ರಾಮಾಯಣದ ಕಥಾಪ್ರಪಂಚದಲ್ಲಿ ರಾಮ ನಾಯಕನಾದರೆ, ಹನುಮಂತ ಉಪನಾಯಕ. ಸ್ವಾಮಿನಿಷ್ಠೆಗೆ, ಭಕ್ತಿಗೆ ಇನ್ನೊಂದು ಹೆಸರು ಹನುಮಂತ. ಅಂಜನೆಯ ಗರ್ಭದಲ್ಲಿ ಹುಟ್ಟಿ ಆಂಜನೇಯನೆನಿಸಿದ. ಹನೂಮಂತ, ವಾಯಪುತ್ರ, ಪವನಸಂಭವ, ಮಾರುತಿ ಹೀಗೆ ಅನೇಕ ಹೆಸರುಗಳಿಂದ ಪ್ರಸಿದ್ಧನಾದವನು. ವಾಯುವಿನ ಅಂಶದಿಂದ ಕೇಸರಿಯಲ್ಲಿ ವಾನರನಾಗಿ ಹುಟ್ಟಿ, ಸುಗ್ರೀವನ ಮಂತ್ರಿಯಾದನು. ಅವನ ಅಸಾಧಾರಣವಾದ ಬಲ, ಪರಾಕ್ರಮ, ಬುದ್ಧಿವಂತಿಕೆ ರಾಮಾಯಣದುದ್ದಕ್ಕೂ ತೋರಿಬರುತ್ತದೆ. ಹಾಗಾದರೆ ಹನುಮಂತ ಈಗ ಎಲ್ಲಿದ್ದಾನೆ ಆತ ಬದುಕಿದ್ದಾನೆಯೇ ಆತ ಚಿರಂಜೀವಿಯೇ ಇದರ ಬಗ್ಗೆ ಈ ಲೇಖನವನ್ನು ಓದೋಣ ಬನ್ನಿ.

ನೀವು ಹನುಮಂತನ ಭಕ್ತರಾಗಿದ್ದರೆ ಈ ಸ್ಟೋರಿ ನಿಮಗೆ ಆಶ್ಚರ್ಯ ಎನ್ನಿಸಬಹುದು ಹೌದು ಪ್ರಾಚೀನ ಕಾಲದ ಪಳೆಯುಳಿಕೆಗಳು ಹಾಗು ಹಿಮಾಲಯದಲ್ಲಿ ಈ ಹಿಂದೆ ದೊರಕಿರುವ ದೊಡ್ಡದಾದ ಕಾಲಿನ ಹೆಜ್ಜೆಗಳು ಹನುಮಂತ ಅಮರನಾಗಿದ್ದಾನೆ ಆತ ಚಿರಂಜೀವಿ ಎನ್ನುವದಕ್ಕೆ ಸಾಕ್ಷ್ಯ ಒದಗಿಸುತ್ತದೆ. ಹಾಗಿದ್ದರೆ ಹನುಮಂತನ ಇರುವಿಕೆ ಬಗ್ಗೆ ಇರುವ ಈ ಜೀವಂತ ಸಾಕ್ಷ್ಯಗಳ ಬಗ್ಗೆ ಒಮ್ಮೆ ಕಣ್ಣು ಹಾಯಿಸೋಣ ಬನ್ನಿ. ಸಾಮಾನ್ಯವಾಗಿ ನೀವು ಹನುಮಂತನ ಜೀವನ ಚರಿತ್ರೆಯ ಬಗ್ಗೆ ಸ್ವಲ್ಪ ಅಧ್ಯಯನ ಮಾಡಿದರೆ ಹನುಮಂತನ ಸಾವಿನ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ, ಹೌದು ತ್ರೇತಾಯುಗದಲ್ಲಿ ರಾಮಾಯಣ ಘಟಿಸಿರುವುದು ಹೀಗಾಗಿ ಯಾವ ಗ್ರಂಥದಲ್ಲೂ ಕೂಡ ಹನುಮಂತನ ಅಂತ್ಯದ ಬಗ್ಗೆ ವಿವರವಿಲ್ಲ ಎನ್ನಬಹದು.

