ರಕ್ತ ಚಂದ್ರ ಗ್ರಹಣ ಮುಗಿದ ಕೆಲ ದಿನಗಳ ಅಂತರದಲ್ಲೇ ಮತ್ತೊಂದು ಸೂರ್ಯಗ್ರಹಣ ಇದೆ ತಿಂಗಳ ಹನ್ನೊಂದನೇ ತಾರೀಖಿಗೆ ನಡೆಯಲಿದೆ . ಒಂದು ತಿಂಗಳಲ್ಲಿ ಎರಡು ಗ್ರಹಣವನ್ನು ಈ ಹಿಂದಿನ ಮಾಸದಲ್ಲಿ ಕಂಡುಕೊಂಡಿದ್ದೇವೆ , ಈಗ ಮತ್ತೊಂದು ಸೂರ್ಯಗ್ರಹಣ ಆಗುತ್ತಿರುವುದು ವಿಶೇಷವಾಗಿದೆ. ಆಗಸ್ಟ್  11ನೇ ತಾರೀಕು ಭಾಗಶಃ ಸೂರ್ಯಗ್ರಹಣ ಸಂಭವಿಸಲಿದೆ. ಈ ಗ್ರಹಣವು ಉತ್ತರ ಹಾಗೂ ಪೂರ್ವ ಯುರೋಪ್, ಉತ್ತರ ಅಮೆರಿಕಾದ ಉತ್ತರ ಭಾಗ, ಏಷ್ಯಾದ ಉತ್ತರ ಮತ್ತು ಪಶ್ಚಿಮದ ಕೆಲವು ಭಾಗದಲ್ಲಿ ಮಾತ್ರ ಗೋಚರಿಸಲಿದೆ.

ಇನ್ನು ಗ್ರಹಣ ಸಂಭವಿಸುತ್ತದೆ ಎಂದರೆ ಗ್ರಹಗಳ ಗತಿ ಕೂಡ ಬದಲಾವಣೆ ಇರುತ್ತದೆ ಆದ್ದರಿಂದ ಈ ಬಾರಿ ಗ್ರಹಣದ ಲಾಭವನ್ನು ಯಾವ ರಹಿಗಳು ಪಡೆಯಲಿದ್ದಾರೆ ನೋಡೋಣ ಬನ್ನಿ. ಶ್ರಾವಣ ಮಾಸದಲ್ಲಿ ಗ್ರಹಣ ನಡೆಯುತ್ತಿದೆ ಇದು ಬಹಳ ವಿಶೇಷ ಕರ್ಕಾಟಕ ರಾಶಿಯಲ್ಲಿ ಗ್ರಹಣವಾಗುತ್ತಿದೆ.

ಮೊದಲಿಗೆ ಮೇಷ ರಾಶಿ ಈ ರಾಶಿಯವರಿಗೆ ಸೂರ್ಯಗ್ರಹಣ ಒಳ್ಳೆಯದನ್ನೇ ತರಲಿದೆ, ಜಾತಕದ ಪ್ರಕಾರ ಆರ್ಥಿಕ ಲಾಭವಿದೆ, ಜೀವನದಲ್ಲಿ ಬದಲಾವಣೆಗಳಿವೆ, ಸಮಾಜದಲ್ಲಿ ಗೌರವ ಸಿಗಲಿದೆ. ಇನ್ನು ಕುಂಭ ರಾಶಿಗೆ ಕೂಡ ಗ್ರಹಣದ ಫಲವಿದೆ ಸರ್ಕಾರೀ ಕಾರ್ಯಗಳಲ್ಲಿ ಸಫಲತೆ ಸಿಗಲಿದೆ ನಿಮ್ಮ ಭಾಗ್ಯದ ಬಾಗಿಲು ತೆರೆಯಲಿದೆ , ನಿಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿಲಿದ್ದೀರಿ.

ತುಲಾ ರಾಶಿಯವರಿಗೆ ಸರ್ಕಾರೀ ಕೆಲಸದ ಯೋಗವಿದೆ , ಪ್ರೇಮ ಸಂಬಂಧಗಳು ಖುಷಿನೀಡಲಿವೆ, ಅಲ್ಲದೆ ಹಣಕಾಸಿನ ವಿಚಾರದಲ್ಲಿ ನಿಮಗೆ ಗೆಲುವು ಸಿಗಲಿದೆ. ಮಿಶ್ರ ಫಲ ಪಡೆಯುವ ರಾಶಿಗಳು ಮೀನ, ಮಿಥುನ, ಮಕರ, ವೃಶ್ಚಿಕ. ಭಾರತದಲ್ಲಿ ಈ ಗ್ರಹಣ ಗೋಚರವಾಗಲ್ಲ ಮತ್ತು ಭಾರತೀಯ ಕಾಲಮಾನದಲ್ಲಿ ಮಧ್ಯಾಹ್ನ ೧ ಗಂಟೆಗೆ ಗ್ರಹಣ ಆರಂಭವಾಗಲಿದೆ.

Please follow and like us:
0
http://karnatakatoday.in/wp-content/uploads/2018/08/grahana-1024x576.pnghttp://karnatakatoday.in/wp-content/uploads/2018/08/grahana-150x104.pngKarnataka Today's Newsಅಂಕಣಆರೋಗ್ಯಎಲ್ಲಾ ಸುದ್ದಿಗಳುಜ್ಯೋತಿಷ್ಯರಕ್ತ ಚಂದ್ರ ಗ್ರಹಣ ಮುಗಿದ ಕೆಲ ದಿನಗಳ ಅಂತರದಲ್ಲೇ ಮತ್ತೊಂದು ಸೂರ್ಯಗ್ರಹಣ ಇದೆ ತಿಂಗಳ ಹನ್ನೊಂದನೇ ತಾರೀಖಿಗೆ ನಡೆಯಲಿದೆ . ಒಂದು ತಿಂಗಳಲ್ಲಿ ಎರಡು ಗ್ರಹಣವನ್ನು ಈ ಹಿಂದಿನ ಮಾಸದಲ್ಲಿ ಕಂಡುಕೊಂಡಿದ್ದೇವೆ , ಈಗ ಮತ್ತೊಂದು ಸೂರ್ಯಗ್ರಹಣ ಆಗುತ್ತಿರುವುದು ವಿಶೇಷವಾಗಿದೆ. ಆಗಸ್ಟ್  11ನೇ ತಾರೀಕು ಭಾಗಶಃ ಸೂರ್ಯಗ್ರಹಣ ಸಂಭವಿಸಲಿದೆ. ಈ ಗ್ರಹಣವು ಉತ್ತರ ಹಾಗೂ ಪೂರ್ವ ಯುರೋಪ್, ಉತ್ತರ ಅಮೆರಿಕಾದ ಉತ್ತರ ಭಾಗ, ಏಷ್ಯಾದ ಉತ್ತರ ಮತ್ತು ಪಶ್ಚಿಮದ...Kannada News