ಜೀವನವನ್ನ ನಾವು ಸರಿಯಾಗಿ ಅರ್ಥ ಮಾಡಿಕೊಂಡರೆ ಜೀವನ ಅನ್ನುವುದು ಒಂದು ಕೆಜಿ ಹತ್ತಿಯ ಭಾರ ಎಂದು ಹೇಳಿದರೆ ತಪ್ಪಾಗಲ್ಲ ಮತ್ತು ಜೀವನವನ್ನ ತುಂಬಾ ಗಾಢವಾಗಿ ತೆಗೆದುಕೊಂಡರೆ ಅದೂ ಬೆಟ್ಟದಷ್ಟು ಭಾರ, ಇರುವುದನ್ನ ಒಪ್ಪಿಕೊಂಡ ಬರುವುದನ್ನ ಸ್ವೀಕರಿಸಿ ಮುಂದೆ ನಡೆದರೆ ಮಾನವನ ಪ್ರತಿ ದಿನ ಬಹಳ ಸುಂದರವಾಗಿರುತ್ತದೆ ಅನ್ನಬಹುದು ಮತ್ತು ಇಲ್ಲವಾದರೆ ನಮಗೆ ನಾವೇ ನರಕವನ್ನ ಸೃಷ್ಟಿ ಮಾಡಿಕೊಂಡಂತೆ. ಸ್ನೇಹಿತರೆ ನಾವು ಹೇಳುವ ಈ ನಟಿ ಎಲ್ಲವನ್ನ ಕಳೆದುಕೊಂಡರು ಜೀವನದ ಮೇಲಿನ ನಂಬಿಕೆಯನ್ನ ಮಾತ್ರ ಕಳೆದುಕೊಳ್ಳಲಿಲ್ಲ, ಜೀವನದಲ್ಲಿ ಎಷ್ಟೇ ಕಷ್ಟ ಇದ್ದರೂ ಅದನ್ನ ಲೆಕ್ಕಕ್ಕೆ ತೆಗೆದುಕೊಳ್ಳದೆ ಸ್ವಾಭಿಮಾನಿಯಾಗಿ ಜೀವನವನ್ನ ಮಾಡುತ್ತಿದ್ದಾಳೆ ಈ ನಟಿ.

ಹಾಗಾದರೆ ಈ ನಟಿ ಯಾರು ಆಕೆ ಮಾಡುತ್ತಿರುವ ಕೆಲಸ ಏನು ಮತ್ತು ಆಕೆ ಈ ಕೆಲಸವನ್ನ ಮಾಡಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಬೆಳ್ಳಿ ತೆರೆಯಲ್ಲಿ ಎಲ್ಲಾ ಸೂಪರ್ ಸ್ಟಾರ್ ನಟ ಮತ್ತು ನಟಿಯರ ಜೊತೆಗೆ ನಟನೆ ಮಾಡಿರುವ ಈ ನಟಿ ಈಗ ಒಂದು ಹೊತ್ತು ಊಟಕ್ಕೂ ಇಲ್ಲದೆ ಹೊಟ್ಟೆಪಾಡಿಗಾಗಿ ದಟ್ಟ ಬಿಸಿಲಿನಲ್ಲಿ ಬೀಚ್ ಪಕ್ಕದಲ್ಲಿ ಕರ್ಚಿಪ್ ಮಾಡಿ ಜೀವನವನ್ನ ಸಾಗಿಸುತ್ತಿದ್ದಾಳೆ ಮತ್ತು ಈಕೆಯನ್ನ ಗುರುತು ಹಿಡಿದವರು ಈಕೆಯ ಕಷ್ಟವನ್ನ ಕೇಳಿ ಕಣ್ಣೀರು ಕೂಡ ಹಾಕಿದ್ದಾರೆ. ಸ್ನೇಹಿತರೆ ನಾವು ಹೇಳುವ ಈ ನಟಿಯ ಹೆಸರು ರಂಗಮ್ಮಲ್ ಮತ್ತು ತಮಿಳು ಚಿತ್ರರಂಗದಲ್ಲಿ ಅಜ್ಜಿ ಎಂದು ಖ್ಯಾತಿಯನ್ನ ಗಳಿಸಿಕೊಂಡವರು ಈ ರಂಗಮ್ಮಲ್.

