ಸ್ಯಾಂಡಲ್ವುಡ್ ನಲ್ಲಿ ಕಳೆದ ಕೆಲ ದಿನಗಳಿಂದ ಅರ್ಜುನ್ ಸರ್ಜಾ ಮತ್ತು ಹರಿಹರನ್ ನಡುವೆ ಆರೋಪ ಪ್ರತ್ಯಾರೋಪಗಳು ಬರುತ್ತಿವೆ. ಇತ್ತ ತಮ್ಮ ನೆಚ್ಚಿನ ನಟ ಅರ್ಜುನ್ ಸರ್ಜಾ ಎಂತಹ ವ್ಯಕ್ತಿ ಎಂದು ನಮಗೆ ಗೊತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅರ್ಜುನ್ ಪರವಾಗಿ ಮಾತುಗಳು ಕೇಳಿಬಂದಿದ್ದು. ಅರ್ಜುನ್ ಪರವಾಗಿ ಹಲವಾರು ನಟರು ಮತ್ತು ಅಭಿಮಾನಿಗಳು ಹೇಳಿಕೆ ನೀಡಿದ್ದಾರೆ. ಇತ್ತ ಹರಿಹರನ್ ಕಡೆಯೂ ಕೂಡ ಕೆಲ ನಂತರ ತಮ್ಮ ಒಗ್ಗಟ್ಟು ಪ್ರದರ್ಶಿಸಿದ್ದು ಒಟ್ಟಾರೆಯಾಗಿ ದಿನದಿಂದ ದಿನಕ್ಕೆ ಪ್ರಕರಣ ತಿರುವು ಪಡೆದುಕೊಳ್ಳುತ್ತಿದೆ.  ಪ್ರಚಾರ ಒಳ್ಳೆಯದು, ಆದರೆ ಅದು ಮಿತಿ ಮೀರಿದರೆ ಒಳ್ಳೆಯದಾ? ಪಬ್ಲಿಸಿಟಿ ಅಂದರೆ ಏನು? ಒಬ್ಬ ಮನುಷ್ಯನ ಕುಟುಂಬವನ್ನೇ ನುಚ್ಚುನೂರು ಮಾಡೋದಾ? ಅವರ ಹೆಂಡತಿ, ಮಕ್ಕಳಿಗೆ ಬೇಸರ ಉಂಟು ಮಾಡುವುದಾ? ಚಿತ್ರರಂಗದಲ್ಲಿ 15 ರಿಂದ 20 ವರ್ಷ ಹೋರಾಡಿ ಕಟ್ಟಿಕೊಂಡಿದ್ದ ವ್ಯಕ್ತಿತ್ವವನ್ನು ಹಾಳು ಮಾಡುವುದಾ? ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಶೃತಿ ಮೇಲೆ ಎಲ್ಲರು ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ನಡುವೆ ಸ್ಯಾಂಡಲ್ವುಡ್ ನ ಮತ್ತೊಂದು ಚೆಲುವೆ ಹರಿಪ್ರಿಯಾ ಮೀ ಟೂ ಅಭಿಯಾನದ ಬಗ್ಗೆ ಹೇಳಿಕೆ ನೀಡಿ ಅರ್ಜುನ್ ಸರ್ಜಾ ಅಸಲಿ ಮುಖವನ್ನು ಕಳಚಿದ್ದಾರೆ ಇಷ್ಟಕ್ಕೂ ಅರ್ಜುನ್ ಬಗ್ಗೆ ಇವರು ಏನು ಹೇಳಿದರು ಗೊತ್ತಾ ನೋಡೋಣ.  ಅರ್ಜುನ್ ಸರ್ ಬಗ್ಗೆ ಮಾಡಿರುವ ಆರೋಪವನ್ನು ಕೇಳಿ ಮನಸ್ಸಿಗೆ ತುಂಬಾನೇ ಬೇಜಾರಾಗುತ್ತಿದೆ. ನಾನು ಪ್ರಥಮ ಬಾರಿ ಸಿನೆಮಾಗೆ ಬಂದಾಗ ಅರ್ಜುನ್ ಸರ್ ಜೊತೆ ತಮಿಳು ಸಿನೆಮಾ ಕೂಡ ಮಾಡಿದ್ದೆ. ನನಗೆ ತಮಿಳು ಭಾಷೆ ಬಾರದ ಕಾರಣ ಸರ್ಜಾ ಸರ್ ನನ್ನೊಂದಿಗೆ ಕನ್ನಡದಲ್ಲಿಯೇ ಮಾತನಾಡಿ ನನ್ನ ಒತ್ತಡ ನಿಭಾಯಿಸಿದರು. ಯಾವುದೇ ಹೆಣ್ಣು ಮಕ್ಕಳು ಬಂದರೂ ತುಂಬಾ ಗೌರವದಿಂದ ಕಾಣುತ್ತಾರೆ.

