ಕಲಾ ಸರಸ್ವತಿ ಯಾರ ಸೊತ್ತಲ್ಲ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ ಬಡ ಕಲಾವಿದ ಹನುಮಂತ ಹೌದು ಇದೀಗ ಎಲ್ಲೆಲ್ಲೂ ಹನುಮಂತನ ವಿಷಯ ಚರ್ಚೆಯಾಗುತ್ತಿದೆ. ಬಡವನಿಗೆ ವೇದಿಕೆ ಕಲ್ಪಿಸಿದ ಕೀರ್ತಿ ಜಿ ತಂಡಕ್ಕೆ ಸಲ್ಲುತ್ತದೆ. ಜೀ ವಾಹಿನಿಯಲ್ಲಿ ಪ್ರಸಾರವಾಗುವ ಸರೆಗಮಪ ಸೀಸನ್ 15ರ ಮೆಗಾ ಆಡಿಷನ್ ನಲ್ಲಿ ಸಂಗೀತ ಮಾಂತ್ರಿಕರ ಮನಗೆದ್ದ ಹಾವೇರಿಯ ಕುರಿಗಾಹಿ ಹನುಮಂತ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪ್ರಸಿದ್ಧರಾಗಿದ್ದಾರೆ.  ನಿನ್ ಒಳಗೆ ನೀನು ತಿಳಿದು ನೋಡಣ್ಣ ಎಂಬ ಜಾನಪದ ಹಾಡಿನ ಮೂಲಕ ಹನುಮಂತ ತೀರ್ಪುಗಾರರ ಕಣ್ತೇರಿಸಿದ್ದರು. ಅಲ್ಲದೆ ತೀರ್ಪುಗಾರರಿಂದ ಹೊಗಳಿಸಿಕೊಂಡು ಸ್ಫರ್ಧೆಗೆ ಆಯ್ಕೆಯಾಗಿದ್ದರು. ಇನ್ನು ಅಲ್ಲಿ ನೆರೆದಿದ್ದ ಅಭಿಮಾನಿಗಳು ಮತ್ತೊಮ್ಮೆ ಹಾಡುವಂತೆ ಹನುಮಂತ ನನ್ನು ಕೇಳಿಕೊಂಡರು.

ಅಷ್ಟರ ಮಟ್ಟಿಗೆ ಹನುಮಂತನ ಹಾಡು ಜನರಿಗೆ ಇಷ್ಟವಾಗಿತ್ತು. ಇನ್ನು ಹನುಮಂತ ಅವರಿಗೆ ಒಂದು ಹಾಡಿಗೆ ಸಿಗಲಿರುವ ಸಂಭಾವನೆ ಕೇಳಿದ್ರೆ ನೀವು ಶಾಕ್ ಆಗುವಿರಿ ಮುಗ್ಧ ಮನಸಿನ ಹಳ್ಳಿ ಹೈದನ ಪ್ರತಿಭೆಯ ಅನಾವರಣಕ್ಕೆ ಸರಿಗಮಪ ವೇದಿಕೆ ಮೂಲಕ ದೊಡ್ಡ ಅವಕಾಶ ಸಿಕ್ಕಂತಾಗಿದೆ. ಈತನ ಕಂಠದಿಂದ ಹೊರಹೊಮ್ಮಿದ ಜಾನಪದ ಗೀತೆಗೆ ನಾದಬ್ರಹ್ಮ ಹಂಸಲೇಖ ಅವರೇ ಫಿದಾ ಆದರು. ತಮ್ಮ ಬಳಿ ಕರೆದು ಹನುಮಂತನಿಗೆ ತಮ್ಮ ಕೊರಳಿನಲ್ಲಿದ್ದ ವಸ್ತ್ರವನ್ನು ಆತನಿಗೆ ನೀಡಿ ಪ್ರೋತ್ಸಾಹಿಸಿದರು.

 

ಯಾವುದೇ ಸಂಗೀತ ತರಬೇತಿಯನ್ನು ಪಡೆಯದೆ ಕುರಿ ಮೇಯಿಸುತ್ತಾ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರೆಗಮಪ ಸೀಸನ್ 15 ಕಾರ್ಯಕ್ರಮಕ್ಕೆ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರುಬಡ್ನಿ ತಾಂಡಾದ ನಿವಾಸಿ ಹನುಮಂತ ಆಯ್ಕೆಯಾಗಿದ್ದು ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

ಬಲ್ಲ ಮೂಲಗಳ ಪ್ರಕಾರ ಎಲ್ಲ ಸರಿಗಮಪ ಸ್ಪರ್ಧಿಗಳಿಗೂ ಒಂದೊಂದು ಎಪಿಸೋಡ್ ಗೆ 10 ರಿಂದ 15 ಸಾವಿರ ರೂನಷ್ಟು ಸಂಭಾವನೆ ಸಿಗಲಿದೆ ನಮ್ಮ ಹನುಮಂತನಿಗೂ ಕೂಡ ಇಷ್ಟೇ ಇರಲಿದೆ. ಹನುಮಂತನ ಗಾಯನ ನಿಮಗೆ ಇಷ್ಟ ಆಗಿದ್ರೆ ಈ ಬಾರಿ ಯಾರು ವಿಜೇತರಾಗಬೇಕು ಎನ್ನುವುದನ್ನು ಕಾಮೆಂಟ್ ಮಾಡಿ ತಿಳಿಸಿ.

Please follow and like us:
0
http://karnatakatoday.in/wp-content/uploads/2018/10/hanumantha-sarigamapa-1024x576.pnghttp://karnatakatoday.in/wp-content/uploads/2018/10/hanumantha-sarigamapa-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುಸುದ್ದಿಜಾಲಕಲಾ ಸರಸ್ವತಿ ಯಾರ ಸೊತ್ತಲ್ಲ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ ಬಡ ಕಲಾವಿದ ಹನುಮಂತ ಹೌದು ಇದೀಗ ಎಲ್ಲೆಲ್ಲೂ ಹನುಮಂತನ ವಿಷಯ ಚರ್ಚೆಯಾಗುತ್ತಿದೆ. ಬಡವನಿಗೆ ವೇದಿಕೆ ಕಲ್ಪಿಸಿದ ಕೀರ್ತಿ ಜಿ ತಂಡಕ್ಕೆ ಸಲ್ಲುತ್ತದೆ. ಜೀ ವಾಹಿನಿಯಲ್ಲಿ ಪ್ರಸಾರವಾಗುವ ಸರೆಗಮಪ ಸೀಸನ್ 15ರ ಮೆಗಾ ಆಡಿಷನ್ ನಲ್ಲಿ ಸಂಗೀತ ಮಾಂತ್ರಿಕರ ಮನಗೆದ್ದ ಹಾವೇರಿಯ ಕುರಿಗಾಹಿ ಹನುಮಂತ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪ್ರಸಿದ್ಧರಾಗಿದ್ದಾರೆ.  ನಿನ್ ಒಳಗೆ ನೀನು ತಿಳಿದು ನೋಡಣ್ಣ ಎಂಬ ಜಾನಪದ...Kannada News