ಕನ್ನಡ ಚಿತ್ರರಂಗವನ್ನ ದೇಶ ವಿದೇಶಗಳು ತಿರುಗಿ ನೋಡುವಂತೆ ಮಡಿದ ಚಿತ್ರ ಅಂದರೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF ಚಿತ್ರ ಎಂದು ಹೇಳಿದರೆ ತಪ್ಪಾಗಲ್ಲ, ಕನ್ನಡ ಮಾತ್ರವಲ್ಲದೆ ದೇಶದ ಐದು ಭಾಷೆಯಲ್ಲಿ ಬಿಡುಗಡೆಯಾದ ಈ ಚಿತ್ರ ಭಾರತ ಚಿತ್ರರಂಗದ ಹಲವು ದಾಖಲೆಗಳನ್ನ ಧೂಳಿಪಟ ಮಾಡಿತ್ತು. ಇನ್ನು ಈ ಚಿತ್ರ ರಾಕಿಂಗ್ ಸ್ಟಾರ್ ಯಶ್ ಅವರ ಜೀವನವನ್ನೇ ಬದಲಾಯಿಸಿತು, ಹೌದು KGF ಚಿತ್ರ ದೇಶಾದ್ಯಂತ ಸದ್ದು ಮಾಡಿದ ಕಾರಣ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಕನ್ನಡದಲ್ಲಿ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ಅಭಿಮಾನಿಗಳು ಹುಟ್ಟಿಕೊಂಡರು. ಇನ್ನು KGF ಚಿತ್ರ ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ಬಿಡುಗಡೆಯಾದ ಕಾರಣ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು ಅನ್ನಬಹುದು.

KGF ಚಿತ್ರದ ಮೊದಲ ಭಾಗ ತೆರೆಕಂಡು ಸುಮಾರು ಒಂದೂವರೆ ವರ್ಷಗಳು ಕಳೆದು ಹೋಗಿದೆ, ಇನ್ನು KGF ಚಿತ್ರದ ಎರಡನೆಯ ಭಾಗ ಯಾವ ಬಿಡುಗಡೆಯಾಗುತ್ತದೆ ಎಂದು ಕೇವಲ ಯಶ್ ಅವರ ಅಭಿಮಾನಿಗಳು ಮಾತ್ರವಲ್ಲದೆ ದೇಶ ವಿದೇಶದ ಜನರು ಕಾಯುತ್ತಿದ್ದಾರೆ. ಇನ್ನು ಈ ಚಿತ್ರದ ಮೊದಲ ಭಾಗವನ್ನ ನೋಡಿದ ಪ್ರತಿಯೊಬ್ಬರೂ ಕೂಡ ಎರಡನೆಯ ಭಾಗವನ್ನ ನೋಡಲು ಕಾಯುತ್ತಿದ್ದಾರೆ ಮತ್ತು KGF ಚಿತ್ರದ ಎರಡನೆಯ ಭಾಗದ ಭಾರಿ ನಿರೀಕ್ಷೆ ಇದೆ. ಇನ್ನು KGF ಚಾಪ್ಟರ್ 2 ಚಿತ್ರದ ಬಿಡುಗಡೆಯ ದಿನ ನಿಗದಿ ಆಗಿದ್ದು ಅಭಿಮಾನಿಗಳಿಗೆ ಸಂತಸವನ್ನ ತರಿಸಿದೆ, ಹಾಗಾದರೆ KGF ಎರಡನೆಯ ಭಾಗ ಯಾವಾಗ ರಿಲೀಸ್ ಆಗುತ್ತದೆ ಅನ್ನುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

