ಹಾರ್ಧಿಕ್ ಪಾಂಡ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ತನ್ನ ಸ್ಪೋಟಕ ಬ್ಯಾಟಿಂಗ್, ಫೀಲ್ಡಿಂಗ್ ಮತ್ತು ಬೌಲಿಂಗ್ ಮೂಲಕ ಎದುರಾಳಿ ತಂಡವನ್ನ ಗಡಗಡ ನಡುಗಿಸಿದ ಭಾರತ ಹೆಮ್ಮಯ ಆಟಗಾರ ಅಂದರೆ ಹಾರ್ದಿಕ ಪಾಂಡ್ಯ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕೆಲವು ಸಮಯದಲ್ಲಿ ಕಾಲಿಗೆ ತೀವ್ರವಾದ ಪೆಟ್ಟು ಆದಕಾರಣ ಕೆಲವು ಪಂದ್ಯಗಳಿಂದ ಹೊರಗೆ ಇದ್ದರೆ ಹಾರ್ಧಿಕ್ ಪಾಂಡ್ಯ, ಇನ್ನು ಹಾರ್ಧಿಕ್ ಪಾಂಡ್ಯ ಅವರು ತಮ್ಮ ಬಹುದಿನಗಳ ಪ್ರೀತಿಯನ್ನ ಸಾರ್ವಜನಿಕರ ಮುಂದೆ ಒಪ್ಪಿಕೊಳ್ಳುವುದರ ಮೂಲಕ ಹೊಸ ವರ್ಷವನ್ನ ಬಹಳ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಸ್ನೇಹಿತರೆ ನೀವು ಆಶ್ಚರ್ಯ ಪಡೆಬೇಕಾದ ಇನ್ನೊಂದು ವಿಷಯ ಏನು ಅಂದರೆ ಹಾರ್ಧಿಕ್ ಪಾಂಡ್ಯ ಪ್ರೀತಿ ಮಾಡುತ್ತಿರುವ ಹುರುಗಿ ಕನ್ನಡ ಚಿತ್ರದಲ್ಲಿ ಅಭಿನಯವನ್ನ ಮಾಡಿದ್ದಾರೆ.

ಹಾಗಾದರೆ ಹಾರ್ಧಿಕ್ ಪಾಂಡ್ಯ ಪ್ರೀತಿ ಮಾಡುತ್ತಿರುವ ಹುಡುಗಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತಿವು ಪೂರ್ತಿಯಾಗಿ ಓದಿ ಮತ್ತು ಇವರ ಜೋಡಿ ಹೇಗಿದೆ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಹಾರ್ಧಿಕ್ ಪಾಂಡ್ಯ ಹಲವು ದಿನಗಳಿಂದ ಸರ್ಬಿಯಾ ಮೂಲದ ಮಾಡೆಲ್ ನತಾಶಾ ಅವರ ಜೊತೆ ಡೇಟಿಂಗ್ ಮಾಡುತ್ತಿದ್ದರು ಮತ್ತು ಇವರಿಬ್ಬರೂ ವಿವಾಹಕ್ಕೆ ಸಜ್ಜಾಗುತ್ತಿದ್ದಾರೆ ಅನ್ನುವ ಸುದ್ದಿ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇನ್ನು ನತಾಶಾ ಅವರ ಜೊತೆ ಹಸೆಮಣೆಯನ್ನ ಏರಲು ಹಾರ್ದಿಕ ಪಾಂಡ್ಯ ಎಲ್ಲಾ ತಯಾರಿಯನ್ನ ಮಾಡಿಕೊಂಡಿದ್ದಾರೆ ಮತ್ತು ಇವರ ಮದುವೆಗೆ ಪಾಂಡ್ಯ ಅವರ ಕುಟುಂಬದವರು ಒಪ್ಪಿಗೆಯನ್ನ ಕೂಡ ಸೂಚಿಸಿದ್ದಾರೆ. ಸರ್ಬಿಯಾ ಮೂಲಕ ನತಾಶಾ ಸದ್ಯಕ್ಕೆ ಬಾಲಿವುಡ್ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Hardhik Pandy and Natasha

