ಭಾರತೀಯರ ರಾಷ್ಟೀಯ ಕ್ರೀಡೆ ಹಾಕಿ ಆದರೂ ಕೂಡ ಕ್ರಿಕೆಟಿಗೆ ಎಲ್ಲಿಲ್ಲದ ಒಲವು ಮತ್ತು ಉತ್ಸಾಹ. ದೇಶದಲ್ಲಿ ಕ್ರಿಕೆಟ್ ಅಭಿಮಾನಿಗಳು ಕೋಟಿ ಕೋಟಿ ಇದ್ದಾರೆ. ಅಂತಹ ಅಭಿಮಾನಿಗಳಿಗೆ ಬೇಸರ ಮೂಡಿಸುವ ಸುದ್ದಿಯೊಂದು ಈಗ ಹೇಳ ಹೊರಟಿದ್ದೇವೆ. ಹೌದು ಸದ್ಯಕ್ಕೆ ಭಾರತ ತಂಡ ನ್ಯೂ ಜಿಲ್ಯಾಂಡ್ ಜೊತೆ ಸರಣಿ ಆಡುತ್ತಿದೆ. ಇನ್ನು ಇಲ್ಲಿಯೇ ಕ್ಲಬ್ ಒಂದರಲ್ಲಿ ಭಾರತೀಯ ಮೂಲದ ಆಟಗಾರರು ಕೂಡ ಇದ್ದ ಪಂದ್ಯಾಟ ನಡೆಯುತ್ತಿತ್ತು.ಕ್ರಿಕೆಟ್ ಆಡುವಾಗಲೇ ಭಾರತ ಮೂಲದ ಕ್ರಿಕೆಟಿಗನೋರ್ವ ಮೈದಾನದಲ್ಲಿ ಕುಸಿದು ಪ್ರಾಣ ಬಿಟ್ಟಿರುವ ಘಟನೆ ನೂಜಿಲೆಂಡ್ ನಲ್ಲಿ ನಡೆದಿದೆ. ನ್ಯೂಜಿಲ್ಯಾಂಡ್ ಕ್ಲಬ್​ ಪರ ಆಡುತ್ತಿದ್ದ ಭಾರತೀಯ ಮೂಲದ ಕ್ರಿಕೆಟಿಗ ಹರೀಶ್​ ಗಂಗಾಧರನ್ ಮೈದಾನದಲ್ಲೇ ಕುಸಿದು ಸಾವನ್ನಪ್ಪಿದ್ದು, ನ್ಯೂಜಿಲೆಂಡ್ ನ ಡ್ಯುನೆಡಿನ್​ನಲ್ಲಿ ನಡೆಯುತ್ತಿದ್ದ ಪಂದ್ಯದಲ್ಲಿ ಈ ಅವಘಡ ಸಂಭವಿಸಿದೆ.

ಹರೀಶ್ ಕಿವೀಸ್​ನ ಗ್ರೀನ್ ಐಲ್ಯಾಂಡ್​ ಕ್ರಿಕೆಟ್​ ಕ್ಲಬ್ ತಂಡದ ಆಟಗಾರರಾಗಿದ್ದು, ಕೆಲ ವರ್ಷಗಳಿಂದ ಈ ತಂಡವನ್ನು​ ಪ್ರತಿನಿಧಿಸುತ್ತಿದ್ದರುಶನಿವಾರ ಸಂಜೆ ಗ್ರೀನ್​ಲ್ಯಾಂಡ್​ ಸನ್ನಿವೇಲ್ ಸ್ಪೋರ್ಟ್ಸ್​ ಸೆಂಟರ್​ನಲ್ಲಿ ಆಡುತ್ತಿದ್ದ ವೇಳೆ ಹರೀಶ್ ದಿಢೀರ್ ಉಸಿರಾಟದ ತೊಂದರೆಗೆ ಸಿಲುಕಿದ್ದರು. ಓವರ್ ಎಸೆದ ನಂತರ ಉಸಿರಾಟದ ಒತ್ತಡಕ್ಕೊಳಗಾಗಿ ಮೈದಾನದಲ್ಲೇ ಕುಸಿದು ಬಿದ್ದರು. ಪ್ರಜ್ಞೆ ಕಳೆದುಕೊಂಡಿದ್ದ ಹರೀಶ್ ಅವರಿಗೆ ಸಹ ಆಟಗಾರರು ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರೂ, ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಕೆಲ ವರ್ಷಗಳಿಂದ ನ್ಯೂಜಿಲ್ಯಾಂಡ್​ ಕ್ಲಬ್ ಪರವಾಗಿ ಆಡುತ್ತಿರುವ 33ರ ಹರೆಯದ ಹರೀಶ್ ಗಂಗಾಧರನ್ ಸಾವಿಗೆ ಗ್ರೀನ್​ ಐಲ್ಯಾಂಡ್​ ಕ್ರಿಕೆಟ್​ ಕ್ಲಬ್​ ಕಂಬನಿ ಮಿಡಿದಿದೆ. ಹಾಗೆಯೇ ನ್ಯೂಜಿಲ್ಯಾಂಡ್​ ಕ್ರಿಕೆಟ್​ ಅಧಿಕಾರಿ ರಿಚರ್ಡ್​ ಬೂಕ್ ಆಟಗಾರನ ದುರಂತ ಅಂತ್ಯಕ್ಕೆ ಸಂತಾಪ ಸೂಚಿಸಿದ್ದು, ನ್ಯೂಜಿಲೆಂಡ್ ಕ್ರಿಕೆಟ್ ಸಂಸ್ಥೆ ಕೂಡ ಹರೀಶ್ ನಿಧನಕ್ಕೆ ಸಂತಾಪ ಸೂಚಿಸಿದೆ. ಇನ್ನು ಕ್ಲಬ್​ ಕ್ರಿಕೆಟ್ ನಲ್ಲಿ ಉತ್ತಮ ಆಟಗಾರನಾಗಿ ಗುರುತಿಸಿಕೊಂಡಿದ್ದ ಹರೀಶ್ ಅವರು ಪತ್ನಿ ನಿಶಾ, ಮಗಳು ಗೌರಿ ಹಾಗೂ ಅಪಾರ ಕ್ರಿಕೆಟ್‌ ಅಭಿಮಾನಿಗಳನ್ನು ಹರೀಶ್‌ ಅಗಲಿದ್ದಾರೆ.

ಕೇರಳದ ಕೊಚ್ಚಿ ಮೂಲದ ಹರೀಶ್ ಗಂಗಾಧರನ್ 5 ವರ್ಷಗಳ ಹಿಂದಷ್ಟೇ ನ್ಯೂಜಿಲೆಂಡ್ ಗೆ ತೆರಳಿ ನೆಲೆಸಿದ್ದರು. ಗ್ರೀನ್ ಐಲ್ಯಾಂಡ್ ಕ್ಲಬ್ ತಂಡದ ಪರ ಆಡುತ್ತಿದ್ದ ಹರೀಶ್ ಉತ್ತಮ ಆಲ್ರೌಂಡರ್ ಆಗಿದ್ದರು.
ಇತ್ತೀಚೆಗಷ್ಟೇ ಶ್ರೀಲಂಕಾ ಮತ್ತು ಆಸ್ಟೇಲಿಯಾ ನಡುವಿನ ಸರಣಿಯಲ್ಲಿ ಆಸಿಸ್ ವೇಗಿಗಳ ಬೌನ್ಸರ್ ಗಳಿಗೆ ಲಂಕಾದ ಇಬ್ಬರು ಬ್ಯಾಟ್ಸಮನ್ ಗಳು ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದರು. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Please follow and like us:
0
http://karnatakatoday.in/wp-content/uploads/2019/02/new-zeland-indian-cricketer-1024x576.jpghttp://karnatakatoday.in/wp-content/uploads/2019/02/new-zeland-indian-cricketer-150x104.jpgKarnataka Today's Newsಎಲ್ಲಾ ಸುದ್ದಿಗಳುಕ್ರಿಕೆಟ್ಭಾರತೀಯರ ರಾಷ್ಟೀಯ ಕ್ರೀಡೆ ಹಾಕಿ ಆದರೂ ಕೂಡ ಕ್ರಿಕೆಟಿಗೆ ಎಲ್ಲಿಲ್ಲದ ಒಲವು ಮತ್ತು ಉತ್ಸಾಹ. ದೇಶದಲ್ಲಿ ಕ್ರಿಕೆಟ್ ಅಭಿಮಾನಿಗಳು ಕೋಟಿ ಕೋಟಿ ಇದ್ದಾರೆ. ಅಂತಹ ಅಭಿಮಾನಿಗಳಿಗೆ ಬೇಸರ ಮೂಡಿಸುವ ಸುದ್ದಿಯೊಂದು ಈಗ ಹೇಳ ಹೊರಟಿದ್ದೇವೆ. ಹೌದು ಸದ್ಯಕ್ಕೆ ಭಾರತ ತಂಡ ನ್ಯೂ ಜಿಲ್ಯಾಂಡ್ ಜೊತೆ ಸರಣಿ ಆಡುತ್ತಿದೆ. ಇನ್ನು ಇಲ್ಲಿಯೇ ಕ್ಲಬ್ ಒಂದರಲ್ಲಿ ಭಾರತೀಯ ಮೂಲದ ಆಟಗಾರರು ಕೂಡ ಇದ್ದ ಪಂದ್ಯಾಟ ನಡೆಯುತ್ತಿತ್ತು.ಕ್ರಿಕೆಟ್ ಆಡುವಾಗಲೇ ಭಾರತ ಮೂಲದ ಕ್ರಿಕೆಟಿಗನೋರ್ವ...Kannada News