ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಅತೀ ಹೆಚ್ಚು ಸುದ್ದಿಯಾಗುತ್ತಿರುವ ವಿಷಯ ಏನು ಅಂದರೆ ಚಿನ್ನ ಮತ್ತು ಬೆಳ್ಳಿಯ ಬೆಲೆ ಎದು ಹೇಳಿದರೆ ತಪ್ಪಾಗಲ್ಲ, ಚಿನ್ನದ ಮತ್ತು ಬೆಳ್ಳಿಯ ಬೆಲೆ ಗಗನಕ್ಕೆ ಏರಿದ ಕಾರಣ ಮಧ್ಯಮ ವರ್ಗದ ಜನರಿಗೆ ಕೈಗೆ ಎಟುಕದಂತೆ ಆಗಿತ್ತು. ಹೌದು ನಮ್ಮ ದೇಶದ ಇತಿಹಾಸದಲ್ಲೇ ಇದೆ ಮೊದಲ ಭಾರಿಗೆ ಚಿನ್ನದ ಬೆಲೆ 40 ಸಾವಿರದ ಗಡಿ ದಾಟಿದ್ದು ನಿಮಗೆಲ್ಲ ಗೊತ್ತೇ ಇದೆ ಮತ್ತು ಇದರ ಜೊತೆಗೆ ಬೆಳ್ಳಿಯ ಬೆಲೆ ಕೂಡ ಅರ್ಧ ಶತಕದ ಗಡಿ ದಾಟಿತ್ತು, ಜನರು ಚಿನ್ನ ಮತ್ತು ಬೆಳ್ಳಿ ಇತ್ತು ಅನ್ನುವುದನ್ನ ಮರೆತುಬಿಡುವಷ್ಟು ಚಿನ್ನ ಮತ್ತು ಬೆಳ್ಳಿಯ ಬೆಲೆ ಜಾಸ್ತಿ ಆಗಿತ್ತು.

ಇನ್ನು ಈಗ ಹಬ್ಬದ ಸೀಸನ್ ಮುಗಿದು ಮದುವೆಯ ಸೀಸನ್ ಆರಂಭವಾಗಿದ್ದು ಈ ಶುಭ ಸಮಯದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆ ಆಗಿದೆ, ಹಾಗಾದರೆ ಇಂದು ಮಾರ್ಕೆಟ್ ನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟು ಮತ್ತು ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಎಷ್ಟು ಕಡಿಮೆಯಾಗಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇಂದಿನ ಚಿನ್ನದ ಬೆಲೆಯ ಬಗ್ಗೆ ಅಭಿಪ್ರಾಯವನ್ನ ನಮಗೆ ತಿಳಿಸಿ. ನವೆಂಬರ್ ಆರಂಭದಲ್ಲೇ ಖುಷಿಯ ಸುದ್ದಿ ಬಂದಿದ್ದು ಚಿನ್ನದ ಬೆಲೆ ಗಣನೀಯವಾಗಿ ಕಡಿಮೆ ಆಗಿದೆ, ನರೇಂದ್ರ ಮೋದಿ ಸರ್ಕಾರ ಚಿನ್ನದ ಬೆಲೆ ಹೊಸ ಕಾನೂನನ್ನ ಜಾರಿಗೆ ತರುತ್ತದೆ ಮತ್ತು ಚಿನ್ನ ಬ್ಯಾನ್ ಆಗುತ್ತದೆ ಅನ್ನುವ ರೂಮರ್ ಇತ್ತೀಚಿಗೆ ಹರಿದಾಡಿದ್ದು ನಿಮಗೆಲ್ಲ ಗೊತ್ತೇ ಇದೆ.

