ಯಾರಾದರೂ ನಿಮ್ಮ ಬಳಿ ಬಂದು ಒಬ್ಬ 8 ನೇ ತರಗತಿಯ ಹುಡುಗನಿಂದ ಏನು ಮಾಡಲು ಸಾಧ್ಯ ಕೇಳಿದರೆ ನಾವು ಆ ಹುಡುಗ ಶಾಲೆಗೆ ಹೋಗುತ್ತಾನೆ ಮತ್ತು ಮಕ್ಕಳ ಜೊತೆ ಆಟವಾಡುತ್ತಾನೆ, ಇದನ್ನ ಬಿಟ್ಟರೆ ಆ ವಯಸ್ಸಿನಲ್ಲಿ ಬೇರೆ ಸಾಧನೆಯನ್ನ ಮಾಡಲು ಸಾಧ್ಯವಿಲ್ಲ ಅನ್ನುವ ಉತ್ತರವನ್ನ ನಾವು ಕೊಡುತ್ತೇವೆ. ಸ್ನೇಹಿತರೆ ನೀವು ಅಂದುಕೊಂಡಿತ್ತು ತಪ್ಪು, ಹೌದು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನುವ ಗಾಧೆಗೆ ಉತ್ತಮ ಉದಾರನೇ ಈ ಹುಡುಗ ಎಂದು ಹೇಳಿದರೆ ತಪ್ಪಾಗಲ್ಲ. ಹೌದು 14 ನೇ ವಯಸ್ಸಿನ ನಮ್ಮ ದೇಶದ ಈ ಹುಡುಗ ತನ್ನ ಕೆಲಸದ ಮೂಲಕ ವರ್ಷಕ್ಕೆ ಸುಮಾರು 66 ಲಕ್ಷ ರೂಪಾಯಿ ಸಂಪಾದನೆಯನ್ನ ಮಾಡುತ್ತಿದ್ದಾನೆ ಮತ್ತು ಈ ಹುಡುಗ ಮಾಡುವ ಕೆಲಸವನ್ನ ನೋಡಿದ ಅದೆಷ್ಟೋ ಜನರು ಒಂದು ಕ್ಷಣ ಶಾಕ್ ಆಗಿದ್ದಾರೆ ಎಂದು ಹೇಳಬಹುದು.

ಹಾಗಾದರೆ ಈ ಚಿಕ್ಕ ಹುಡುಗ ಮಾಡುವ ಕೆಲಸ ಏನು ಮತ್ತು ಇಷ್ಟು ಹಣವನ್ನ ಹೇಗೆ ಸಂಪಾದನೆ ಮಾಡುತ್ತಿದ್ದಾನೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ನಾವು ಹೇಳುವ ಈ ಹುಡುಗನ ತನ್ಮಯ್ ಬಕ್ಷಿ, 2003 ರಲ್ಲಿ ಹುಟ್ಟಿದ ಈ ಹುಡುಗನ ತಂದೆಯ ಹೆಸರು ಪುನೀತ್ ಬಕ್ಷಿ ಮತ್ತು ತಾಯಿಯ ಹೆಸರು ಸುನೀತಾ ಬಕ್ಷಿ. ಕೆಲಸದ ಸಲುವಾಗಿ 2004 ಈ ಕುಟುಂಬ ಭಾರತವನ್ನ ಬಿಟ್ಟು ಕೆನಡಾ ದೇಶದಲ್ಲಿ ನೆಲೆಸುತ್ತಾರೆ, ಇನ್ನು ತನ್ಮಯ್ ಬಕ್ಷಿ ತಂದೆ ಒಬ್ಬ ಕಂಪ್ಯೂಟರ್ ಪ್ರೋಗ್ರಾಮರ್ ಆಗಿ ಕೆಲಸ ಮಾಡುತ್ತಿರುತ್ತಾರೆ ಮತ್ತು ಈ ಕಾರಣಕ್ಕೆ ತನ್ಮಯ್ ಬಕ್ಷಿಗೆ ಚಿಕ್ಕ ವಯಸ್ಸಿನಲ್ಲಿಯೇ ಕಂಪ್ಯೂಟರ್ ಪ್ರೋಗ್ರಾಮ್ ಮೇಲೆ ಬಹಳ ಆಸಕ್ತಿ ಇರುತ್ತದೆ.

