ಈಗಿನ ದಿನಗಳಲ್ಲಿ ಪ್ರತಿಯೊಬ್ಬರ ಬಾಯಲ್ಲಿ ಹರಿದಾಡುತ್ತಿರುವ ವಿಷಯ ಏನು ಅಂದರೆ ಅದೂ ಕರೋನ ವೈರಸ್ ಆಗಿದೆ, ಹೌದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಈ ಕರೋನ ವೈರಸ್ ಜನರಲ್ಲಿ ಬಹಳ ಆತಂಕವನ್ನ ಮೂಡಿಸಿದೆ. ಹೌದು ಚೀನಾ ದೇಶದಲ್ಲಿ ಹುಟ್ಟಿ ಈಗ ನಮ್ಮ ದೇಶಕ್ಕೂ ಬಂದಿರುವ ಈ ಕರೋನ ವೈರಸ್ ಇಬ್ಬರ ಪ್ರಾಣವನ್ನ ಕೂಡ ಬಲಿ ತೆಗೆದುಕೊಂಡಿದೆ ಅನ್ನುವುದು ಬಹಳ ಬೇಸರದ ಸಂಗತಿಯಾಗಿದೆ. ಇನ್ನು ಈ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮಗಳನ್ನ ಕೈಗೊಂಡಿದ್ದು ಜನರು ಕೂಡ ಸರ್ಕಾರದ ನಿರ್ಧಾರಕ್ಕೆ ಬೆಲೆ ಕೊಟ್ಟಿದ್ದಾರೆ, ಇನ್ನು ಒಂದು ವಾರಗಳ ಕಾಲ ಕರ್ನಾಟಕದಲ್ಲಿ ಬಂದ್ ಜಾರಿಗಿದ್ದು ನಿಮಗೆಲ್ಲ ಗೊತ್ತಿರುವ ವಿಷಯವಾಗಿದೆ.

ಹೌದು ಕರೋನ ವೈರಸ್ ನಮ್ಮ ರಾಜ್ಯದಲ್ಲಿ ದಿನದಿಂದ ದಿನಕ್ಕೆ ವ್ಯಾಪಿಸುತ್ತಿರುವ ಕಾರಣ ಅದನ್ನ ತಡೆಗಟ್ಟುವ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಸಾರ್ವಜನಿಕ ಪ್ರದೇಶಗಳನ್ನ ಬಂದ್ ಮಾಡಲಾಗಿದೆ ಮತ್ತು ಅದರ ಜೊತೆಗೆ ಶಾಲಾ ಕಾಲೇಜುಗಳಿಗೆ ಕೂಡ ರಜೆಯನ್ನ ಘೋಷಣೆ ಮಾಡಲಾಗಿದೆ. ನಮ್ಮ ದೇಶದಲ್ಲಿ ಈ ರೋಗದ ಹರಡುವಿಕೆ ಬಹಳ ನಿಧಾನಗತಿಯಲ್ಲಿ ಇದ್ದರೂ ಕೂಡ ಮುಂಬರುವ ದಿನಗಳಲ್ಲಿ ಹೆಚ್ಚಿನ ತೊಂದರೆಯಬಾರದು ಅನ್ನುವ ಉದ್ದೇಶದಿಂದ ಸರ್ಕಾರ ಅಗತ್ಯ ಕ್ರಮಗಳನ್ನ ಕೈಗೊಂಡಿದೆ, ಇನ್ನು ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ಅತ್ಯಂತ ಕಠಿಣ ಕ್ರಮಗಳನ್ನ ಕೈಗೊಂಡಿದ್ದು ಈಗ ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ ರಾಜ್ಯದ ಮುಖ್ಯ ಮಂತ್ರಿಗಳು.

Govt and Corona

ಈಗ ಮತ್ತೇ ರಾಜ್ಯದ ಜನರಿಗೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದ್ದು ಜನರಲ್ಲಿ ಇನ್ನು ಆತಂಕ ಜಾಸ್ತಿ ಆಗುವಂತೆ ಮಾಡಿದೆ, ಹಾಗಾದರೆ ಏನದು ಸುದ್ದಿ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ರಾಜ್ಯದ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ಈಗ ಮತ್ತೇ ದೊಡ್ಡ ನಿರ್ಧಾರವನ್ನ ತೆಗೆದುಕೊಂಡಿದ್ದು ಜನರು ಅದನ್ನ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಆದೇಶವನ್ನ ಹೊರಡಿಸಿದ್ದಾರೆ, ಹೌದು ಬಂದಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಬಂದ್ 31 ನೇ ತಾರೀಕಿನ ತನಕ ವಿಸ್ತರಣೆಯನ್ನ ಮಾಡಲಾಗಿದೆ ಮತ್ತು ಶಾಲಾ ಕಾಲೇಜುಗಳಿಗೆ ಕೂಡ 31 ರ ತನಕ ರಜೆಯನ್ನ ವಿಸ್ತರಣೆ ಮಾಡಲಾಗಿದೆ.

