ಣು ಸಾವಿನ ಬಗ್ಗೆ ಕಾಲ ಸಾಮ್ರಾಟ ಒಂದು ಗುಟ್ಟನ್ನು ಹೊರಹಾಕಿದ್ದಾರೆ ಹಾಗೆ ಅವರ ಕೊನೆಯ ಆಸೆ ಏನಾಗಿತ್ತು ಅನ್ನೋದನ್ನು ಹೇಳಿದ್ದಾರೆ.

ಹೌದು ಒಂದು ಕಾಲದಲ್ಲಿ ವಿಷ್ಣು ಮತ್ತೆ S ನಾರಾಯಣ್ ಅವರ ಕಾಂಬಿನೇಶನ್ ನಲ್ಲಿ ಬಂದ ಎಲ್ಲ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು ಹಾಗೆ ಇಂದಿನ ಕಾಲದ ಜನರಿಗೂ ಮನಮುಟ್ಟುವ ಸಿನಿಮಾ ಆಗಿತ್ತು. ಅಷ್ಟು ಹಿಟ್ ಸಿನಿಮಾವನ್ನು ಕೊಟ್ಟ ಎಸ್ ನಾರಾಯಣ್ ಬಳಿ ವಿಷ್ಣು ಅವರು ನನ್ನ ಕೊನೆಯ ಸಿನಿಮಾದಲ್ಲಿ ನಾನು ಬಾಬಾನ ಪಾತ್ರ ಮಾಡಬೇಕು ಅದಕ್ಕೆ ನೀವೇ ಡೈರೆಕ್ಟ್ ಮಾಡಬೇಕು ಎಂದು ಕೇಳಿಕೊಂಡರು.

News of Vishnuvardhan

ಇನ್ನು ಇದನ್ನ ಕೇಳಿದ ಎಸ್ ನಾರಾಯಣ್ ಅವರು ಇಲ್ಲ ಸರ್ ನಿಮ್ಮ ಕೊನೆಯ ಸಿನಿಮಾ ಅದು ಆಗುತ್ತೆ ಅಂದರೆ ಅದನ್ನು ನಾನು ಡೈರೆಕ್ಟ್ ಮಾಡಲ್ಲ ಯಾಕೆಂದರೆ ಅಣ್ಣವರಿಗೆ ನಾನು ಡೈರೆಕ್ಟ್ ಮಾಡಿದ್ದ ಶಬ್ದವೇದಿ ಮೂವಿ ಅವರ ಕೊನೆಯ ಸಿನಿಮಾ ಆಗಿತ್ತು, ಅದೊಂದು ನನ್ನ ಜೀವನದಲ್ಲಿ ಅದೊಂದು ದುಃಖ ಎಂದು ಹೇಳಿದರು.

ನಿಮ್ಮ ಕೊನೆಯ ಸಿನಿಮಾ ಆಗೋದಾದರೆ ನಾನು ಅದನ್ನು ಮಾಡಲ್ಲ ಎಂದು ಹೇಳಿದರು, ನಂತರ ವಿಷ್ಣು ಇಲ್ಲ ಅದಾದ ಮೇಲೆ ಬೇರೆ ಸಿನಿಮಾ ಮಾಡೋಣ ಎಂದರು,ನಂತರ ವಿಷ್ಣು ಎಸ್ ನಾರಾಯಣ್ ಅವರ ಬಳಿ ನೀವು ಬಾಬಾ ಅಂದರೆ ಶಿರಡಿಗೆ ಬಳಿ ಹೋಗಿ ಅಲ್ಲಿ ಬಾಬಾ ಏನೋ ಹೇಳುತ್ತಾನೆ ಅದನ್ನ ಕೇಳಿ ಎಂದು ಶಿರಡಿ ಬಾಬಾನ ದರ್ಶನ ಮಾಡಿ ಬನ್ನಿಯೆಂದು ಹೇಳಿದ್ದರಂತೆ ವಿಷ್ಣು.

