ಸದ್ಯಕ್ಕೆ ದೇಶದಲ್ಲಿ ಆಧಾರ್ ಕಾರ್ಡಿನ ಅಗತ್ಯ ಎಷ್ಟಿದೆ ಎನ್ನುವುದು ನಿಮಗೆ ತಿಳಿದೇ ಇದೆ, ನಮ್ಮ ದೇಶದಲ್ಲಿ ಅತ್ಯಂತ ಸುಲಭವಾಗಿ ಮತ್ತು ಸುರಕ್ಷಿತ ಆಗಿರುವ ಆಧಾರ್ ದಾಖಲೆ ಇದೀಗ ದೇಶದ ಎಲ್ಲ ಸೌಲಭ್ಯಗಳನ್ನು ಪಡೆಯಲು ಅಗತ್ಯವಾಗಿ ಬೇಕೇ ಬೇಕು. ಶಾಲಾ ಮಕ್ಕಳಿಂದ ಹಿಡಿದು ವಯೋ ವೃದ್ಧರಿಗೂ ಕೂಡ ಆಧಾರ್ ದಾಖಲೆ ಇರಲೇಬೇಕು, ಹೀಗಾಗಿ ಆಧಾರ್ ಗೆ ಬೇಡಿಕೆ ಇರುವುದರಿಂದ ಆಧಾರ್ ತಿದ್ದುಪಡಿ ಹಾಗು ಇನ್ನಿತರ ಕೆಲಸಗಳು ಯಾವಾಗಲೂ ಸಮಯ ತಗೆದುಕೊಳ್ಳುತ್ತಿದ್ದವು ನಿಮಗೆಲ್ಲ ಗೊತ್ತೇ ಇದೆ. ಈಗ ದೇಶದಲ್ಲಿ ಆನ್ಲೈನ್ ಮೂಲಕವೇ ಎಲ್ಲ ಸಮಸ್ಯೆಗಳನ್ನು ದೂರ ಮಾಡಲು ವ್ಯವಸ್ಥೆ ಮಾಡಿಕೊಡಲಾಗಿದೆ, ಹೌದು ಆಧಾರ್ ಗೆ ಮೊಬೈಲ್ ನಂಬರ್ ನೀಡಿದವರು ಆನ್ಲೈನ್ ಮೂಲಕ ಎಲ್ಲಾ ವಿವರಗಳನ್ನು ಎಡಿಟ್ ಮಾಡಿಕೊಳ್ಳಬಹುದು.

ಇನ್ನು ಯಾವುದೇ ಆಧಾರ್ ಕೇಂದ್ರಕ್ಕೆ ಹೋದಾಗ ನಿಮ್ಮ ಯಾವ ವಿವರಗಳನ್ನು ಚೇಂಜ್ ಮಾಡಲು ಯಾವೆಲ್ಲ ದಾಖಲೆ ಬೇಕು ಎನ್ನುವದರ ಬಗ್ಗೆ ತಿಳಿಸಿಕೊಡುತ್ತೇವೆ ಕೇಳಿ. ಆಧಾರ್ ಸಂಖ್ಯೆಯನ್ನು ಇಂದು ಬಹಳ ಮುಖ್ಯವಾದ ದಾಖಲೆಯಾಗಿ ಬಳಸಲಾಗುತ್ತದೆ ಅಗತ್ಯವಿದ್ದರೆ ಆಯ್ದ ತಿದ್ದುಪಡಿಗಳನ್ನು ಅಥವಾ ಬದಲಾವಣೆಗಳನ್ನು ಮಾಡುವ ಆಯ್ಕೆಯನ್ನು ಸರ್ಕಾರ ನೀಡಿದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ನೀವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೆಲಸ ಬದಲಾಯಿಸಿದಾಗ ಅಥವಾ ನೀವು ವಾಸಿಸುವ ಸ್ಥಳ ಬದಲಾದಾಗ ಆಧಾರ್ ಕಾರ್ಡ್ ನವೀಕರಿಸಬೇಕಾಗುತ್ತದೆ.

new update of Aadhar card

ಹೀಗೆ ಆಧಾರ್‌ನಲ್ಲಿ ಹಲವು ರೀತಿಯ ಬದಲಾವಣೆಗಳನ್ನು ಮಾಡಬಹುದಾದರೂ, ಅಂತಹ ಹಲವು ನವೀಕರಣಕ್ಕೆ ದಾಖಲೆಗಳ ಅಗತ್ಯವಿರುತ್ತದೆ ಮತ್ತು ಕೆಲವು ಬದಲಾವಣೆಗೆ ಯಾವುದೇ ದಾಖಲೆಗಳನ್ನು ನೀಡಬೇಕಾಗಿಲ್ಲ. ಆಧಾರ್ ಕೇಂದ್ರಕ್ಕೆ ಹೋದಾಗ ನಿಮ್ಮ ಯಾವ ದಾಖಲೆ ಬದಲಿಸಲು ಯಾವೆಲ್ಲ ಡಾಕ್ಯುಮೆಂಟ್ ಅಗತ್ಯ ಎನ್ನುವುದನ್ನ ತಿಳಿಸುತ್ತೇವೆ ಕೇಳಿ. ಮೊದಲನೆಯದಾಗಿ ನಿಮ್ಮ ಈಗಿರುವ ಆಧಾರ್ ಕಾರ್ಡಿನಲ್ಲಿ ನಿಮ್ಮ ಫೋಟೋ, ಫಿಂಗರ್‌ಪ್ರಿಂಟ್, ಐರಿಸ್ ಸ್ಕ್ಯಾನ್, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಅನ್ನು ನೀವು ನವೀಕರಿಸಬೇಕಾದರೆ ಇದಕ್ಕಾಗಿ ನೀವು ಯಾವುದೇ ರೀತಿಯ ಡಾಕ್ಯುಮೆಂಟ್ ಅನ್ನು ಒದಗಿಸಬೇಕಾಗಿಲ್ಲ.

