ಸ್ನೇಹಿತರೆ ನಾವು ಹೇಳುವ ಈ ನಾಯಿಯ ಪ್ರಾಮಾಣಿಕತೆ, ಸಾಮ್ಯತೆ ಮತ್ತು ಬಾಂಧ್ಯವವನ್ನ ನೋಡಿದರೆ ಎಂಥವರಿಗಾದರೂ ಕುರುಳು ಚುರುಕ್ ಅನಿಸುತ್ತದೆ. ಸ್ನೇಹಿತರೆ ಇಡೀ ವಿಶ್ವವೇ ತಿರುಗಿ ನೋಡಿದ ಹಾಗೆ ಮಾಡಿದ ಈ ಶ್ವಾನದ ಕಥೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ನವೆಂಬರ್ 1920 ರಲ್ಲಿ ಹುಟ್ಟಿದ ಅಕೀಟ ತಳಿಯ ನಾಯಿ ಈ ಹಚ್ಚಿಕೋ ಆಗಿತ್ತು, 1924 ರಲ್ಲಿ ಟೋಕಿಯೋ ವಿಶ್ವ ವಿದ್ಯಾನಿಲಯದ ಕೃಷಿ ಇಲಾಖೆಯ ಪ್ರಾಧ್ಯಾಪಕರಾಗಿದ್ದ ಹಿಸಬೇರೋ ಯುಯೋನೋ ಅನ್ನುವ ವ್ಯಕ್ತಿ ಈ ನಾಯಿಯನ್ನ ಟೋಕಿಯೋಗೆ ಕರೆತರುತ್ತಾನೆ. ಇನ್ನು ಹಚ್ಚಿಕೋ ಆತನ ಮುದ್ದಿನ ನಾಯಿ ಆಗಿತ್ತು, ಇನ್ನು ಈ ನಾಯಿ ತನ್ನ ಮಾಲೀಕನನ್ನ ಎಷ್ಟು ಹಚ್ಚಿಕೊಂಡಿತ್ತು ಅಂದರೆ ಪ್ರತಿ ದಿನ ಆತ ಕೆಲಸಕ್ಕೆ ಹೋಗುವ ಸಮಯದಲ್ಲಿ ಆತನನ್ನ ಕಳುಹಿಸಿಕೊಡಲು ರೈಲು ನಿಲ್ದಾಣಕ್ಕೆ ಬರುತ್ತಿತ್ತು ಮತ್ತು ಆತ ವಾಪಾಸ್ ಬರುವ ತನಕ ಅಲ್ಲೇ ಕಾದು ಕುಳಿತಿರುತ್ತಿತ್ತು.

ಮೇ 1925 ರ ತನಕ ಈ ದೈನಂದಿನ ನಿತ್ಯಕ್ರಮ ಮುಂದುವರೆದಿತ್ತು, ಆದರೆ ಮಾಲೀಕ ಒಂದು ಸಂಜೆ ಹಿಂತಿರುಗುದಿಲ್ಲ, ಹೌದು ಸ್ನೇಹಿತರೆ 1925 ರ ಮೇ ತಿಂಗಳಲ್ಲಿ ಒಂದು ದಿನ ವಿಶ್ವ ವಿದ್ಯಾನಿಲಯದಲ್ಲಿ ಹಚ್ಚಿಕೋ ನ ಒಡೆಯ ಹಿಸಬೇರೋ ಯುಯೋನೋ ಗೆ ಪಾರ್ಶ್ವವಾಯು ತುತ್ತಾಗಿ ಸ್ಥಳದಲ್ಲಿ ಸತ್ತು ಹೋಗುತ್ತಾರೆ. ಇನ್ನು ಹಚ್ಚಿಕೋ ತನ್ನ ಒಡೆಯ ಸಂಜೆ ಬರುತ್ತಾನೆ ಎಂದು ಆ ರೈಲು ನಿಲ್ದಾಣದಲ್ಲಿ ಕಾದು ಕುಳಿತಿತ್ತು, ಇನ್ನು ತನ್ನ ಒಡೆಯನನ್ನ ಭಾರಿ ಪ್ರೀತಿ ಮಾಡುತ್ತಿದ್ದ ಹಚ್ಚಿಕೋ ಗೆ ಈ ವಿಷಯ ಅರ್ಥ ಆಗಲಿಲ್ಲ. ಇನ್ನು ಕೆಲವು ಸಮಯದಲ್ಲಿ ಆ ನಾಯಿಯನ್ನ ಬೇರೊಬ್ಬ ವ್ಯಕ್ತಿ ತೆಗೆದುಕೊಳ್ಳುತ್ತಾನೆ, ಆದರೆ ಹಚ್ಚಿಕೋ ಆತನಿಂದ ತಪ್ಪಿಸಿಕೊಂಡು ತನ್ನ ಹಳೆಯ ಮನೆಗೆ ವಾಪಾಸ್ ಬರುತ್ತದೆ. ಇನ್ನು ಕೆಲವು ಸಮಯದ ನಂತರ ತನ್ನ ಮಾಲೀಕ ಇನ್ನುಮುಂದೆ ಮನೆಗೆ ವಾಪಾಸ್ ಬರುವುದಿಲ್ಲ ಎಂದು ತಿಳಿದ ಆ ಶ್ವಾನ ತನ್ನ ಒಡೆಯನನ್ನ ನೋಡಲು ರೈಲು ನಿಲ್ದಾಣಕ್ಕೆ ಹೋಗುತ್ತದೆ.