ಎಸ್ ನಾರಾಯಣ್ ಕೆಲಸ ಒತ್ತಡ ಇರೋದರಿಂದ ವಿಷ್ಣು ಅವರ ಮಾತಿಗೆ ತಲೆ ಕೆಡಿಸಿಕೊಳ್ಳದೆ ಶಿರಡಿಗೆ ಹೋಗಲೇ ಇಲ್ಲವಂತೆ, ನಂತರ ಎಸ್ ನಾರಾಯಣ್ ಶಿರಡಿಗೆ ಹೋಗಿಲ್ಲ ಎಂದು ವಿಷಯ ತಿಳಿದ ವಿಷ್ಣು ಒಂದು ವಾರದ ನಂತರ ಕರೆಮಾಡಿ ,ಎಸ್ ನಾರಾಯಣ್ ಅವರಿಗೆ ನೀವು ನನ್ನ ಮಾತಿಗೆ ಬೆಲೆ ಕೊಡಲ್ಲ ಎಂದು ಹೇಳಿದರಂತೆ, ಇದರಿಂದ ಬೇಸರಗೊಂಡ ಎಸ್ ನಾರಾಯಣ್ ನನ್ನನ್ನ ಕ್ಷಮಿಸಿ ನಾನು ಇಂದೇ ಹೋಗ್ತೀನಿ ಸರ್ ಎಂದು ಅದೇ ದಿನ ಕುಟುಂಬ ಸಮೇತ ಶಿರಡಿಗೆ ಹೋದರಂತೆ.

News of Vishnuvardhan

ನಂತರ ಶಿರಡಿಯಲ್ಲಿ ದರ್ಶನ ಮಾಡಿ ಅಲ್ಲಿಯೇ ರೂಮ್ ನಲ್ಲಿ ಮಲಗಿದ್ದ ಎಸ್ ನಾರಾಯಣ್ ಗೆ ಒಂದು ಕೆಟ್ಟ ಕನಸು ಬಿದ್ದಿದೆ ಆ ಕನಸಿನಲ್ಲಿ ಒಬ್ಬ ವ್ಯಕ್ತಿ ಬಂದಿದ್ದ ಆ ವ್ಯಕ್ತಿ ಯಾರು ಎಂದು ನನಗೆ ತಿಳಿಯಲಿಲ್ಲ ಎಂದು ಹೇಳಿದರು ಎಸ್ ನಾರಾಯಣ್. ಇನ್ನು ಬೆಳಿಗ್ಗೆ 3 ಘಂಟೆ ಬೆಳಿಗ್ಗೆ ಸುಮಾರಿಗೆ ಊರಿನಿಂದ ಎಸ್ ನಾರಾಯಣ್ ಅವರಿಗೆ ಕಾಲ್ ಬರುತ್ತೆ ಏನೆಂದರೆ ವಿಷ್ಣುವರ್ಧನ್ ಅವರು ಇನ್ನು ನೆನಪು ಮಾತ್ರವೆಂದು.

ವಿಷಯ ತಿಳಿದ ನಾರಾಯಣ್ ಅಲ್ಲಿಯೇ ಕುಸಿದು ಬಿದ್ದರಂತೆ. ತಕ್ಷಣ ವಿಷ್ಣು ಮನೆಗೆ ಹೋದರಂತೆ ಅಲ್ಲಿ ವಿಷ್ಣು ತಲೆಗೆ ಹಾಕಿದ್ದ ಹಾಕಿದ್ದ ಕೆಂಪು ಬಟ್ಟೆ ಮತ್ತು ಹಿಂದಿನ ದಿನ ನಾರಾಯಣ್ ಕನಸಲ್ಲಿ ಬಂದ ವ್ಯಕ್ತಿಯ ಬಟ್ಟೆ ಒಂದೇ ಬಣ್ಣದಾಗಿತ್ತಂತೆ.

