Gold rate of March

ಇನ್ನೇನು ಭಾರತದಲ್ಲಿ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ, ಇದೆ ಸಂದರ್ಭದಲ್ಲಿ ಷೇರು ಮಾರ್ಕೆಟ್ ಕೂಡ ಸ್ವಲ್ಪ ಏರಿಳಿತ ಕಂಡುಕೊಳ್ಳುವ ಲೆಕ್ಕಾಚಾರವಿದೆ, ಇದಲ್ಲದೆ ಬಂಗಾರ ಪ್ರಿಯರಾದ ಭಾರತೀಯರಿಗೆ ಚಿನ್ನದ ಬೆಲೆಯಲ್ಲಿ ವ್ಯತ್ಯಯ ಕಂಡು ಬಂದಿರುವುದು ಬಹಳ ಸಂತಸ ನೀಡಿದೆ.

ಹೌದು ಮಾರ್ಚ್ 20 ರಂದು ಚಿನ್ನದ ಬೆಲೆಯಲ್ಲಿ ಅದು ಕೂಡ ಬೆಂಗಳೂರಿನಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ, ಚಿನ್ನ ಮಾತ್ರವಲ್ಲದೆ ಬೆಳ್ಳಿ ದರವೂ ಕೂಡ ಕುಸಿದಿದ್ದು ಎಷ್ಟು ಇಳಿಕೆಯಾಗಿದೆ ಮತ್ತು ಮುಂದಿನ ದಿನದಲ್ಲಿ ಯಾವೇಲ್ಲ ರೀತಿಯಲ್ಲಿ ಬೆಲೆ ನಿಗದಿಯಾಗಬಹುದು ಎಂದು ತಿಳಿಯೋಣ ಬನ್ನಿ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಮೇಲೆ ಹೂಡಿಕೆದಾರರು ಅಷ್ಟಾಗಿ ಆಸಕ್ತಿ ತೋರದ ಹಿನ್ನೆಲೆಯಲ್ಲಿ ಹಾಗೂ ಸ್ಪಾಟ್ ಮಾರುಕಟ್ಟೆಯಲ್ಲಿ (ಸ್ಥಳದಲ್ಲೇ ನಗದು ನೀಡಿ ತಕ್ಷಣವೇ ಚಿನ್ನ ಖರೀದಿಸುವ ಮಾರುಕಟ್ಟೆ) ದುರ್ಬಲ ಬೇಡಿಕೆ ಕಾರಣ ಚಿನ್ನದ ಬೆಲೆ (ಮಾರ್ಚ್ 20) ಕುಸಿತ ಕಂಡಿದೆ.

Gold rate of March

ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಏರುಮುಖ ಕಂಡಿದ್ದು ಚಿನ್ನದ ಸೂಚ್ಯಂಕ ಇಳಿಮುಖವಾಗಿದೆ, ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಕೈಗಾರಿಕಾ ಘಟಕಗಳಿಂದ ಹಾಗೂ ನಾಣ್ಯ ತಯಾರಕರಿಂದ ಬೆಳ್ಳಿಗೆ ಬೇಡಿಕೆ ಇಲ್ಲದ ಕಾರಣ ಬೆಳ್ಳಿ ಬೆಲೆ ಸಹ ಕುಸಿತ ಕಂಡಿದೆ, ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ 10 ಗ್ರಾಂ ಚಿನ್ನದ ಬೆಲೆ ರೂಪಾಯಿ 118 ರಷ್ಟು ಕುಸಿದು ರೂಪಾಯಿ 31,842 ರಷ್ಟಾಗಿದೆ.

Gold rate of March

ಅದೇ ರೀತಿ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ರೂಪಾಯಿ 165 ರಷ್ಟು ಕುಸಿದಿದ್ದು ರೂಪಾಯಿ 38,090 ರಷ್ಟಾಗಿದೆ.  ಬೆಂಗಳೂರಿನಲ್ಲಿ 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ಕ್ರಮವಾಗಿ ರೂಪಾಯಿ 29980 ಹಾಗೂ ರೂಪಾಯಿ 32064 ರಷ್ಟಿದೆ, 22 ಕ್ಯಾರೆಟ್‍ನ 1 ಗ್ರಾಂ ಚಿನ್ನದ ಬೆಲೆ ರೂಪಾಯಿ 2998 ರಷ್ಟಿದೆ.

ಅದೇ ರೀತಿ 1 ಕೆಜಿ ಬೆಳ್ಳಿ ಬೆಲೆ ರೂಪಾಯಿ 41500 ರಷ್ಟಿದೆ, ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ ಬಂಗಾರದ ಬೆಲೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Gold rate of March

Please follow and like us:
0
http://karnatakatoday.in/wp-content/uploads/2019/03/Gold-price-down-india-1024x576.jpghttp://karnatakatoday.in/wp-content/uploads/2019/03/Gold-price-down-india-150x104.jpgKarnataka Today's Newsಅಂಕಣಬೆಂಗಳೂರುಸುದ್ದಿಜಾಲಇನ್ನೇನು ಭಾರತದಲ್ಲಿ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ, ಇದೆ ಸಂದರ್ಭದಲ್ಲಿ ಷೇರು ಮಾರ್ಕೆಟ್ ಕೂಡ ಸ್ವಲ್ಪ ಏರಿಳಿತ ಕಂಡುಕೊಳ್ಳುವ ಲೆಕ್ಕಾಚಾರವಿದೆ, ಇದಲ್ಲದೆ ಬಂಗಾರ ಪ್ರಿಯರಾದ ಭಾರತೀಯರಿಗೆ ಚಿನ್ನದ ಬೆಲೆಯಲ್ಲಿ ವ್ಯತ್ಯಯ ಕಂಡು ಬಂದಿರುವುದು ಬಹಳ ಸಂತಸ ನೀಡಿದೆ. ಹೌದು ಮಾರ್ಚ್ 20 ರಂದು ಚಿನ್ನದ ಬೆಲೆಯಲ್ಲಿ ಅದು ಕೂಡ ಬೆಂಗಳೂರಿನಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ, ಚಿನ್ನ ಮಾತ್ರವಲ್ಲದೆ ಬೆಳ್ಳಿ ದರವೂ ಕೂಡ ಕುಸಿದಿದ್ದು ಎಷ್ಟು ಇಳಿಕೆಯಾಗಿದೆ ಮತ್ತು ಮುಂದಿನ...Kannada News