IT raide in actress home

ನಿನ್ನೆ ಸ್ಯಾಂಡಲ್ ವುಡ್ ನ ದೊಡ್ಡ ದೊಡ್ಡ ಸ್ಟಾರ್ ಗಳ ಮನೆಗಳ ಮೇಲೆ IT ರೈಡ್ ಆಗಿದೆ, ಇನ್ನು ಇದರ ಜೊತೆಗೆ ನಿರ್ಮಾಪಕರ ಮೇನೆಗಳ ಮೇಲೆ ಕೂಡ ರೈಡ್ ಆಗಿದೆ. ಯಾರ ಮನೆಯಲ್ಲಿ ಎಷ್ಟು ಹಣ ಸಿಕ್ಕಿದೆ ಮತ್ತು ಎಷ್ಟು ಆಸ್ತಿ ಸಿಕ್ಕಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ನಿನ್ನೆ ಕನ್ನಡದ ನಟರಾದ ರಾಕಿಂಗ್ ಸ್ಟಾರ್ ಯಶ್, ಪುನೀತ್ ರಾಜಕುಮಾರ್, ಕಿಚ್ಚ ಸುದೀಪ್ ಮತ್ತು ಶಿವರಾಜಕುಮಾರ್ ಅವರ ಮನೆಯ ಮೇಲೆ ರೈಡ್ ಆಗಿದೆ. ಇನ್ನು ಇದರ ಜೊತೆಗೆ ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, KGF ನಿರ್ಮಾಪಕರಾದ ವಿಜಯ್ ಕಿರಗಂದೂರ್ ಹಾಗು ದಿ ವಿಲನ್ ನಿರ್ಮಾಪಕರಾದ ಮನೋಹರ್ ಅವರ ಮನೆಗಳ ಮೇಲೆ ಕೂಡ ರೈಡ್ ಮಾಡಲಾಗಿದೆ.

IT raide in actress home

ಇನ್ನು ರಾಕ್ ಲೈನ್ ವೆಂಕಟೇಶ್ ಅವರ ಮಕ್ಕಳಾದ ಅಭಿಷೇಕ್ ಮತ್ತು ಯತೀಶ್ ಅವರ ಹೆಸರಿನಲ್ಲಿ 100 ಕೋಟಿ ಆಸ್ತಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಇನ್ನು ಇದರ ಜೊತೆ ರಾಕ್ ಲೈನ್ ಒಡೆತನದ ಹಿಲ್ ರಾಕ್ ದಾಳಿ ನಡೆದಿದೆ, ಇನ್ನು ಇದರ ಜೊತೆಗೆ ಪುನೀತ್ ರಾಜಕುಮಾರ್ ಮತ್ತು ಶಿವರಾಜಕುಮಾರ್ ಅವರ ಮನೆಯಲ್ಲಿ ಕೂಡ ತುಂಬಾ ಚಿನ್ನ ಸಿಕ್ಕಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ, ಚಿನ್ನಗಳ ಮೌಲ್ಯ ಇನ್ನು ಪರಿಶೀಲನೆ ಆಗಿಲ್ಲ.

ಇನ್ನು ಯಶ್ ಅವರ ಮಾವನಾದ ಅಂದರೆ ರಾಧಿಕಾ ಪಂಡಿತ್ ಅವರ ತಂದೆಯ ಮೇಲೆ ಕೂಡ ವಿಚಾರಣೆ ನಡೆಯುತ್ತಿದೆ, ಇನ್ನು ಯಶ್ ಅವರ ಮೆನೆಯಲ್ಲಿ ಬೆಂಜ್ ಕಾರ್ ಮತ್ತು ಬಂದ ಗಿಫ್ಟ್ ಗಳ ದಾಖಲೆಯನ್ನ ಕೂಡ ಪರಿಶೀಲನೆ ಮಾಡಲಾಗುತ್ತಿದೆ.

IT raide in actress home

ಇನ್ನು ಕಿಚ್ಚ ಸುದೀಪ್ ಅವರ ಮನೆಯಲ್ಲಿ ಸಿಕ್ಕ ಚಿಕ್ಕ, ಆಸ್ತಿ ಮತ್ತು ಹಣದ ಬಗ್ಗೆ ಪರಿಶೀಲನೆ ನಡೆಯುತ್ತಿದೆ, ಒಟ್ಟು ಎಷ್ಟು ಸಿಕ್ಕಿದೆ ಅನ್ನುವ ಸಂಪೂರ್ಣ ಮಾಹಿತಿ ಇಂದು ಸಿಗಲಿದೆ.

ಇನ್ನು ಸ್ಯಾಂಡಲ್ ವುಡ್ ನ ನಟರಾದ ಯಶ್ ಮತ್ತು ಸುದೀಪ್ ಅವರು ಹೇಳುತ್ತಿರುವುದು ಏನು ಅಂದರೆ, ಎಲ್ಲಾ ಹಣ ಮತ್ತು ಆಸ್ತಿ ಸಿಕ್ಕಿರೋದು ಅದು ಕಷ್ಟ ಪಟ್ಟು ದುಡಿದಿರೋದು ಯಾವುದು ಅಕ್ರಮ ಆಸ್ತಿ ಅಲ್ಲ ಅದಕ್ಕಾಗಿ ನಾವು ಭಯಪಡಲ್ಲ ಎಂದು ಹೇಳಿದ್ದಾರೆ.

ಏನೇ ಆಗಲಿ ಇಡೀ ಸ್ಯಾಂಡಲ್ ವುಡ್ ಇದಕ್ಕೆ ಬೆಚ್ಚಿ ಬಿದ್ದಿದೆ, ನಿಮ್ಮ ಪ್ರಕಾರ ನಟರ ಮನೆಗಳ ಮೇಲೆ IT ದಾಳಿ ನಡೆಸಿರೋದು ಸರಿನಾ ಅಥವಾ ತಪ್ಪಾ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

IT raide in actress home

Please follow and like us:
0
http://karnatakatoday.in/wp-content/uploads/2019/01/income-tax-raide-1024x576.jpghttp://karnatakatoday.in/wp-content/uploads/2019/01/income-tax-raide-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಹಣನಿನ್ನೆ ಸ್ಯಾಂಡಲ್ ವುಡ್ ನ ದೊಡ್ಡ ದೊಡ್ಡ ಸ್ಟಾರ್ ಗಳ ಮನೆಗಳ ಮೇಲೆ IT ರೈಡ್ ಆಗಿದೆ, ಇನ್ನು ಇದರ ಜೊತೆಗೆ ನಿರ್ಮಾಪಕರ ಮೇನೆಗಳ ಮೇಲೆ ಕೂಡ ರೈಡ್ ಆಗಿದೆ. ಯಾರ ಮನೆಯಲ್ಲಿ ಎಷ್ಟು ಹಣ ಸಿಕ್ಕಿದೆ ಮತ್ತು ಎಷ್ಟು ಆಸ್ತಿ ಸಿಕ್ಕಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ನಿನ್ನೆ ಕನ್ನಡದ ನಟರಾದ ರಾಕಿಂಗ್ ಸ್ಟಾರ್...Kannada News