ಈ ಪ್ರಪಂಚ ನಿಂತಿರುವುದು ಪ್ರೀತಿ ಮತ್ತು ನಂಬಿಕೆ ಅನ್ನುವ ಎರಡು ಆಧಾರದ ಮೇಲೆ ಅನ್ನುವುದು ತುಂಬಾ ಜನರ ಅಭಿಪ್ರಾಯವಾಗಿದೆ, ಇನ್ನು ಇದಕ್ಕೆ ಪುಷ್ಟಿ ಕೊಡುವಂತೆ ನಡೆದಿದೆ ಘಟನೆ. ಹೌದು ಇದೊಂದು ವಿಚಿತ್ರವಾದ ಮತ್ತು ನಂಬಲು ಅಸಾಧ್ಯವಾದ ಘಟನೆ ಎಂದು ಹೇಳಿದರೆ ತಪ್ಪಾಗಲ್ಲ. 1973 ರಲ್ಲಿ ಅಂದರೆ ಸುಮಾರು 47 ವರ್ಷಗಳ ಹಿಂದೆ ಅಮೆರಿಕಾದ ಡೆಬ್ರಾ ಮೆಕ್ಕನ್ ಅನುವ ಮಹಿಳೆ ಹೈ ಸ್ಕೂಲ್ ಓದುತ್ತಿದ್ದಾಗ ತನ್ನ ಕ್ಲಾಸ್ ಮೆಟ್ ಶ್ಯಾನ್ ಅನ್ನುವ ಹುಡುಗನನ್ನ ತುಂಬಾ ಪ್ರೀತಿ ಮಾಡುತ್ತಿದ್ದಳು. ಇನ್ನು ಡೆಬ್ರಾ ಮತ್ತು ಶ್ಯಾನ್ ಘಾಡವಾದ ಪ್ರೀತಿಯಲ್ಲಿ ಮುಳುಗಿ ಹೈ ಸ್ಕೂಲ್ ದಿನಗಳಲ್ಲಿ ಪ್ರೇಮ ಪಕ್ಷಿಗಳಂತೆ ಸುತ್ತಾಡುತ್ತಿದ್ದರು, ಹೀಗೆ ಒಂದು ದಿನ ಶ್ಯಾನ್ ತನ್ನ ಪ್ರೇಯಸ್ಗಿ ಡೆಬ್ರಾ ಮೆಕ್ಕನ್ ಗೆ ಒಂದು ಉಂಗುರವನ್ನ ಉಡುಗೊರೆಯಾಗಿ ಕೊಡುತ್ತಾನೆ, ಅದೂ ಶ್ಯಾನ್ ಕೊಟ್ಟ ಮೊದಲ ಉಡುಗೊರೆ ಆದಕಾರಣ ಡೆಬ್ರಾ ಪ್ರತಿದಿನ ಆ ಉಂಗುರವನ್ನ ತನ್ನ ಬೆರಳಿಗೆ ಹಾಕುತ್ತಿದ್ದಳು.

