ಮನುಷ್ಯ ಯಾವ ಸಮಯದಲ್ಲಿ ಯಾವ ಸ್ಥಿತಿಗೆ ಬರುತ್ತಾನೆ ಅನ್ನುವುದನ್ನ ಊಹೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಗ್ರಹಚಾರ ಬಂದರೆ ಎಷ್ಟೇ ಶ್ರೀಮಂತ ಆದರೂ ಕೂಡ ಭಿಕ್ಷುಕ ಆಗುತ್ತಾನೆ ಒಳ್ಳೆಯ ಸಮಯ ಬಂದರೆ ಭಿಕ್ಷುಕ ಕೂಡ ಶ್ರೀಮಂತನಾಗುತ್ತಾನೆ ಮತ್ತು ಇದಕ್ಕೆ ಉದಾಹರಣೆಗಳು ಕೂಡ ಇದೆ. ಇನ್ನು ಕಷ್ಟಗಳು ಬಂದಾಗ ನಾವು ಕುಗ್ಗದೆ ಅದನ್ನ ಗಟ್ಟಿ ಮನಸ್ಸಿನಿಂದ ನಿಭಾಯಿಸಬೇಕು, ಹೋಟೆಲ್ ನಲ್ಲಿ ಸರ್ವರ್ ಆಗಿ ಕೆಲಸವನ್ನ ಮಾಡುತ್ತಿದ್ದ ಒಬ್ಬ ಖ್ಯಾತ ನಟ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಅನೇಕ ಸಾಧನೆಯನ್ನ ಮಾಡಿದ್ದ ಮತ್ತು ಅನೇಕ ಚಿತ್ರಗಳಲ್ಲಿ ತನ್ನ ಅಭಿನಯದ ಮೂಲಕ ಹಲವು ಅಭಿಮಾನಿಗಳನ್ನ ಗಳಿಸಿದ್ದ ಖ್ಯಾತ ನಟರೊಬ್ಬರು ಹೋಟೆಲ್ ಸರ್ವರ್ ಆಗಿ ಕೆಲಸ ಮಾಡುತ್ತಿರುವಾಗ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಹಾಗಾದರೆ ಆ ನಟ ಯಾರು ಮತ್ತು ಯಾಕೆ ಅವರು ಹೋಟೆಲ್ ಸರ್ವರ್ ಆಗಿ ಕೆಲಸಕ್ಕೆ ಸೇರಿಕೊಂಡರು ಹಾಗೆ ಅವರಿಗೆ ಬಂದ ಕಷ್ಟ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಸ್ನೇಹಿತರೆ ನಟ ಸಂಜಯ್ ಮಿಶ್ರ, ಇವರ ಹೆಸರು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ, ಹೌದು ಈಗ ಖ್ಯಾತ ಬಾಲಿವುಡ್ ನಟ ಮತ್ತು ಈಗ ಸಹನಟನಾಗಿ ನಟನೆಯನ್ನ ಮಾಡುತ್ತಿದ್ದಾರೆ. ಇನ್ನು ವರ್ಷಕ್ಕೆ ಏನಿಲ್ಲ ಅಂದರೂ ಸಂಜಯ್ ಮಿಶ್ರ ಅಭಿನಯ ಮಾಡಿದ 20 ಚಿತ್ರಗಳು ಬಿಡುಗಡೆ ಆಗುತ್ತದೆ, ಆದರೆ ಸಂಜಯ್ ಮಿಶ್ರ ಅವರ ಜೀವನದಲ್ಲಿ ಆದ ಆ ಕಹಿ ಘಟನೆಯ ಬಗ್ಗೆ ನೀವು ತಿಳಿದುಕೊಂಡರೆ ನಿಮ್ಮ ಕಣ್ಣಲ್ಲಿ ಕೂಡ ನೀರು ಬರುತ್ತದೆ. ಅದೂ 2008 ರ ವರ್ಷ ಮತ್ತು ಅಷ್ಟೋತ್ತಿಗಾಗಲೇ ಸಂಜಯ್ ಮಿಶ್ರ ಅವರು ಸುಮಾರು 45 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿದ್ದರು, ಈ ಸಮಯದಲ್ಲಿ ಸಡನ್ ಆಗಿ ತೀವ್ರ ಅನಾರೋಗ್ಯಕ್ಕೆ ತುತ್ತಾದ ಸಂಜಯ್ ಮಿಶ್ರ.

