ನಮ್ಮ ದೇಹದಲ್ಲಿ ಏನಾದರು ಏರುಪೇರು ಹಾಗು ಬದಲಾವಣೆ ಆಗುವ ಮುನ್ನವೇ ಈ ದೇಹವು ನಮಗೆ ಹಲವಾರು ಸೂಚನೆಗಳನ್ನು ನೀಡಿರುತ್ತವೆ ಅದರ ಬಗ್ಗೆ ನಮಗೆ ಅರಿವಿರಬೇಕು. ಹೌದು ನಮ್ಮ ದೇಹದ ಪ್ರತಿಯೊಂದು ಕಾರ್ಯವ್ಯವಸ್ಥೆಯೂ ಕೂಡ ಹಾಗೆ ರೂಪಿಸಲ್ಪಟ್ಟಿದೆ, ಎಲ್ಲೇ ಚಿಕ್ಕ ಬದಲಾವಣೆ ಆದರೂ ಕೂಡ ಅದಕ್ಕೊಂದು ನಿರ್ದಿಷ್ಟ ಕಾರಣವಿರುತ್ತದೆ. ಸ್ಪರ್ಶ ಜ್ಞಾನ ಹಾಗು ಪಂಚೇಂದ್ರಿಯಗಳು ಕೂಡ ಒಮ್ಮೊಮ್ಮೆ ದೇಹದ ಬಗ್ಗೆ ಕೆಲವು ಎಚ್ಚಹರಿಕೆಗಳನ್ನು ನೀಡುತ್ತವೆ, ನಿಮಗೆ ತಿಳಿದಿರುವಂತೆ ಸಾಮಾನ್ಯವಾಗಿ ಹೆಚ್ಚು ಹೊತ್ತು ಬೆರಳುಗಳನ್ನು ನೀರಿನಲ್ಲಿ ಇಡುವುದರಿಂದ ಅಥವಾ ನೀರಿನಲ್ಲಿ ಈಜಾಡಿ ಬಂದ ಬಳಿಕ ಬೆರಳುಗಳು ನೆರಿಗೆ ರೀತಿಯಲ್ಲಿ ಬದಲಾವಣೆಯಾಗಿರುವುದನ್ನು ನೀಡಿರಬಹುದು.

ಸಾಮಾನ್ಯವಾಗಿ ಪಾತ್ರೆ ತೊಳೆಯುವಾಗ ಮತ್ತು ನೀರಿನಲ್ಲೇ ಹೆಚ್ಚು ಇದ್ದಾಗ ಈ ರೀತಿ ಬೆರಳುಗಳು ಬದಲಾವಣೆ ಪಡೆಯುತ್ತವೆ, ನೀರಿನಲ್ಲಿ ಹೆಚ್ಚು ಹೊತ್ತು ಇರುವುದರಿಂದ ಬೆರಳುಗಳುನೆರಿಗೆ ರೀತಿ ಆಕಾರ ಪಡೆಯುತ್ತವೆ ಎನ್ನುವುದನ್ನು ನೀವು ಅನೇಕ ಬಾರಿ ನೋಡಿರಬೇಕು. ಬೆರಳು ಕುಗ್ಗಲು ಕಾರಣವೇನು ಎಂದು ನೀವು ಎಂದಾದರೂ ಯೋಚಿಸಿದ್ದೀರಾ, ಸ್ವಲ್ಪ ಸಮಯದ ನಂತರ ಬೆರಳುಗಳ ಕುಗ್ಗುವಿಕೆ ಕಣ್ಮರೆಯಾಗುತ್ತದೆ ಮತ್ತು ಬೆರಳುಗಳು ಸಾಮಾನ್ಯ ಸ್ಥಿತಿಗೆ ಬರುತ್ತವೆ. ಹಾಗಾದರೆ ಇದಕ್ಕೆ ಕಾರಣ ಏನು ಅನ್ನುವುದರ ಬಗ್ಗೆ ಇಂದು ತಿಳಿದುಕೊಳ್ಳೋಣ, ಈ ಆರೋಗ್ಯ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ ಮತ್ತು ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

ನೀರಿನಲ್ಲಿ ಬೆರಳುಗಳನ್ನು ಮುಳುಗಿಸಿದಾಗ ಕುಗ್ಗುವುದು ಸಾಮಾನ್ಯ ಭಯ ಪಡುವ ಯಾವುದೇ ಕಾರಣವಿಲ್ಲ ಮತ್ತು ಇದು ನಮ್ಮ ದೇಹದ ರಕ್ಷಣೆಗಾಗಿ ಸಂಭವಿಸುತ್ತದೆ. ಕುಗ್ಗುತ್ತಿರುವ ಬೆರಳುಗಳಿಂದ ದೇಹವನ್ನು ಹೇಗೆ ರಕ್ಷಿಸಲಾಗಿದೆ ಎಂದು ಈಗ ನೀವು ಯೋಚಿಸುತ್ತಿರಬೇಕು ಅಲ್ಲವೇ, ಅದರ ಬಗ್ಗೆ ಹೇಳೋಣ. ನೀರಿನಲ್ಲಿ ಬೆರಳುಗಳು ನೆರಿಗೆ ಬರಲು ಮುಖ್ಯ ಕರಣ ನಮ್ಮ ಸ್ವಾಯತ್ತ ನರಮಂಡಲದ ಒಂದು ಸೂಚನೆ ಆಗುತ್ತದೆ, ನೀರಿನಲ್ಲಿ ಬೆರಳುಗಳು ಮುಳುಗಿದಾಗ ಕೈಗಳ ಗ್ರಿಪ್ ಅಥವಾ ಹಿಡಿದಿಟ್ಟುಕೊಳ್ಳುವಿಕೆ ಸಡಿಲವಾಗುತ್ತದೆ ಮತ್ತು ಹೀಗೆ ಆದಾಗ ನಮಗೆ ನೀರಿನಲ್ಲಿ ಕೂಡ ಯಾವುದೇ ವಸ್ತುಗಳನ್ನು ಹಿಡಿಯಲು ಸುಲಭವಾಗುತ್ತದೆ, ಈ ಕ್ರಿಯೆಯಿಂದ ಕೈಗಳ ಹಿಡಿತವೂ ನೀರಿನಲ್ಲಿ ಉತ್ತಮವಾಗುತ್ತದೆ, ಆಂಗ್ಲ ಭಾಷೆಯಲ್ಲಿ ಇದನ್ನು ಎಂದು ಹೇಳುತ್ತಾರೆ.

