People line Govt office

ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಬಡಜನರಿಗೆ ಮತ್ತು ರಾಜ್ಯದ ರೈತರಿಗೆ ಸಿಹಿ ಸುದ್ದಿಯನ್ನ ನೀಡಿದೆ, ರಾಜ್ಯದ ಹಳ್ಳಿಗಳಲ್ಲಿ ಇರುವ ಬಡ ಜನರಿಗೆ ಮತ್ತು ರೈತರಿಗೆ ಯಡಿಯೂರಪ್ಪನವರ ಸರ್ಕಾರವು ಹೊಸ ಯೋಜನೆಯನ್ನ ಜಾರಿಗೆ ತಂದಿದೆ.

ಯಾವುದೇ ಗ್ರಾಮದಲ್ಲಿ ವಾಸವಿರುವ ರೈತರು, ಕೂಲಿ ಕಾರ್ಮಿಕರು ಹಾಗು ಬಡ ಸಾಮಾನ್ಯ ಜನರು ಸಣ್ಣ ಪುಟ್ಟ ಕೆಲಸಗಳುಗೂ ಕೂಡ ತಶೀಲ್ದಾರ ಕಚೇರಿ, ಕಂದಾಯ ಇಲಾಖೆ ಹಾಗು ನಾಡ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಈಗ ನಮ್ಮ ರಾಜ್ಯದಲ್ಲೂ ಉಂಟಾಗಿದೆ. ಗ್ರಾಮದಲ್ಲಿನ ಬಡ ಜನರಿಗೆ ದಿನಗೂಲಿಯನ್ನ ಮಾಡದೆ ತಮ್ಮ ಕುಟುಂಬವನ್ನ ನಡೆಸಿಕೊಂಡು ಹೋಗಲು ಸಾಧ್ಯವಿಲ್ಲ, ದಿನಾಲು ಕೂಲಿ ಕೆಲಸ ಮಾಡುವವರು ತಮ್ಮ ಸಣ್ಣ ಪುಟ್ಟ ಕೆಲಸಗಳಿಗಾಗಿ ದಿನನಿತ್ಯದ ಕೂಲಿ ಕೆಲಸವನ್ನ ಬಿಟ್ಟು ಕಚೇರಿ ಮುಂದೆ ಕುಳಿತುಕೊಳ್ಳಬೇಕು.

People line Govt office

ಇನ್ನು ಈಗ ಇದನ್ನ ಅರಿತ ರಾಜ್ಯ ಸರ್ಕಾರವು ಬಡ ಜನರ ಈ ಕಷ್ಟವನ್ನ ಅರಿತುಕೊಂಡು ಹೊಸ ಯೋಜನೆಯನ್ನ ರೂಪಿಸಿದೆ, ಹೌದು ವಾರದಲ್ಲಿ ಒಂದು ಬಾರಿ ನೇರವಾಗಿ ನಿಮ್ಮ ಹಳ್ಳಿಗೆ ಅಧಿಕಾರಿಗಳು ಭೇಟಿ ನೀಡುವ ಹೊಸ ಯೋಜನೆಯನ್ನ ಜಾರಿಗೆ ತಂದಿದೆ.

