ಸಾಮಾನ್ಯವಾಗಿ ಮೊಬೈಲ್ ಬಳಕೆದಾರರನ್ನು ಕಾಡುವ ಪ್ರಮುಖ ತೊಂದರೆ ಎಂದರೆ ಒಂದು ವೇಳೆ ನೀವು ಖರೀದಿಸಿದ ಬೆಲೆ ಬಾಳುವ ಫೋನ್ ಕಳೆದು ಹೋದರೆ ಅದನ್ನು ಯಾವ ರೀತಿ ಹುಡುಕುವುದು ಹೇಗೆ ಆ ಫೋನ್ ನಲ್ಲಿರುವ ನಿಮ್ಮ ಡಾಟಾವನ್ನು ಅಳಿಸಿಹಾಕುವುದು ಎನ್ನುವುದು. ಇಂದು ನಾವು ಇದೆ ವಿಷಯದ ಕುರಿತು ಹೇಳಲಿದ್ದೇವೆ. ನಾವು ನೀಡುತ್ತಿರುವ ಈ ವರದಿ ಕೇವಲ ಆಂಡ್ರಾಯ್ಡ್ ಫೋನ್ ಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಹೌದು ಒಂದು ವೇಳೆ ನಿಮ್ಮ ಆಂಡ್ರಾಯ್ಡ್ ಫೋನ್ ಕಳೆದು ಹೋದಲ್ಲಿ ಗೂಗಲ್ ಸಹಾಯದ ಮೂಲಕ ನೀವು ಫೋನನ್ನು ಹುಡುಕಬಹುದು. ಗೂಗಲ್(Google) ತನ್ನ ಬಳಕೆದಾರರಿಗೆ ಹೊಸ ಕೊಡುಗೆ ನೀಡಿದೆ. ಈಗ ನಿಮ್ಮ ಫೋನ್ಕ ಳೆದುಹೋದರೆ ನೀವು ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಗೂಗಲ್ ನಿಮ್ಮ ಕಳೆದುಹೋದ ಫೋನ್ ಅನ್ನು ಪ್ರವೇಶಿಸುವ ಹೊಸ ವೈಶಿಷ್ಟ್ಯಗಳನ್ನು ತಂದಿದೆ.

ಇಲ್ಲಿ ಎರಡು ರೀತಿಯ ಆಯ್ಕೆಗಳಿವೆ ಒಂದು ಆಯ್ಕೆ ಫೋನ್ ನಿಮ್ಮ ಮನೆಯಲ್ಲೇ ಎಲ್ಲೋ ಕಳೆದು ಹೋಗಿದ್ದಾಗ ಮತ್ತು ಅದರಲ್ಲಿ ಇಂಟರ್ನೆಟ್ ಆಯ್ಕೆ ಆನ್ ಇದ್ದಾಗ ನೀವು ಆ ಫೋನ್ ಎಲ್ಲಿದೆ ಎಂದು ಪತ್ತೆ ಹಚ್ಚಬಹುದು. ಎರಡನೇ ಆಯ್ಕೆ ಇಂಟರ್ನೆಟ್ ಆನ್ ಆಗದಿದ್ದರೆ ಅಥವಾ ಫೋನ್ ಸ್ವಿಚ್ ಆಫ್ ಆಗಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ನೀವು ಫೋನ್‌ನಲ್ಲಿ ಕೊನೆಯ ಬಾರಿಗೆ ಇಂಟರ್ನೆಟ್ ಯಾವಾಗ, ಮತ್ತು ಯಾವ ಲೊಕೇಶನ್ ನಲ್ಲಿ ಚಾಲನೆಯಲ್ಲಿತ್ತು ಎಂದು ತಿಳಿಯಬಹುದು. ಕಳೆದುಹೋದ ನಿಮ್ಮ ಫೋನ್ ಹುಡುಕಲು, ನಿಮ್ಮ ಕಳೆದುಹೋದ ಸ್ಮಾರ್ಟ್‌ಫೋನ್‌ನಲ್ಲಿರುವ Google ID ಯೊಂದಿಗೆ ಮೊದಲು ನಿಮ್ಮ ಕಂಪ್ಯೂಟರ್‌ನಲ್ಲಿ ಗೂಗಲ್ ಗೆ ಲಾಗಿನ್ ಮಾಡಿ.