ಇನ್ನು ನಟಿ ನತಾಶಾ ಅವರು ಈ ಹಿಂದೆ ಯೋಗರಾಜ್ ಭಟ್ ಅವರು ನಿರ್ದೇಶನ ಮಾಡಿದ್ದ ದನ ಕಾಯೋನು ಚಿತ್ರದಲ್ಲಿ ನತಾಶಾ ಅವರು ವಿಶೇಷ ಪಾತ್ರದಲ್ಲಿ ಅಭಿನಯವನ್ನ ಮಾಡಿದ್ದರು ಮತ್ತು ದುನಿಯಾ ವಿಜಯ್ ಅವರ ಗಂಗೆ ಬಾರೆ ಹಾಡಿಗೆ ಸ್ಟೆಪ್ ಕೂಡ ಹಾಕಿದ್ದರು ನತಾಶಾ ಅವರು. ಇನ್ನು ಮಾಡೆಲ್ ಮತ್ತು ನಟಿ ಆಗಿರುವ ನತಾಶಾ ಅವರು ಬಿಗ್ ಬಾಸ್ ಹಿಂದಿ ಸೀಸನ್ 8 ರಲ್ಲಿ ಸ್ಪರ್ಧಿಯಾಗಿ ಕೂಡ ಮಿಂಚಿದ್ದರು, ಇನ್ನು ಹಿಂದಿಯ ಕೆಲವು ಡಾನ್ಸ್ ಸ್ಪಧೆಗಳಲ್ಲಿ ಕೂಡ ಭಾವಹಿಸಿದ್ದಾರೆ ನತಾಶಾ ಅವರು, ಇದರ ಜೊತೆಗೆ ಹಿಂದಿಯ ಕೆಲವು ಸಿನಿಮಾಗಳಲ್ಲಿ ಕೂಡ ನತಾಶಾ ಅವರು ಬಣ್ಣವನ್ನ ಹಚ್ಚಿದ್ದಾರೆ. ಈಗಾಗಲೇ ಪಾಂಡ್ಯ ಅವರು ತನ್ನ ಕುಟುಂಬದವರಿಗೆ ನತಾಶರನ್ನ ಪರಿಚಯ ಮಾಡಿಕೊಟ್ಟಿದ್ದು ಕೆಲವು ದಿನಗಳ ಹಿಂದೆ ಕ್ರಿಕೆಟ್ ಆಟಗಾರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಹಾರ್ಧಿಕ್ ಪಾಂಡ್ಯ ಅವರ ಜೊತೆ ಕಾಣಿಸಿಕೊಂಡಿದ್ದರು ನತಾಶಾ ಅವರು.

ಇನ್ನು ಮೊನ್ನೆ ಹೊಸ ವರ್ಷದ ತನ್ನ ತಮ್ಮ ನತಾಶಾ ಅವರ ನಡುವೆ ಪ್ರೀತಿ ಇದೆ ಅನ್ನುವುದನ್ನ ಹಾರ್ಧಿಕ್ ಪಾಂಡ್ಯ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಇನ್ನು ಹಾರ್ದಿಕ ಪಾಂಡ್ಯ ಅವರು ನತಾಶಾ ಅವರ ಜೊತೆಗೆ ಇರುವ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರ ಮೂಲಕ ಅಭಿಮಾನಿಗಳ ಕೆಲವು ಪ್ರಶ್ನೆಗಳಿಗೆ ಉತ್ತರವನ್ನ ಕೊಟ್ಟಿದ್ದಾರೆ. ಹೌದು ಹಿಂದೆ ಅನೇಕ ನಟಿಮಣಿಯರ ಹೆಸರುಗಳು ಹಾರ್ದಿಕ ಪಾಂಡ್ಯ ಅವರ ಜೊತೆ ಕೇಳಿಬಂದಿದ್ದರೂ ಕೂಡ ಅದೂ ಅಧಿಕೃತವಾಗಿರಲಿಲ್ಲ, ಆದರೆ ಈಗ ಅಧಿಕೃತವಾಗಿ ಪಾಂಡ್ಯ ಅವರೇ ಹೇಳಿಕೊಡಿದ್ದಾರೆ, ಸ್ನೇಹಿತರೆ ಇವರಿಬ್ಬರ ಜೋಡಿ ಬಗ್ಗೆ ನಿಮ್ಮ ಅಭಿಪ್ರಾಯವನ್ನ ತಿಳಿಸಿ.

Hardhik Pandy and Natasha

Please follow and like us:
error0
http://karnatakatoday.in/wp-content/uploads/2020/01/Hardhik-Pandy-and-Natasha-1024x576.jpghttp://karnatakatoday.in/wp-content/uploads/2020/01/Hardhik-Pandy-and-Natasha-150x104.jpgeditorಎಲ್ಲಾ ಸುದ್ದಿಗಳುಕ್ರಿಕೆಟ್ಬೆಂಗಳೂರುಸುದ್ದಿಜಾಲಹಾರ್ಧಿಕ್ ಪಾಂಡ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ತನ್ನ ಸ್ಪೋಟಕ ಬ್ಯಾಟಿಂಗ್, ಫೀಲ್ಡಿಂಗ್ ಮತ್ತು ಬೌಲಿಂಗ್ ಮೂಲಕ ಎದುರಾಳಿ ತಂಡವನ್ನ ಗಡಗಡ ನಡುಗಿಸಿದ ಭಾರತ ಹೆಮ್ಮಯ ಆಟಗಾರ ಅಂದರೆ ಹಾರ್ದಿಕ ಪಾಂಡ್ಯ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕೆಲವು ಸಮಯದಲ್ಲಿ ಕಾಲಿಗೆ ತೀವ್ರವಾದ ಪೆಟ್ಟು ಆದಕಾರಣ ಕೆಲವು ಪಂದ್ಯಗಳಿಂದ ಹೊರಗೆ ಇದ್ದರೆ ಹಾರ್ಧಿಕ್ ಪಾಂಡ್ಯ, ಇನ್ನು ಹಾರ್ಧಿಕ್ ಪಾಂಡ್ಯ ಅವರು ತಮ್ಮ ಬಹುದಿನಗಳ ಪ್ರೀತಿಯನ್ನ ಸಾರ್ವಜನಿಕರ ಮುಂದೆ ಒಪ್ಪಿಕೊಳ್ಳುವುದರ...Film | Devotional | Cricket | Health | India