Good news jan dhan account holders

ದೇಶದ ಮೊದಲ ಪೂರ್ಣಾವಧಿಯ ಮಹಿಳಾ ಹಣಕಾಸು ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನಿರ್ಮಲ ಸೀತಾರಾಮನ್ ಈಗ ಐತಿಹಾಸಿಕ ಬಜೆಟ್ ಕೂಡ ಮಂಡಿಸಿದ್ದಾರೆ.

ಎರಡನೇ ಬಾರಿ ಜನ ಬೆಂಬಲದೊಂದಿಗೆ ಮತ್ತೆ ಆಯ್ಕೆಯಾದ ಮೋದಿ ಸರ್ಕಾರದ ಬಜೆಟ್ ಮೇಲೆ ಭಾರಿ ನಿರೀಕ್ಷೆ ಇಡಲಾಗಿತ್ತು ಅದರಂತೆ ಈಗ ಬಜೆಟ್ ನಲ್ಲಿ ಹಲವಾರು ರೀತಿಯ ಕೊಡುಗೆಗಳನ್ನು ನೀಡಲಾಗಿದೆ. ಮಹಿಳಾ ಸಬಲೀಕರಣದ ಬಗ್ಗೆ ಹೆಚ್ಚಿನ ಒತ್ತು ನೀಡಿರುವ ಕೇಂದ್ರ ಸರ್ಕಾರ, ಮುದ್ರಾ ಯೋಜನೆಯಡಿ 1 ಲಕ್ಷ ರು ಸಾಲ ನೀಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಬಜೆಟ್ ನಲ್ಲಿ ಘೋಷಿಸಿದ್ದಾರೆ.

ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಸಮಾಜದ ಎಲ್ಲಾ ವರ್ಗದವರ ಜೊತೆಗೆ ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ವಹಿಸಿದರು ಮತ್ತು ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಅವರು ಮಹಿಳೆಯರ ಅಭಿವೃದ್ಧಿ ಇಲ್ಲದೆ ದೇಶವನ್ನು ಉತ್ತೇಜಿಸಲು ಸಾಧ್ಯವಿಲ್ಲ ಎಂದು ಹೇಳಿದರು.

Good news jan dhan account holders

ಇನ್ನು ಕೇಂದ್ರದಲ್ಲಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ಬ್ಯಾಂಕ್ ಖಾತೆ ಇಲ್ಲದವರಿಗೆ ಜನ್ ಧನ್ ಎನ್ನುವ ಜೀರೋ ಬ್ಯಾಲೆನ್ಸ್ ಖಾತೆ ತೆರೆಯುವ ಅವಕಾಶ ಮಾಡಿ ಕೊಡಲಾಗಿತ್ತು, ಇದೀಗ ಈ ಅಕೌಂಟ್ ಹೊಂದಿರುವ ಎಲ್ಲ ಮಹಿಳೆಯರಿಗೂ ಕೂಡ ಭರ್ಜರಿ ಸಿಹಿಸುದ್ದಿ ಇದೆ.

ಹೌದು ಈ ಬಾರಿ ಬಜೆಟ್ ನಲ್ಲಿ ನಿರ್ಮಲ ಮಹಿಳಾ ಸಬಲೀಕರಣದ ಸಲುವಾಗಿ ಜನ್ ಧನ್ ಖಾತೆ ಹೊಂದಿರುವ ಎಲ್ಲ ಮಹಿಳೆಯರು ಕೂಡ ತಮ್ಮ ಖಾತೆಯಿಂದ 5000 ರೂ ಓವರ್‌ ಡ್ರಾಫ್ಟ್‌ ಮಾಡಬಹುದಾಗಿದೆ, ಅಂದರೆ ನಿಮ್ಮ ಖಾತೆಯಲ್ಲಿ ಯಾವುದೇ ಬ್ಯಾಲೆನ್ಸ್ ಇಲ್ಲದೆ ಇದ್ದರೂ ಕೂಡ ಐದು ಸಾವಿರ ಹಣ ತಗೆಯಬಹುದಾಗಿದೆ.

ಇಲ್ಲಿಯವರೆಗೆ, ಮಹಿಳೆಯರು ತಮ್ಮ ಖಾತೆಯಿಂದ ಕೇವಲ 2 ಸಾವಿರ ರೂಪಾಯಿಗಳನ್ನು ಮಾತ್ರ ಹಿಂಪಡೆಯಬಹುದು, ಅದನ್ನು ಈಗ 5 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ. ಇಷ್ಟೇ ಅಲ್ಲದೆ ಮುದ್ರಾ ಯೋಜನೆಯ ಮೂಲಕ ಯಾವುದೇ ಹೊಸ ವ್ಯಾಪಾರ ಆರಂಭ ಮಾಡಲು ಮಹಿಳೆಯರಿಗೆ ವಿಶೇಷವಾಗಿ ಒಂದು ಲಕ್ಷ ರೂ ಲೋನ್ ತ್ವರಿತಗತಿಯಲ್ಲಿ ಕೂಡ ನೀಡಲಾಗುತ್ತದೆ.