ಹೀಗೆ ಒಂದು ದಿನ ಡೆಬ್ರಾ ಮೆಕ್ಕನ್ ಕಣ್ಣೀರಿನಲ್ಲಿ ಮುಳುಗಿದ್ದಳು ಮತ್ತು ಅದಕ್ಕೆ ಕಾರಣ ತನ್ನ ಪ್ರಿಯಕರ ಶ್ಯಾನ್ ಕೊಟ್ಟ ಉಂಗುರವನ್ನ ಶಾಲೆಯ ಬಳಿ ಕಳೆದುಕೊಂಡಿದ್ದಳು ಡೆಬ್ರಾ ಮತ್ತು ಎಷ್ಟೇ ಹುಡುಕಾಡಿದರು ಆ ಉಂಗುರ ಮಾತ್ರ ಅವಳಿಗೆ ಸಿಗಲಿಲ್ಲ. ಹೀಗೆ ದಿನಗಳು ಉರುಳಿತು ಮತ್ತು ಏಳು ವರ್ಷದ ನಂತರ ಡೆಬ್ರಾ ಮತ್ತು ಶ್ಯಾನ್ ಮದುವೆಯಾಗಿ ಸುಮಾರು 40 ವರ್ಷ ಅನ್ಯೋನ್ಯವಾದ ಸಂಸಾರ ನಡೆಸಿದರು ಮತ್ತು 2017 ರಲ್ಲಿ ಶ್ಯಾನ್ ಮರಣ ಹೊಂದಿದನು. ಇನ್ನು ಡೆಬ್ರಾ ಮೆಕ್ಕನ್ ತನ್ನ ಗಂಡ ಶ್ಯಾನ್ ನೆನಪಿನಲ್ಲಿ ಒಂಟಿ ಜೀವನವನ್ನ ನಡೆಸುತ್ತಿದ್ದಾರೆ, ಇತ್ತೀಚಿಗೆ ಯೂರೋಪ್ ನ ಫಿನ್ಲ್ಯಾಂಡ್ ದೇಶದ ಅರಣ್ಯದಲ್ಲಿ ಒಬ್ಬ ವ್ಯಕ್ತಿ ಮೆಟಲ್ ಡಿಟೆಕ್ಟರ್ ನೊಂದಿಗೆ ಕೆಲಸವನ್ನ ಮಾಡುತ್ತಿದ್ದಾಗ ಆ ಮೆಟಲ್ ಡಿಟೆಕ್ಟರ್ ತುಂಬಾ ಸೌಂಡ್ ಮಾಡಿತು.

ring got finland forest

ಹಾಗಾದರೆ ಇಲ್ಲಿ ಏನಿರಬಹುದು ಎಂದು ಭೂಮಿಯನ್ನ ಸುಮಾರು 20 cm ಅಗೆದು ನೋಡಿದಾಗ ಆತನಿಗೆ ಒಂದು ಉಂಗುರ ಸಿಕ್ಕಿತು, ಇನ್ನು ಆ ಉಂಗುರದ ಮೇಲೆ ಮೋರ್ಸ್ ಹೈ ಸ್ಕೂಲ್ ಎಂದು ಬರೆದಿದ್ದ ಕಾರಣ ಆ ಸ್ಕೂಲ್ ಯಾವುದು ಎಂದು ಹುಡುಕಾಡಿದ ಆ ಅರಣ್ಯ ಅಧಿಕಾರಿ ಕೊನೆಗೆ ಆ ಸ್ಕೂಲ್ ನ ಹಳೆಯ ವಿದ್ಯಾರ್ಥಿಗಳನ್ನ ಆನ್ಲೈನ್ ಮೂಲಕ ಸಂಪರ್ಕಿಸಿ ಆ ಉಂಗುರವನ್ನ ಅವರಿಗೆ ಕಳುಹಿಸಿಕೊಟ್ಟರು. ಇನ್ನು ಆ ಉಂಗುರದ ಮೇಲೆ SM ಎಂದು ಬರೆದಿದ್ದ ಕಾರಣ ಹಳೆಯ ವಿದ್ಯಾರ್ಥಿಗಳಿಗೆ ಅದು ಶ್ಯಾನ್ ಮತ್ತು ಡೆಬ್ರಾ ಮೆಕ್ಕನ್ ಸೇರಿದ್ದು ಎಂದು ಗೊತ್ತಾಯಿತು, ಮತ್ತು ಹಳೆಯ ವಿದ್ಯಾರ್ಥಿಗಳು ಆ ಉಂಗುರವನ್ನ ಕೆಲವು ಸಮಯದ ನಂತರ ಡೆಬ್ರಾ ಮೆಕ್ಕನ್ ಅವರನ್ನ ಹುಡುಕಿ ಆ ಉಂಗುರವನ್ನ ಅವರಿಗೆ ಹಸ್ತಾಂತರ ಮಾಡಿದರು.