ಎರಡನೆಯದು ಹನುಮಂತ ಚಿರಂಜೀವಿ ಯಾಕೆಂದರೆ ಹನುಮಂತನ ಬಗ್ಗೆ ತ್ರೇತಾ ಯುಗ ಮತ್ತು ದ್ವಾಪರಯುಗ ಅಂದರೆ ಮಹಾಭಾರತ ಸಂಭವಿಸಿದ ಕಾಲದಲ್ಲಿಯೂ ಕೂಡ ಹನುಮಂತನ ಬಗ್ಗೆ ಕಥೆಗಳಿವೆ ಆದ್ದರಿಂದ ಕಲಿಯುಗದಲ್ಲಿಯೂ ಹನುಮಂತನಿಗೆ ಕಾಲ ಕಾಲಕ್ಕೆ ಅವತಾರ ಎತ್ತುವ ವಿಶೇಷ ವರವಿದೆ ಎನ್ನಬಹುದು. ಇಷ್ಟೇ ಅಲ್ಲದೆ ಹನುಮಂತ ಹಿಮಾಲಯದ ಕಾಡುಗಳಲ್ಲಿ ಬದುಕಿದ್ದಾನೆ ಎನ್ನುವುದಕ್ಕೆ ಈ ಹಿಂದೆ ಹಲವು ಸಾಕ್ಷ್ಯಗಳು ಕೂಡ ದೊರೆತಿದ್ದವು. ಕಲ್ಲುಗಳ ಮೇಲೆ ದೊರೆತ ದೊಡ್ಡ ಗಾತ್ರದ ಕಾಲಿನ ಹೆಜ್ಜೆಗಳನ್ನು ಕೆಲವರು ಚಿತ್ರೀಕರಿಸಿದ್ದಾರೆ. ಇದನ್ನು ಹಲವಾರು ಇಂದಿಗೂ ಹನುಮಂತನ ಅವತಾರ ಎನ್ನುತ್ತಾರೆ.

hanumanta alive kaliyuga

ಅನುಮಾನ ಇದ್ದರೆ 1988 ರಲ್ಲಿ ಸಿಕ್ಕ ಹಲವು ಫೋಟೋಗಳು ಇಂದಿಗೂ ಕೂಡ ಇಂಟರ್ನೆಟ್ ನಲ್ಲಿ ನೀವು ಹುಡುಕಿ ನೋಡಬಹುದು. ಹಿಮಾಲಯ ಅಷ್ಟೇ ಅಲ್ಲದೆ ರಾಮೇಶ್ವರಂ ನಲ್ಲಿಯೂ ಕೂಡ ಹನುಮನ ಅಸ್ತಿತ್ವದ ಬಗ್ಗೆ ಹಲವು ಚಾರಿತ್ರಿಕ ಕಥೆಗಳಿವೆ ಮತ್ತು ಇಲ್ಲಿ ಶ್ರೀರಾಮನಿಗೂ ಮತ್ತು ಹನುಮನಿಗೂ ಒಂದು ನಂಟಿದೆ ಎನ್ನುತ್ತಾರೆ ಅಲ್ಲಿನ ಸ್ಥಳೀಯರು. ಇನ್ನು ಕಲಿಯುಗದ ಆರಂಭದ ದಿನಗಳಲ್ಲಿ ದೊಡ್ಡ ದೊಡ್ಡ ಸನ್ಯಾಸಿಗಳಿಗೆ ಸಾಧು ಸಂತರಿಗೆ ಹನುಮಂತ ದರ್ಶನ ನೀಡಿದ್ದ ಮತ್ತು ಪ್ರೇರಕನಾಗಿದ್ದ ಎನ್ನುವು ಅಂಶ ಕೂಡ ಇದೆ. ಇನ್ನು ಹದಿನಾರನೇ ಶತಮಾನದಲ್ಲಿ ಹನುಮಂತನಿಂದ ಪ್ರಭಾವಿತನಾಗಿಯೇ ತುಳಸಿ ದಾಸ ರಾಮಾಯಣದ ಬಗ್ಗೆ ಕೆಲ ಲೇಖನಗಳನ್ನು ಬರೆಯುತ್ತಾನೆ.

