ಜೀವನದಲ್ಲಿ ಆಗುವ ಕೆಲವು ತಿರುವುಗಳನ್ನ ಯಾರಿಂದಲೂ ಊಹೆ ಮಾಡಲು ಸಾಧ್ಯವಿರುವುದಿಲ್ಲ, ಜೀವನದಲ್ಲಿ ಕಷ್ಟಗಳು ಬಂತು ಅಂದರೆ ಸಾಲಾಗಿ ಬರುತ್ತಲೇ ಇರುತ್ತದೆ ಮತ್ತು ಆ ಕಷ್ಟಗಳಲ್ಲಿ ತಡೆದುಕೊಳ್ಳಲಾಗದೆ ಜೀವವನ್ನೇ ಕಳೆದುಕೊಳ್ಳುತ್ತಾರೆ ಕೆಲವರು. ಇನ್ನು ಕಷ್ಟಗಳು ಕೇವಲ ಬಡವರಿಗೆ ಮಾತ್ರ ಬರುವುದಿಲ್ಲ ಶ್ರೀಮಂತರಿಗೂ ಬರುತ್ತದೆ ಮತ್ತು ಕಷ್ಟಕ್ಕೆ ಬಡವ ಶ್ರೀಮಂತ ಅನ್ನುವ ಬೇಧ ಭಾವವಿಲ್ಲ, ಅರಮನೆಯಲ್ಲಿ ಇರುವವರು ಬೀದಿಗೆ ಬಂದ ಅದೆಷ್ಟೋ ಉದಾಹರಣೆಗಳು ಇವೆ ಪ್ರಪಂಚದಲ್ಲಿ. ಸ್ನೇಹಿತರೆ ಈ ಸುಂದರ ನಟಿ ಜೀವನದಲ್ಲಿ ಅನುಭವಿಸಿದ ಕಷ್ಟಗಳು ಶತ್ರುವಿಗೂ ಬೇಡ ಅನಿಸುತ್ತದೆ, ಶ್ರೀರಾಮಚಂದ್ರ, ಗಡಿಬಿಡಿ ಅಳಿಯ ಹಾಗು ಲಾಲಿ ಚಿತ್ರಗಳನ್ನ ಸೇರಿ ಹಲವಾರು ಕನ್ನಡ ಚಿತ್ರಗಳಲ್ಲಿ ನಟನೆ ಮಾಡಿದ ನಟಿ ಮೋಹಿನಿ ಕಥೆಯನ್ನ ಕೇಳಿದರೆ ನಿಮ್ಮ ಕಣ್ಣಲ್ಲಿ ಕೂಡ ನೀರು ಬರುತ್ತದೆ. .

ಹಾಗಾದರೆ ಈಗ ನಟಿ ಮೋಹಿನಿ ಎಲ್ಲಿದ್ದಾರೆ ಮತ್ತು ಅವರು ಯಾಕೆ ಚಿತ್ರರಂಗವನ್ನ ತೊರೆದರು ಮತ್ತು ಅವರ ಜೀವನದಲ್ಲಿ ಬಂದ ಕಷ್ಟಗಳೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಟಿ ಮೋಹಿನಿ ಬಗ್ಗೆ ನಿಮ್ಮ ಅನಿಸಕೆಯನ್ನ ನಮಗೆ ತಿಳಿಸಿ. ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ನಟಿ ಮೋಹಿನಿ ತನ್ನ ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಕಾಲಿಟ್ಟು ಕೆಲವೇ ವರ್ಷಗಳಲ್ಲಿ ಸುಮಾರು 80 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಚಿತ್ರರಂಗದಲ್ಲಿ ದೊಡ್ಡ ದಾಖಲೆಯನ್ನ ಮಾಡಿದರು. ಇನ್ನು 1994 ಅಂದರೆ ತನ್ನ 24 ನೇ ವಯಸ್ಸಿನಲ್ಲಿ ಮದುವೆಯಾದ ನಟಿ ಮೋಹಿನಿ ತನ್ನ ಗಂಡನ ಜೊತೆ ಅಮೇರಿಕಾಗೆ ತೆರಳಿ ಅಲ್ಲೇ ನೆಲೆಸಿದರು.