Great Rangammal

83 ವರ್ಷದ ಈ ನಟಿ ಸುಮಾರು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ, ಇನ್ನು ಈಗ ಈ ನಟಿ ಒಂದು ಸ್ಲಾಮ್ ಜಾಗದಲ್ಲಿ ವಾಸ ಮಾಡುತ್ತಿದ್ದಾರೆ, ಒಂದು ಕಾಲದಲ್ಲಿ ರಾಣಿಯಾಗಿ ಬದುಕುತ್ತಿದ್ದ ರಂಗಮ್ಮಲ್ ಈಗ ಬಹಳ ಕೆಟ್ಟ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ದಿನಗಳು ಉರುಳಿದಂತೆ ರಂಗಮ್ಮಲ್ ಗೆ ಯಾವುದೇ ಅವಕಾಶಗಳು ಬರಲಿಲ್ಲ, ತನಗಾಗಿ ಒಂದು ರೂಪಾಯಿಯನ್ನ ಇಟ್ಟುಕೊಳ್ಳದ ರಂಗಮ್ಮಲ್ ದುಡಿದ ಎಲ್ಲಾ ಹಣವನ್ನ ಮಕ್ಕಳ ಕೈಗೆ ಕೊಟ್ಟಿ ಮೋಸ ಹೋದರು ಮತ್ತು ಈಗ ಒಂದು ಹೊತ್ತಿನ ಊಟಕ್ಕಾಗಿ ಮರೀನಾ ಬೀಚ್ ನಲ್ಲಿ ಕರ್ಚಿಪ್ ಮತ್ತು ಇನ್ನಿತರ ವಸ್ತುಗಳನ್ನ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ಇನ್ನು ಮಾಧ್ಯಮದವರ ಜೊತೆ ಮಾತನಾಡಿದ ರಂಗಮ್ಮಲ್ ನಾನು MGR ಕಾಲದಿಂದ ನಟನೆ ಮಾಡುತ್ತಿದ್ದೇನೆ, ದುಡಿದ ಹಣವನ್ನ ಮಕ್ಕಳಿಗೆ ಕೊಟ್ಟೆ, ಆದರೆ ನನ್ನ ಮಕ್ಕಳು ಈಗ ನನ್ನನ್ನ ಹೊರಗೆ ಹಾಕಿದ್ದಾರೆ, ಒಂದು ಹೊತ್ತು ಊಟ ಮಾಡಲು ಏನನ್ನಾದರೂ ಮಾಡಬೇಕು ಅಲ್ಲವೇ ಅದಕ್ಕಾಗಿ ದಿನಾಲೂ ಕರ್ಚಿಪ್ ಮಾರಿ ದಿನಕ್ಕೆ 50 ರಿಂದ 100 ರೂಪಾಯಿ ಸಂಪಾದನೆ ಮಾಡಿ ಜೀವನ ಮಾಡುತ್ತಿದ್ದೇನೆ ಎಂದು ಮಾಧ್ಯಮದವರ ಮುಂದೆ ತನ್ನ ಕಷ್ಟವನ್ನ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ ಖ್ಯಾತ ನಟಿ ರಂಗಮ್ಮಲ್.

Great Rangammal

ನಟಿ ರಂಗಮ್ಮಲ್ ಅವರು ಕಣ್ಣೀರು ಹಾಕಿದ್ದು ಅವರ ಸ್ಥಿತಿಯನ್ನ ಕಂಡು ಅಲ್ಲ ಸ್ನೇಹಿತರೆ ಅದೂ ತನ್ನ ಮಕ್ಕಳು ಮೋಸ ಮಾಡಿದ್ದಕ್ಕಾಗಿ ಆಗಿದೆ, ನಾವು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿದ್ದೇನೆ ಎಂದು ಸುಮ್ಮನೆ ಕೂರದೆ ಮತ್ತು ಅವರಿವರ ಭಿಕ್ಷೆ ಬೇಡದೆ ಕರ್ಚಿಪ್ ಮಾರುತ್ತ ತನ್ನ ಸ್ವಂತ ದುಡಿಮೆಯಲ್ಲಿ ಬದುಕುತ್ತಿದ್ದಾರೆ ನಟಿ ರಂಗಮ್ಮಲ್. ಜೀವನದಲ್ಲಿ ಎದುರಾಗುವ ಕೆಟ್ಟ ಸ್ಥಿತಿಯಲ್ಲೂ ಆತ್ಮ ವಿಶ್ವಾಸವನ್ನ ಕಳೆದುಕೊಳ್ಳದೆ ಹೇಗೆ ಬದುಕಬೇಕು ಎಂದು ತೋರಿಸಿಕೊಟ್ಟಿರುವ ರಂಗಮ್ಮಲ್ ಅವರ ದೈರ್ಯಕ್ಕೆ ನಾವು ಸೆಲ್ಯೂಟ್ ಹೊಡೆಯಲೇಬೇಕು, ಸ್ನೇಹಿತರೆ ರಂಗಮ್ಮಲ್ ಅವರ ಬಗ್ಗೆ ನಿಮ್ಮ ಅಭಿಪಾಯವನ್ನ ನಮಗೆ ತಿಳಿಸಿ.

Please follow and like us:
error0
http://karnatakatoday.in/wp-content/uploads/2020/03/Great-Rangammal-1-1024x576.jpghttp://karnatakatoday.in/wp-content/uploads/2020/03/Great-Rangammal-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಜೀವನವನ್ನ ನಾವು ಸರಿಯಾಗಿ ಅರ್ಥ ಮಾಡಿಕೊಂಡರೆ ಜೀವನ ಅನ್ನುವುದು ಒಂದು ಕೆಜಿ ಹತ್ತಿಯ ಭಾರ ಎಂದು ಹೇಳಿದರೆ ತಪ್ಪಾಗಲ್ಲ ಮತ್ತು ಜೀವನವನ್ನ ತುಂಬಾ ಗಾಢವಾಗಿ ತೆಗೆದುಕೊಂಡರೆ ಅದೂ ಬೆಟ್ಟದಷ್ಟು ಭಾರ, ಇರುವುದನ್ನ ಒಪ್ಪಿಕೊಂಡ ಬರುವುದನ್ನ ಸ್ವೀಕರಿಸಿ ಮುಂದೆ ನಡೆದರೆ ಮಾನವನ ಪ್ರತಿ ದಿನ ಬಹಳ ಸುಂದರವಾಗಿರುತ್ತದೆ ಅನ್ನಬಹುದು ಮತ್ತು ಇಲ್ಲವಾದರೆ ನಮಗೆ ನಾವೇ ನರಕವನ್ನ ಸೃಷ್ಟಿ ಮಾಡಿಕೊಂಡಂತೆ. ಸ್ನೇಹಿತರೆ ನಾವು ಹೇಳುವ ಈ ನಟಿ ಎಲ್ಲವನ್ನ ಕಳೆದುಕೊಂಡರು ಜೀವನದ...Film | Devotional | Cricket | Health | India