Gold rate in Ashada masa

ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವವರಿಗೆ ಬಿಗ್ ಶಾಕ್, ಹೌದು ಸ್ನೇಹಿತರೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗಲಿದೆ ಚಿನ್ನದ ಬೆಲೆ, ಸ್ನೇಹಿತರೆ ಆಷಾಡ ಮಾಸ ಬಂದರು ಕೂಡ ಇಳಿಕೆ ಆಗುತ್ತಿಲ್ಲ ಚಿನ್ನದ ಬೆಲೆ. ಸಾಮಾನ್ಯವಾಗಿ ಆಷಾಡ ಮಾಸದಲ್ಲಿ ಚಿನ್ನದ ಬೆಲೆ ಇಳಿಕೆ ಆಗುತ್ತದೆ ಎಂದು ಹೇಳಲಾಗುತ್ತದೆ, ಆದರೆ ಈ ವರ್ಷ ಅದಕ್ಕೆ ವಿರುದ್ಧವಾಗಿ ಆಷಾಡ ಮಾಸದಲ್ಲಿಯೇ ಚಿನ್ನದ ಬೆಲೆ ಏರಿಕೆಯಾಗುತ್ತಿದೆ.

ಹಾಗಾದರೆ ದಿಡೀರ್ ಆಗಿ ಚಿನ್ನದ ಬೆಲೆಯಲ್ಲಿ ಏರಿಕೆ ಆಗಲು ಕಾರಣ ಏನು ಮತ್ತು ಆಷಾಡ ಬಂದರು ಯಾಕೆ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ.

Gold rate in Ashada masa

ಸ್ನೇಹಿತರೆ ಚಿನ್ನವನ್ನ ಖರೀದಿ ಮಾಡುವ ರಾಷ್ಟ್ರಗಳಲ್ಲಿ ಭಾರತ ಪ್ರಮುಖ ಸ್ಥಾನದಲ್ಲಿ ಇದೆ, ಪ್ರತಿ ವರ್ಷದ ಭಾರತ ಟನ್ ಲೆಕ್ಕದಲ್ಲಿ ಚಿನ್ನವನ್ನ ಆಮದು ಮಾಡಿಕೊಳ್ಳುತ್ತಿದೆ. ಸಾಮಾನ್ಯವಾಗಿ ಆಷಾಡ ಮಾಸದಲ್ಲಿ ಸಾಂಪ್ರದಾಯಕ ಕಾರ್ಯಕ್ರಮಗಳು ಕಡಿಮೆ ಇರುವುದರಿಂದ ಹಾಗು ಚಿನ್ನವನ್ನ ಖರೀದಿ ಮಾಡುವವರ ಸಂಖ್ಯೆ ಕಡಿಮೆ ಇರುವುದರಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಆಗುತ್ತದೆ ಎಂದು ಊಹೆ ಮಾಡಲಾಗುತ್ತದೆ.

ಸ್ನೇಹಿತರೆ ಈಗ ಭಾರತೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂ ಗೆ ಗರಿಷ್ಠ 34412 ರೂಪಾಯಿಗಳಿಗೆ ಬಂದು ತಲುಪಿದೆ, ಇನ್ನು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗೆ 31850 ರೂಪಾಯಿ ಆಗಿದೆ.

Gold rate in Ashada masa

ಸ್ನೇಹಿತರೆ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನ ಕಡಿಮೆ ಮಾಡಿದೆ, ಇನ್ನು ಅದಷ್ಟೇ ಅಲ್ಲದೆ ಅಮೆರಿಕಾದ ಫೆಡರಲ್ ಬ್ಯಾಂಕ್ ಕೂಡ ತನ್ನ ಬ್ಯಾಂಕ್ ದರವನ್ನ ಕಡಿಮೆ ಮಾಡಿದೆ, ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಷೇರುಗಳ ಬೆಳೆಗಳಲ್ಲಿ ಕುಸಿತ ಕಂಡಿರುವುದು ಚಿನ್ನದ ಬೆಲೆಯಲ್ಲಿ ಏರಿಕೆ ಆಗಿರುವುದಕ್ಕೆ ಪ್ರಮುಖ ಕಾರಣ ಅಂತ ಹೇಳಬಹುದು.

ಇನ್ನು ಪ್ರಮುಖ ದೇಶದಲ್ಲಿ ಚಿನ್ನದ ಉತ್ಪಾದನೆಯಲ್ಲಿ ಕಡಿತವನ್ನ ಮಾಡಿದ್ದು ಇದು ಕೂಡ ಚಿನ್ನದ ಬೆಲೆಯ ಏರಿಕೆಯಲ್ಲಿ ಕಾರಣವನ್ನ ವಹಿಸಿದೆ, ಇನ್ನು ಅಮೇರಿಕ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆ MCX ನಲ್ಲಿ ಕೂಡ ಬಂಗಾರದ ಬೆಲೆ ಹೆಚ್ಚಾಗಿದೆ.

ಇದಿಷ್ಟು ಚಿನ್ನದ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿದ್ದು ಮುಂಬರುವ ದಿನಗಳಲ್ಲಿ ಚಿನ್ನ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ, ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Gold rate in Ashada masa

Please follow and like us:
0
http://karnatakatoday.in/wp-content/uploads/2019/06/Gold-Rate-in-Ashada-Masa-1024x576.jpghttp://karnatakatoday.in/wp-content/uploads/2019/06/Gold-Rate-in-Ashada-Masa-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವವರಿಗೆ ಬಿಗ್ ಶಾಕ್, ಹೌದು ಸ್ನೇಹಿತರೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗಲಿದೆ ಚಿನ್ನದ ಬೆಲೆ, ಸ್ನೇಹಿತರೆ ಆಷಾಡ ಮಾಸ ಬಂದರು ಕೂಡ ಇಳಿಕೆ ಆಗುತ್ತಿಲ್ಲ ಚಿನ್ನದ ಬೆಲೆ. ಸಾಮಾನ್ಯವಾಗಿ ಆಷಾಡ ಮಾಸದಲ್ಲಿ ಚಿನ್ನದ ಬೆಲೆ ಇಳಿಕೆ ಆಗುತ್ತದೆ ಎಂದು ಹೇಳಲಾಗುತ್ತದೆ, ಆದರೆ ಈ ವರ್ಷ ಅದಕ್ಕೆ ವಿರುದ್ಧವಾಗಿ ಆಷಾಡ ಮಾಸದಲ್ಲಿಯೇ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಹಾಗಾದರೆ ದಿಡೀರ್ ಆಗಿ ಚಿನ್ನದ ಬೆಲೆಯಲ್ಲಿ ಏರಿಕೆ ಆಗಲು...Kannada News