ನಮ್ಮ ಸೌರಮಂಡಲದ ಅತೀ ದೊಡ್ಡ ಗ್ರಹ ಗುರು ಗ್ರಹ. ನಾವು ಭಾರತೀಯರು ಗುರು ಗ್ರಹವನ್ನು ಬೃಹಸ್ಪತಿ ಎಂದೇ ಕರೆಯುತ್ತೇವೆ. ರೋಮನ್ ಪುರಾಣದಲ್ಲಿ ಗುರುವನ್ನು ದೇವತೆಗಳ ರಾಜ ಎಂದೇ ಕರೆಯಲಾಗುತ್ತದೆ. ಗುರು ನಮ್ಮ ಸೌರಮಂಡಲದ ದೈತ್ಯ ಗ್ರಹ. ನಮ್ಮ ಸೌರಮಂಡಲದ ಉಳಿದ ಎಲ್ಲಾ ಗ್ರಹಗಳನ್ನು ಸೇರಿಸಿದರೂ ಅದು ಗುರು ಗ್ರಹದ ಅರ್ಧದಷ್ಟು ಭಾಗವನ್ನು ತುಂಬುತ್ತದೆ ಅಷ್ಟೇ. ಕಲ್ಪಿಸಿಕೊಳ್ಳಿ ಹಾಗಾದರೆ ಅದೆಂತಾ ದೈತ್ಯನಿರಬಹುದು ಈ ಬೃಹಸ್ಪತಿ ಗುರು ಗ್ರಹ. ಭೂಮಿಯೇ ಬಹಳ ದೊಡ್ಡದು ಎಂದು ತಿಳಿದಿರುವ ಬಾವಿಯೊಳಗಿನ ಕಪ್ಪೆ ಮನುಷ್ಯನಿಗೆ ಗುರು ಗ್ರಹದ ಮುಂದೆ ಭೂಮಿ ಏನೇನೂ ಅಲ್ಲಾ ಎಂಬ‌ ವಿಷಯವನ್ನು ಬಹುಶಃ ನಂಬಲು ಅಸಾಧ್ಯವಾದರೂ ಇದು ಸತ್ಯ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗುರು ವೃಷ್ಚಿಕ ರಾಶಿಯಿಂದ ತುಲಾ ರಾಶಿಯೆಡೆಗೆ ಸಾಗಿದ್ದಾನೆ ಆ ರಾಶಿಯಲ್ಲಿ ಮುಂದಿನ ವರ್ಷ ಅಂದರೆ 2019ರ ನವೆಂಬರ್ 5ನೇ ತಾರೀಕಿನ ತನಕ ಸಂಚಾರ ಮಾಡುತ್ತದೆ. ಈ ಮಧ್ಯೆ 2019ರ ಮಾರ್ಚ್ 30ನೇ ತಾರೀಕು ಧನು ರಾಶಿಯನ್ನು ಪ್ರವೇಶಿಸಿ, ಏಪ್ರಿಲ್ 23ನೇ ತಾರೀಕು ವೃಶ್ಚಿಕ ರಾಶಿಗೆ ಮರಳುತ್ತದೆ. ಈ ಚಲನೆಯಿಂದಾಗಿ ಕೆಲ ರಾಶಿಗಳು ಮೇಲೆ ಪ್ರಭಾವ ಬೀರಲಿದ್ದು ಈ ರಾಶಿಗಲ್ಲು ಎಂದು ಕಾಣದ ಅದ್ರಷ್ಟ ಆರಂಭವಾಗಲಿದೆ ಹಾಗಿದ್ದರೆ ಆ ರಾಶಿಗಳ ಫಲವೇನು ತಿಳಿಯೋಣ.

