Hitech Gold country

ಪ್ರಿಯ ಓದುಗರೇ ಹೈಟೆಕ್ ಸುದ್ದಿಗಳ ಜಗತ್ತಿಗೆ ಸ್ವಾಗತ, ಹೌದು ಸ್ನೇಹಿತರೇ ನೀವು ಶೀರ್ಷಿಕೆಯಲ್ಲಿಯೇ ಓದಿದ್ದೀರಿ ಇಂದಿನ ವಿಷಯವೆಂದರೆ, ವಿಶ್ವದ ಈ 10 ದೇಶಗಳು ಹೆಚ್ಚು ಚಿನ್ನವನ್ನು ಹೊಂದಿದ್ದು ಭಾರತದ ಸಂಖ್ಯೆಯನ್ನು ತಿಳಿದರೆ ಆಶ್ಚರ್ಯವಾಗುತ್ತದೆ. ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಚಿನ್ನವು ತುಂಬಾ ಹೊಳೆಯುವ ಅಮೂಲ್ಯವಾದ ಲೋಹವಾಗಿದೆ, ಇದು ಆವರ್ತಕ ಕೋಷ್ಟಕದ ಮೊದಲ ವಿಲೋಮ ಗುಂಪಿನಲ್ಲಿ ತಾಮ್ರ ಮತ್ತು ಬೆಳ್ಳಿಯೊಂದಿಗೆ ಇದೆ. ಭಾರತದಲ್ಲಿ ಅತಿ ಹೆಚ್ಚು ಬಂಗಾರ ಇಷ್ಟ ಪಡುವ ಮಂದಿ ಇದ್ದಾರೆ, ಹಾಗಾದರೆ ಭಾರತಕ್ಕೆ ಚಿನ್ನದ ಸಂಗ್ರಹದಲ್ಲಿ ಎಷ್ಟನೇ ಸ್ಥಾನ ಇದೆ ಎಂದು ಕೂಡ ತಿಳಿದುಕೊಳ್ಳೋಣ.

ಇಂದು ನಾವು ನಿಮಗೆ ಹೆಚ್ಚು ಚಿನ್ನ ಹೊಂದಿರುವ ವಿಶ್ವದ 10 ದೇಶಗಳ ಹೆಸರನ್ನು ಹೇಳುತ್ತೇವೆ, ಮೊದಲ ಸ್ಥಾನದಲ್ಲಿ ಅಮೇರಿಕಾ ವಿಶ್ವದ ಅತಿದೊಡ್ಡ ಚಿನ್ನದ ಸಂಗ್ರಹವನ್ನು ಹೊಂದಿದೆ, ವಿಶ್ವ ಗೋಲ್ಡ್ ಕೌನ್ಸಿಲ್ ಪ್ರಕಾರ, ಅಮೇರಿಕಾದಲ್ಲಿ 8,133.5 ಟನ್ ಚಿನ್ನವಿದೆ. ಇನ್ನು ಎರಡನೇ ಸ್ಥಾನದಲ್ಲಿ, ಜರ್ಮನಿ ವಿಶ್ವದ ಎರಡನೇ ಅತಿದೊಡ್ಡ ಚಿನ್ನ ಹೊಂದಿರುವ ದೇಶ, ಜರ್ಮನಿಯ ಅಧಿಕೃತ ಚಿನ್ನದ ಹಿಡುವಳಿ 3,369.70 ಟನ್, ಈ ಚಿನ್ನದ ಸಂಗ್ರಹವು ದೇಶದ ವಿದೇಶಿ ವಿನಿಮಯ ಸಂಗ್ರಹದ ಶೇಕಡಾ 70 ರಷ್ಟಿದೆ.

Hitech Gold country

ಇನ್ನು ಮೂರರಲ್ಲಿ ಇಟಲಿ, ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ ಇಟಲಿ 2,451.8 ಟನ್ ಚಿನ್ನವನ್ನು ಹೊಂದಿದೆ, ಈ ಚಿನ್ನವು ದೇಶದ ವಿದೇಶಿ ವಿನಿಮಯ ಸಂಗ್ರಹದ ಶೇಕಡಾ 68 ರಷ್ಟಿದೆ. ಇನ್ನು ಅಟೆಚ್ಚು ಚಿನ್ನವನ್ನ ಹೊಂದಿರುವ ನಾಲ್ಕನೇ ನಾಲ್ಕನೇ ದೇಶ ಯಾವುದೇ ಅಂದರೆ ಫ್ರಾನ್ಸ್, ಹೌದು ಅತಿದೊಡ್ಡ ಚಿನ್ನದ ಮೀಸಲು ದೇಶವಾಗಿದೆ, ಫ್ರಾನ್ಸ್‌ ನಲ್ಲಿ 2,436 ಟನ್ ಚಿನ್ನವಿದೆ.

