ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಶೋ ಮೂಲಕ ಕರುನಾಡಿನಾದ್ಯಂತ ಮನೆಮಾತಾಗಿರುವ ಹನುಮಂತ ಕನ್ನಡಿಗರ ಫೆವರಿಟ್ ಗಾಯಕನಾಗಿದ್ದಾನೆ. ಪ್ರತಿ ವಾರಕ್ಕೂ ಈತ ಹಾಡುವ ಹಾಡಿಗೆ ಅದ್ಬುತ ರೆಸ್ಪಾನ್ಸ್ ದೊರೆಯುತ್ತದೆ ಮತ್ತು ಜನರ ಪ್ರೀತಿಗೆ ಪಾತ್ರನಾಗಿದ್ದಾನೆ, ಇನ್ನು ಇಂತಹ ಪ್ರತಿಭೆಯನ್ನು ಗುರುತಿಸಿಕೊಟ್ಟ ಕೀರ್ತಿ ಜೀ ಕನ್ನಡ ವಾಹಿನಿಗೆ ಸಲ್ಲುತ್ತದೆ. ಎಲ್ಲೋ ತೆರೆ ಮರೆಯಲ್ಲಿದ್ದ ಪ್ರತಿಭೆಯನ್ನು ಗುರುತಿಸಿ ಮುಖ್ಯ ವೇದಿಕೆಯಲ್ಲಿ ಅವರನ್ನ ಗುರುತಿಸುವ ಪ್ರಯತ್ನ ಮಾಡುತ್ತಿದೆ ಜೀ ವಾಹಿನಿ. ಇನ್ನು ಹನುಮಂತನ ಬಗ್ಗೆ ಹೇಳೋದಾದರೆ ಈತ ಹಾಡುವ ಜಾನಪದ ಹಾಡಿರಬಹುದು ಅಥವಾ ಬೇರೆ ಯಾವುದೇ ಸೊಗಡಿನ ಹಾಡು ಇರಬಹುದು ಎಲ್ಲವು ತನ್ನದೇ ಆದ ಒಂದು ಶೈಲಿಯಲ್ಲಿ ಹಾಡಿ ಹಾಡಿಗೆ ಹೊಸ ರೂಪ ನೀಡುವ ಗಾಯನ ಇವನದ್ದು.

ಇನ್ನು ಕನ್ನಡಿಗರ ಪಾಲಿನ ದೊಡ್ಡ ಸ್ಟಾರ್ ಆಗಿರುವ ಹನುಮಂತ ಪ್ರತಿ ವಾರ ಹಾಡುವ ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಕಾಣುತ್ತವೆ. ಇನ್ನು ಸದ್ಯಕ್ಕೆ ಬಂದಿರುವ ಮಾಹಿತಿ ಪ್ರಕಾರ ಹನುಮಂತನಿಗೆ ಸಿನಿಮಾದಲ್ಲಿ ಹಲವು ಅವಕಾಶಗಳು ಒದಗಿ ಬಂದಿವೆ ಎಂದು. ಮೂಲಗಳ ಪ್ರಕಾರ ದರ್ಶನ್ ಅವರ ಮುಂದಿನ ಚಿತ್ರದಲ್ಲಿ ಒಂದು ಹಾಡಿಗೆ ಅವಕಾಶ ಸಿಕ್ಕಿದೆ ಎನ್ನುವುದು ಇಷ್ಟಕ್ಕೂ ಅದು ಯಾವ ಚಿತ್ರ ಸಂಭಾವನೆ ಎಷ್ಟು ಎನ್ನುವುದರ ಬಗ್ಗೆ ತಿಳಿಯೋಣ ಬನ್ನಿ.

ಹನುಮಂತನ ಗಾಯನಕ್ಕೆ ಫಿದಾ ಆಗಿರುವ ಅರ್ಜುನ್ ಜನ್ಯ ಅವರು ಕೂಡ ದರ್ಶನ್ ಅವರ 50ನೇ ಚಿತ್ರವಾದ ರಾಬರ್ಟ್ ಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಇದೆ ಚಿತ್ರಕ್ಕೆ ಹನುಮಂತ ಕೂಡ ಒಂದು ಗಾಯನ ಮಾಡುವ ಎಲ್ಲ ತಯಾರಿ ನಡೆದಿದೆ ಎನ್ನಲಾಗಿದೆ. ಬಡ ಕುಟುಂಬದಿಂದ ಬಂದ ಹನುಮಂತ ಇಷ್ಟೊಂದು ಸಾಧನೆ ಮಾಡಿರುವುದು ಹೆಮ್ಮೆ ತಂದಿದೆ.

ಈ ಚಿತ್ರಕ್ಕೆ ಸಂಭಾವನೆಯಾಗಿ ಹನುಮಂತನಿಗೆ ಐವತ್ತರಿಂದ ಅರವತ್ತು ಸಾವಿರ ಸಿಗುವುದು ಖಚಿತ ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಇಷ್ಟೇ ಅಲ್ಲದೆ ಮಾನ್ಯ ಮುಖ್ಯಮಂತ್ರಿಗಳು ಕೂಡ ಹನುಮಂತನಿಗೆ ಐದು ಲಕ್ಷ ರೂ ಬಹುಮಾನ ಘೋಷಿಸಿದ್ದರು. ಹನುಮಂತನಿಗೆ ನಿಮ್ಮ ಶುಭ ಹಾರೈಕೆ ತಿಳಿಸಿ.

Please follow and like us:
error0
http://karnatakatoday.in/wp-content/uploads/2019/01/hanaumanta-next-song-1024x576.jpghttp://karnatakatoday.in/wp-content/uploads/2019/01/hanaumanta-next-song-150x104.jpgKarnataka Trendingಅಂಕಣಎಲ್ಲಾ ಸುದ್ದಿಗಳುಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಶೋ ಮೂಲಕ ಕರುನಾಡಿನಾದ್ಯಂತ ಮನೆಮಾತಾಗಿರುವ ಹನುಮಂತ ಕನ್ನಡಿಗರ ಫೆವರಿಟ್ ಗಾಯಕನಾಗಿದ್ದಾನೆ. ಪ್ರತಿ ವಾರಕ್ಕೂ ಈತ ಹಾಡುವ ಹಾಡಿಗೆ ಅದ್ಬುತ ರೆಸ್ಪಾನ್ಸ್ ದೊರೆಯುತ್ತದೆ ಮತ್ತು ಜನರ ಪ್ರೀತಿಗೆ ಪಾತ್ರನಾಗಿದ್ದಾನೆ, ಇನ್ನು ಇಂತಹ ಪ್ರತಿಭೆಯನ್ನು ಗುರುತಿಸಿಕೊಟ್ಟ ಕೀರ್ತಿ ಜೀ ಕನ್ನಡ ವಾಹಿನಿಗೆ ಸಲ್ಲುತ್ತದೆ. ಎಲ್ಲೋ ತೆರೆ ಮರೆಯಲ್ಲಿದ್ದ ಪ್ರತಿಭೆಯನ್ನು ಗುರುತಿಸಿ ಮುಖ್ಯ ವೇದಿಕೆಯಲ್ಲಿ ಅವರನ್ನ ಗುರುತಿಸುವ ಪ್ರಯತ್ನ ಮಾಡುತ್ತಿದೆ ಜೀ ವಾಹಿನಿ. ಇನ್ನು ಹನುಮಂತನ ಬಗ್ಗೆ...Film | Devotional | Cricket | Health | India