ಮೇಷ ರಾಶಿಗೆ ಗುರುವಿನ ಸ್ಥಾನ ಬದಲಾವಣೆಯು ನಿಮ್ಮ ವೃತ್ತಿಯಲ್ಲೂ ಪ್ರಭಾವ ಬೀರುತ್ತಲಿದೆ. ಬದಲಾದ ವಾತಾವರಣದಲ್ಲಿ ಕೆಲಸ ಮಾಡಲು ತಯಾರಿ ನಡೆಸಿರಿ ಮತ್ತು ನೂತನ ಕಾರ್ಯ ವಿಧಾನಗಳಿಗೆ ಅನಿವಾರ್ಯವಾಗಿ ಹೊಂದಿಕೊಳ್ಳಬೇಕಾಗುತ್ತದೆ. ವೃಷಭದವರಿಗೆ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವ ಸಂದರ್ಭ ಇದೆ.

ನಿಮ್ಮ ಅಂತಃಶಕ್ತಿಯನ್ನು ಪೂರ್ತಿಯಾಗಿ ಉಪಯೋಗಿಸಿಕೊಳ್ಳಿ. ಮೇಲಧಿಕಾರಿಗಳಿಂದ ನಿಮಗೆ ಹೆಚ್ಚಿನ ಪ್ರಶಂಸೆ ದೊರೆಯಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗುವುದು. ಇಡೀ ರೀತಿ ವೃಶ್ಚಿಕ ತುಲಾ ಮೀನಾದವರಿಗೂ ಕೂಡ ಹಣಕಾಸಿನ ವಿಚಾರದಲ್ಲಿ ಎಂದು ಕಾಣದ ಲಾಭ ಪಡೆಯಲಿದ್ದೀರಿ . ಗುರುವಿನ ಒಲುಮೆ ಇರುವಾಗ ಯಾರು ಮುನಿದರೇನು? ನಿಮ್ಮ ಮೇಲೆ ಎಷ್ಟೇ ಭಾರ ಬಂದರೂ ಅದನ್ನು ನಿಭಾಯಿಸಿ ವರ್ತಮಾನವನ್ನು ನಿಯಂತ್ರಿಸಬಲ್ಲಿರಿ. ಇದರಿಂದ ಕುಟುಂಬ ಸದಸ್ಯರ ಮೆಚ್ಚುಗೆಗೆ ಪಾತ್ರರಾಗುವಿರಿ.

Please follow and like us:
0
http://karnatakatoday.in/wp-content/uploads/2018/10/GURU-1024x576.pnghttp://karnatakatoday.in/wp-content/uploads/2018/10/GURU-150x104.pngKarnataka Today's Newsಜ್ಯೋತಿಷ್ಯಬೆಂಗಳೂರುಸುದ್ದಿಜಾಲನಮ್ಮ ಸೌರಮಂಡಲದ ಅತೀ ದೊಡ್ಡ ಗ್ರಹ ಗುರು ಗ್ರಹ. ನಾವು ಭಾರತೀಯರು ಗುರು ಗ್ರಹವನ್ನು ಬೃಹಸ್ಪತಿ ಎಂದೇ ಕರೆಯುತ್ತೇವೆ. ರೋಮನ್ ಪುರಾಣದಲ್ಲಿ ಗುರುವನ್ನು ದೇವತೆಗಳ ರಾಜ ಎಂದೇ ಕರೆಯಲಾಗುತ್ತದೆ. ಗುರು ನಮ್ಮ ಸೌರಮಂಡಲದ ದೈತ್ಯ ಗ್ರಹ. ನಮ್ಮ ಸೌರಮಂಡಲದ ಉಳಿದ ಎಲ್ಲಾ ಗ್ರಹಗಳನ್ನು ಸೇರಿಸಿದರೂ ಅದು ಗುರು ಗ್ರಹದ ಅರ್ಧದಷ್ಟು ಭಾಗವನ್ನು ತುಂಬುತ್ತದೆ ಅಷ್ಟೇ. ಕಲ್ಪಿಸಿಕೊಳ್ಳಿ ಹಾಗಾದರೆ ಅದೆಂತಾ ದೈತ್ಯನಿರಬಹುದು ಈ ಬೃಹಸ್ಪತಿ ಗುರು ಗ್ರಹ. ಭೂಮಿಯೇ ಬಹಳ...Kannada News