ಇನ್ನು ಐದನೇ ಸ್ಥಾನದಲ್ಲಿ ರಷ್ಯಾ, ಸ್ನೇಹಿತರೆ ರಷ್ಯಾದ ದೇಶದ ಅಧಿಕೃತ ಚಿನ್ನದ ಹಿಡಿತ 2,119.20 ಟನ್ಅ, ಲ್ಲಿನ ವಿದೇಶಿ ವಿನಿಮಯ ಸಂಗ್ರಹದಲ್ಲಿ ಶೇ 18 ರಷ್ಟು ಚಿನ್ನವಿದೆ, WCG ಪ್ರಕಾರ ರಷ್ಯಾ ಅನೇಕ ವರ್ಷಗಳಿಂದ ತನ್ನ ಚಿನ್ನದ ಸಂಗ್ರಹವನ್ನು ಸ್ಥಿರವಾಗಿ ಹೆಚ್ಚಿಸುತ್ತಿದೆ ಮತ್ತು ಚಿನ್ನದ ಮಂಡಳಿಯ ಪ್ರಕಾರ ಕಳೆದ 6 ವರ್ಷಗಳಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಚೀನಾ 600 ಟನ್ ಚಿನ್ನವನ್ನು ಖರೀದಿಸಿದೆ, ಚೀನಾ ಆರನೇ ಸ್ಥಾನದಲ್ಲಿದೆ.

Hitech Gold country

ಇನ್ನು ಚಿನ್ನದ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಸ್ವಿಟ್ಜರ್ಲೆಂಡ್‌ನ ಅಧಿಕೃತ ಚಿನ್ನದ ಸಂಗ್ರಹ 1,040 ಟನ್, ಕಳೆದ ಮೂರು ತ್ರೈಮಾಸಿಕಗಳಲ್ಲಿ ಅದರ ನಿಕ್ಷೇಪಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಎಂಟನೇ ಸಂಖ್ಯೆಯಲ್ಲಿ ಜಪಾನ್‌ನ ಅಧಿಕೃತ ಚಿನ್ನದ ಹಿಡುವಳಿ 765.2 ಟನ್, ಇನ್ನು ಜಪಾನ್ ವಿದೇಶಿ ವಿನಿಮಯ ಸಂಗ್ರಹದ ಶೇಕಡಾ 3 ರಷ್ಟು ಚಿನ್ನವನ್ನು ಹೊಂದಿದ, 1950 ರಲ್ಲಿ ಜಪಾನ್‌ನಲ್ಲಿ ಕೇವಲ 6 ಟನ್ ಚಿನ್ನವಿತ್ತು ಇದರ ನಂತರ ಜಪಾನ್ ಆಗಾಗ ಚಿನ್ನವನ್ನು ಖರೀದಿಸುತ್ತಿದೆ.

ಬಂಗಾರದ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದೆ ಸ್ವಿಜರ್ಲೆಂಡ್, ವಿದೇಶಿ ವಿನಿಮಯ ಸಂಗ್ರಹದಲ್ಲಿ ಶೇ 67 ರಷ್ಟು ಚಿನ್ನವಿದೆ, ಇನ್ನು ಕೊನೆಯ ಸ್ಥಾನದಲ್ಲಿ ಅಂದರೆ 10 ನೇ ನಂಬರ್ ನಲ್ಲಿ ಭಾರತವಿದೆ, ಗೋಲ್ಡ್ ರಿಸರ್ವ್ ವಿಷಯದಲ್ಲಿ ಭಾರತ 10 ನೇ ಸ್ಥಾನದಲ್ಲಿದೆ, ಭಾರತದ ಅಧಿಕೃತ ಚಿನ್ನದ ಹಿಡುವಳಿ 613 ಟನ್ ಮತ್ತು ಭಾರತವು ಪಾಕಿಸ್ತಾನಕ್ಕಿಂತ 10 ಪಟ್ಟು ಹೆಚ್ಚು ಚಿನ್ನವನ್ನು ಹೊಂದಿದೆ, ಏಕೆಂದರೆ ಪಾಕಿಸ್ತಾನವು 64.6 ಟನ್ ಚಿನ್ನದ ಸಂಗ್ರಹವನ್ನು ಹೊಂದಿದೆ.

Hitech Gold country

Please follow and like us:
error0
http://karnatakatoday.in/wp-content/uploads/2019/08/Hitech-Gold-Country-1024x576.jpghttp://karnatakatoday.in/wp-content/uploads/2019/08/Hitech-Gold-Country-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಪ್ರಿಯ ಓದುಗರೇ ಹೈಟೆಕ್ ಸುದ್ದಿಗಳ ಜಗತ್ತಿಗೆ ಸ್ವಾಗತ, ಹೌದು ಸ್ನೇಹಿತರೇ ನೀವು ಶೀರ್ಷಿಕೆಯಲ್ಲಿಯೇ ಓದಿದ್ದೀರಿ ಇಂದಿನ ವಿಷಯವೆಂದರೆ, ವಿಶ್ವದ ಈ 10 ದೇಶಗಳು ಹೆಚ್ಚು ಚಿನ್ನವನ್ನು ಹೊಂದಿದ್ದು ಭಾರತದ ಸಂಖ್ಯೆಯನ್ನು ತಿಳಿದರೆ ಆಶ್ಚರ್ಯವಾಗುತ್ತದೆ. ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಚಿನ್ನವು ತುಂಬಾ ಹೊಳೆಯುವ ಅಮೂಲ್ಯವಾದ ಲೋಹವಾಗಿದೆ, ಇದು ಆವರ್ತಕ ಕೋಷ್ಟಕದ ಮೊದಲ ವಿಲೋಮ ಗುಂಪಿನಲ್ಲಿ ತಾಮ್ರ ಮತ್ತು ಬೆಳ್ಳಿಯೊಂದಿಗೆ ಇದೆ. ಭಾರತದಲ್ಲಿ ಅತಿ ಹೆಚ್ಚು ಬಂಗಾರ ಇಷ್ಟ ಪಡುವ ಮಂದಿ...Film | Devotional | Cricket | Health | India