ಇನ್ನು ಇದನ್ನ ನೋಡಿದ ತಕ್ಷಣ ಕಣ್ಣೀರು ಹಾಕಿದ ಡೆಬ್ರಾ ಮೆಕ್ಕನ್ ಇದನ್ನ ನನಗೆ ನಂಬಲು ಸಾಧ್ಯವಾಗುತ್ತಿಲ್ಲ, 47 ವರ್ಷಗಳ ನಂತರ ನನಗೆ ಈ ಉಂಗುರ ಮರಳಿ ಸಿಕ್ಕಿರುವುದು ನನಗೆ ತುಂಬಾ ಸಂತೋಷ ಆಗುತ್ತಿದೆ ಎಂದು ತಿಳಿಸಿದ್ದಾರೆ. ಎಲ್ಲಿ ಆ ಅಮೇರಿಕಾ ಮತ್ತು ಎಲ್ಲಿ ಆ ಫಿನ್ಲ್ಯಾಂಡ್, 47 ವರ್ಷಗಳ ನಂತರ ಸುಮಾರು 8 ಸಾವಿರ ಕಿಲೋ ಮೀಟರ್ ದೂರದಲ್ಲಿ ಪತ್ತೆಯಾದ ಉಂಗುರ ಕೊನೆಗೂ ಆಕೆಯ ಕೈ ಸೇರಿದೆ ಅಂದರೆ ಅವರ ಪ್ರೀತಿ ಎಷ್ಟು ಘಾಡವಾದದ್ದು ಎಂದು ಯೋಚನೆ ಮಾಡಿ. ಯಾವುದೋ ಹಳೆಯದಾದ ಉಂಗುರ ಸಿಕ್ಕಿದೆ ಎಂದು ಅದನ್ನ ಪಕ್ಕಕ್ಕೆ ಎಸೆಯುವ ಬದಲು ಅದನ್ನ 8 ಸಾವಿರ ಕಿಲೋ ಮೀಟರ್ ದೂರ ತಲುಪಿಸಿದ ಅರಣ್ಯಾಧಿಕಾರಿಯಾ ಒಳ್ಳೆಯ ಗುಣಕ್ಕೆ ನಾವು ಮೆಚ್ಚಲೇಬೇಕು, ಸ್ನೇಹಿತರೆ ಡೆಬ್ರಾ ಮೆಕ್ಕನ್ ಮತ್ತು ಶ್ಯಾನ್ ಪ್ರೀತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

ring got finland forest

Please follow and like us:
error0
http://karnatakatoday.in/wp-content/uploads/2020/02/Great-ring-in-Finland-1024x576.jpghttp://karnatakatoday.in/wp-content/uploads/2020/02/Great-ring-in-Finland-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಈ ಪ್ರಪಂಚ ನಿಂತಿರುವುದು ಪ್ರೀತಿ ಮತ್ತು ನಂಬಿಕೆ ಅನ್ನುವ ಎರಡು ಆಧಾರದ ಮೇಲೆ ಅನ್ನುವುದು ತುಂಬಾ ಜನರ ಅಭಿಪ್ರಾಯವಾಗಿದೆ, ಇನ್ನು ಇದಕ್ಕೆ ಪುಷ್ಟಿ ಕೊಡುವಂತೆ ನಡೆದಿದೆ ಘಟನೆ. ಹೌದು ಇದೊಂದು ವಿಚಿತ್ರವಾದ ಮತ್ತು ನಂಬಲು ಅಸಾಧ್ಯವಾದ ಘಟನೆ ಎಂದು ಹೇಳಿದರೆ ತಪ್ಪಾಗಲ್ಲ. 1973 ರಲ್ಲಿ ಅಂದರೆ ಸುಮಾರು 47 ವರ್ಷಗಳ ಹಿಂದೆ ಅಮೆರಿಕಾದ ಡೆಬ್ರಾ ಮೆಕ್ಕನ್ ಅನುವ ಮಹಿಳೆ ಹೈ ಸ್ಕೂಲ್ ಓದುತ್ತಿದ್ದಾಗ ತನ್ನ ಕ್ಲಾಸ್ ಮೆಟ್ ಶ್ಯಾನ್...Film | Devotional | Cricket | Health | India