ದೇಶಾದ್ಯಂತ ಇಂದು ಕೇಂದ್ರ ಸರ್ಕಾರ ಸಂಚಲನದ ನಿಯಮವೊಂದನ್ನು ಜಾರಿಗೆ ತರಲು ಮುಂದಾಗಿದೆ, ಹಣ ಉಳಿಸುವ ಸಲುವಾಗಿಯೋ ಅಥವಾ ಇನ್ನು ಯಾವುದೊ ಕಾರಣಕ್ಕಾಗಿಯೋ ISI ಮಾನ್ಯತೆ ಪಡೆಯದ ಹೆಲ್ಮೆಟ್ ಧರಿಸುವರಿಗೆ ಕೇಂದ್ರ ಬಿಸಿ ಮುಟ್ಟಿಸಲಿದೆ ಹೀಗೆಂದು ಕೇಂದ್ರ ದೂರ ಸಂಪರ್ಕ ಇಲಾಖೆ ತಿಳಿಸಿದೆ ಇದಕ್ಕೂ ಮೊದಲು ಈ ತರಹದ ಹೆಲ್ಮೆಟ್ ಗಳನ್ನೂ ತಯಾರಿಸುವವರ ಮೇಲೆ ಬಿಗಿ ಕಾನೂನು ಜಾರಿಗೊಳಿಸಲಿದೆ.

ಎಷ್ಟೋ ಭಾರಿ ಅಪಘಾತ ಸಂಭವಿಸದಾಗ ವಾಹನ ಸವಾರ ಹೆಲ್ಮೆಟ್ ಧರಿಸಿದ್ದರೂ ಕೂಡ ಅತಿಯಾದ ನೋವಿಗೀಡಾಗಿದ್ದನ್ನು ನೋಡಿದ್ದೇವೆ, ಕಳಪೆ ಮಟ್ಟದ ಹೆಲ್ಮೆಟ್ ಧಾರಣೆ ಇದಕ್ಕೆ ಕಾರಣ. ಹೀಗಾಗಿ ಇನ್ನು ಮುಂದೆ ಕಠಿಣ ಕ್ರಮ ಬರಲಿದೆ, ಬೈಕ್ ಸವಾರರು ಟ್ರಾಫಿಕ್ ಪೋಲಿಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕಳಪೆ ಮಟ್ಟದ ಹೆಲ್ಮೆಟ್ ಧರಿಸುತ್ತಿದ್ದಾರೆ, ತಮ್ಮ ಜೀವನವನ್ನು ಲೆಕ್ಕಿಸದೆ ಇಷ್ಟೊಂದು ಕಳಪೆ ಮಟ್ಟದ್ದನ್ನು ಯಾಕೆ ಧರಿಸಬೇಕು ಇಂದು ಪ್ರಶ್ನಿಸಿದೆ ಕೋರ್ಟ್.

ಈ ಹಿಂದೆ ಕೂಡ ಕಾನೂನೂ ಮಾಡೊದ್ದರು ಯಾವುದೇ ಪ್ರಯೋಜನಕ್ಕೆ ಬರಲಿಲ್ಲ. ಸದ್ಯಕ್ಕೆ ಮುಂದಿನ ಎರಡು ತಿಂಗಳಲ್ಲಿ ISI ಮಾರ್ಕ್ ಇರುವ ಹೆಲ್ಮೆಟ್ ಧರಿಸುವಲ್ಲಿ ಜನತೆ ಮುಂದಾಗಬೇಕು ಇಲ್ಲವಾದರೆ ವಾಹನ ಸವಾರರು ಮತ್ತು ಕಂಪನಿಗಳು ಇಬ್ಬರಿಗೂ ಲಕ್ಷದವರೆಗೂ ದಂಡ ತುಂಬಬೇಕಾಗುತ್ತದೆ ಎನ್ನಲಾಗಿದೆ. ಎರಡು ತಿಂಗಳು ಕಾಲ ಡೆಡ್‌ಲೈನ್ ನೀಡಿರುವ ಕೇಂದ್ರ ಸಾರಿಗೆ ಇಲಾಖೆಯು ನಕಲಿ ಐಎಸ್ಐ ಹೆಲ್ಮೆಟ್‌ಗಳನ್ನ ಉತ್ಪಾದನೆ ಮತ್ತು ಮಾರಾಟವನ್ನು ಸಂಪೂರ್ಣ ನಿಷೇಧಿಸುವಂತೆ ಆದೇಶ ನೀಡಿದೆ.

