ಹಸ್ತಗಳನ್ನು ನೋಡಿ ವ್ಯಕ್ತಿಯ ಭವಿಷ್ಯ ಹೇಳುವ ಪದ್ಧತಿ ನಮ್ಮ ಸಂಪ್ರದಾಯದಲ್ಲಿ ಈ ಹಿಂದಿನಿಂದಲೂ ಇದೆ. ಆದರೆ ಇದರಲ್ಲಿರುವ ಕೆಲ ನಿಯಮಗಳು ಕೆಲವರಿಗೆ ಗೊತ್ತಿಲ್ಲ ಹೀಗಾಗಿ ಇದರ ಹೆಸರಿನಲ್ಲಿ ಹಲವಾರು ಮಂದಿ ಭವಿಷ್ಯ ಹೇಳುತ್ತೇನೆ ಎಂದು ಹೇಳಿ ಜನರನ್ನು ಮೂರ್ಖರನ್ನಾಗಿ ಮಾಡುತ್ತಾರೆ. ನಿಜವಾಗಿಯೂ ಹಸ್ತದ ರೇಖೆಗಳು ವ್ಯಕ್ತಿಯ ಜೀವನದ ಬಗ್ಗೆ ಏನು ಹೇಳುತ್ತದೆ ಎಂದು ಇಂದು  ತಿಳಿಯೋಣ. ಸಾಮಾನ್ಯವಾಗಿ ಎರಡು ಕೈ ಜೋಡಿಸಿದಾಗ ಅರ್ಧಚಂದ್ರಾಕೃತಿ ಮೂಡಿ ಬಂದರೆ ನೀವು ಇಂತಹ ವ್ಯಕ್ತಿಗಳು ಎಂದು ಕೂಡ ತಿಳಿಯೋಣ ಬನ್ನಿ. ಹಸ್ತ ಸಾಮುದ್ರಿಕೆ ಶಾಸ್ತ್ರದ ಪ್ರಕಾರ ಕೈಯಲ್ಲಿನ ರೇಖೆಗಳ ಆಧಾರವಾಗಿ ಭವಿಷ್ಯವನ್ನು ತಿಳಿದುಕೊಳ್ಳಬಹುದು. ಆದರೆ ಕೈಯಲ್ಲಿನ ಒಂದು ರೇಖೆ ಮಾತ್ರ ಭವಿಷ್ಯಕ್ಕೆ ಸೂಚನೆ ಅಲ್ಲದಿದ್ದರೂ ಜೀವನದಲ್ಲಿ ಕೆಲವೊಂದು ಬದಲಾವಣೆಗಳನ್ನು ತರುತ್ತದೆ.

ಜೀವನದಲ್ಲಿ ನಡೆಯುವ ಅನೇಕ ಘಟನೆಗಳ ಮೇಲೆ ಇದರ ಪ್ರಭಾವ ಇರುತ್ತದೆ. ಕೈಯಲ್ಲಿನ ವಿವಿಧ ರೇಖೆಗಳು ಜೀವನದಲ್ಲಿ ನಡೆಯುವ ವಿವಾಹ, ಸಂತಾನ, ಉದ್ಯೋಗ, ಆರೋಗ್ಯದಂತಹ ವಿಷಯಗಳನ್ನು ತಿಳಿಸುತ್ತವೆ. ಇವುಗಳಲ್ಲಿ ಮುಖ್ಯವಾದದ್ದು ವಿವಾಹ ರೇಖೆ. ಈ ರೇಖೆ ನಿಮಗೆ ಯಾವಾಗ ಮದುವೆಯಾಗುತ್ತದೆ ಎಂಬುದನ್ನು ಖಚಿತವಾಗಿ ಹೇಳುತ್ತದೆ. ವಿವಾಹ ರೇಖೆ ಕಿರುಬೆರಳಿಗೆ, ಹಾರ್ಟ್ ರೇಖೆಗೂ (ಮಧ್ಯ ರೇಖೆ) ನಡುವೆ ಇರುತ್ತದೆ.