ಇದರ ಬಗ್ಗೆ ಹಲವಾರು ಈಗಾಗಲೇ ಅಪಸ್ವರ ಎತ್ತಿದ್ದಾರೆ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಮುದ್ರಾ ಸಾಲದಿಂದ ಯಾವುದೇ ಪ್ರಯೋಜನವಿಲ್ಲ, ಮಹಿಳೆಯರಿಗೆ ಇದು ಹೆಚ್ಚುವರಿ ಹೊರೆಯಾಗುತ್ತದೆ ಎಂದು ಮಹಿಳಾ ಕಾರ್ಯಕರ್ತರು ಅಭಿಪ್ರಾಯ ಪಟ್ಟಿದ್ದಾರೆ.

Good news jan dhan account holders

ಕರ್ನಾಟಕ 30 ಸಾವಿರ ಗ್ರಾಮಗಳ ಲಕ್ಷಾಂತರ ಮಹಿಳೆಯರು ಸ್ವಸಹಾಯ ಗುಂಪುಗಳಲ್ಲಿದ್ದಾರೆ, ಸ್ವಸಹಾಯ ಗುಂಪುಗಳಿಂದ ಪಡೆಯುವ ಸಾಲದ ಹಣವನ್ನು ಮಹಿಳೆಯರು ಕುಟುಂಬ ನಿರ್ವಹಣೆಗಾಗಿ ಬಳಸಿಕೊಳ್ಳುತ್ತಾರೆ. ಹೀಗಾಗಿ ಅವರು ವಾಪಸ್ ನೀಡಲು ಸಾಧ್ಯವಾಗುವುದಿಲ್ಲ, ಅದರಿಂದ ಮಹಿಳೆಯರಿಗೆ ಹೊರೆಯಾಗುತ್ತದೆ ಎಂದು ಮಹಿಳಾ ಹೋರಾಟಗಾರ್ತಿ ಒಬ್ಬರು ತಿಳಿಸಿದ್ದಾರೆ.

ಇಷ್ಟೇ ಅಲ್ಲದೆ ಚಿನ್ನದ ಆಮದು ದರದ ಮೇಲು ಕೇಂದ್ರ ಟ್ಯಾಕ್ಸ್ ಹೆಚ್ಚಿಸಿದೆ, ಒಟ್ಟಾರೆಯಾಗಿ ಹೇಳುವುದಾದರೆ ಈ ಬಾರಿಯ ಬಜೆಟ್ ಕೆಲವೊಂದು ಸಂಗತಿಗಳಲ್ಲಿ ಖುಷಿ ಕೊಟ್ಟರೆ ಮತ್ತೆ ಕೆಲವುದರಲ್ಲಿ ಕಹಿ ನೀಡಿದೆ. ಮಹಿಳೆಯರ ಜೀವನೋಪಾಯಕ್ಕೆ ಸ್ವಂತ ಉದ್ಯೋಗ ಮಾಡಲು ಬೇಕಾದ ಕೌಶಲ್ಯ ಕಾರ್ಯಕ್ರಮಗಳನ್ನು ನೀಡಿದ್ದರೆ ಬಹುಶ ಅವರಿಗೆ ಸಹಾಯವಾಗುತ್ತಿತ್ತೋ ಏನೋ ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Good news jan dhan account holders

Please follow and like us:
error0
http://karnatakatoday.in/wp-content/uploads/2019/07/Good-news-to-Jan-Dhan-account-Holders-1024x576.jpghttp://karnatakatoday.in/wp-content/uploads/2019/07/Good-news-to-Jan-Dhan-account-Holders-150x104.jpgKarnataka Trendingಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲದೇಶದ ಮೊದಲ ಪೂರ್ಣಾವಧಿಯ ಮಹಿಳಾ ಹಣಕಾಸು ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನಿರ್ಮಲ ಸೀತಾರಾಮನ್ ಈಗ ಐತಿಹಾಸಿಕ ಬಜೆಟ್ ಕೂಡ ಮಂಡಿಸಿದ್ದಾರೆ. ಎರಡನೇ ಬಾರಿ ಜನ ಬೆಂಬಲದೊಂದಿಗೆ ಮತ್ತೆ ಆಯ್ಕೆಯಾದ ಮೋದಿ ಸರ್ಕಾರದ ಬಜೆಟ್ ಮೇಲೆ ಭಾರಿ ನಿರೀಕ್ಷೆ ಇಡಲಾಗಿತ್ತು ಅದರಂತೆ ಈಗ ಬಜೆಟ್ ನಲ್ಲಿ ಹಲವಾರು ರೀತಿಯ ಕೊಡುಗೆಗಳನ್ನು ನೀಡಲಾಗಿದೆ. ಮಹಿಳಾ ಸಬಲೀಕರಣದ ಬಗ್ಗೆ ಹೆಚ್ಚಿನ ಒತ್ತು ನೀಡಿರುವ ಕೇಂದ್ರ ಸರ್ಕಾರ, ಮುದ್ರಾ ಯೋಜನೆಯಡಿ 1 ಲಕ್ಷ...Film | Devotional | Cricket | Health | India