ಒಂದು ಚಿತ್ರಕ್ಕೆ ಒಬ್ಬ ನಟ ಮತ್ತು ಒಬ್ಬ ನಟಿ ಎಷ್ಟು ಸಂಭಾವನೆಯನ್ನ ಪಡೆಯುತ್ತಾರೆ ಅನ್ನುವುದು ಕೆಲವರಿಗೆ ತಿಳಿದಿರುತ್ತದೆ, ಹೌದು ಒಂದು ಚಿತ್ರದಲ್ಲಿ ನಟನೆಯನ್ನ ಮಾಡುವ ಖ್ಯಾತ ನಟ ಮತ್ತು ನಟಿಯರು ಒಂದು ಚಿತ್ರಕ್ಕೆ ಲಕ್ಷಗಟ್ಟಲೆ ಸಂಭಾವನೆಯನ್ನ ಪಡೆಯುತ್ತಾರೆ. ಇನ್ನು ಒಂದು ಚಿತ್ರವನ್ನ ಮಾಡಬೇಕು ಅಂದರೆ ಕೇವಲ ನಟ ಮತ್ತು ನಟಿಯರಿಗೆ ಮಾತ್ರವಲ್ಲದೆ ಆ ಚಿತ್ರದ ಹಾಡುಗಳನ್ನ ಹಾಡುವ ಗಾಯಕರಿಗೂ ಕೂಡ ದೊಡ್ಡ ಮೊತ್ತದ ಸಂಭಾವನೆಯನ್ನ ಕೊಡಲಾಗುತ್ತದೆ, ಇನ್ನು ಕೆಲವರು ಕಡಿಮೆ ಸಂಭಾವನೆಯನ್ನ ಪಡೆದು ಹೆಚ್ಚು ಹಾಡುಗಳನ್ನ ಹಾಡಿದರೆ ಇನ್ನು ಕೆಲವರು ಹೆಚ್ಚು ಸಂಭಾವನೆಯನ್ನ ಪಡೆದು ಕಡಿಮೆ ಹಾಡುಗಳನ್ನ ಹಾಡುತ್ತಾರೆ. ಇನ್ನು ನಮ್ಮ ಕನ್ನಡ ಚಿತ್ರರಂಗದಲ್ಲಿ ಅನೇಕ ಹೆಮ್ಮಯ ಗಾಯಕರು ಇದ್ದು ಅವರು ಒಂದು ಹಾಡನ್ನ ಹಾಡಲು ಎಷ್ಟು ಸಂಭಾವನೆಯನ್ನ ಪಡೆಯುತ್ತಾರೆ ಎಂದು ತಿಳಿದರೆ ನೀವು ಕೂಡ ಒಮ್ಮೆ ಶಾಕ್ ಆಗುತ್ತೀರಿ.

ಹಾಗಾದರೆ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಸಂಭಾವನೆಯನ್ನ ಪಡೆಯುತ್ತಿರುವ ಗಾಯಕರು ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಬೇಡಿಕೆಯನ್ನ ಹೊಂದಿರುವ ಗಾಯಕ ಅಂದರೆ ಅದೂ ವಿಜಯ್ ಪ್ರಕಾಶ್ ಅವರು ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಈ ಗಾಯಕ ಕನ್ನಡ ನಟರ ನೆಚ್ಚಿನ ಗಾಯಕ ಕೂಡ ಹೌದು. ವಿಜಯ್ ಪ್ರಕಾಶ್ ಅವರು ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ಹೆಚ್ಚು ಹಾಡುಗಳನ್ನ ಹಾಡಿದ್ದಾರೆ, ಇನ್ನು ವಿಜಯ್ ಪ್ರಕಾಶ್ ಅವರು ಒಂದು ಹಾಡಿಗೆ ಸುಮಾರು ಒಂದು ಲಕ್ಷ ರೂಪಾಯಿ ಸಂಭಾವನೆಯನ್ನ ಪಡೆಯುತ್ತಾರೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ.

Great Kannada singers

ಇನ್ನು ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಅವರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹಾಡುಗಳನ್ನ ಹಾಡದೆ ಇದ್ದರೂ ಕೂಡ ಅವರ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ, ಇನ್ನು ರಾಜೇಶ್ ಕೃಷ್ಣನ್ ಅವರು ಕೂಡ ಒಂದು ಹಾಡಿಗೆ ಸುಮಾರು ಒಂದು ಲಕ್ಷದ ತನಕ ಸಂಭಾವನೆಯನ್ನ ಪಡೆಯುತ್ತಾರೆ. ಇನ್ನು ವಿಜಯ್ ಪ್ರಕಾಶ್ ಅವರ ನಂತರ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ಬೇಡಿಕೆಯಲ್ಲಿ ಇರುವ ಗಾಯಕ ಅಂದರೆ ಅದೂ ಸಂಜಿತ್ ಹೆಗ್ಡೆ ಅವರು, ಹೌದು ಸಂಜಿತ್ ಹೆಗ್ಡೆ ಅವರು 2018 ರಲ್ಲಿ 30 ಕ್ಕೂ ಹೆಚ್ಚು ಹಾಡುಗಳನ್ನ ಹಾಡಿದ್ದಾರೆ ಮತ್ತು 2019 ರಲ್ಲಿ 40 ಹೆಚ್ಚು ಹಾಡುಗಳನ್ನ ಹಾಡಿದ್ದಾರೆ. ಸಂಜಿತ್ ಹೆಗ್ಡೆ ಅವರು ಸಂಭಾವನೆಯ ವಿಷಯದಲ್ಲಿ ಕಡಿಮೆ ಇದ್ದರೂ ಕೂಡ ಬೇಡಿಕೆ ವಿಚಾರದಲ್ಲಿ ಬಹಳ ಮುಂದೆ ಇದ್ದಾರೆ, ಇನ್ನು ಸಂಜಿತ್ ಹೆಗ್ಡೆ ಅವರು ಒಂದು ಹಾಡಿಗೆ ಸುಮಾರು 30 ಸಾವಿರ ರೂಪಾಯಿ ಸಂಭಾವನೆಯನ್ನ ಪಡೆಯುತ್ತಾರೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ.

