Gowri Ganesha Festival

ಇಂದು ಗೌರಿ ಹಬ್ಬ ಮತ್ತು ನಾಳೆ ಗಣೇಶ ಹಬ್ಬ, ಗೌರಿ ಹಬ್ಬವನ್ನ ಕರ್ನಾಟಕದಲ್ಲಿ ತುಂಬಾ ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ, ಮುತೈದೆಯರು ಇಂದು ತನ್ನ ಪತಿದೇವರಿಗೆ ಹೆಚ್ಚಿನ ಆಯಸ್ಸು ಮತ್ತು ಸಕಲ ಸೌಭಾಗ್ಯ ನೀಡಲಿ ಎಂದು ಗೌರಿಗೆ ಪೂಜೆಯನ್ನ ಮಾಡುತ್ತಾರೆ.

ಸ್ವರ್ಣ ಗೌರಿ, ಇದರ ಹೆಸರೇ ಸೂಚಿಸುವಂತೆ ಸ್ವರ ಅಂದರೆ ಬಂಗಾರದ ಬಣ್ಣದಂತೆ ಹೊಳೆಯುವ ಗೌರಿ ಎಂದರ್ಥ, ಗೌರಿಯ ಮತ್ತೊಂದು ಹೆಸರು ಪಾರ್ವತಿ ದೇವಿ ಅಂದರೆ ಶಿವನ ಹೆಂಡತಿ, ಪಾರ್ವತಿಯ ತಂದೆ ಪರ್ವತ ರಾಜ ಅಂದರೆ ಈಗಿನ ಹಿಮಾಲಯ ಪರ್ವತ.

Gowri Ganesha Festival

ಗೌರಿ ದೇವಿಯು ವರ್ಷಕ್ಕೊಮ್ಮೆ ತವರಿಗೆ ಬಂದು ಪೂಜೆಯನ್ನ ಸ್ವೀಕರಿಸಿ, ಹೆಣ್ಣು ಮಕ್ಕಳಿಂದ ಬಾಗಿನವನ್ನ ಸ್ವೀಕರಿಸಿ ಸಂತೃಪ್ತಳಾಗಿ ಕೈಲಾಸಕ್ಕೆ ಹೋಗುತ್ತಾಳೆ. ಗೌರಿ ದೇವಿಯು ಆದಿಶಕ್ತಿಯ ಮಹಾಸ್ವರೂಪ, ಇಂದು ಮನೆಯನ್ನ ಸ್ವಚ್ಛ ಗೊಳಿಸಿ, ಅರಿಶಿನದ ಗೌರಮ್ಮ ಅಥವಾ ಸ್ವರ್ಣ ಗೌರಮ್ಮನ್ನಾಗಿ ಮಾಡಿ ದೇವಿಯ ವಿಗ್ರಹವನ್ನ ಇಟ್ಟು ಭಕ್ತಿಯಿಂದ ಪೂಜೆಯನ್ನ ಮಾಡಬೇಕು, ಯಾವುದೇ ಕಾರಣಕ್ಕೂ ಅಪಚಾರವನ್ನ ಮಾಡಬಾರದು.

Gowri Ganesha Festival

ಹೀಗೆ ಪೂಜೆ ಮಾಡುವಾಗ ‘ಸರ್ವ ಮಂಗಳ ಮಾಂಗಲ್ಯೇ ಶಿವೆ ಸರ್ವಾರ್ಥ ಸಾಧಿಕೇ ಶರಣ್ಯೇ ತ್ರ್ಯುಯಂಬಕೇ ಗೌರಿ ನಾರಾಯಣೇ ನಮೋಸ್ತುತೇ’ ಎಂದು ಹೇಳಿ ಪೂಜೆಯನ್ನ ಮಾಡಬೇಕು. ಇನ್ನು ಮುತೈದೆಯರು ತಮ್ಮ ಮಡಿಕಟ್ಟುಗಳಿಗೆ 16 ಗಂಟುಗಳಿರುವ ಗೌರಿ ದಾರವನ್ನ ಕಟ್ಟಿಕೊಳ್ಳಬೇಕು, ನಂತರ ಬಾಗಿನವನ್ನ ಅರ್ಪಿಸಬೇಕು.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಮೊದಲಿಗೆ ಪೂಜೆಯನ್ನ ಮಾಡುವುಡ್ ವಿಗ್ನ ವಿನಾಶಕನನ್ನ, ಮನೆ ಮತ್ತು ಮನಸ್ಸನ್ನ ಸ್ವಚ್ಛಗೊಳಿಸಿ ನಮ್ಮ ಆಸೆಯನ್ನ ಕೇಳಿಕೊಳ್ಳುತ್ತಾ ಗಣೇಶನ ಮೂರ್ತಿಯನ್ನ ಇಟ್ಟು ಭಕ್ತಿಯಿಂದ ಪೂಜೆಯನ್ನ ಮಾಡಬೇಕು, ಹೀಗೆ ಮಾಡುವುದರಿಂದ ನೀವು ಅಂದುಕೊಂಡಿದ್ದು ನೆರವೇರುವುದು ಖಚಿತ.

Gowri Ganesha Festival

Please follow and like us:
0
http://karnatakatoday.in/wp-content/uploads/2018/09/gowri-1-1024x576.jpghttp://karnatakatoday.in/wp-content/uploads/2018/09/gowri-1-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಇಂದು ಗೌರಿ ಹಬ್ಬ ಮತ್ತು ನಾಳೆ ಗಣೇಶ ಹಬ್ಬ, ಗೌರಿ ಹಬ್ಬವನ್ನ ಕರ್ನಾಟಕದಲ್ಲಿ ತುಂಬಾ ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ, ಮುತೈದೆಯರು ಇಂದು ತನ್ನ ಪತಿದೇವರಿಗೆ ಹೆಚ್ಚಿನ ಆಯಸ್ಸು ಮತ್ತು ಸಕಲ ಸೌಭಾಗ್ಯ ನೀಡಲಿ ಎಂದು ಗೌರಿಗೆ ಪೂಜೆಯನ್ನ ಮಾಡುತ್ತಾರೆ. ಸ್ವರ್ಣ ಗೌರಿ, ಇದರ ಹೆಸರೇ ಸೂಚಿಸುವಂತೆ ಸ್ವರ ಅಂದರೆ ಬಂಗಾರದ ಬಣ್ಣದಂತೆ ಹೊಳೆಯುವ ಗೌರಿ ಎಂದರ್ಥ, ಗೌರಿಯ ಮತ್ತೊಂದು ಹೆಸರು ಪಾರ್ವತಿ ದೇವಿ ಅಂದರೆ ಶಿವನ ಹೆಂಡತಿ, ಪಾರ್ವತಿಯ ತಂದೆ...Karnataka news