ಇದಲ್ಲದೆ ಪೂಜ್ಯನೀಯ ರಾಘವೇಂದ್ರ ಸ್ವಾಮಿಗಳು, ಸ್ವಾಮಿ ರಾಮದಾಸ ಮತ್ತು ಶ್ರೀ ಸತ್ಯ ಸಾಯಿಬಾಬಾ ಕೂಡ ಹನುಮಂತನಿಂದ ಅನುಗ್ರಹ ಪಡೆದಿದ್ದರು ಎನ್ನುತ್ತಾರೆ ಹಲವಾರು, ಇದು ಎಷ್ಟರ ಮಟ್ಟಿಗೆ ಸತ್ಯವೋ ಸುಳ್ಳೋ ಗೊತ್ತಿಲ್ಲ ಆದರೆ ಪುರಾಣದ ಅವಶೇಷಗಳು ಹಾಗು ದೊರೆತ ಜೀವಂತ ಸಾಕ್ಷ್ಯಗಳು ಹನುಮಂತನದ್ದೇ ಎನ್ನುತ್ತಾರೆ ಹಲವು ಮಂದಿ. ಈ ಮಾಹಿತಿ ಇಷ್ಟವಾಗಿದ್ದರೆ ದಯವಿಟ್ಟು ಹಂಚಿಕೊಳ್ಳಿ ಮತ್ತು ಇತರರಿಗೂ ತಲುಪಿಸಿ ಜೈ ಆಂಜನೇಯ.

Please follow and like us:
0
http://karnatakatoday.in/wp-content/uploads/2018/12/hanuman-alive-1024x576.jpghttp://karnatakatoday.in/wp-content/uploads/2018/12/hanuman-alive-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಸುದ್ದಿಜಾಲರಾಮಾಯಣದ ಕಥಾಪ್ರಪಂಚದಲ್ಲಿ ರಾಮ ನಾಯಕನಾದರೆ, ಹನುಮಂತ ಉಪನಾಯಕ. ಸ್ವಾಮಿನಿಷ್ಠೆಗೆ, ಭಕ್ತಿಗೆ ಇನ್ನೊಂದು ಹೆಸರು ಹನುಮಂತ. ಅಂಜನೆಯ ಗರ್ಭದಲ್ಲಿ ಹುಟ್ಟಿ ಆಂಜನೇಯನೆನಿಸಿದ. ಹನೂಮಂತ, ವಾಯಪುತ್ರ, ಪವನಸಂಭವ, ಮಾರುತಿ ಹೀಗೆ ಅನೇಕ ಹೆಸರುಗಳಿಂದ ಪ್ರಸಿದ್ಧನಾದವನು. ವಾಯುವಿನ ಅಂಶದಿಂದ ಕೇಸರಿಯಲ್ಲಿ ವಾನರನಾಗಿ ಹುಟ್ಟಿ, ಸುಗ್ರೀವನ ಮಂತ್ರಿಯಾದನು. ಅವನ ಅಸಾಧಾರಣವಾದ ಬಲ, ಪರಾಕ್ರಮ, ಬುದ್ಧಿವಂತಿಕೆ ರಾಮಾಯಣದುದ್ದಕ್ಕೂ ತೋರಿಬರುತ್ತದೆ. ಹಾಗಾದರೆ ಹನುಮಂತ ಈಗ ಎಲ್ಲಿದ್ದಾನೆ ಆತ ಬದುಕಿದ್ದಾನೆಯೇ ಆತ ಚಿರಂಜೀವಿಯೇ ಇದರ ಬಗ್ಗೆ ಈ ಲೇಖನವನ್ನು...Kannada News