ಮುಖ್ಯ ರೇಖೆಯನ್ನು ತಾಗಿಕೊಂಡು ಚಿಕ್ಕ ರೇಖೆಗಳು ಇದ್ದರೆ ಅನೇಕ ಮಂದಿಯೊಂದಿಗೆ ಸಂಬಂಧಗಳು, ವ್ಯವಹಾರಗಳು ಅಥವಾ ನಿಶ್ಚಿತಾರ್ಥ ನಡೆದ ಬಳಿಕ ರದ್ದಾಗುವಂತಹ ಘಟನೆಗಳು ಸಂಭವಿಸುತ್ತವೆ. ವಿವಾಹ ರೇಖೆಗಳ ಸಂಖ್ಯೆ, ಅವುಗಳ ಸ್ಥಾನ, ಆಕಾರಗಳು ವಿವಾಹದ ಸ್ವಭಾವ, ಜೀವನ ಸಂಗಾತಿ ಆರೋಗ್ಯ, ವ್ಯಕ್ತಿತ್ವವನ್ನು ತಿಳಿಸುತ್ತವೆ. ಹಾರ್ಟ್ ಲೈನ್, ವಿವಾಹ ರೇಖೆಗೂ ನಡುವೆ ಹೆಚ್ಚು ದೂರದಲ್ಲಿದ್ದರೂ ವ್ಯಕ್ತಿಗಳಿಗೆ ತಡವಾಗಿ ಮದುವೆಯಾಗುತ್ತದೆ.

ಅಂದರೆ ಪುರುಷರಿಗೆ 32 ವರ್ಷಗಳ ಬಳಿಕ, ಮಹಿಳೆಯರಿಗೆ 27 ವರ್ಷಗಳ ಬಳಿಕವಷ್ಟೇ ವಿವಾಹ ಯೋಗ. ಇನ್ನು ಎರಡು ಕೈ ಜೋಡಿಸಿದಾಗ ಅರ್ಧಚಂದ್ರಾಕೃತಿ ಇದ್ದವರು ಗಟ್ಟಿ ಮನಸ್ಸಿನ ವ್ಯಕ್ತಿಗಳು ದ್ರಢ ನಿರ್ಧಾರ ಹೊಂದಿದವರು. ಇವರು ಬಹಳ ಸುಂದರವಾಗಿಯೂ ಮತ್ತು ಆಕರ್ಷಣೀಯ ವಾಗಿಯೂ ಇರುತ್ತಾರೆ. ಸಾಮಾನ್ಯವಾಗಿ ಇವರು ತಮ್ಮ ಬಾಲ್ಯದ ಗೆಳೆಯ ಅಥವಾ ಗೆಳತಿಯನ್ನು ಮದುವೆಯಾಗುವ ಸಂಭವ ಹೆಚ್ಚಿರುತ್ತದೆ. ಈ ಮಾಹಿತಿ ಇಷ್ಟವಾಗಿದ್ದರೆ ಹಂಚಿಕೊಳ್ಳಿ.

Please follow and like us:
0
http://karnatakatoday.in/wp-content/uploads/2018/12/HALF-MOON-1024x576.jpghttp://karnatakatoday.in/wp-content/uploads/2018/12/HALF-MOON-150x104.jpgKarnataka Today's Newsಎಲ್ಲಾ ಸುದ್ದಿಗಳುಜ್ಯೋತಿಷ್ಯನಗರಹಸ್ತಗಳನ್ನು ನೋಡಿ ವ್ಯಕ್ತಿಯ ಭವಿಷ್ಯ ಹೇಳುವ ಪದ್ಧತಿ ನಮ್ಮ ಸಂಪ್ರದಾಯದಲ್ಲಿ ಈ ಹಿಂದಿನಿಂದಲೂ ಇದೆ. ಆದರೆ ಇದರಲ್ಲಿರುವ ಕೆಲ ನಿಯಮಗಳು ಕೆಲವರಿಗೆ ಗೊತ್ತಿಲ್ಲ ಹೀಗಾಗಿ ಇದರ ಹೆಸರಿನಲ್ಲಿ ಹಲವಾರು ಮಂದಿ ಭವಿಷ್ಯ ಹೇಳುತ್ತೇನೆ ಎಂದು ಹೇಳಿ ಜನರನ್ನು ಮೂರ್ಖರನ್ನಾಗಿ ಮಾಡುತ್ತಾರೆ. ನಿಜವಾಗಿಯೂ ಹಸ್ತದ ರೇಖೆಗಳು ವ್ಯಕ್ತಿಯ ಜೀವನದ ಬಗ್ಗೆ ಏನು ಹೇಳುತ್ತದೆ ಎಂದು ಇಂದು  ತಿಳಿಯೋಣ. ಸಾಮಾನ್ಯವಾಗಿ ಎರಡು ಕೈ ಜೋಡಿಸಿದಾಗ ಅರ್ಧಚಂದ್ರಾಕೃತಿ ಮೂಡಿ ಬಂದರೆ ನೀವು ಇಂತಹ...Kannada News