ಮಾನವನ ದೇಹದ ಆರೋಗ್ಯಕ್ಕೆ ಹಸಿರು ತರಕಾರಿಗಳು ಬಹಳ ಮುಖ್ಯ ಎಂದು ಹಲವಾರು ವೈದ್ಯರು ಸೂಚಿಸುತ್ತಾರೆ. ಅದರಂತೆ ನಮ್ಮ ಆಯುರ್ವೇದ ಶಾಸ್ತ್ರದಲ್ಲೂ ಕೂಡ ಇದಕ್ಕೆ ಮನ್ನಣೆ ಇದೆ. ಇಂದು ನಾವು ನಿಮಗೆ ಹೇಳುವ ಈ ಆರೋಗ್ಯದ ಗುಟ್ಟು ನಿಮ್ಮ ದೇಹದ ಬೆಳವಣಿಗೆಗೆ ಸಾಕಷ್ಟು ಸಹಾಯ ಮಾಡಲಿದೆ. ಹೌದು ಪ್ರತಿದಿನ ನಾವು ಕೇವಲ 1 ಕ್ಯಾರೆಟ್ ತಿನ್ನುವುದರಿಂದ ಆಗುವ ದೊಡ್ಡ ಪ್ರಯೋಜನಗಳ ಬಗ್ಗೆ ಹೇಳಲಿದ್ದೇವೆ, ಕ್ಯಾರೆಟ್ ಅನ್ನು ಯಾವುದೇ ರೀತಿಯ ಆಹಾರದಲ್ಲಿ ಸೇರಿಸಿಕೊಳ್ಳಬಹುದು, ಆಯುರ್ವೇದದಲ್ಲಿ, ಕ್ಯಾರೆಟ್ ಅನ್ನು ಅನೇಕ ರೋಗಗಳ ಔಷಧಿ ಎಂದು ಹೇಳಲಾಗುತ್ತದೆ. ಕ್ಯಾರೆಟ್‌ಗಳಲ್ಲಿ ಸಾಕಷ್ಟು ಪೊಟ್ಯಾಸಿಯಮ್ ಪೋಷಕಾಂಶಗಳು , ವಿಟಮಿನ್ ಎ, ವಿಟಮಿನ್ ಇ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ, ಆದ್ದರಿಂದ ಪ್ರತಿದಿನ 1 ಕ್ಯಾರೆಟ್ ತಿನ್ನುವುದರಿಂದಾಗುವ ಅದ್ಭುತ ಪ್ರಯೋಜನಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ಡಯಟ್ ಎಂದರೆ ಕೇವಲ ರುಚಿಯಿಲ್ಲದ ಆಹಾರದ ಸೇವನೆ ಎಂದು ಹಲವರು ತಪ್ಪು ತಿಳಿಯುತ್ತಾರೆ. ಆದರೆ ರುಚಿಯೊಂದಿಗೆ ತೂಕ ಇಳಿಸಿಕೊಳ್ಳುವ ವಿಧಾನವೊಂದು ಇಲ್ಲಿದೆ. ಕ್ಯಾರೆಟ್ ಡಯಟ್ ಪಾಲಿಸಿದರೆ ದೇಹದಲ್ಲಿನ ಅಧಿಕ ಬೊಜ್ಜನ್ನು ಕರಗಿಸಿಕೊಳ್ಳಬಹುದು ಎಂದು ತಿಳಿದುಬಂದಿದೆ. ಕ್ಯಾರೆಟ್ ಹಸಿಯಾಗಿ ಬೇಕಾದರೂ ತಿನ್ನಬಹುದು, ಇಲ್ಲವೆಂದರೆ ಸೂಪ್, ಸಲಾಡ್ ಮತ್ತು ಜ್ಯೂಸ್ ನಂತೆಯೂ ಸೇವಿಸಬಹುದು. ಕ್ಯಾರೆಟ್ ನಲ್ಲಿನ ಅಧಿಕ ವಿಟಮಿನ್ ಕಣ್ಣಿನ ದೃಷ್ಟಿಯನ್ನೂ ಚುರುಕುಗೊಳಿಸುತ್ತೆ.