ಇನ್ನು ದರ್ಶನ್ ಅವರ ಬಹುತೇಕ ಸಿನಿಮಾಗಳಲ್ಲಿ ಹಾಡುವ ಗಾಯಕ ಅಂದರೆ ಅದೂ ಹೇಮಂತ್ ಅವರು, ಇನ್ನು ಹೇಮಂತ್ ಅವರು ವರ್ಷದಲ್ಲಿ ಹೆಚ್ಚಿನ ಹಾಡುಗಳನ್ನ ಹಾಡದೆ ಇದ್ದರೂ ಕೂಡ ಒಂದು ಹಾಡಿಕೆ ಸುಮಾರು 30 ಸಾವಿರ ರೂಪಾಯಿ ಸಂಭಾವನೆಯನ್ನ ಪಡೆಯುತ್ತಾರೆ. ಇನ್ನು ಅನುರಾಧ ಭಟ್ ಅವರನ್ನ ಕನ್ನಡ ಚಿತ್ರರಂಗದಲ್ಲಿ ಶ್ರೇಯ ಘೋಷಾಲ್ ಎಂದು ಕರೆಯಲಾಗುತ್ತದೆ, ಕನ್ನಡ ಚಿತ್ರರಂಗದಲ್ಲಿ ಬಹಳ ಬೇಡಿಕೆ ಗಾಯಕಿ ಅಂದರೆ ಅದೂ ಅನುರಾಧ ಭಟ್ ಅವರು, ಗಾಯಕಿಯರ ಪೈಕಿಯಲ್ಲಿ ಹೆಚ್ಚು ಸಂಭಾವನೆಯನ್ನ ಪಡೆಯುವ ಅನುರಾಧ ಭಟ್ ಅವರು ಒಂದು ಹಾಡಿಗೆ 35 ಸಾವಿರ ಸಂಭಾವನೆಯನ್ನ ಪಡೆಯುತ್ತಾರೆ. ಇನ್ನು ಕನ್ನಡದ ಇನ್ನೋರ್ವ ಗಾಯಕಿ ಶ್ವೇತ ಮಲ್ನಾಡ್ ಅವರು ಕೂಡ ಕನ್ನಡ ಚಿತ್ರರಂಗದ ಹೆಮ್ಮೆಯ ಗಾಯಕಿ, ಇವರು ಒಂದು ಹಾಡಿಗೆ ಸುಮಾರು 25 ಸಾವಿರ ರೂಪಾಯಿ ಸಂಭಾವನೆಯನ್ನ ಪಡೆಯುತ್ತಾರೆ, ಸ್ನೇಹಿತರೆ ನಮ್ಮ ಕನ್ನಡ ಚಿತ್ರರಂಗದ ಗಾಯಕರಲ್ಲಿ ನಿಮಗೆ ಇಷ್ಟವಾದ ಗಾಯಕ ಮತ್ತು ಗಾಯಕಿ ಯಾರು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Great Kannada singers

Please follow and like us:
error0
http://karnatakatoday.in/wp-content/uploads/2020/02/kannada-Great-Singers-Salary-1024x576.jpghttp://karnatakatoday.in/wp-content/uploads/2020/02/kannada-Great-Singers-Salary-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಒಂದು ಚಿತ್ರಕ್ಕೆ ಒಬ್ಬ ನಟ ಮತ್ತು ಒಬ್ಬ ನಟಿ ಎಷ್ಟು ಸಂಭಾವನೆಯನ್ನ ಪಡೆಯುತ್ತಾರೆ ಅನ್ನುವುದು ಕೆಲವರಿಗೆ ತಿಳಿದಿರುತ್ತದೆ, ಹೌದು ಒಂದು ಚಿತ್ರದಲ್ಲಿ ನಟನೆಯನ್ನ ಮಾಡುವ ಖ್ಯಾತ ನಟ ಮತ್ತು ನಟಿಯರು ಒಂದು ಚಿತ್ರಕ್ಕೆ ಲಕ್ಷಗಟ್ಟಲೆ ಸಂಭಾವನೆಯನ್ನ ಪಡೆಯುತ್ತಾರೆ. ಇನ್ನು ಒಂದು ಚಿತ್ರವನ್ನ ಮಾಡಬೇಕು ಅಂದರೆ ಕೇವಲ ನಟ ಮತ್ತು ನಟಿಯರಿಗೆ ಮಾತ್ರವಲ್ಲದೆ ಆ ಚಿತ್ರದ ಹಾಡುಗಳನ್ನ ಹಾಡುವ ಗಾಯಕರಿಗೂ ಕೂಡ ದೊಡ್ಡ ಮೊತ್ತದ ಸಂಭಾವನೆಯನ್ನ ಕೊಡಲಾಗುತ್ತದೆ, ಇನ್ನು ಕೆಲವರು...Film | Devotional | Cricket | Health | India