Gold market rate

ಇನ್ನು ಈ ರೂಮರ್ ನ ಪ್ರಕಾರ ಮೋದಿ ಸರ್ಕಾರ ಚಿನ್ನದ ಮೇಲೆ ಹೊಸ ಕಾನೂನನ್ನ ಜಾರಿಗೆ ತರಲಿದ್ದು ನೋಟ್ ಬ್ಯಾನ್ ಮಾಡಿದಂತೆ ಚಿನ್ನವನ್ನ ಕೂಡ ಬ್ಯಾನ್ ಮಾಡಲಿದೆ ಎಂದು ಹೇಳಲಾಗಿತ್ತು ಮತ್ತು ಇದರ ಪ್ರಕಾರ ಮನೆಯಲ್ಲಿ ಲೆಕ್ಕ ಇಲ್ಲದಷ್ಟು ಚಿನ್ನವನ್ನ ಇಟ್ಟುಕೊಂಡರೆ ಅದನ್ನ ಸರ್ಕಾರವೇ ವಶಪಡಿಸಿಕೊಳ್ಳಲಿದೆ ಎಂದು ಹೇಳಲಾಗಿತ್ತು. ಇನ್ನು ಈ ರೂಮರ್ ನ ಪ್ರಭಾವದಿಂದಲೋ ತಿಳಿದಿಲ್ಲ ಈಗ ಭಾರತದಲ್ಲಿ ಚಿನ್ನದ ಡಿಮ್ಯಾಂಡ್ ಕಡಿಮೆ ಆಗಿದ್ದು ಇದರ ಪರಿಣಾಮ ಚಿನ್ನದ ಬೆಲೆ ಕೂಡ ಕಡಿಮೆಯಾಗಿದೆ.

ಸರ್ಕಾರದ ಈ ರೂಮರ್ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿ ಮೌಲ್ಯ ಸ್ವಲ್ಪ ಚೇತರಿಸಿಕೊಂಡ ಕಾರಣ ಚಿನ್ನದ ಬೆಲೆ ಕಡಿಮೆ ಆಗಿದ್ದು ನವೆಂಬರ್ ತಿಂಗಳಲ್ಲಿ ಮತ್ತಷ್ಟು ಕಡಿಮೆ ಆಗಲಿದೆ. 38 ಸಾವಿರಕ್ಕಿಂತಲೂ ಜಾಸ್ತಿ ಆಗಿದ್ದ 22 ಕ್ಯಾರೆಟ್ ಚಿನ್ನದ ಬೆಲೆ ಈಗ 36 ಸಾವಿರದತ್ತ ಬಂದಿದ್ದು ನವೆಂಬರ್ ತಿಂಗಳ ಅಂತ್ಯಕ್ಕೆ 33 -32 ಸಾವಿರ ಆಗಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಚಿನ್ನದ ಬೆಲೆಯಲ್ಲಿ ಕಡಿಮೆಯಾಗಿದ್ದು ಬಡವರಿಗೆ ತುಂಬಾ ಖುಷಿಯನ್ನ ತರಿಸಿದ್ದು ಮದುವೆ ಮಾಡುವವರಿಗೆ ಇದು ಒಳ್ಳೆಯ ಸಮಯವಾಗಿದೆ, ಇನ್ನು ಚಿನ್ನದ ಬೆಲೆ ಮತ್ತಷ್ಟು ಕಡಿಮೆಯಾದರೆ ಬಡಬಗ್ಗರಿಗೆ ಇನ್ನಷ್ಟು ಸಹಾಯವಾಗುತ್ತದೆ ಅನ್ನುವುದು ನಮ್ಮ ಅನಿಸಿಕೆ.

Gold market rate

Please follow and like us:
error0
http://karnatakatoday.in/wp-content/uploads/2019/11/Gold-market-rate-1-1024x576.jpghttp://karnatakatoday.in/wp-content/uploads/2019/11/Gold-market-rate-1-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಮಂಗಳೂರುಸುದ್ದಿಜಾಲಹಣಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಅತೀ ಹೆಚ್ಚು ಸುದ್ದಿಯಾಗುತ್ತಿರುವ ವಿಷಯ ಏನು ಅಂದರೆ ಚಿನ್ನ ಮತ್ತು ಬೆಳ್ಳಿಯ ಬೆಲೆ ಎದು ಹೇಳಿದರೆ ತಪ್ಪಾಗಲ್ಲ, ಚಿನ್ನದ ಮತ್ತು ಬೆಳ್ಳಿಯ ಬೆಲೆ ಗಗನಕ್ಕೆ ಏರಿದ ಕಾರಣ ಮಧ್ಯಮ ವರ್ಗದ ಜನರಿಗೆ ಕೈಗೆ ಎಟುಕದಂತೆ ಆಗಿತ್ತು. ಹೌದು ನಮ್ಮ ದೇಶದ ಇತಿಹಾಸದಲ್ಲೇ ಇದೆ ಮೊದಲ ಭಾರಿಗೆ ಚಿನ್ನದ ಬೆಲೆ 40 ಸಾವಿರದ ಗಡಿ ದಾಟಿದ್ದು ನಿಮಗೆಲ್ಲ ಗೊತ್ತೇ ಇದೆ ಮತ್ತು ಇದರ ಜೊತೆಗೆ...Film | Devotional | Cricket | Health | India