KGF Chapter 2

ಹೌದು ಸ್ನೇಹಿತರೆ KGF ಚಾಪ್ಟರ್ 2 ಚಿತ್ರದ ಶೂಟಿಂಗ್ ಗಳು ಆದಷ್ಟು ಮುಗಿದಿದ್ದು ಇನ್ನು ಕೆಲವೇ ಕೆಲವು ಶೂಟಿಂಗ್ ಗಳು ಮಾತ್ರ ಬಾಕಿ ಉಳಿದುಕೊಂಡಿದೆ, ಇನ್ನು ಬಂದಿರುವ ಮಾಹಿತಿಯ ಪ್ರಕಾರ KGF ಚಾಪ್ಟರ್ 2 ಅಕ್ಟೋಬರ್ 23 ರಂದು ದಸರಾ ಸಮಯದಲ್ಲಿ ರಿಲೀಸ್ ಆಗಲಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಹೌದು ಸ್ನೇಹಿತರೆ ಇದೆ ದಸರಾ ಹಬ್ಬಕ್ಕೆ ಅಂದರೆ ಅಕ್ಟೋಬರ್ 23 ರಂದು KGF 2 ಚಿತ್ರ ಫ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ದೇಶ ವಿದೇಶಗಳಲ್ಲಿ ತೆರೆಕಾಣಲಿದೆ ಎಂದು ಹೇಳಲಾಗುತ್ತಿದೆ, ಇನ್ನು ಚಿತ್ರದ ಬಿಡುಗಡೆಯ ಕುರಿತಂತೆ ತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ.

ಈಗಾಗಲೇ ಚಿತ್ರದ ಬಹುತೇಕ ಶೂಟಿಂಗ್ ಕೊನೆಗೊಂಡಿದ್ದು ಚಿತ್ರತಂಡ ಈಗ ಹೈದರಾಬಾದ್ ನಲ್ಲಿ ಇದ್ದು ಕೊನೆಯ ಹಂತದ ಶೂಟಿಂಗ್ ನಡೆಯುತ್ತಿದೆ ಮತ್ತು ಚಿತ್ರದ ನಿರ್ದೇಶಕರಾದ ಪ್ರಶಾಂತ್ ನಿಲ್ ಅವರು ಚಿತ್ರದ ಬಗ್ಗೆ ಎಲ್ಲಾ ಅಪ್ಡೇಟ್ ಗಳನ್ನ ನೀಡುತ್ತಿದ್ದಾರೆ. ಇನ್ನು KGF 2 ಚಿತ್ರ ಫ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ದೇಶ ವಿದೇಶದಲ್ಲಿ ಒಂದೇ ದಿನ ತೆರೆಕಾಣುವ ಕಾರಣ ಚಿತ್ರ ಭರ್ಜರಿ ಕಲೆಕ್ಷನ್ ಮಾಡಲಿದೆ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಸಿನಿ ಪಂಡಿತರ ಲೆಕ್ಕಾಚಾರ ಪ್ರಕಾರ KGF 2 ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲಿದ್ದು ಸುಮಾರು 600 ಕೋಟಿ ಗಳಿಕೆ ಮಾಡಬಹುದು ಎಂದು ಅಂದಾಜು ಮಾಡಲಾಗಿದೆ, ಸ್ನೇಹಿತರೆ ನಿಮ್ಮ ಪ್ರಕಾರ KGF 2 ಚಿತ್ರ ಎಷ್ಟು ಗಳಿಕೆ ಮಾಡಬಹುದು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

KGF Chapter 2

Please follow and like us:
error0
http://karnatakatoday.in/wp-content/uploads/2020/03/KGF-movie-1024x576.jpghttp://karnatakatoday.in/wp-content/uploads/2020/03/KGF-movie-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕನ್ನಡ ಚಿತ್ರರಂಗವನ್ನ ದೇಶ ವಿದೇಶಗಳು ತಿರುಗಿ ನೋಡುವಂತೆ ಮಡಿದ ಚಿತ್ರ ಅಂದರೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF ಚಿತ್ರ ಎಂದು ಹೇಳಿದರೆ ತಪ್ಪಾಗಲ್ಲ, ಕನ್ನಡ ಮಾತ್ರವಲ್ಲದೆ ದೇಶದ ಐದು ಭಾಷೆಯಲ್ಲಿ ಬಿಡುಗಡೆಯಾದ ಈ ಚಿತ್ರ ಭಾರತ ಚಿತ್ರರಂಗದ ಹಲವು ದಾಖಲೆಗಳನ್ನ ಧೂಳಿಪಟ ಮಾಡಿತ್ತು. ಇನ್ನು ಈ ಚಿತ್ರ ರಾಕಿಂಗ್ ಸ್ಟಾರ್ ಯಶ್ ಅವರ ಜೀವನವನ್ನೇ ಬದಲಾಯಿಸಿತು, ಹೌದು KGF ಚಿತ್ರ ದೇಶಾದ್ಯಂತ ಸದ್ದು ಮಾಡಿದ ಕಾರಣ ರಾಕಿಂಗ್...Film | Devotional | Cricket | Health | India