ಇನ್ನು ಬೇರೆ ಊರಿನಿಂದ ಬೆಂಗಳೂರಿಗೆ ಬಂದು PG ಮತ್ತು ಮತ್ತು ಹಾಸ್ಟೆಲ್ ನಲ್ಲಿ ವಾಸವಿರುವ ಜನರಿಗೆ ಸದ್ಯದ ದಿನಗಳಲ್ಲಿ ತಮ್ಮ ತಮ್ಮ ಊರುಗಳಿಗೆ ವಾಪಾಸ್ ಹೋಗಲು ಸಲಹೆಯನ್ನ ಕೂಡ ನೀಡಲಾಗಿದೆ. ಇನ್ನು ಸಭೆ ಸಮಾರಂಭಗಳಿಗೂ ನಿರ್ಬಂಧ ಮುಂದುವರಿಯಲಿದ್ದು ಸರ್ಕಾರ ಸೂಚನೆ ಸಿಗುವ ತನಕ ಯಾವುದೇ ಕಾರ್ಯಕ್ರಮ ನಡೆಸುವ ಹಾಗೆ ಇಲ್ಲ, ಇನ್ನು ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಎಂದಿನಂತೆ ಇರಲಿದೆ. ಇನ್ನು ಶಾಲೆಗಳಿಗೆ ರಜೆ ಕೊಟ್ಟಿರುವ ಕಾರಣ PG ಮತ್ತು ಹೋಟೆಲ್ ಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ಈ ಸೋಂಕು ತಗುಲಿದರೆ ತೊಂದರೆಯಾಗುತ್ತದೆ ಅನ್ನುವ ಕಾರಣಕ್ಕೆ ಬಿಬಿಎಂಪಿ ಆಯುಕ್ತರು ವಿದ್ಯಾರ್ಥಿಗಳಿಗೆ ಬೆಂಗಳೂರನ್ನ ಬಿಟ್ಟು ನಿಮ್ಮ ಊರುಗಳಿಗೆ ವಾಪಾಸ್ ಹೋಗುವಂತೆ ಸೂಚನೆಯನ್ನ ಕೊಟ್ಟಿದಾರೆ. ಇನ್ನು ಮಾಲ್ ಮತ್ತು ಚಿತ್ರಮಂದಿರಗಳು ಕೂಡ ಮುಂದಿನ ವಾರದ ವರೆಗೆ ಬಂದ್ ಇರಲಿದೆ, ಸ್ನೇಹಿತರೆ ರಾಜ್ಯ ಸರ್ಕಾರ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Govt and Corona

Please follow and like us:
error0
http://karnatakatoday.in/wp-content/uploads/2020/03/Govt-and-Corona-1-1024x576.jpghttp://karnatakatoday.in/wp-content/uploads/2020/03/Govt-and-Corona-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಮಂಗಳೂರುಸುದ್ದಿಜಾಲಈಗಿನ ದಿನಗಳಲ್ಲಿ ಪ್ರತಿಯೊಬ್ಬರ ಬಾಯಲ್ಲಿ ಹರಿದಾಡುತ್ತಿರುವ ವಿಷಯ ಏನು ಅಂದರೆ ಅದೂ ಕರೋನ ವೈರಸ್ ಆಗಿದೆ, ಹೌದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಈ ಕರೋನ ವೈರಸ್ ಜನರಲ್ಲಿ ಬಹಳ ಆತಂಕವನ್ನ ಮೂಡಿಸಿದೆ. ಹೌದು ಚೀನಾ ದೇಶದಲ್ಲಿ ಹುಟ್ಟಿ ಈಗ ನಮ್ಮ ದೇಶಕ್ಕೂ ಬಂದಿರುವ ಈ ಕರೋನ ವೈರಸ್ ಇಬ್ಬರ ಪ್ರಾಣವನ್ನ ಕೂಡ ಬಲಿ ತೆಗೆದುಕೊಂಡಿದೆ ಅನ್ನುವುದು ಬಹಳ ಬೇಸರದ ಸಂಗತಿಯಾಗಿದೆ. ಇನ್ನು ಈ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ...Film | Devotional | Cricket | Health | India