 

ಡೆಡ್‌ಲೈನ್ ನಂತರ ನಕಲಿ ಹೆಲ್ಮೆಟ್ ತಯಾರಿಸುವವರಿಗೆ ಮತ್ತು ಮಾರಾಟ ಮಾಡುವವರಿಗೆ ಭಾರೀ ಪ್ರಮಾಣದ ಶಿಕ್ಷೆ ತಪ್ಪಿದಲ್ಲ. ದಯವಿಟ್ಟು ಜೀವರಕ್ಷಣೆಗೆ ಹೆಲ್ಮೆಟ್ ಧರಿಸಿಯೇ ಹೊರತು ದಂಡ ತುಂಬಬೇಕಾಗುತ್ತದೆ ಎಂದಲ್ಲ, ನಮಗಾಗಿಯೇ ಜಯುತ್ತಿರುವ ಅದೆಷ್ಟೋ ಜೀವಗಳು ಇದೆ. ಆದ್ದರಿಂದ ಪ್ರಜ್ಞಾವಂತ ನಾಗರಿಕನಾಗಿ ಈ ಸುದ್ದಿಯನ್ನು ಎಲ್ಲರಿಗು ತಲುಪಿಸುವ ಕೆಲಸ ಮಾಡಿ.

Please follow and like us:
0
http://karnatakatoday.in/wp-content/uploads/2018/08/helmet-news-1024x576.pnghttp://karnatakatoday.in/wp-content/uploads/2018/08/helmet-news-150x104.pngKarnataka Todayಅಂಕಣಎಲ್ಲಾ ಸುದ್ದಿಗಳುದೇಶಾದ್ಯಂತ ಇಂದು ಕೇಂದ್ರ ಸರ್ಕಾರ ಸಂಚಲನದ ನಿಯಮವೊಂದನ್ನು ಜಾರಿಗೆ ತರಲು ಮುಂದಾಗಿದೆ, ಹಣ ಉಳಿಸುವ ಸಲುವಾಗಿಯೋ ಅಥವಾ ಇನ್ನು ಯಾವುದೊ ಕಾರಣಕ್ಕಾಗಿಯೋ ISI ಮಾನ್ಯತೆ ಪಡೆಯದ ಹೆಲ್ಮೆಟ್ ಧರಿಸುವರಿಗೆ ಕೇಂದ್ರ ಬಿಸಿ ಮುಟ್ಟಿಸಲಿದೆ ಹೀಗೆಂದು ಕೇಂದ್ರ ದೂರ ಸಂಪರ್ಕ ಇಲಾಖೆ ತಿಳಿಸಿದೆ ಇದಕ್ಕೂ ಮೊದಲು ಈ ತರಹದ ಹೆಲ್ಮೆಟ್ ಗಳನ್ನೂ ತಯಾರಿಸುವವರ ಮೇಲೆ ಬಿಗಿ ಕಾನೂನು ಜಾರಿಗೊಳಿಸಲಿದೆ. ಎಷ್ಟೋ ಭಾರಿ ಅಪಘಾತ ಸಂಭವಿಸದಾಗ ವಾಹನ ಸವಾರ ಹೆಲ್ಮೆಟ್ ಧರಿಸಿದ್ದರೂ ಕೂಡ...Karnataka news