ಚಿನ್ನ ಖರೀದಿಯಲ್ಲಿ ಎಲ್ಲ ದೇಶಕ್ಕಿಂತ ಭಾರತವೇ ಒಂದು ಹೆಜ್ಜೆ ಮುಂದೆ ಏಕೆಂದರೆ ಹಬ್ಬ ಹರಿದಿನಗಳು ಬಂತೆಂದರೆ ಸಾಕು ಮನೆಯಲ್ಲಿ ಸಂಭ್ರಮದ ವಾತಾವರಣದ ನಡುವೆ ಚಿನ್ನ ಖರೀದಿ ಮಾಡುವುದು ಒಂದು ಬಗೆಯ ಸಂಪ್ರದಾಯ. ದೇಶಾದ್ಯಂತ ನವರಾತ್ರಿ, ದೀಪಾವಳಿ ಹಬ್ಬದ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ. ಇದರ ಜತೆಗೆ ಬಂಗಾರದ ಬೇಡಿಕೆಯೂ ಹೆಚ್ಚಿದೆ. ಹೀಗಾಗಿ ದರ ಕೂಡ ಕಳೆದ ಮೂರು ತಿಂಗಳಿನಲ್ಲಿ ಗರಿಷ್ಠ ಮಟ್ಟಕ್ಕೇರಿದೆ. ಡಾಲರ್‌ ಎದುರು ರೂಪಾಯಿ ದುರ್ಬಲವಾಗಿರುವುದು ಕೂಡ ಪ್ರಭಾವ ಬೀರಿದೆ. ಇನ್ನು ಭಾರತದಲ್ಲಿ ಚಿನ್ನಕ್ಕಿದ್ದಷ್ಟು ಬೇಡಿಕೆ ಪ್ರಪಂಚದ ಬೇರೆ ಯಾವ ದೇಶದಲ್ಲಿಯೂ ಇಲ್ಲ.

ಈ ನಡುವೆ ಕಳೆದ ವಾರದಿಂದ ಚಿನ್ನ ಖರೀದಿಯಲ್ಲಿ ಶೇಕಡಾ 15 ರಷ್ಟು ಏರಿಕೆ ಕಂಡಿತ್ತು ಭಾರತ. ಇನ್ನು ದೀಪಾವಳಿ ಸಮಯದಲ್ಲಿ ಚಿನ್ನದ ಬೆಲೆ ಇಳಿಯುತ್ತದೆ ಎಂದುಕೊಂಡವರಿಗೆ ಸ್ವಲ್ಪ ಶಾಕ್ ನೀಡಿದೆ ಬೆಲೆ. ಹೌದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಏರಿಕೆ ಯಾಗಿದ್ದು ಗ್ರಾಹಕರಿಗೆ ಸ್ವಲ್ಪ ಬಿಸಿ ಮುಟ್ಟಿಸಿದೆ. ಈ ಬೆಲೆ ಏರಿಕೆ ನಡುವೆಯಲ್ಲೂ ದೇಶದಲ್ಲಿ ಚಿನ್ನ ಖರೀದಿ ಭಾರಿ ಜೋರಾಗಿ ನಡೆದಿದೆ ಎಂದು ಹೇಳಲಾಗಿದೆ.

24 ಕ್ಯಾರೆಟ್ 10 ಗ್ರಾಂ ಶುದ್ಧ ಚಿನ್ನಕ್ಕೆ ಬೆಂಗಳೂರಿನಲ್ಲಿ ಇಂದಿನ ಬೆಲೆ 31420 ರೂ ನಿಗದಿಯಾಗಿದೆ. ಇನ್ನೊಂದು ಶಾಕಿಂಗ್ ಸಂಗತಿ ಚಿನ್ನ ಕೊಳ್ಳುವವರಿಗೆ ಏನಂದ್ರೆ ರೂಪಾಯಿ ಮೌಲ್ಯದ ಕುಸಿತ ಮತ್ತು ಜಾಗತಿಕ ಪ್ರಭಾವಗಳಿಂದಾಗಿ ಚಿನ್ನದ ದರ ಮುಂದಿನ ವಾರಗಳಲ್ಲಿ 10 ಗ್ರಾಮ್‌ ಚಿನ್ನದ ದರವು 35,000-40,000 ರೂ. ತನಕ ಮುಟ್ಟುವ ಸಾಧ್ಯತೆಗಳಿವೆ. ವರ್ಷದ ಹಿಂದಿದ್ದ ಗರಿಷ್ಠ ದರ ತಲುಪಬಹುದು.

ಇನ್ನು ಈ ದೀಪಾವಳಿಯ ಮುಂಚೆಯೇ ಕೆಲ ಶಾಪ್ ಗಳು ಗ್ರಾಹಕರಿಗೆ ಚಿನ್ನ ಖರೀದಿಸಲು ಕೆಲ ಡಿಸ್ಕೌಂಟ್ ಕೂಪನ್ ಗಳನ್ನೂ ನೀಡಿತ್ತು. ಈ ನಡುವೆ ಚಿನ್ನದ ವಹಿವಾಟಿನಲ್ಲಿ ಭಾರಿ ಏರಿಕೆ ಕಂಡಿದ್ದು ಖುಷಿ ನೀಡಿದೆ ಎಂದು ಕಲ್ಯಾಣ್ ಜ್ಯೂವೆಲ್ಲರ್ಸ್ ಹಾಗು ಇನ್ನಿತರ ಚಿನ್ನದ ಮಳಿಗೆಗಳು ಹೇಳಿಕೊಂಡಿವೆ. ಈ ಭಾರಿ ಆಭರಣಗಳಿಗಿಂತ ಚಿನ್ನದ ನಾಣ್ಯ ಹೆಚ್ಚು ಜನ ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.

Please follow and like us:
0
http://karnatakatoday.in/wp-content/uploads/2018/11/GOLD-RATE-1024x576.pnghttp://karnatakatoday.in/wp-content/uploads/2018/11/GOLD-RATE-150x104.pngKarnataka Today's Newsಅಂಕಣಎನ್‌ಆರ್‌ಐಎಲ್ಲಾ ಸುದ್ದಿಗಳುಚಿನ್ನ ಖರೀದಿಯಲ್ಲಿ ಎಲ್ಲ ದೇಶಕ್ಕಿಂತ ಭಾರತವೇ ಒಂದು ಹೆಜ್ಜೆ ಮುಂದೆ ಏಕೆಂದರೆ ಹಬ್ಬ ಹರಿದಿನಗಳು ಬಂತೆಂದರೆ ಸಾಕು ಮನೆಯಲ್ಲಿ ಸಂಭ್ರಮದ ವಾತಾವರಣದ ನಡುವೆ ಚಿನ್ನ ಖರೀದಿ ಮಾಡುವುದು ಒಂದು ಬಗೆಯ ಸಂಪ್ರದಾಯ. ದೇಶಾದ್ಯಂತ ನವರಾತ್ರಿ, ದೀಪಾವಳಿ ಹಬ್ಬದ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ. ಇದರ ಜತೆಗೆ ಬಂಗಾರದ ಬೇಡಿಕೆಯೂ ಹೆಚ್ಚಿದೆ. ಹೀಗಾಗಿ ದರ ಕೂಡ ಕಳೆದ ಮೂರು ತಿಂಗಳಿನಲ್ಲಿ ಗರಿಷ್ಠ ಮಟ್ಟಕ್ಕೇರಿದೆ. ಡಾಲರ್‌ ಎದುರು ರೂಪಾಯಿ ದುರ್ಬಲವಾಗಿರುವುದು ಕೂಡ ಪ್ರಭಾವ...Kannada News