Great Kannada actress mohini

ಇನ್ನು ನಟಿ ಮೋಹಿನಿ ಸಂಸಾರ ಸುಗಮವಾಗಿ ಸಾಗುತ್ತಿತ್ತು ಮತ್ತು ಇದರ ನಡುವೆ ತನ್ನ ಮೊದಲ ಮಗುವಿಗೆ ಜನ್ಮ ನೀಡಿದರು ನಟಿ ಮೋಹಿನಿ ಮತ್ತು ಅದೇ ಸಮಯದಲ್ಲಿ ತೀವ್ರವಾದ ಬೆನ್ನು ನೋವಿನ ಸಮಸ್ಯೆಗೆ ತುತ್ತಾದರು ನಟಿ ಮೋಹಿನಿ. ಇನ್ನು ನಟಿ ಮೋಹಿನಿ ಅವರಿಗೆ ಬೆನ್ನು ನೋವು ಎಷ್ಟರ ಮಟ್ಟಿಗೆ ಇತ್ತು ಅಂದರೆ ಅವರಿಗೆ ಎದ್ದು ತಿರುಗಾಡಲು ಕೂಡ ಸಾಧ್ಯವಾಗುತ್ತಿರಲಿಲ್ಲ, ಇನ್ನು ನಟಿ ಮೋಹಿನಿ ಪರಿಸ್ಥಿತಿ ಕಂಡ ಆಕೆಯ ಗಂಡನ ಪೋಷಕರು ಇಂತಹ ವೀಕ್ ಹುಡುಗಿ ನಮಗೆ ಬೇಡ ಮತ್ತು ವಿಚ್ಛೇದನ ಕೊಟ್ಟು ಬೇರೆ ಮದುವೆಯಾಗು ಎಂದು ಮೋಹಿನಿ ಗಂಡನಿಗೆ ಒತ್ತಾಯ ಮಾಡಿದರು ಅವರ ಮನೆಯವರು. ಇನ್ನು ಮೋಹಿನಿ ಗಂಡನಿಗೆ ಎರಡನೆಯ ಮದುವೆಯನ್ನ ಮಾಡಲು ಹುಡುಗಿಯನ್ನ ನೋಡಲು ಕೂಡ ಶುರು ಮಾಡಿದರಂತೆ, ಇನ್ನು ಇದೆ ಸಮಯದಲ್ಲಿ ಎರಡನೆಯ ಮಗುವಿಗೆ ಗರ್ಭಿಣಿ ಆದರೂ ನಟಿ ಮೋಹಿನಿ, ಎಷ್ಟೇ ಆಸ್ಪತ್ರೆಗೆ ತೋರಿಸಿದರು ಕೂಡ ಬೆನ್ನು ನೋವಿನ ಸಮಸ್ಯೆ ಮಾತ್ರ ನಿವಾರಣೆ ಆಗಲಿಲ್ಲ.

ಇನ್ನು ಬೆನ್ನು ನೋವಿನಿಂದ ನರಕವನ್ನ ಅನುಭವಿಸಿದ ನಟಿ ಮೋಹಿನಿ ಕೊನೆಗೆ ಧ್ಯಾನದ ಕಡೆ ವಾಲಿದರು ಮತ್ತು ಆಕೆ ಮಾಡಿದ ಧ್ಯಾನದಿಂದ ಬೆನ್ನು ನೋವು ಕೂಡ ಕಡಿಮೆಯಾಯಿತು. ಇನ್ನು ಕೆಲವು ಸಮಯದ ನಂತರ ಕ್ರೈಸ್ತ ಧರ್ಮದ ಬಗ್ಗೆ ಪ್ರೇರಿತರಾದ ನಟಿ ಮೋಹಿನಿ 2006 ರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಆದರೂ, ಇನ್ನು ಚರ್ಚ್ ನಲ್ಲಿ ಅಸಾಯಕ ಹೆಣ್ಣು ಮಕ್ಕಳಿಗೆ ಕೌಂಸಲಿಂಗ್ ಮಾಡುವ ಕೆಲಸವನ್ನ ಮಾಡುತ್ತಿದ್ದಾರೆ ನಟಿ ಮೋಹಿನಿ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಹೆಣ್ಣು ಮಕ್ಕಳಿಗೆ ನಟಿ ಮೋಹಿನಿ ಅವರು ಆಶಾಕಿರಣರಾಗಿದ್ದು ಧ್ಯಾನದಲ್ಲಿ ಉತ್ತಮವಾದ ಜೀವನವನ್ನ ಕಂಡುಕೊಂಡಿದ್ದಾರೆ ನಟಿ ಮೋಹಿನಿ, ಸ್ನೇಹಿತರೆ ಕೈಜಾರಿ ಹೋಗಿದ್ದ ಜೀವನವನ್ನ ಹತೋಟಿಗೆ ತಂದುಕೊಂಡ ನಟಿ ಮೋಹಿನಿ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Great Kannada actress mohini

Please follow and like us:
error0
http://karnatakatoday.in/wp-content/uploads/2019/11/Great-Kannada-actress-mohini-1024x576.jpghttp://karnatakatoday.in/wp-content/uploads/2019/11/Great-Kannada-actress-mohini-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಜೀವನದಲ್ಲಿ ಆಗುವ ಕೆಲವು ತಿರುವುಗಳನ್ನ ಯಾರಿಂದಲೂ ಊಹೆ ಮಾಡಲು ಸಾಧ್ಯವಿರುವುದಿಲ್ಲ, ಜೀವನದಲ್ಲಿ ಕಷ್ಟಗಳು ಬಂತು ಅಂದರೆ ಸಾಲಾಗಿ ಬರುತ್ತಲೇ ಇರುತ್ತದೆ ಮತ್ತು ಆ ಕಷ್ಟಗಳಲ್ಲಿ ತಡೆದುಕೊಳ್ಳಲಾಗದೆ ಜೀವವನ್ನೇ ಕಳೆದುಕೊಳ್ಳುತ್ತಾರೆ ಕೆಲವರು. ಇನ್ನು ಕಷ್ಟಗಳು ಕೇವಲ ಬಡವರಿಗೆ ಮಾತ್ರ ಬರುವುದಿಲ್ಲ ಶ್ರೀಮಂತರಿಗೂ ಬರುತ್ತದೆ ಮತ್ತು ಕಷ್ಟಕ್ಕೆ ಬಡವ ಶ್ರೀಮಂತ ಅನ್ನುವ ಬೇಧ ಭಾವವಿಲ್ಲ, ಅರಮನೆಯಲ್ಲಿ ಇರುವವರು ಬೀದಿಗೆ ಬಂದ ಅದೆಷ್ಟೋ ಉದಾಹರಣೆಗಳು ಇವೆ ಪ್ರಪಂಚದಲ್ಲಿ. ಸ್ನೇಹಿತರೆ ಈ ಸುಂದರ ನಟಿ...Film | Devotional | Cricket | Health | India