ಹನುಮಂತ ಅಪ್ಪಟ ರಾಮ ಭಕ್ತ , ತನ್ನಲ್ಲಿರುವ ಅಪಾರ ಶಕ್ತಿ ಮತ್ತು ವಿವೇಚನೆಯಿಂದ ಲಂಕೆಯನ್ನು ಗೆದ್ದು ಸೀತಾಮಾತೆಯನ್ನು ಹಿಂಪಡೆಯುವಲ್ಲಿ ಪ್ರಭು ಶ್ರೀರಾಮನಿಗೆ ಸಹಾಯ ಮಾಡುತ್ತಾನೆ. ಕಲಿಯುಗದಲ್ಲಿ ಹನುಮಂತ ಅಷ್ಟು ಸುಲಭವಾಗಿ ಒಲಿಯುವುದಿಲ್ಲ ಆತನ ಕ್ರಪೆಗೆ ಪಾತ್ರರಾಗುವುದು ಅಷ್ಟು ಸುಲಭವಲ್ಲ. ಹೀಗಾಗಿ ಹನುಮಂತನ ಸ್ಮರಣೆ ಮಾಡುವುದು ಬಹಳ ಅತ್ಯಗತ್ಯ.

ರಾಶಿ ಫಲದ ಅನುಗುಣವಾಗಿ ಈ ಬಾರಿ ನಡೆಯುವ ಪರಿವರ್ತನೆ ಈ ನಾಲ್ಕು ರಾಶಿಗಳಿಗೆ ಆಂಜನೇಯನ ಕ್ರಪೆ ಮುಂದಿನ ಎರಡು ತಿಂಗಳವರೆಗೆ ಇರಲಿದೆ. ಹಾಗಿದ್ದರೆ ಆ ರಾಶಿಗಳ ಫಲ ಏನು ತಿಳಿಯೋಣ ಬನ್ನಿ. ಮೊದಲನೆಯದು ಮೇಷ ರಾಶಿ ಮಾನಸಿಕವಾಗಿ ಸದೃಢರಾಗುವಿರಿ.

ಸಹೋದರ ಸಹೋದರಿಯರಿಂದ ಹೆಚ್ಚಿನ ಸಹಕಾರ ದೊರೆಯುವುದಿಲ್ಲ. ಕಾರ್ತಿಕೇಯನನ್ನು ಆರಾಧಿಸಿ. ಪ್ರತಿ ಸಂಜೆ ಮನೆ ಮುಂದೆ ದೀಪಗಳನ್ನು ಬೆಳಗಿಸಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಆಂಜನೇಯ ಸ್ತೋತ್ರವನ್ನು ತಪ್ಪದೆ ಪಾರಾಯಣ ಮಾಡಿ. ಸಂಗಾತಿಯ ಸಲಹೆ ಸ್ವೀಕರಿಸಿ.

ಮಿಥುನದವರು ಆಪತ್ಕಾಲದಲ್ಲಿ ಆದವನೇ ನೆಂಟ ಎಂಬುದನ್ನು ಮರೆಯದಿರಿ. ನಿಮ್ಮ ಸಮಸ್ಯೆಗಳಿಗೆ ಹಲವರು ಹಲವು ರೀತಿಯ ಸಲಹೆಗಳನ್ನು ನೀಡುವರು. ಈ ಸಲಹೆಗಳನ್ನು ಏಕಚಿತ್ತದಿಂದ ಸ್ವೀಕರಿಸಿ ಮತ್ತು ನಿಮ್ಮ ವಿವೇಚನೆಯಿಂದ ಅದನ್ನು ಬಳಸಿಕೊಳ್ಳಿ. ಅನ್ಯರಿಂದ ಹಣದ ವಿಷಯದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ. ಮನೆಯಲ್ಲಿ ಸಣ್ಣಪುಟ್ಟ ವಾದ ವಿವಾದಗಳು ನಡೆಯುವವು.