Great Tanmay Bhakshi

ಮಗನ ಆಸಕ್ತಿಯನ್ನ ಅರ್ಥ ಮಾಡಿಕೊಂಡ ತಂದೆ ಪುನೀತ್ ಬಕ್ಷಿ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಮಗನಿಗೆ ಕಂಪ್ಯೂಟರ್ ಕೋಡಿಂಗ್ ಬಗ್ಗೆ ಹೇಳಿಕೊಡಲು ಆರಂಭಿಸುತ್ತಾರೆ. ಹೀಗೆ ಸ್ವಿಫ್ಟ್ಮ್ ಜಾವಾ, ಸಿ ಪ್ಲಸ್, ಸಿ ಪ್ಲಸ್ ಪ್ಲಸ್ ಹೀಗೆ ಅನೇಕ ಕೋಡಿಂಗ್ ಗಳನ್ನ ತನ್ನ 6 ನೇ ವರ್ಷದಲ್ಲಿ ತನ್ಮಯ್ ಬಕ್ಷಿ ಕಲಿತುಕೊಳ್ಳುತ್ತಾನೆ. ಇನ್ನು ಈ ತನ್ಮಯ್ ಬಕ್ಷಿ ತನ್ನ 9 ನೇ ವಯಸ್ಸಿನಲ್ಲಿ ಆಪಲ್ ಮೊಬೈಲ್ ನಲ್ಲಿ IOS ಆಪ್ ನ ರೆಡಿ ಮಾಡುತ್ತಾನೆ ಮತ್ತು ಅತೀ ಚಿಕ್ಕ ವಯಸ್ಸಿನ ಆಪ್ ಡೆವೆಲಪರ್ ಅನ್ನುವ ಹೆಗ್ಗಳಿಕೆಗೆ ಪಾತ್ರನಾಗುತ್ತಾನೆ ಈ ತನ್ಮಯ್. ಇನ್ನು ಕಂಪ್ಯೂಟರ್ ಭಾಷೆಯಲ್ಲಿ ಒಂದಾದ ಸ್ವಿಫ್ಟ್ ಮೇಲೆ ಹಲೋ ಸ್ವಿಫ್ಟ್ ಅನ್ನುವ ಪುಸ್ತಕವನ್ನ ಬರೆದು ಅದನ್ನ ಬಿಡುಗಡೆ ಮಾಡುತ್ತಾನೆ, ಇನ್ನು ತನ್ಮಯ್ ಬಕ್ಷಿ ದಿನದ 40 ರಷ್ಟು ಸಮಯವನ್ನ ಈ ಕಂಪ್ಯೂಟರ್ ಪ್ರೋಗ್ರಾಮಿಂಗ್ ನಲ್ಲೆ ಕಳೆಯುತ್ತಾರಂತೆ.

ಇನ್ನು ಈ ಹುಡುಗನಿಗೆ ಬೇರೆ ಮಕ್ಕಳ ಶಾಲೆಗೆ ಹೋಗಲು ಸಮಯ ಸಾಕಾಗುತ್ತಿರಲಿಲ್ಲವಂತೆ, ಈ ಕಾರಣಕ್ಕೆ ಮನೆಯಲ್ಲೇ ಓದುತ್ತಿದ್ದನಂತೆ, ಈಗ ಸದ್ಯಕ್ಕೆ ತನ್ಮಯ್ ಬಕ್ಷಿ ದೊಡ್ಡ ದೊಡ್ಡ ಕಂಪನಿಗಳಾದ ಆಪಲ್, ಐಬಿಎಂ, ಗೂಗಲ್, ವಾಲ್ಮಾರ್ಟ್ ಕಂಪನಿಗಳಿಗೆ ಪ್ರೋಗ್ರಾಮಿಂಗ್ ಕನ್ಸೆಲ್ಟಂಟ್ ಆಗಿ ಕೆಲಸವನ್ನ ಮಾಡುತ್ತಿದ್ದಾರೆ. ಸ್ನೇಹಿತರೆ ಈ ಹುಡುಗ ಗೂಗಲ್ ಜೊತೆ ಒಂದು ವರ್ಷಕ್ಕೆ 1.2 ಮಿಲಿಯನ್ ಡಾಲರ್ ಅಗ್ರಿಮೆಂಟ್ ಮಾಡಿಕೊಂಡಿದ್ದಾನೆ ಮತ್ತು ಭಾರತದ ರೂಪಾಯಿಯಲ್ಲಿ 66 ಲಕ್ಷ ರೂಪಾಯಿ ಆಗುತ್ತದೆ. ಈ ಒಂದು ಕಂಪನಿಯಲ್ಲೇ ಇಷ್ಟು ಅಂದಮೇಲೆ ಬೇರೆ ಕಂಪನಿಯಲ್ಲಿ ಎಷ್ಟಿರಬಹುದು ನೀವೇ ಯೋಚನೆ ಮಾಡಿ, ಸ್ನೇಹಿತರೆ ತನ್ಮಯ್ ಬಕ್ಷಿ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Great Tanmay Bhakshi

Please follow and like us:
error0
http://karnatakatoday.in/wp-content/uploads/2020/03/IOS-developer-Thanmay-Bakshi-1024x576.jpghttp://karnatakatoday.in/wp-content/uploads/2020/03/IOS-developer-Thanmay-Bakshi-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಯಾರಾದರೂ ನಿಮ್ಮ ಬಳಿ ಬಂದು ಒಬ್ಬ 8 ನೇ ತರಗತಿಯ ಹುಡುಗನಿಂದ ಏನು ಮಾಡಲು ಸಾಧ್ಯ ಕೇಳಿದರೆ ನಾವು ಆ ಹುಡುಗ ಶಾಲೆಗೆ ಹೋಗುತ್ತಾನೆ ಮತ್ತು ಮಕ್ಕಳ ಜೊತೆ ಆಟವಾಡುತ್ತಾನೆ, ಇದನ್ನ ಬಿಟ್ಟರೆ ಆ ವಯಸ್ಸಿನಲ್ಲಿ ಬೇರೆ ಸಾಧನೆಯನ್ನ ಮಾಡಲು ಸಾಧ್ಯವಿಲ್ಲ ಅನ್ನುವ ಉತ್ತರವನ್ನ ನಾವು ಕೊಡುತ್ತೇವೆ. ಸ್ನೇಹಿತರೆ ನೀವು ಅಂದುಕೊಂಡಿತ್ತು ತಪ್ಪು, ಹೌದು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನುವ ಗಾಧೆಗೆ ಉತ್ತಮ ಉದಾರನೇ ಈ ಹುಡುಗ...Film | Devotional | Cricket | Health | India