ಕ್ಯಾರೆಟ್‌ನಲ್ಲಿ ಸಕ್ಕರೆ ಪ್ರಮಾಣವು ತೀರಾ ಕಡಿಮೆಯಾಗಿದೆ. ಬೀಟಾ-ಕ್ಯಾರೋಟಿನ್ ನ ಶ್ರೀಮಂತ ಮೂಲವಾಗಿರುವ ಇದು ಮಧುಮೇಹದ ರಿಸ್ಕ್ ಕಡಿಮೆ ಮಾಡುತ್ತದೆ ಮತ್ತು ಉತ್ತಮ ರಕ್ತ-ಸಕ್ಕರೆ ನಿಯಂತ್ರಕ. ಕಾಮಾಲೆಯ ರೋಗ ಇರುವ ರೋಗಿಗೆ ಕ್ಯಾರೆಟ್ ತಿನ್ನಲು ಸೂಚಿಸಲಾಗುತ್ತದೆ, ಪ್ರತಿದಿನ 1 ಕ್ಯಾರೆಟ್ ತಿನ್ನುವುದರಿಂದ ಈ ತರಹದ ರೋಗಗಳು ಬರುವುದಿಲ್ಲ. ಕ್ಯಾರೆಟ್ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ, ಕ್ಯಾರೆಟ್ ಅನ್ನು ನಿಯಮಿತವಾಗಿ ತಿನ್ನುವುದು ಕ್ಯಾನ್ಸರ್ ಕೋಶಗಳನ್ನು ಅಭಿವೃದ್ಧಿಪಡಿಸುವುದಿಲ್ಲ, ಇದು ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ದ್ರಷ್ಟಿ ಸಮಸ್ಯೆ ಇದ್ದರೆ ಕ್ಯಾರೆಟ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ಕಣ್ಣುಗಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ, ಕ್ಯಾರೆಟ್ ಅನ್ನು ನಿಯಮಿತವಾಗಿ ಸೇವಿಸಿದರೆ, ಕನ್ನಡಕವನ್ನು ಸಹ ತೆಗೆದುಹಾಕಬಹುದು. ಕ್ಯಾರೆಟ್ ಸೇವನೆ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಹೀಗಾಗಿ ದೇಹವನ್ನು ಬಾಹ್ಯ ಸೋಂಕಿನಿಂದ ರಕ್ಷಿಸುತ್ತದೆ. ಕ್ಯಾರೆಟ್‌ಗಳಲ್ಲಿ ಬೀಟಾ ಕ್ಯಾರೋಟಿನ್ ಮತ್ತು ಲುಟೀನ್ ಇದ್ದು, ಇದು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಅನುಮತಿಸುವುದಿಲ್ಲ, ಇದು ಹೃದಯ ಕಾಯಿಲೆಗಳನ್ನು ದೂರವಿರಿಸುತ್ತದೆ.

ಕ್ಯಾರೆಟ್ ನಲ್ಲಿನ ಕಾರೊಟಿನ್ ಅಂಶ ದೇಹವನ್ನು ಶುದ್ಧವಿರಿಸಿ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಕ್ಯಾರೆಟ್ ತಿನ್ನುವುದರಿಂದ ಹೃದಯದ ಸಮಸ್ಯೆಗಳನ್ನು ದೂರವಿಡಬಹುದು. ಮಂದ ದೃಷ್ಟಿ, ಕ್ಯಾನ್ಸರ್ ನಿವಾರಣೆಗು ಇದು ಸಹಕಾರಿ. ಕ್ಯಾರೆಟ್ ನಲ್ಲಿ ಐಯೋಡಿನ್ ಮತ್ತು ಫೈಬರ್ ಇರುವುದರಿಂದ ತೂಕವನ್ನು ಇಳಿಸಿಕೊಳ್ಳಬಹುದು.ಕ್ಯಾರೆಟ್ ರಸವು ಚರ್ಮದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಏಕೆಂದರೆ ಇದರಲ್ಲಿ ಮಾನಸಿಕ ದೃಢತೆಗೆ ಸಹಾಯವಾದ, ಚರ್ಮಕ್ಕೆ ಹೊಳಪು ತರುವ ‘ಲುಟೆಯೊಲಿನ್’ ಎಂಬ ನೈಸರ್ಗಿಕ ಸಂಯುಕ್ತ ಅಂಶವಿದೆ. ಹಾಗಾಗಿ ಇದು ಚರ್ಮದ ಆರೋಗ್ಯವನ್ನು ಹೆಚ್ಚಿಸಿ, ವಯಸ್ಸಾದಂತೆ ಕಾಣುವುದನ್ನು ನಿಧಾನಗೊಳಿಸುತ್ತದೆ.

Please follow and like us:
error0
http://karnatakatoday.in/wp-content/uploads/2019/12/CARROT-INTRESTING-1024x576.jpghttp://karnatakatoday.in/wp-content/uploads/2019/12/CARROT-INTRESTING-150x104.jpgKarnataka Trendingಆರೋಗ್ಯಎಲ್ಲಾ ಸುದ್ದಿಗಳುಮಾನವನ ದೇಹದ ಆರೋಗ್ಯಕ್ಕೆ ಹಸಿರು ತರಕಾರಿಗಳು ಬಹಳ ಮುಖ್ಯ ಎಂದು ಹಲವಾರು ವೈದ್ಯರು ಸೂಚಿಸುತ್ತಾರೆ. ಅದರಂತೆ ನಮ್ಮ ಆಯುರ್ವೇದ ಶಾಸ್ತ್ರದಲ್ಲೂ ಕೂಡ ಇದಕ್ಕೆ ಮನ್ನಣೆ ಇದೆ. ಇಂದು ನಾವು ನಿಮಗೆ ಹೇಳುವ ಈ ಆರೋಗ್ಯದ ಗುಟ್ಟು ನಿಮ್ಮ ದೇಹದ ಬೆಳವಣಿಗೆಗೆ ಸಾಕಷ್ಟು ಸಹಾಯ ಮಾಡಲಿದೆ. ಹೌದು ಪ್ರತಿದಿನ ನಾವು ಕೇವಲ 1 ಕ್ಯಾರೆಟ್ ತಿನ್ನುವುದರಿಂದ ಆಗುವ ದೊಡ್ಡ ಪ್ರಯೋಜನಗಳ ಬಗ್ಗೆ ಹೇಳಲಿದ್ದೇವೆ, ಕ್ಯಾರೆಟ್ ಅನ್ನು ಯಾವುದೇ ರೀತಿಯ ಆಹಾರದಲ್ಲಿ...Film | Devotional | Cricket | Health | India