Grama Panchayath

ಸ್ನೇಹಿತರೆ ಸರ್ಕಾರ ಒಂದೂ ಹೊಸ ಯೋಜನೆಯನ್ನು ತಂದಿದೆ, ರೈತರಿಗೆ ಹಾಗು ಸ್ವಂತ ಆಸ್ತಿ ಮತ್ತು ಮನೆ ಇದ್ದವರಿಗೆ ಇದು ಒಳ್ಳೆಯ ಯೋಜನೆ ಆಗಿದ್ದು ಇದರಿಂದ ಇನ್ನು ಮುಂದೇ ನೀವು ಸರ್ಕಾರಿ ಕಚೇರಿಗಳಲ್ಲಿ ಘಂಟೆಗಟ್ಟಲೆ ಕಾಯುವ ಅವಶ್ಯ ಕಥೆ ಇರೋದಿಲ್ಲ ಸುಲಭವಾಗಿ ನೀವೇ ನಿಮ್ಮ ಆಸ್ತಿ ವಿವರವನ್ನು ಪಡೆದು ಕೊಳ್ಳಬಹುದು.

ಹಾಗಾದರೆ ಆ ಯೋಜನೆ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರ ಸರ್ಕಾರದಿಂದ ರಾಜ್ಯದಾದ್ಯಂತ ಪ್ರತಿಯೊಂದು ಹಳ್ಳಿಗಳಲ್ಲಿರುವ ಆಸ್ತಿಗಳನ್ನು ಗ್ರಾಮ ಪಂಚಾಯತಿಯಲ್ಲಿ ಡಿಜಿಟಲೀಕರಣಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.

Grama Panchayath

ಇನ್ನು ಇದು ಹಳ್ಳಿಯಲ್ಲಿ ಸ್ವಂತ ಮನೆ, ಜಮೀನು ಇದ್ದವರಿಗೆ ರಾಜ್ಯ ಸರ್ಕಾರದಿಂದ ಬಂದಿರುವ ಸಿಹಿ ಸುದ್ದಿ ಅಂತಾನೆ ಹೆಳವಬಹುದು. ಒಬ್ಬ ವ್ಯಕ್ತಿ ತನ್ನ ಗ್ರಾಮದಲ್ಲಿ ಸ್ವಂತ ಜಮೀನು ಮತ್ತು ಮನೆ ಹೊಂದಿದ್ದು  ಆಸ್ತಿಯು ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಒಳಪಡುತ್ತಿದ್ದರೆ ನಿಮ್ಮ ಎಲ್ಲಾ ಆಸ್ತಿಗಳ ವಿವರವನ್ನು ಡಿಜಿಟಲೀಕರಣ ಗೊಳಿಸಲಾಗುತ್ತಿದೆ.

ಈ ಕಾರಣಕ್ಕಾಗಿ ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳ ಸಂಪೂರ್ಣ ಆಸ್ತಿಗಳ ವಿವರವನ್ನು ಡಿಜಿಟಲೀಕರಣ ಮಾಡುವ ಸಲುವಾಗಿ ಪಂಚತಂತ್ರ ವೆಬ್ ಸೈಟ್ ಹಾಗೂ ಈ ಸ್ವತ್ತು ತಂತ್ರಾಂಶಕ್ಕೆ ಅಳವಡಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ಧರಿಸಿದೆ.

Grama Panchayath

ಇನ್ನು ಮುಂದೆ ಕರ್ನಾಟಕದಾದ್ಯಂತ ಇರುವ ಎಲ್ಲಾ ಗ್ರಾಮ ಪಂಚಾಯಿತಿಗೆ ಒಳಪಡುವ ಎಲ್ಲಾ ಗ್ರಾಮಗಳಲ್ಲಿರುವ ಎಲ್ಲರ ಆಸ್ತಿಗಳ ಸಂಪೂರ್ಣ ವಿವರವನ್ನು ಈ ಸ್ವತ್ತು ಹಾಗೂ ಪಂಚತಂತ್ರ ವೆಬ್ ಸೈಟ್ ನಲ್ಲಿ ಅಳವಡಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೊಸ ನಿಯಮವನ್ನ ಜಾರಿಗೆ ತಂದಿರುತ್ತದೆ.

ಈಗ ಸದ್ಯಕ್ಕೆ ಬೆಂಗಳೂರು ನಗರ ಗ್ರಾಮಾಂತರ ಜಿಲ್ಲೆಗಳಿಗೆ ಹಾಗೂ ತುಮಕೂರು ಜಿಲ್ಲೆಯಲ್ಲಿನ ಎಲ್ಲ ಗ್ರಾಮಗಳ ಆಸ್ತಿಗಳ ವಿವರವನ್ನು ಮ್ಯಾನುಯೆಲ್ ಸಮೀಕ್ಷೆಯ ಮೂಲಕ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.

ಈ ಎರಡು ಜಿಲ್ಲೆಗಳ ಸಮೀಕ್ಷೆಯು ಸಂಪೂರ್ಣಗೊಂಡ ಮೇಲೆ ರಾಜ್ಯದಾದ್ಯಂತ ಎಲ್ಲ ಗ್ರಾಮ ಪಂಚಾಯಿತಿಗಳ ಎಲ್ಲರ ಸಂಪೂರ್ಣ ಆಸ್ತಿಗಳ ವಿವರವನ್ನು ಡಿಜಿಟಲೀಕರಣ ಗೊಳಿಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತಿಳಿಸಿದೆ. ಈ ಯೋಜನೆಯಿಂದ ಜನರಿಗೆ ತುಂಬಾ ಸಹಾಯವಾಗಲಿದೆ ಹಾಗೇ ಊರಿನಲ್ಲಿ ಸ್ವಂತ ಆಸ್ತಿ ಇರುವವರಿಗೆ ತುಂಬ ಉಪಯೋಗವಾಗುತ್ತದೆ, ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಲುಪಿಸಿ.

Grama Panchayath

Please follow and like us:
0
http://karnatakatoday.in/wp-content/uploads/2019/08/Good-news-for-Land-holders-1-1024x576.jpghttp://karnatakatoday.in/wp-content/uploads/2019/08/Good-news-for-Land-holders-1-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಸ್ನೇಹಿತರೆ ಸರ್ಕಾರ ಒಂದೂ ಹೊಸ ಯೋಜನೆಯನ್ನು ತಂದಿದೆ, ರೈತರಿಗೆ ಹಾಗು ಸ್ವಂತ ಆಸ್ತಿ ಮತ್ತು ಮನೆ ಇದ್ದವರಿಗೆ ಇದು ಒಳ್ಳೆಯ ಯೋಜನೆ ಆಗಿದ್ದು ಇದರಿಂದ ಇನ್ನು ಮುಂದೇ ನೀವು ಸರ್ಕಾರಿ ಕಚೇರಿಗಳಲ್ಲಿ ಘಂಟೆಗಟ್ಟಲೆ ಕಾಯುವ ಅವಶ್ಯ ಕಥೆ ಇರೋದಿಲ್ಲ ಸುಲಭವಾಗಿ ನೀವೇ ನಿಮ್ಮ ಆಸ್ತಿ ವಿವರವನ್ನು ಪಡೆದು ಕೊಳ್ಳಬಹುದು. ಹಾಗಾದರೆ ಆ ಯೋಜನೆ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು...Kannada News