Great God Hachiko

ಇನ್ನು ಪ್ರತಿ ಭಾರಿ ತನ್ನ ಒಡೆಯ ಬರದಿದ್ದನ್ನ ನೋಡಿ ವಾಪಾಸ್ ಬರುತ್ತಿದ್ದ ಹಚ್ಚಿಕೋ ನನ್ನ ನೋಡಿದ ಜನರು ಕಣ್ಣೀರು ಹಾಕುತ್ತಿದ್ದರು ಮತ್ತು ಪ್ರತಿ ದಿನ ತನ್ನ ಮಾಲೀಕ ಬರುತ್ತಾನೆ ಎಂದು ರೈಲು ನಿಲ್ದಾಣಕ್ಕೆ ಹೋಗುತ್ತಿದ್ದು ಹಚ್ಚಿಕೋ. ಇನ್ನು ಕೊನೆಗೆ ರೈಲು ನಿಲ್ದಾಣ ಹಚ್ಚಿಕೋನ ಶಾಶ್ವತವಾದ ಜಾಗ ಆಯಿತು ಮತ್ತು ಅದೂ ಅಲ್ಲಿದ್ದ ಪ್ರಯಾಣಿಕರ ಗಮನವನ್ನ ಸೆಳೆಯಿತು, ಇನ್ನು ಆ ರೈಲು ನಿಲ್ದಾಣಕ್ಕೆ ಪ್ರತಿ ದಿನ ಬರುತ್ತಿದ್ದ ಕೆಲವು ಹಚ್ಚಿಕೋ ಮತ್ತು ಅದರ ಮಾಲೀಕನನ್ನ ನೋಡಿದ್ದರು ಮತ್ತು ಹಚ್ಚಿಕೋ ತನ್ನ ಒಡೆಯನಿಗಾಗಿ ಪ್ರತಿ ದಿನ ಈ ರೈಲು ನಿಲ್ದಾಣಕ್ಕೆ ಬರುತ್ತದೆ ಎಂದು ಅವರಿಗೆ ತಿಳಿದಾಗ ಅವರು ಹಚ್ಚಿಕೊನನ್ನ ಅಪ್ಪಿಕೊಂಡು ಕಣ್ಣೀರು ಹಾಕಿದರು. ಇನ್ನು ಹಚ್ಚಿಕೋ ದಿನಾಲೂ ಇಲ್ಲಿಗೆ ಬರುತ್ತದೆ ಎಂದು ತಿಳಿದ ಅಲ್ಲಿನ ಖಾಯಂ ಪ್ರಯಾಣಿಕರು ಹಚ್ಚಿಕೊಗೆ ತಿನ್ನಲು ಆಹಾರವನ್ನ ತರುತ್ತಿದ್ದರು ಮತ್ತು ಇದು ಹತ್ತು ವರ್ಷಗಳ ತನಕ ಮುಂದುವರೆಯುತ್ತದೆ, ಆದರೆ ಹಚ್ಚಿಕೋ ಮಾತ್ರ ಒಂದು ದಿನ ಕೂಡ ತಪ್ಪಿಸದೇ ತನ್ನ ಒಡೆಯ ಬರುತ್ತಿದ್ದ ಸಮಯಕ್ಕೆ ರೈಲು ನಿಲ್ದಾಣಕ್ಕೆ ನಿಖರವಾಗಿ ಬರುತ್ತಿತ್ತು.

