ಹನುಮಂತ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ, ಹೌದು ತನ್ನ ಸುಂದರವಾದ ಕಂಠದ ಮೂಲಕ ಎಲ್ಲರ ಹೃದಯದಲ್ಲಿ ಸ್ಥಾನ ಗಳಿಸಿಕೊಂಡಿರುವ ಹನುಮಂತ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು, ಇನ್ನು ಕುರಿಕಾಯೋ ಹನುಮಂತನ ಕಣ್ಣಲ್ಲಿ ನೀರು ಬಂತು ಅಂದರೆ ಕೆಲವು ಗಾಸಿಪ್ ಗಳು ಹಬ್ಬಿಕೊಳ್ಳುವುದು ಸಹಜ, ಆತ್ಮವಿಶ್ವಾಸಕ್ಕೆ ರಾಯಭಾರಿಯಂತಿರುವ ಹನುಮಂತ ಕಣ್ಣೀರು ಹಾಕಿದ್ದಾನೆ ಅಂದರೆ ನಂಬಲು ಸಾಧ್ಯವಿಲ್ಲ. ನಂಬಿಕೆ ಅಥವಾ ನೀರಿಕ್ಷೆ ಹುಸಿಯಾದಾಗ ಮನಸ್ಸು ತಳಮಳಗೊಂದು ಕಣ್ಣಂಚಿನಲ್ಲಿ ನೀರು ತುಂಬಿಕೊಳ್ಳುವುದು ಸಹಜ, ಹೌದು ಹನುಮಂತ ತನ್ನ ಹೊಸ ಮನೆಯ ಗೃಹ ಪ್ರವೇಶದಲ್ಲಿ ಕಣ್ಣೀರು ಹಾಕಿದ್ದಾನೆ ಅನ್ನವು ವಿಷಯ ಹೊರಬಿದ್ದಿದೆ. ಹಾಗಾದರೆ ಹನುಮಂತ ಕಣ್ಣೀರು ಹಾಕಿದ್ದು ಯಾಕೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಹನುಮಂತನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಸ್ನೇಹಿತರೆ ಮೊನ್ನೆ ತಾನೇ ಹನುಮಂತನ ಹೊಸ ಮನೆ ಗೃಹ ಪ್ರವೇಶವಾಗಿದೆ, ಇನ್ನು ಗೃಹ ಪ್ರವೇಶಕ್ಕೂ ಒಂದು ವಾರದ ಮುಂಚೆನೇ DKD ಅಂಗಳದಲ್ಲಿ ಅನುಮತಿಯನ್ನ ಪಡೆದುಕೊಂಡ ಹನುಮಂತ ತನ್ನ ಮನೆಯ ಗೃಹ ಪ್ರವೇಶಕ್ಕೆ ಬೇಕಾಗದ ಸಿದ್ಧತೆಯನ್ನ ಮಾಡಿಕೊಂಡಿದ್ದ. ಇನ್ನು ಕಷ್ಟದಲ್ಲಿ ಇದ್ದಾಗ ಕೈ ಹಿಡಿದವರು, ಬಂದುಗಳು ಮತ್ತು ಬದುಕು ಕಟ್ಟಿಕೊಳ್ಳಲು ಬೆಂಬಲವಾಗಿ ನಿಂತವರನ್ನ ತನ್ನ ಮನೆಯ ಗೃಹ ಪ್ರವೇಶಕ್ಕೆ ಬರಲು ಆಮಂತ್ರಣವನ್ನ ಕೊಟ್ಟಿದ್ದ ಹನುಮಂತ. ಇನ್ನು ಕರೆದವರಲ್ಲಿ ಹೆಚ್ಚಿನ ಜನರು ಹನುಮಂತನ ಮನೆಯ ಗೃಹ ಪ್ರವೇಶಕ್ಕೆ ಬಂದಿದ್ದರು ಆದರೆ ತನ್ನ ಒಡಹುಟ್ಟಿದ ಅಕ್ಕನಂತೆ ಇದ್ದ ಅನುಶ್ರೀ ಮಾತ್ರ ಮನೆಯ ಗೃಹ ಪ್ರವೇಶಕ್ಕೆ ಬರಲಿಲ್ಲ.