News of Vishnuvardhan

ಹೀಗೆ ಎಸ್ ನಾರಾಯಣ್ ಅವರು ವಿಷ್ಣುವರ್ಧನ್ ಅವರು ನನ್ನ ಮನಸಲ್ಲಿ ಅಷ್ಟು ಆಳವಾಗಿ ಕೂತಿದ್ದರು ಎಂದು ಹೇಳಿದ್ದಾರೆ, ಹೌದು ವಿಷ್ಣು ಅಂದರೆ ಒಂದು ಶಕ್ತಿ, ಆದರೆ ಆ ಶಕ್ತಿಯ ಬೆಲೆ ಇನ್ನು ಕೆಲವರಿಗೆ ತಿಳಿದಿಲ್ಲ, ಅಂತಹ ಒಬ್ಬ ವ್ಯಕ್ತಿಗೆ ಸ್ಮಾರಕ ಕಟ್ಟಿಸಿ ಕೊಡುವಂಥಹ ಯೋಗ್ಯತೆ ನಮಗೆ ಇಲ್ಲದಂತಾಗಿರೋದು ದುಃಖದ ಸಂಗತಿಯಾಗಿದೆ.

ವಿಷ್ಣು ಹೆಸರು ಹೇಳಿಕೊಂಡು ಅದೆಷ್ಟೇ ಜನರು ಬೆಳೆದಿದ್ದಾರೆ ಈ ದಿನದವರೆಗೂ ಕೈಗೆ ಖಡ್ಗ ಹಾಕಿಕೊಂಡು, ದೊಡ್ಡ ದೊಡ್ಡ ಡೈಲಾಗ್ ಹೇಳ್ಕೊಂಡು, ಅವರ ಸಿನಿಮಾದ ಟೈಟಲ್ ಇಡ್ಕೊಂಡು ಸಿನಿಮಾ ಹಿಟ್ ಮಾಡಿಕೊಳ್ಳುತ್ತಾರೆ ಹೊರತು ಯಾರೊಬ್ಬ ನಟನು ವಿಷ್ಣು ಸ್ಮಾರಕದ ಬಗ್ಗೆ ಚರ್ಚಿಸೋಕೆ ಬರೋದಿಲ್ಲ ಅನ್ನೋದು ದುಃಖದ ಸಂಗತಿ ಇದೆ. ವಿಷ್ಣು ಸ್ಮಾರಕ ಆಗದಿದ್ದರೇನು ಕರುನಾಡ ಜನರ ಮನಸ್ಸಲ್ಲಿ ಕೆಡವಲಾರದ ಸ್ಮಾರಕವನ್ನು ವಿಷ್ಣು ಅವರು ನಿರ್ಮಿಸಿ ಹೋಗಿದ್ದಾರೆ, ಈ ಮಾಹಿತಿ ಬೆಗ್ಗೆ ನಿಮ್ಮ ಅನಿಸಿಕೆ ತಿಳಿಸಿ.

News of Vishnuvardhan

Please follow and like us:
0
http://karnatakatoday.in/wp-content/uploads/2018/12/vishnuvardhan-1024x576.jpghttp://karnatakatoday.in/wp-content/uploads/2018/12/vishnuvardhan-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲವಿಷ್ಣುವರ್ಧನ್ ಎಂಬ ಹೆಸರಿನಲ್ಲಿ ಎಂಥಹ ಗತ್ತಿದೆ ಅನ್ನೋದು ನಿಮಗೆ ಗೊತ್ತೇ ಇದೆ, ಹಾಗೆ ವಿಷ್ಣುವರ್ಧನ್ ಇಂತಹ ಅದ್ಬುತ ಮನಸ್ಸಿನವರು ಅನ್ನುವುದು ಕೂಡ ನಿಮಗೆ ಗೊತ್ತೇ ಇದೆ. ಒಂದು ಸಂದರ್ಶನದಲ್ಲಿ ಸುದೀಪ್ ಅವರ ಮುಂದೆ ವಿಷ್ಣು ಸಾವಿನ ಬಗ್ಗೆ ಕಾಲ ಸಾಮ್ರಾಟ ಒಂದು ಗುಟ್ಟನ್ನು ಹೊರಹಾಕಿದ್ದಾರೆ ಹಾಗೆ ಅವರ ಕೊನೆಯ ಆಸೆ ಏನಾಗಿತ್ತು ಅನ್ನೋದನ್ನು ಹೇಳಿದ್ದಾರೆ. ಹೌದು ಒಂದು ಕಾಲದಲ್ಲಿ ವಿಷ್ಣು ಮತ್ತೆ S ನಾರಾಯಣ್ ಅವರ ಕಾಂಬಿನೇಶನ್ ನಲ್ಲಿ ಬಂದ...Kannada News