googe help

ಇದರ ನಂತರ, ನಿಮ್ಮ ಹೆಸರಿನ ಪಕ್ಕದಲ್ಲಿ ಗೋಚರಿಸುವ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ ಮತ್ತು Google ಖಾತೆಗೆ ಹೋಗಿ. ಇಲ್ಲಿ ನೀವು Security ಮೇಲೆ ಕ್ಲಿಕ್ ಮಾಡಿ. Your Devices ಗೆ ಹೋಗುವ ಮೂಲಕ, Find a lost or stolen phone(ಕಳೆದುಹೋದ ಅಥವಾ ಕದ್ದ ಫೋನ್ ಹುಡುಕಿ) ಕ್ಲಿಕ್ ಮಾಡುವ ಮೂಲಕ ನೀವು ಫೋನ್ ಅನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ. Find a lost or stolen phone (ಕಳೆದುಹೋದ ಅಥವಾ ಕದ್ದ ಫೋನ್) ಅನ್ನು ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಕಂಪ್ಯೂಟರ್‌ನಲ್ಲಿ ನಕ್ಷೆ ಕಾಣಿಸುತ್ತದೆ, ನಿಮ್ಮ ಸ್ಮಾರ್ಟ್‌ಫೋನ್‌ನ ಸ್ಥಳವು ಇಲ್ಲಿ ಕಾಣಿಸುತ್ತದೆ.

ನಕ್ಷೆಯಲ್ಲಿ ತೋರಿಸಿರುವ ಗುರುತು ಹಸಿರು ಬಣ್ಣದ್ದಾಗಿದ್ದರೆ, ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕವಿದೆ, ಆದರೆ ಈ ಗುರುತು ಬೂದು ಬಣ್ಣದ್ದಾಗಿದ್ದರೆ ಇಂಟರ್ನೆಟ್ ಸಂಪರ್ಕವು ಕೊನೆಯ ಬಾರಿಗೆ ಆ ಸ್ಥಳದಲ್ಲಿತ್ತು. ಇಷ್ಟೇ ಅಲ್ಲದೆ ಇನ್ನೊಂದು ಅಪ್ಲಿಕೇಶನ್ ಮುಖಾಂತರ ಕೂಡ ನೀವು ಫೋನ್ ಹುಡುಕಬಹುದಾಗಿದೆ. ಇದಕ್ಕಾಗಿ ನೀವು ಸ್ವತಃ ಗೂಗಲ್ ಟೀಮ್ ಅವರೇ ಮಾಡಿರುವ ಅಪ್ಲಿಕೇಶನ್ ಒಂದನ್ನು ಡೌನ್ಲೋಡ್ ಮಾಡಬೇಕು. ಈ ಅಪ್ಲಿಕೇಶನ್ ನ ಹೆಸರು ಗೂಗಲ್ ಫೈಂಡ್ ಮೈ ಡಿವೈಸ್. ಬೇರೊಬ್ಬರ ಮೊಬೈಲ್ ಬಳಸಿ ನೀವು ಈ ಅಪ್ಲಿಕೇಶನ್ ಆನ್ ಮಾಡಿ. ನಂತರ ಇಲ್ಲಿ ನೀವು ಕಳೆದುಹೋದ ಮೊಬೈಲ್ ನ ಗೂಗಲ್ ಅಕೌಂಟ್ ಬಳಸಿ ಲಾಗಿನ್ ಮಾಡಿದರೆ ಕೊನೆಯದಾಗಿ ನಿಮ್ಮ ಮೊಬೈಲ್ ಎಲ್ಲಿತ್ತು ಹಾಗು ಒಂದು ವೇಳೆ ಫೋನ್ ಎನ್ ಆಗಿದ್ದರೆ ಅದರ ಡೇಟಾ ಕೂಡ ಅಳಿಸಿಹಾಕಬಹುದು.

googe help

 

 

Please follow and like us:
error0
http://karnatakatoday.in/wp-content/uploads/2020/02/lost-phone-1024x576.jpghttp://karnatakatoday.in/wp-content/uploads/2020/02/lost-phone-150x104.jpgKarnataka Trendingಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಸಾಮಾನ್ಯವಾಗಿ ಮೊಬೈಲ್ ಬಳಕೆದಾರರನ್ನು ಕಾಡುವ ಪ್ರಮುಖ ತೊಂದರೆ ಎಂದರೆ ಒಂದು ವೇಳೆ ನೀವು ಖರೀದಿಸಿದ ಬೆಲೆ ಬಾಳುವ ಫೋನ್ ಕಳೆದು ಹೋದರೆ ಅದನ್ನು ಯಾವ ರೀತಿ ಹುಡುಕುವುದು ಹೇಗೆ ಆ ಫೋನ್ ನಲ್ಲಿರುವ ನಿಮ್ಮ ಡಾಟಾವನ್ನು ಅಳಿಸಿಹಾಕುವುದು ಎನ್ನುವುದು. ಇಂದು ನಾವು ಇದೆ ವಿಷಯದ ಕುರಿತು ಹೇಳಲಿದ್ದೇವೆ. ನಾವು ನೀಡುತ್ತಿರುವ ಈ ವರದಿ ಕೇವಲ ಆಂಡ್ರಾಯ್ಡ್ ಫೋನ್ ಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಹೌದು ಒಂದು ವೇಳೆ ನಿಮ್ಮ ಆಂಡ್ರಾಯ್ಡ್...Film | Devotional | Cricket | Health | India