Humanta Home opening

ಇನ್ನು ತನ್ನ ಅಕ್ಕ ಮನೆ ಪ್ರವೇಶಕ್ಕೆ ಬಂದೆ ಬರುತ್ತಾಳೆ ಎಂದು ಆಸೆಯನ್ನ ಇಟ್ಟುಕೊಂಡಿದ್ದ ಹನುಮಂತ ಕೊನೆಗೂ ಅನುಶ್ರೀ ಅಕ್ಕ ಬಾರದೆ ಇದ್ದಿದ್ದಕ್ಕೆ ಮನಸ್ಸಿಗೆ ನೋವು ಮಾಡಿಕೊಂಡು ಕಣ್ಣೀರು ಹಾಕಿದ್ದಾನೆ ತಿಳಿದು ಬಂದಿದೆ. ಇನ್ನು ಕರ್ನಾಟಕದ ಶ್ರೇಷ್ಠ ನಿರೂಪಕಿ ಅನಿಸಿಕೊಂಡಿರುವ ಅನುಶ್ರೀ ಅವರಿಗೆ ತನ್ನ ಒಡಹುಟ್ಟಿದ ತಮ್ಮನಂತೆ ಇದ್ದ ಹನುಮಂತ ಅಂದರೆ ಅಚ್ಚುಮೆಚ್ಚು, ಇನ್ನು ಅನುಶ್ರೀ ಅವರು ಈಗ ತುಂಬಾ ಬ್ಯುಸಿ ಇರುವ ಕಾರಣ ಹನುಮಂತನ ಮನೆಯ ಗೃಹ ಪ್ರವೇಶಕ್ಕೆ ಬರಲಿಲ್ಲ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಇನ್ನು ತಾನು ಬಾರದೆ ಇದ್ದರೂ ಕೂಡ ಹನುಮಂತನ ಮನೆಯ ಗೃಹ ಪ್ರವೇಶದ ಸಲುವಾಗಿ ಹನುಮಂತನಿಗೆ ಭರ್ಜರಿ ಉಡುಗೊರೆಯನ್ನ ನೀಡಿದ್ದಾರೆ ಅನುಶ್ರೀ ಅಕ್ಕ, ಹಾಗಾದರೆ ಆ ಉಡುಗೊರೆ ಎಂದು ನಾವು ಹೇಳುತ್ತೀವಿ ಓದಿ.

ಹೌದು ಅನುಶ್ರೀ ಅವರು ಹನುಮಂತನಿಗೆ ಉಡುಗೊರೆಯಾಗಿ ಒಂದು ಪಲ್ಸರ್ ಬೈಕ್ ನ ನೀಡಿದ್ದಾರೆ, ಇನ್ನು ಅಕ್ಕ ಕೊಟ್ಟ ಕಾಣಿಕೆಯನ್ನ ನೋಡಿ ಹಳ್ಳಿ ಹೈದ ಹನುಮಂತನ ಕಣ್ಣಂಚಿನಲ್ಲಿ ನೀರು ಬಂದಿದೆ. ಇನ್ನು ಈ ಹಿಂದೆ ಹನುಮಂತನ ಬಳಿ ಸ್ಪ್ಲೆಂಡರ್ ಬೈಕ್ ಇದ್ದಿತ್ತು ಮತ್ತು ಆ ಗಾಡಿಗೆ ಕುರುಬನ ರಾಣಿ ಎಂದು ಹೆಸರನ್ನ ಇಟ್ಟು ಸವಾರಿಯನ್ನ ಮಾಡುತ್ತಿದ್ದ ಹನುಮಂತ, ಇನ್ನು ಈ ಗಾಡಿ ಹಳೆಯದಾದ ಕಾರಣ ಹನುಮಂತನಿಗೆ ಪಲ್ಸರ್ ಗಾಡಿಯನ್ನ ಉಡುಗೊರೆಯಾಗಿ ನೀಡಿದ್ದಾರೆ ಅನುಶ್ರೀ ಅವರು.

Humanta Home opening

Please follow and like us:
error0
http://karnatakatoday.in/wp-content/uploads/2019/11/Hanumanta-home-opening-1024x576.jpghttp://karnatakatoday.in/wp-content/uploads/2019/11/Hanumanta-home-opening-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಮಂಗಳೂರುಸುದ್ದಿಜಾಲಹನುಮಂತ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ, ಹೌದು ತನ್ನ ಸುಂದರವಾದ ಕಂಠದ ಮೂಲಕ ಎಲ್ಲರ ಹೃದಯದಲ್ಲಿ ಸ್ಥಾನ ಗಳಿಸಿಕೊಂಡಿರುವ ಹನುಮಂತ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು, ಇನ್ನು ಕುರಿಕಾಯೋ ಹನುಮಂತನ ಕಣ್ಣಲ್ಲಿ ನೀರು ಬಂತು ಅಂದರೆ ಕೆಲವು ಗಾಸಿಪ್ ಗಳು ಹಬ್ಬಿಕೊಳ್ಳುವುದು ಸಹಜ, ಆತ್ಮವಿಶ್ವಾಸಕ್ಕೆ ರಾಯಭಾರಿಯಂತಿರುವ ಹನುಮಂತ ಕಣ್ಣೀರು ಹಾಕಿದ್ದಾನೆ ಅಂದರೆ ನಂಬಲು ಸಾಧ್ಯವಿಲ್ಲ. ನಂಬಿಕೆ ಅಥವಾ ನೀರಿಕ್ಷೆ ಹುಸಿಯಾದಾಗ ಮನಸ್ಸು ತಳಮಳಗೊಂದು ಕಣ್ಣಂಚಿನಲ್ಲಿ ನೀರು ತುಂಬಿಕೊಳ್ಳುವುದು ಸಹಜ, ಹೌದು...Film | Devotional | Cricket | Health | India