ಇನ್ನು ಹಚ್ಚಿಕೋ ಶ್ವಾನದ ಸ್ವಾಮಿನಿಷ್ಠೆಯನ್ನ ಮೆಚ್ಚಿ 1934 ರಲ್ಲಿ ಹಚ್ಚಿಕೋ ಸ್ವಾನದ ಕಂಚಿನ ಪ್ರತಿಮೆಯನ್ನ ಆ ರೈಲು ನಿಲ್ದಾಣದ ಮುಂದೆ ಭವ್ಯ ಸಮಾರಂಭದಲ್ಲಿ ಅನಾವರಣ ಮಾಡಲಾಯಿತು, ಇನ್ನು ಹಚ್ಚಿಕೋ ಮಾರ್ಚ್ 8 1935 ರಂದು ಆ ರೈಲು ನಿಲ್ದಾಣದ ಬೀದಿಯಲ್ಲಿ ಸತ್ತು ಹೋಯಿತು ಮತ್ತು ಅದಕ್ಕೆ ಆಗ 12 ವರ್ಷ ವಯಸಾಗಿತ್ತು. ತನ್ನ ಒಡೆಯನಿಗಾಗಿ ಹತ್ತು ವರ್ಷ ಕಾದು ಕುಳಿತ ಹಚ್ಚಿಕೋ ಬಾರದ ಲೋಕಕ್ಕೆ ಹೋಯಿತು, ಹಚ್ಚಿಕೋ ಸಾವನ್ನಪ್ಪಿದಾಗ ಅಲ್ಲಿನ ಜನರು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದರು ಮತ್ತು ಅದರ ಅಂತ್ಯ ಸಂಸ್ಕಾರಕ್ಕೆ ಲಕ್ಷಕ್ಕೂ ಹೆಚ್ಚಿನ ಜನರು ಭಾಗವಹಿಸಿದ್ದರು. ಇನ್ನು ಹಚ್ಚಿಕೋನ ಕಥೆಯನ್ನ ಆದರಿಸಿ ಹಚ್ಚಿಕೋ ದಿ ಡಾಗ್ ಅನ್ನುವ ಚಿತ್ರವನ್ನ ಕೂಡ ನಿರ್ಮಾಣ ಮಾಡಲಾಗಿತ್ತು, ಸ್ನೇಹಿತರೆ ಹಚ್ಚಿಕೋ ಬಗ್ಗೆ ನಿಮ್ಮ ಎರಡು ಅಭಿಪ್ರಾಯವನ್ನ ನಮಗೆ ದಯವಿಟ್ಟು ತಿಳಿಸಿ.

Great God Hachiko

Please follow and like us:
error0
http://karnatakatoday.in/wp-content/uploads/2020/01/Great-God-Hachiko-1-1024x576.jpghttp://karnatakatoday.in/wp-content/uploads/2020/01/Great-God-Hachiko-1-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಮಂಗಳೂರುಸುದ್ದಿಜಾಲಸ್ನೇಹಿತರೆ ನಾವು ಹೇಳುವ ಈ ನಾಯಿಯ ಪ್ರಾಮಾಣಿಕತೆ, ಸಾಮ್ಯತೆ ಮತ್ತು ಬಾಂಧ್ಯವವನ್ನ ನೋಡಿದರೆ ಎಂಥವರಿಗಾದರೂ ಕುರುಳು ಚುರುಕ್ ಅನಿಸುತ್ತದೆ. ಸ್ನೇಹಿತರೆ ಇಡೀ ವಿಶ್ವವೇ ತಿರುಗಿ ನೋಡಿದ ಹಾಗೆ ಮಾಡಿದ ಈ ಶ್ವಾನದ ಕಥೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ನವೆಂಬರ್ 1920 ರಲ್ಲಿ ಹುಟ್ಟಿದ ಅಕೀಟ ತಳಿಯ...Film | Devotional | Cricket | Health | India