ಬೆರಳುಗಳು ಕುಗ್ಗುವ ಭಯವೂ ಅನೇಕರಿಗೆ ಇದೆ ಆದರೆ ಭಯಪಡಲು ಏನೂ ಇಲ್ಲ ಇದು ನಮ್ಮ ಉತ್ತಮ ಆರೋಗ್ಯದ ಸಂಕೇತ ಮತ್ತು ನಮ್ಮ ಸ್ವಾಯತ್ತ ನರಮಂಡಲವು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಸೂಚನೆ. ಬೆರಳುಗಳ ಸಂಕೋಚನವು ನಮ್ಮ ದೇಹದಲ್ಲಿ ಆಟೋ ಸೈಕ್ ನರಮಂಡಲವು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದರ ಸಂಕೇತವಾಗಿದೆ. ಇವೆಲ್ಲದರ ನಡುವೆಯ ಕೂಡ ನೀರಿನಲ್ಲಿ ಮುಳುಗಿದ ನಂತರ ಒಣ ದ್ರಾಕ್ಷಿಯಂತೆ ರೂಪ ಪಡೆಯುವ ನಮ್ಮ ಬೆರಳುಗಳಿಂದ ನೀರಿನಲ್ಲಿ ವಸ್ತುಗಳನ್ನು ಹಿಡಿಯುವುದು ಸುಲಭ ಎಂದು 2013 ಟ್ರಸ್ಟೆಡ್ ಸೋರ್ಸ್‌ನಲ್ಲಿನ ಒಂದು ಸಣ್ಣ ಅಧ್ಯಯನವು ಸೂಚಿಸಿದೆ, ಅಂದರೆ ಈ ವಿದ್ಯಮಾನವು ವಿಕಸನೀಯ ಬದಲಾವಣೆಯಾಗಿರಬಹುದು, ಅದು ಮನುಷ್ಯರಿಗೆ ಒದ್ದೆ ಹಾಗು ಯಾವುದೇ ರೀತಿಯ ಬದಲಾವಣೆಗೆ ದೇಹ ಸ್ಪಂದಿಸುವ ರೀತಿ ಎಂದು ಕೂಡ ಹೇಳಲಾಗುತ್ತದೆ, ಮಾಹಿತಿ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮವರಿಗೂ ತಿಳಿಸಿ.

Hand in water

Please follow and like us:
error0
http://karnatakatoday.in/wp-content/uploads/2019/11/fingers-1024x576.pnghttp://karnatakatoday.in/wp-content/uploads/2019/11/fingers-150x104.pngKarnataka Trendingಆರೋಗ್ಯಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲನಮ್ಮ ದೇಹದಲ್ಲಿ ಏನಾದರು ಏರುಪೇರು ಹಾಗು ಬದಲಾವಣೆ ಆಗುವ ಮುನ್ನವೇ ಈ ದೇಹವು ನಮಗೆ ಹಲವಾರು ಸೂಚನೆಗಳನ್ನು ನೀಡಿರುತ್ತವೆ ಅದರ ಬಗ್ಗೆ ನಮಗೆ ಅರಿವಿರಬೇಕು. ಹೌದು ನಮ್ಮ ದೇಹದ ಪ್ರತಿಯೊಂದು ಕಾರ್ಯವ್ಯವಸ್ಥೆಯೂ ಕೂಡ ಹಾಗೆ ರೂಪಿಸಲ್ಪಟ್ಟಿದೆ, ಎಲ್ಲೇ ಚಿಕ್ಕ ಬದಲಾವಣೆ ಆದರೂ ಕೂಡ ಅದಕ್ಕೊಂದು ನಿರ್ದಿಷ್ಟ ಕಾರಣವಿರುತ್ತದೆ. ಸ್ಪರ್ಶ ಜ್ಞಾನ ಹಾಗು ಪಂಚೇಂದ್ರಿಯಗಳು ಕೂಡ ಒಮ್ಮೊಮ್ಮೆ ದೇಹದ ಬಗ್ಗೆ ಕೆಲವು ಎಚ್ಚಹರಿಕೆಗಳನ್ನು ನೀಡುತ್ತವೆ, ನಿಮಗೆ ತಿಳಿದಿರುವಂತೆ ಸಾಮಾನ್ಯವಾಗಿ ಹೆಚ್ಚು...Film | Devotional | Cricket | Health | India