ಕೇಂದ್ರದಲ್ಲಿ ಕಳೆದ ಆರು ವರ್ಷಗಳಿಂದ ಭರ್ಜರಿ ಬಹುಮತದೊಂದಿಗೆ ಸರ್ಕಾರ ಮಾಡಿರುವ ಮೋದಿ ಆಡಳಿತ ಹಲವಾರು ಕಠಿಣ ನಿರ್ಧಾರಗಳನ್ನು ದೇಶದ ಹಿತ ದ್ರಷ್ಟಿಯಿಂದ ತೆಗೆದುಕೊಂಡಿರುವ ವಿಚಾರ ನಮಗೆಲ್ಲ ತಿಳಿದೇ ಇದೆ. ಈಗಾಗಲೇ ಕಾಳಧನಿಕರ ಬೆನ್ನು ಬಿದ್ದಿರುವ ಕೇಂದ್ರ ಸರ್ಕಾರ ಅಕ್ರಮ ಹಣ ಮಾಡುವವರ ಮೇಲೆ ನಿಗಾ ಇಡುತ್ತಿದೆ. ದೇಶದಲ್ಲಿ ಎಲ್ಲಾ ರೀತಿಯಲ್ಲೂ ಕಪ್ಪು ಹಣ ಸಂಗ್ರಹ ಮಾಡುವವರ ನಿರ್ಬಂಧ ಹೇರುತ್ತಿದೆ. ಇನ್ನು ಸದ್ಯಕ್ಕೆ ಬರುತ್ತಿರುವ ಇನ್ನೊಂದು ಹೊಸ ವಿಚಾರ ಏನೆಂದರೆ ಅದು ಬಂಗಾರದ ಖರೀದಿಯ ಬಗ್ಗೆ ಮತ್ತು ಸಂಗ್ರಹದ ಬಗ್ಗೆ. ಹೌದು ಕೇಂದ್ರ ಸರ್ಕಾರವೀಗ ಅಕ್ರಮ ಚಿನ್ನದ ಮೇಲು ತನ್ನ ಸರ್ಜಿಕಲ್ ಸ್ಟ್ರೈಕ್ ಮುಂದುವರಿಸಲಿದೆ ಎನ್ನಲಾಗುತ್ತಿದೆ.

ಆದಾಯ ತೆರಿಗೆ ಅಮ್ನೆಸ್ಟಿ ಸ್ಕೀಂ ಮಾದರಿಯಲ್ಲಿ ಕೇಂದ್ರ ಸರ್ಕಾರವು ಗೋಲ್ಡ್ ಅಮ್ನೆಸ್ಟಿ ಸ್ಕೀಮ್ ತರಲಿದೆ. ಈ ಸ್ಕೀಂ ಪ್ರಕಾರ ದಾಖಲೆ ಇಲ್ಲದ ಚಿನ್ನ ಅಕ್ರಮವಾಗಿದ್ದು ಈ ಚಿನ್ನವನ್ನು ಇಂತಿಷ್ಟು ಬೆಲೆ ತೆತ್ತು ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಕಪ್ಪು ಹಣದಿಂದ ಚಿನ್ನವನ್ನು ಖರೀದಿಸುವವರ ಮೇಲೆ ಸರ್ಕಾರ ಈಗ ಕಣ್ಣಿಟ್ಟಿದೆ. ಇಂಗ್ಲಿಷ್ ಚಾನೆಲ್ ಸಿಎನ್‌ಬಿಸಿ-ಆವಾಜ್ ಸುದ್ದಿಯ ಪ್ರಕಾರ, ಸರ್ಕಾರವು ಚಿನ್ನವನ್ನು ಖರೀದಿಸಲು ವಿಶೇಷ ಯೋಜನೆಯನ್ನು ತರಬಹುದು, ಇದು ಅಮ್ನೆಸ್ಟಿ ಯೋಜನೆಯ ಮಾರ್ಗದಲ್ಲಿರುತ್ತದೆ.

ಈ ಕ್ಷಮಾದಾನ ಯೋಜನೆಯಡಿ ಚಿನ್ನದ ಬೆಲೆಯನ್ನು ನಿಗದಿಪಡಿಸಲು ಮೌಲ್ಯಮಾಪನ ಕೇಂದ್ರದಿಂದ ಪ್ರಮಾಣಪತ್ರವನ್ನು ಪಡೆಯಬೇಕಾಗುತ್ತದೆ. ರಶೀದಿ ಇಲ್ಲದೆ ಚಿನ್ನದ ಮೊತ್ತಕ್ಕೆ ನಿರ್ದಿಷ್ಟ ಪ್ರಮಾಣದ ತೆರಿಗೆ ಪಾವತಿಸಬೇಕಾಗುತ್ತದೆ. ಈ ಯೋಜನೆಯನ್ನು ನಿರ್ದಿಷ್ಟ ಸಮಯದ ಅವಧಿಗೆ ಮಾತ್ರ ತೆರೆಯಲಾಗುತ್ತದೆ. ಯೋಜನೆ ಮುಗಿದ ನಂತರ, ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಕಂಡುಬಂದರೆ, ಭಾರಿ ದಂಡವನ್ನು ಪಾವತಿಸಬೇಕಾಗುತ್ತದೆ.