ವೃಶ್ಚಿಕದವರು ಅಧಿಕಾರ ಮತ್ತು ವರ್ಚಸ್ಸನ್ನು ವರ್ಧಿಸಿಕೊಳ್ಳುವ ಶಕ್ತಿ ನಿಮಗೆ ಹೇರಳವಾಗಿದೆ. ಆದರೆ ನನ್ನ ಕೈಲಿ ಏನೂ ಆಗುತ್ತಿಲ್ಲ ಎಂಬ ನೆಗೆಟಿವ್‌ ಚಿಂತನೆಯಿಂದ ಗಾಣದ ಎತ್ತಿನಂತೆ ಒಂದೇ ದಾರಿಯಲ್ಲಿ ಸುತ್ತುತ್ತಿರುವಿರಿ. ಸ್ವಲ್ಪ ಅದರಿಂದ ಹೊರ ಬಂದು ನೋಡಿ. ನಿಮ್ಮ ಕರ್ತೃತ್ವ ಶಕ್ತಿಗೆ ತಕ್ಕಂತೆ ಕೆಲಸದಲ್ಲಿ ಜಯ ಹೊಂದುವಿರಿ. ಭಯವಿರುವವರೆಗೆ ಜಯವಿಲ್ಲ. ಧೈರ್ಯದಿಂದ ಮುನ್ನಡೆಯುವ ಇಚ್ಛಾಶಕ್ತಿ ರೂಢಿಸಿಕೊಳ್ಳಿ.

ಧನಸ್ಸು ರಾಶಿಯವರು ಮನಸ್ಸಿನಲ್ಲಿ ಮಂಕು ಕವಿದ ವಾತಾವರಣವಿರುವುದು. ಜೀವನ ನಿಸ್ಸಾರ ಎನಿಸುವುದು. ಚುರುಕುತನ ಕಂಡುಕೊಳ್ಳಲು ಆಂಜನೇಯ ಸ್ತೋತ್ರ ಪಠಿಸಿ. ಕಪ್ಪು ಹಸುವಿಗೆ ಬಾಳೆಹಣ್ಣು ಅಥವಾ ಅಕ್ಕಿ ಬೆಲ್ಲ ನೀಡಿ. ನಿಮ್ಮ ವಿಚಾರದಲ್ಲಿ ಅನ್ಯರ ಹಸ್ತಕ್ಷೇಪ ಹಾಗೂ ಮೇಲಧಿಕಾರಿಗಳೊಂದಿಗೆ ಗುಟ್ಟಾಗಿ ನಿಮ್ಮ ಬಗ್ಗೆ ಚಾಡಿ ಮಾತುಗಳು ನಡೆಯುತ್ತಲೇ ಇರುತ್ತವೆ. ಈ ಬಗ್ಗೆ ಚಿಂತಿಸಬೇಡಿ. ಸಮಯವಿದ್ದರೆ ಜೈ ಆಂಜನೇಯ ಎಂದು ತಿಳಿಸಿ.

Please follow and like us:
0
http://karnatakatoday.in/wp-content/uploads/2019/01/ANJANEYA-1024x576.pnghttp://karnatakatoday.in/wp-content/uploads/2019/01/ANJANEYA-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುಹನುಮಂತ ಅಪ್ಪಟ ರಾಮ ಭಕ್ತ , ತನ್ನಲ್ಲಿರುವ ಅಪಾರ ಶಕ್ತಿ ಮತ್ತು ವಿವೇಚನೆಯಿಂದ ಲಂಕೆಯನ್ನು ಗೆದ್ದು ಸೀತಾಮಾತೆಯನ್ನು ಹಿಂಪಡೆಯುವಲ್ಲಿ ಪ್ರಭು ಶ್ರೀರಾಮನಿಗೆ ಸಹಾಯ ಮಾಡುತ್ತಾನೆ. ಕಲಿಯುಗದಲ್ಲಿ ಹನುಮಂತ ಅಷ್ಟು ಸುಲಭವಾಗಿ ಒಲಿಯುವುದಿಲ್ಲ ಆತನ ಕ್ರಪೆಗೆ ಪಾತ್ರರಾಗುವುದು ಅಷ್ಟು ಸುಲಭವಲ್ಲ. ಹೀಗಾಗಿ ಹನುಮಂತನ ಸ್ಮರಣೆ ಮಾಡುವುದು ಬಹಳ ಅತ್ಯಗತ್ಯ. ರಾಶಿ ಫಲದ ಅನುಗುಣವಾಗಿ ಈ ಬಾರಿ ನಡೆಯುವ ಪರಿವರ್ತನೆ ಈ ನಾಲ್ಕು ರಾಶಿಗಳಿಗೆ ಆಂಜನೇಯನ ಕ್ರಪೆ ಮುಂದಿನ ಎರಡು ತಿಂಗಳವರೆಗೆ ಇರಲಿದೆ....Kannada News