Great actress Sanjay Mishra

ಇನ್ನು ಈ ಸಮಯದಲ್ಲಿ ತನಗೆ ಇರುವ ಎಲ್ಲಾ ಆಸ್ತಿಗಳನ್ನ ಮಾರಾಟ ಮಾಡಿದ ಸಂಜಯ್ ಮಿಶ್ರ ಅವರ ತಂದೆ ಮಗನನ್ನ ಉಳಿಸಿಕೊಂಡರು, ಆದರೆ ಸಂಜಯ್ ಮಿಶ್ರ ಅವರು ಚೇತರಿಸಿಕೊಂಡ 15 ದಿನಗಳಲ್ಲಿ ಸಂಜಯ್ ಮಿಶ್ರ ಅವರ ತಂದೆ ತೀರಿಕೊಂಡರು. ಇನ್ನು ತಂದೆ ತೀರಿಕೊಂಡ ಸಮಯದಲ್ಲಿ ಸಂಜಯ್ ಮಿಶ್ರ ಅವರ ಕೈಯಲ್ಲಿ ನಯಾ ಪೈಸೆ ಕೂಡ ಇರಲಿಲ್ಲ ಮತ್ತು ಇತರರ ಬಳಿ ಹೋಗಿ ಸಹಾಯ ಕೇಳುವುದಕ್ಕೆ ಅವರ ಸ್ವಾಭಿಮಾನ ಒಪ್ಪಲಿಲ್ಲ. ಇನ್ನು ನೇರವಾಗಿ ರಿಷಿಕೇಶ್ ಗೆ ಹೊಸ ಸಂಜಯ್ ಮಿಶ್ರ ಒಂದು ಹೋಟೆಲ್ ನಲ್ಲಿ ಸರ್ವರ್ ಆಗಿ ಕೆಲಸಕ್ಕೆ ಸೇರಿಕೊಂಡರು, ದಿನಕ್ಕೆ 150 ಕೂಲಿ, 200 ಪ್ಲೇಟ್ ಮತ್ತು 300 ಗ್ಲಾಸ್ ತೊಳೆಯುವ ಕೆಲಸ, ಇನ್ನು ಬರುತ್ತಿದ್ದ 150 ರೂಪಾಯಿಯಲ್ಲೇ ಆರಾಮಾಗಿ ಬದುಕುತ್ತಿದ್ದರು ಸಂಜಯ್ ಮಿಶ್ರ.

ಇನ್ನು ಹೋಟೆಲ್ ಗೆ ಬರುತ್ತಿದ್ದ ಜನರು ಸಂಜಯ್ ಮಿಶ್ರ ಅವರನ್ನ ಗುರುತಿಸಿ ಅವರ ಫೋಟೋಗಳನ್ನ ತೆಗೆಯುತ್ತಿದ್ದರು, ಇನ್ನು ಸಂಜಯ್ ಮಿಶ್ರ ಅವರು ಹೋಟೆಲ್ ನಲ್ಲಿ ಕೆಲಸ ಮಾಡುತ್ತಿರುವ ವಿಷಯ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಅವರಿಗೆ ಗೊತ್ತಾಯಿತು ಮತ್ತು ತಮ್ಮ ಆಲ್ ದಿ ಬೆಸ್ಟ್ ಚಿತ್ರದಲ್ಲಿ ನಟನೆ ಮಾಡುವಂತೆ ಮಿಸ್ರಾಗೆ ಒತ್ತಾಯ ಮಾಡಿದರು ರೋಹಿತ್ ಶೆಟ್ಟಿ. ಇನ್ನು ನಿರ್ದೇಶಕರ ಒತ್ತಾಯಕ್ಕೆ ಮಣಿದು ಆ ಚಿತ್ರದಲ್ಲಿ ನಟನೆ ಮಾಡಿದರು ಸಂಜಯ್ ಮಿಶ್ರ ಮತ್ತು ಆ ಚಿತ್ರ ಸೂಪರ್ ಹಿಟ್ ಕೂಡ ಆಯಿತು, ಈ ಚಿತ್ರದ ನಂತರ ಸಂಜಯ್ ಮಿಶ್ರ ಅವರು ಹಿಂತಿರುಗಿ ನೋಡಲೇ ಇಲ್ಲ ಮತ್ತು ಈಗ ವರ್ಷಕ್ಕೆ ಸುಮಾರು 20 ಚಿತ್ರಗಳಲ್ಲಿ ನಟನೆ ಮಾಡುತ್ತಿದ್ದಾರೆ. ಸ್ನೇಹಿತರೆ ಸಂಜಯ್ ಮಿಶ್ರ ಅವರ ಸ್ವಾಭಿನಾಮಕ್ಕೆ ನಾವು ಮೆಚ್ಚಲೇಬೇಕು, ಸ್ನೇಹಿತರೆ ನಟ ಸಂಜಯ್ ಮಿಶ್ರ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Great actress Sanjay Mishra

Please follow and like us:
error0
http://karnatakatoday.in/wp-content/uploads/2019/12/Hotel-server-sanjay-misra-1024x576.jpghttp://karnatakatoday.in/wp-content/uploads/2019/12/Hotel-server-sanjay-misra-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಮನುಷ್ಯ ಯಾವ ಸಮಯದಲ್ಲಿ ಯಾವ ಸ್ಥಿತಿಗೆ ಬರುತ್ತಾನೆ ಅನ್ನುವುದನ್ನ ಊಹೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಗ್ರಹಚಾರ ಬಂದರೆ ಎಷ್ಟೇ ಶ್ರೀಮಂತ ಆದರೂ ಕೂಡ ಭಿಕ್ಷುಕ ಆಗುತ್ತಾನೆ ಒಳ್ಳೆಯ ಸಮಯ ಬಂದರೆ ಭಿಕ್ಷುಕ ಕೂಡ ಶ್ರೀಮಂತನಾಗುತ್ತಾನೆ ಮತ್ತು ಇದಕ್ಕೆ ಉದಾಹರಣೆಗಳು ಕೂಡ ಇದೆ. ಇನ್ನು ಕಷ್ಟಗಳು ಬಂದಾಗ ನಾವು ಕುಗ್ಗದೆ ಅದನ್ನ ಗಟ್ಟಿ ಮನಸ್ಸಿನಿಂದ ನಿಭಾಯಿಸಬೇಕು, ಹೋಟೆಲ್ ನಲ್ಲಿ ಸರ್ವರ್ ಆಗಿ ಕೆಲಸವನ್ನ ಮಾಡುತ್ತಿದ್ದ ಒಬ್ಬ ಖ್ಯಾತ ನಟ ಕ್ಯಾಮೆರಾ...Film | Devotional | Cricket | Health | India