ಇನ್ನು ಅವರು ಭೇಟಿ ನೀಡಿದ ಸಮಯದಲ್ಲಿ ನಿಮ್ಮ ಜಮೀನಿನ ಪಹಣಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೀಗೆ ಕಂದಾಯ ಇಲಾಖೆಗೆ ಒಳಪಡುವ ಎಲ್ಲಾ ಸೌಲಭ್ಯಗಳು ಇನ್ನುಮುಂದೆ ಜನಸಾಮಾನ್ಯರ ಮನೆ ಬಾಗಿಲಿಗೆ ಬರಲಿದೆ. ಹಳ್ಳಿಗಳಲ್ಲಿ ಇರುವ ಕೂಲಿ ಕಾರ್ಮಿಕರು, ಜನಸಾಮಾನ್ಯರು ಮತ್ತು ಬಡ ರೈತರು ತಮಗೆ ಯಾವುದೇ ಸಮಸ್ಯೆ ಇದ್ದಲ್ಲಿ ಇನ್ನುಮುಂದೆ ನಿಮ್ಮ ನಿಮ್ಮ ಊರುಗಳಲ್ಲೇ ಬಗೆಹರಿಸಿಕೊಳ್ಳಲು ಅಧಿಕಾರಿಗಳೇ ನಿಮ್ಮ ಊರಿಗೆ ಬರುತ್ತಿದ್ದಾರೆ ಅನ್ನುವುದರ ಬಗ್ಗೆ ರಾಜ್ಯ ಕಂದಾಯ ಸಚಿವ ಆರ್ ಅಶೋಕ್ ಅವರು ಯೋಜನೆಯನ್ನ ರೂಪಿಸುತ್ತಿದ್ದಾರೆ.

People line Govt office

ಇನ್ನು ಗ್ರಾಮಗಳಲ್ಲಿ ಇರುವ ವಿಧವಾ ವೇತನ ಮತ್ತು ಪಿಂಚಣಿ ಸೌಲಭ್ಯಗಳ ಬಗ್ಗೆ ಇರುವ ಅನೇಕ ಸಮಸ್ಯೆಗಳನ್ನ ಜನರು ಮನೆಯಲ್ಲಿಗೆ ಬಗೆಹರಿಸಿಕೊಳ್ಳಲು ಅವಕಾಶವನ್ನ ಕೂಡ ನೀಡಲಾಗಿದೆ.

ರಾಜ್ಯ ಸರ್ಕಾರವು ಜನರ ಮನೆಯ ಬಾಗಿಗೆ ಬಂದು ಸೇವೆಯನ್ನ ಮಾಡಲು ಮುಂದಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ, ಸ್ನೇಹಿತರೆ ಈ ಮಾಹಿತಿಯನ್ನ ಪ್ರತಿಯೊಬ್ಬ ಬಡ ಜನರಿಗೆ ಮತ್ತು ಬಡ ರೈತರಿಗೆ ತಲುಪಿಸಿ ಹಾಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

People line Govt office

Please follow and like us:
error0
http://karnatakatoday.in/wp-content/uploads/2019/09/Line-in-Govt-office-1024x576.jpghttp://karnatakatoday.in/wp-content/uploads/2019/09/Line-in-Govt-office-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಮಂಗಳೂರುಸುದ್ದಿಜಾಲಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಬಡಜನರಿಗೆ ಮತ್ತು ರಾಜ್ಯದ ರೈತರಿಗೆ ಸಿಹಿ ಸುದ್ದಿಯನ್ನ ನೀಡಿದೆ, ರಾಜ್ಯದ ಹಳ್ಳಿಗಳಲ್ಲಿ ಇರುವ ಬಡ ಜನರಿಗೆ ಮತ್ತು ರೈತರಿಗೆ ಯಡಿಯೂರಪ್ಪನವರ ಸರ್ಕಾರವು ಹೊಸ ಯೋಜನೆಯನ್ನ ಜಾರಿಗೆ ತಂದಿದೆ. ಯಾವುದೇ ಗ್ರಾಮದಲ್ಲಿ ವಾಸವಿರುವ ರೈತರು, ಕೂಲಿ ಕಾರ್ಮಿಕರು ಹಾಗು ಬಡ ಸಾಮಾನ್ಯ ಜನರು ಸಣ್ಣ ಪುಟ್ಟ ಕೆಲಸಗಳುಗೂ ಕೂಡ ತಶೀಲ್ದಾರ ಕಚೇರಿ, ಕಂದಾಯ ಇಲಾಖೆ ಹಾಗು ನಾಡ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಈಗ ನಮ್ಮ ರಾಜ್ಯದಲ್ಲೂ...Film | Devotional | Cricket | Health | India