ಇನ್ನು ಈ ಸಮಯದಲ್ಲಿ ನಿಮ್ಮ ಆಧಾರ್ ನಕಲನ್ನು ತೆಗೆದುಕೊಂಡು ನೀವು ಹತ್ತಿರದ ಆಧಾರ್ ಕೇಂದ್ರದಲ್ಲಿ ಅಪಾಯಿಂಟ್ಮೆಂಟ್ ತೆಗೆದುಕೊಳ್ಳಬೇಕು ಮತ್ತು ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಆಧಾರ್ ಕಾರ್ಡ್‌ ಸೆಂಟರ್ ನಲ್ಲಿ ನವೀಕರಣದ ಫಾರಂ ಸಿಗುತ್ತದೆ ಅದರಲ್ಲಿ ಯಾವ ದಾಖಲೆ ಬದಲಾಗಬೇಕು ಎಂದು ತಿಳಿಸಿ, ಮೇಲೆ ತಿಳಿಸಿದ ಯಾವುದೇ ಬದಲಾವಣೆ ಮಾಡಲು ಯಾವ ಇತರ ದಾಖಲೆ ಕೂಡ ಬೇಡವೇ ಬೇಡ. ಇನ್ನು ನಿಮ್ಮ ಆಧಾರ್ ನಲ್ಲಿ ಇನ್ನಷ್ಟು ಕೆಲವು ಬದಲಾವಣೆ ಇದೆ, ಒಂದುವೇಳೆ ಈ ಬದಲಾವಣೆ ಮಾಡಲು ಬಯಸಿದಲ್ಲಿ ಅದಕ್ಕೆ ಸರಿಯಾದ ಸಾಕ್ಷಿಗಾಗಿ ಸೂಕ್ತ ದಾಖಲೆ ನೀಡಬೇಕಾಗುತ್ತದೆ. ನಿಮ್ಮ ಆಧಾರ್‌ನಲ್ಲಿ ಹೆಸರು, ವಿಳಾಸ ಮತ್ತು ನಿಮ್ಮ ಹುಟ್ಟಿದ ದಿನಾಂಕವನ್ನು ಬದಲಿಸಲು ನೀವು ಬಯಸಿದರೆ ಇದಕ್ಕಾಗಿ ನೀವು ಮಾನ್ಯ ದಾಖಲೆಯನ್ನು ಒದಗಿಸಬೇಕು ಇಲ್ಲದಿದ್ದರೆ ಆಧಾರ್ ನಲ್ಲಿ ಯಾವ ಬದಲಾವಣೆ ಮಾಡಲು ಸಾಧ್ಯವಿಲ್ಲ, ಆದಷ್ಟು ಜನರಿಗೆ ಈ ಮಾಹಿತಿ ತಿಳಿಸಿ.

new update of Aadhar card

Please follow and like us:
error0
http://karnatakatoday.in/wp-content/uploads/2019/11/Good-news-of-Aadhar-card-1024x576.jpghttp://karnatakatoday.in/wp-content/uploads/2019/11/Good-news-of-Aadhar-card-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಸದ್ಯಕ್ಕೆ ದೇಶದಲ್ಲಿ ಆಧಾರ್ ಕಾರ್ಡಿನ ಅಗತ್ಯ ಎಷ್ಟಿದೆ ಎನ್ನುವುದು ನಿಮಗೆ ತಿಳಿದೇ ಇದೆ, ನಮ್ಮ ದೇಶದಲ್ಲಿ ಅತ್ಯಂತ ಸುಲಭವಾಗಿ ಮತ್ತು ಸುರಕ್ಷಿತ ಆಗಿರುವ ಆಧಾರ್ ದಾಖಲೆ ಇದೀಗ ದೇಶದ ಎಲ್ಲ ಸೌಲಭ್ಯಗಳನ್ನು ಪಡೆಯಲು ಅಗತ್ಯವಾಗಿ ಬೇಕೇ ಬೇಕು. ಶಾಲಾ ಮಕ್ಕಳಿಂದ ಹಿಡಿದು ವಯೋ ವೃದ್ಧರಿಗೂ ಕೂಡ ಆಧಾರ್ ದಾಖಲೆ ಇರಲೇಬೇಕು, ಹೀಗಾಗಿ ಆಧಾರ್ ಗೆ ಬೇಡಿಕೆ ಇರುವುದರಿಂದ ಆಧಾರ್ ತಿದ್ದುಪಡಿ ಹಾಗು ಇನ್ನಿತರ ಕೆಲಸಗಳು ಯಾವಾಗಲೂ ಸಮಯ ತಗೆದುಕೊಳ್ಳುತ್ತಿದ್ದವು...Film | Devotional | Cricket | Health | India