ನಾನು ಅವರನ್ನು ಮೊದಲಿನಿಂದಲೂ ನೋಡಿದ್ದೇನೆ ಅವರ ತುಂಬಾ ಅಭಿಮಾನ ನನಗಿದೆ. ಚಿತ್ರರಂಗಕ್ಕೆ ಅದ್ಬುತ ಸಿನೆಮಾಗಳನ್ನು ನೀಡಿದ್ದಾರೆ. ಅವರೊಂದಿಗೆ ನಾನು ಸಿನೆಮಾ ಮಾಡುವಾಗ ನನ್ನ ಮತ್ತು ನನ್ನ ತಾಯಿಯನ್ನು ಅವರು ನೋಡಿಕೊಂಡ ರೀತಿಯಿಂದ ಅವರ ಮೇಲಿನ ಗೌರವ ಇನ್ನು ಹೆಚ್ಚಾಗಿದೆಯೇ ಹೊರತು ಕಮ್ಮಿಯಾಗಿಲ್ಲ.

ಈಗ ಬಂದಿರುವ ಪರಿಸ್ಥಿತಿ ಅರ್ಜುನ್ ಸರ್ ಗೆ ಬರಬಾರದಿತ್ತು. ಎಂಟು ವರ್ಷಗಳ ಹಿಂದೆ ನಾನು ಅವರ ಜೊತೆ ಕೆಲಸ ಮಾಡಿದ್ದೇನೆ ಈಗಲೂ ಕೂಡ ಆ ಗೆಳೆತನ ಮುಂದುವರಿದಿದೆ ಹಾಗಾಗಿ ನಾನು  ಅವರಿಗೆ ಸಂಪೂರ್ಣವಾಗಿ ಸಪ್ಪೋರ್ಟ್ ಮಾಡುವೆ ಎಂದು ಹೇಳಿಕೆ  ನೀಡಿದ್ದಾರೆ. ಹರಿಪ್ರಿಯಾ ಹೇಳಿದ ಈ ಮಾತು ನಿಮಗೆ ಸರಿ ಅನ್ನಿಸಿದ್ದರೆ ನಿಮ್ಮ ಅಭಿಪ್ರಾಯ ತಿಳಿಸಿ.

Please follow and like us:
0
http://karnatakatoday.in/wp-content/uploads/2018/10/arjun-sarja-and-haripriya-1024x576.pnghttp://karnatakatoday.in/wp-content/uploads/2018/10/arjun-sarja-and-haripriya-150x104.pngKarnataka Today's Newsಚಲನಚಿತ್ರಬೆಂಗಳೂರುಲೈಫ್ ಸ್ಟೈಲ್  ಸ್ಯಾಂಡಲ್ವುಡ್ ನಲ್ಲಿ ಕಳೆದ ಕೆಲ ದಿನಗಳಿಂದ ಅರ್ಜುನ್ ಸರ್ಜಾ ಮತ್ತು ಹರಿಹರನ್ ನಡುವೆ ಆರೋಪ ಪ್ರತ್ಯಾರೋಪಗಳು ಬರುತ್ತಿವೆ. ಇತ್ತ ತಮ್ಮ ನೆಚ್ಚಿನ ನಟ ಅರ್ಜುನ್ ಸರ್ಜಾ ಎಂತಹ ವ್ಯಕ್ತಿ ಎಂದು ನಮಗೆ ಗೊತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅರ್ಜುನ್ ಪರವಾಗಿ ಮಾತುಗಳು ಕೇಳಿಬಂದಿದ್ದು. ಅರ್ಜುನ್ ಪರವಾಗಿ ಹಲವಾರು ನಟರು ಮತ್ತು ಅಭಿಮಾನಿಗಳು ಹೇಳಿಕೆ ನೀಡಿದ್ದಾರೆ. ಇತ್ತ ಹರಿಹರನ್ ಕಡೆಯೂ ಕೂಡ ಕೆಲ ನಂತರ ತಮ್ಮ ಒಗ್ಗಟ್ಟು ಪ್ರದರ್ಶಿಸಿದ್ದು ಒಟ್ಟಾರೆಯಾಗಿ...Kannada News