ಈ ನಿಯಮ ಎಲ್ಲರಿಗು ಅನ್ವಯ ಆಗುವುದಿಲ್ಲ ಸರ್ಕಾರ ವಿಧಿಸಿದ ಒಂದು ಮಿತಿಗಿಂತ ಹೆಚ್ಚು ಚಿನ್ನದ ಸಂಗ್ರಹ ಮಾಡಿದವರಿಗೆ ಮಾತ್ರ ಲೆಕ್ಕ ತೋರಿಸಲೇಬೇಕಾಗುತ್ತದೆ. ಮಿತಿಗಿಂತ ಜಾಸ್ತಿ ಪ್ರಮಾಣದಲ್ಲಿ ಚಿನ್ನ ಸಂಗ್ರಹ ಇದ್ದರೆ ಮೂಲವನ್ನು ತಿಳಿಸಬೇಕಾಗುತ್ತದೆ. ಆಭರಣ ಖರೀದಿಸಿದ ರಸೀದಿಯನ್ನು ನೀಡಬೇಕಾಗುತ್ತದೆ. ಒಂದು ವೇಳೆ ದಾಖಲೆಯಿಲ್ಲದ ಚಿನ್ನವಿದ್ದರೆ ಅದರ ವಿವರವನ್ನು ಸರ್ಕಾರಕ್ಕೆ ತೋರಿಸಬೇಕಾಗುತ್ತದೆ. ಸದ್ಯಕ್ಕೆ ಈ ಯೋಜನೆ ಕಾರ್ಯರೂಪದಲ್ಲಿದೆ. ಸುದ್ದಿಯ ಪ್ರಕಾರ, ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಈ ಯೋಜನೆಯನ್ನು ರೂಪಿಸಿವೆ.

ನಂತರ ಅದನ್ನು ಅಂಗೀಕರಿಸಲು ಸಂಪುಟಕ್ಕೆ ಕಳುಹಿಸಲಾಗಿದೆ . ಈ ಕರಡನ್ನು ಶೀಘ್ರದಲ್ಲೇ ಕ್ಯಾಬಿನೆಟ್ ಅನುಮೋದಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಮಾಹಿತಿಯ ಪ್ರಕಾರ, ಕರಡು ಬಗ್ಗೆ ಅಕ್ಟೋಬರ್ ಆರಂಭದಲ್ಲಿ ವಾರ ಸಂಪುಟದಲ್ಲಿ ಚರ್ಚಿಸಬೇಕಿತ್ತು ಆದರೆ ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಯ ಕಾರಣ ಆ ಸಮಯದಲ್ಲಿ ಅದನ್ನು ಮುಂದೂಡಲಾಯಿತು.

ಇನ್ನು ಈ ಯೋಜನೆಯಿಂದ ಯಾರಿಗೆ ಸಂಕಷ್ಟ ಎಂದರೆ ಸುರಕ್ಷಿತ ಎಂದು ಪರಿಗಣಿಸಿ ಚಿನ್ನದ ಮೇಲೆ ಕಾಳಧನ ಹೂಡಿದವರು. ಬೇರೆ ಬೇರೆ ಮೂಲಗಳಿಂದ ಭಾರಿ ಪ್ರಮಾಣದ ಚಿನ್ನವನ್ನು ಸಂಗ್ರಹಿಸಿದವರು. ಈ ಕ್ಷಮಾದಾನ ಯೋಜನೆಯಲ್ಲಿ ಒಬ್ಬ ವ್ಯಕ್ತಿ ಇಟ್ಟುಕೊಳ್ಳಬಹುದಾದ ಕನಿಷ್ಠ ಚಿನ್ನದ ಪ್ರಮಾಣವನ್ನು ನಿಗದಿಪಡಿಸುವ ಸಾಧ್ಯತೆಗಳಿವೆ. ಅದಕ್ಕಿಂತ ಹೆಚ್ಚಿನ ಚಿನ್ನಕ್ಕೆ ತೆರಿಗೆ ಅನ್ವಯ ಆಗಲಿದೆ. ಹೀಗಾಗಿ ಇದರ ಬಗ್ಗೆ ಸಂಪೂರ್ಣ ಚಿತ್ರಣ ಶೀಘ್ರವೇ ಸಿಗಲಿದೆ

Please follow and like us:
error0
http://karnatakatoday.in/wp-content/uploads/2019/10/gold-scheme-1024x576.pnghttp://karnatakatoday.in/wp-content/uploads/2019/10/gold-scheme-150x104.pngKarnataka Trendingಎಲ್ಲಾ ಸುದ್ದಿಗಳುಕೇಂದ್ರದಲ್ಲಿ ಕಳೆದ ಆರು ವರ್ಷಗಳಿಂದ ಭರ್ಜರಿ ಬಹುಮತದೊಂದಿಗೆ ಸರ್ಕಾರ ಮಾಡಿರುವ ಮೋದಿ ಆಡಳಿತ ಹಲವಾರು ಕಠಿಣ ನಿರ್ಧಾರಗಳನ್ನು ದೇಶದ ಹಿತ ದ್ರಷ್ಟಿಯಿಂದ ತೆಗೆದುಕೊಂಡಿರುವ ವಿಚಾರ ನಮಗೆಲ್ಲ ತಿಳಿದೇ ಇದೆ. ಈಗಾಗಲೇ ಕಾಳಧನಿಕರ ಬೆನ್ನು ಬಿದ್ದಿರುವ ಕೇಂದ್ರ ಸರ್ಕಾರ ಅಕ್ರಮ ಹಣ ಮಾಡುವವರ ಮೇಲೆ ನಿಗಾ ಇಡುತ್ತಿದೆ. ದೇಶದಲ್ಲಿ ಎಲ್ಲಾ ರೀತಿಯಲ್ಲೂ ಕಪ್ಪು ಹಣ ಸಂಗ್ರಹ ಮಾಡುವವರ ನಿರ್ಬಂಧ ಹೇರುತ್ತಿದೆ. ಇನ್ನು ಸದ್ಯಕ್ಕೆ ಬರುತ್ತಿರುವ ಇನ್ನೊಂದು ಹೊಸ ವಿಚಾರ ಏನೆಂದರೆ...Film | Devotional | Cricket | Health | India